ಇಂದು ಮಧ್ಯರಾತ್ರಿಯಿಂದ ಮೀನುಗಾರಿಕೆ ನಿಷೇಧ


Team Udayavani, Jun 9, 2018, 6:00 AM IST

08ksde6.jpg

ಮೀನಿನ ಸಂಪತ್ತು ರಕ್ಷಿಸುವ ಹಿನ್ನೆಲೆಯಲ್ಲಿ ಕೇರಳ ಸರಕಾರ ಇಂದು ಮಧ್ಯರಾತ್ರಿಯಿಂದ ಮುಂದಿನ 52 ದಿನಗಳ ತನಕ ಸಮುದ್ರದಲ್ಲಿ ಮೀನುಗಾರಿಕೆ ನಡೆಸದಿರಲು ಟ್ರಾಲಿಂಗ್‌ ನಿಷೇಧಿಸಿದೆ. ಇದರ ಪರಿಣಾಮವಾಗಿ ಮೀನುಗಾರಿಕೆ ದೋಣಿ (ಯಾಂತ್ರೀಕೃತ ದೋಣಿ)ಗಳು ದಡದಲ್ಲಿ ಲಂಗರು ಹಾಕಬೇಕಾದ ಅನಿವಾರ್ಯತೆ ಎದುರಾಗಿದೆ. ಈ ದಿನಗಳಲ್ಲಿ ದುಡಿಮೆಯಿಲ್ಲದೆ ಜೀವನ ಸಾಗಿಸುವ ಸವಾಲು ಬೆಸ್ತರನ್ನು ಕಾಡಲಿದೆ. ಜೀವ ಪಣವಿಟ್ಟು ಅಥವಾ ಜೀವದ ಹಂಗು ತೊರೆದು ಸಾಹಸದಿಂದ ಸಮುದ್ರದಲ್ಲಿ ಮೀನುಗಾರಿಕೆ ನಡೆಸಿ ಜೀವನ ಸಾಗಿಸುತ್ತಿದ್ದ ಬೆಸ್ತರಿಗೆ ಮುಂದಿನ ದಿನಗಳು ಸಂಕಷ್ಟದ ದಿನಗಳಾಗಿವೆ.

ಕಾಸರಗೋಡು: ಪ್ರತೀ ವರ್ಷದಂತೆ ಈ ವರ್ಷವೂ ಸಮುದ್ರದಲ್ಲಿ ಮೀನುಗಾರಿಕೆಗೆ ನಿಷೇಧ ಹೇರಲಾಗಿದೆ. ಜೂ. 9ರ ಮಧ್ಯರಾತ್ರಿಯಿಂದ ಜುಲೈ 31ರ ಮಧ್ಯ ರಾತ್ರಿವರೆಗೆ ನಿಷೇಧ ಮುಂದುವರಿಯಲಿದೆ. ಅಂದರೆ 52 ದಿನಗಳ ಕಾಲ ಟ್ರಾಲಿಂಗ್‌ ಅಸಾಧ್ಯ. ಈ ಕಾರಣದಿಂದ ದುಡಿಮೆಯಿಲ್ಲದೆ ಬೆಸ್ತರು ಸವಾಲನ್ನು ಎದುರಿಸಬೇಕಾಗಿದೆ.
ಸಮುದ್ರದಲ್ಲಿ ಮೀನಿನ ಸಂತಾನೋತ್ಪತ್ತಿ ಋತು ಆರಂಭಗೊಂಡ ಹಿನ್ನೆಲೆಯಲ್ಲಿ ಮತ್ಸé ಸಂರಕ್ಷಿಸುವ ಹಿನ್ನೆಲೆಯಲ್ಲಿ ಕೆ.ಎಂ.ಎಫ್‌.ಆರ್‌. ಕಾಯ್ದೆಯಂತೆ ಕೇರಳದ ಆಳ ಸಮುದ್ರದಲ್ಲಿ ಜುಲೈ 31 ರ ವರೆಗೆ ಮೀನುಗಾರಿಕೆ ನಿಷೇಧ ಹೇರಿದ್ದು, ಪರಂಪರಾಗತ ಮೀನುಗಾರಿಕೆಗೆ ಯಾವುದೇ ನಿಯಂತ್ರಣವಿಲ್ಲದೆ ಮೀನುಗಾರಿಕೆ ನಡೆಸಬಹುದಾಗಿದೆ. ಈ ಕಾರಣದಿಂದ ಪರಂಪರಾಗತ ಮೀನುಗಾರಿಕೆ ನಡೆಸುವ ಬೆಸ್ತರು ಸ್ವಲ್ಪಮಟ್ಟಿಗೆ ಉಸಿರಾಡುವಂತಾಗಿದೆ.

ಮೀನುಗಾರಿಕೆಯನ್ನು ಜೀವನಮಾರ್ಗವಾಗಿ ಆಶ್ರಯಿಸಿ ರುವ ಬೆಸ್ತರಿಗಿನ್ನು ಸಂಕಷ್ಟದ ದಿನಗಳು. ಸಮುದ್ರದಲ್ಲಿ ಮೀನು ಸಂತತಿ ಸಂರಕ್ಷಣೆಗಾಗಿ ಏರ್ಪಡಿಸಿರುವ ಟ್ರಾಲಿಂಗ್‌ ನಿಷೇಧದ ಪರಿಣಾಮವಾಗಿ ಜುಲೈ 31ರ ಮಧ್ಯರಾತ್ರಿಯ ವರೆಗೆ ಮೀನುಗಾರರು ಯಾಂತ್ರೀಕೃತ ಬೋಟ್‌ಗಳಲ್ಲಿ ಸಮುದ್ರದಲ್ಲಿ ಮೀನುಗಾರಿಕೆ ನಡೆಸುವಂತಿಲ್ಲ. ಈ ಆದೇಶವನ್ನು ಉಲ್ಲಂಘಿಸಿ ಮೀನುಗಾರಿಕೆಗೆ ತೆರಳಿದರೆ ಬೋಟ್‌ಗಳನ್ನು ವಶಪಡಿಸಿಕೊಳ್ಳುವ ಮೊದಲಾದ ಕಠಿನ ಕ್ರಮಗಳನ್ನು ತೆಗೆದುಕೊಳ್ಳುವುದಾಗಿ ಮೀನುಗಾರಿಕಾ ಇಲಾಖೆ ಮುನ್ನೆಚ್ಚರಿಕೆ ನೀಡಿದೆ. ಈ ಕಾಲಾವಧಿಯಲ್ಲಿ ಟ್ರಾಲ್‌ ನೆಟ್‌ ಬಳಸಿ ಮೀನುಗಾರಿಕೆ ಸಂಪೂರ್ಣ ನಿಷೇಧಿಸಲಾಗಿದೆ. ಆದರೆ ಪರಂಪರಾಗತ ಬೆಸ್ತರಿಗೆ ಮೀನುಗಾರಿಕೆ ನಡೆಸಬಹುದಾಗಿದೆ.

ಸಮುದ್ರದ ಕಿನಾರೆಯಲ್ಲಿ ಬಲೆ ಬೀಸಿ ಮೀನುಗಾರಿಕೆ ನಡೆಸಬಹುದಾಗಿದೆ. ಇದೇ ಸಂದರ್ಭದಲ್ಲಿ ಅನ್ಯ ರಾಜ್ಯಗಳಿಂದ ಬಂದಿರುವ ಮೀನುಗಾರಿಕಾ ಬೋಟುಗಳಿಗೆ ವಾಪಸಾಗುವಂತೆ ಆದೇಶ ನೀಡಲಾಗಿದೆ. ಕರಾವಳಿ ಪ್ರದೇಶದಲ್ಲಿರುವ ಡೀಸಲ್‌ ಬಂಕ್‌ಗಳು ಟ್ರಾಲಿಂಗ್‌ ನಿಷೇಧ ಕಲಾವಧಿಯಲ್ಲಿ ಕಾರ್ಯಾಚರಿಸಕೂಡದೆಂದು ಆದೇಶದಲ್ಲಿ ತಿಳಿಸಲಾಗಿದೆ. ಅದೇ ರೀತಿ ಬೋಟ್‌ಗಳಿಗೆ ಡೀಸೆಲ್‌ ನೀಡಬಾರದು. ನಿಷೇಧ ಉಲ್ಲಂಘಿಸುವ ಮೀನುಗಾರಿಕಾ ದೋಣಿಗಳು ಹಾಗೂ ಬೋಟ್‌ಗಳನ್ನು ಮರೈನ್‌ ಎನ್‌ಫೋರ್ಸ್‌ ಮೆಂಟ್‌ನ ನೆರವಿನಿಂದ ವಶಪಡಿಸಿಕೊಳ್ಳಲಾಗುವುದು.

ಉಚಿತ ರೇಶನ್‌ : ಟ್ರಾಲಿಂಗ್‌ ನಿಷೇಧದ ಹಿನ್ನೆಲೆಯಲ್ಲಿ ಉದ್ಯೋಗ ಕಳೆದುಕೊಳ್ಳುವ ಬೆಸ್ತರಿಗೆ ಉಚಿತ ಪಡಿತರ ಸಾಮಗ್ರಿಗಳನ್ನು ವಿತರಿಸಲಾಗುವುದು. ಬಂದರುಗಳಲ್ಲಿನ ಅನುಬಂಧ ಕಾರ್ಮಿಕರಿಗೂ, ಫಿಲ್ಲಿಂಗ್‌ ಕಾರ್ಮಿಕರಿಗೂ ಈ ಕಾಲಾವಧಿಯಲ್ಲಿ ಉಚಿತ ಪಡಿತರ ನೀಡಲಾಗುವುದು.

ಟ್ರಾಲಿಂಗ್‌ ನಿಷೇಧದ ಕಾಲಾವಧಿಯಲ್ಲಿ ಪ್ರತೀ ವರ್ಷವೂ ಉಚಿತ ಪಡಿತರ ಸಾಮಗ್ರಿಗಳನ್ನು ವಿತರಿಸುತ್ತಿದ್ದರೂ, ಅದು ಸಮರ್ಪಕವಾಗಿ ಲಭಿಸುತ್ತಿಲ್ಲ ಎಂಬ ದೂರು ಪ್ರತೀ ವರ್ಷವೂ ಕೇಳಿ ಬರುತ್ತಲೇ ಇತ್ತು. ಈ ಹಿನ್ನೆಲೆಯಲ್ಲಿ ಈ ವರ್ಷ ಉಚಿತ ಪಡಿತರ ಸಾಮಗ್ರಿಗಳು ಎಷ್ಟು ಸಮರ್ಪಕವಾಗಿ ವಿತರಣೆಯಾಗಲಿದೆ ಎಂಬುದು ಕೆಲವೇ ದಿನಗಳಲ್ಲಿ ಅರಿಯಬಹುದು.         

ಟ್ರಾಲಿಂಗ್‌ ನಿಷೇಧ: ಬೆಸ್ತರಿಗೆ ಸವಾಲಿನ ದಿನಗಳು 
ಟ್ರಾಲಿಂಗ್‌ ನಿಷೇಧ ಕಾಲಾವಧಿಯಲ್ಲಿ ಸಮುದ್ರದಲ್ಲಿ ಪೆಟ್ರೋಲಿಂಗ್‌ ಹಾಗೂ ರಕ್ಷಣಾ ಕಾರ್ಯಕ್ಕಾಗಿ ಜಿಲ್ಲೆಯಲ್ಲಿ ತಲಾ ಒಂದರಂತೆ ಮೆಕನೈಸ್ಡ್ ಬೋಟ್‌ ಮತ್ತು  ಫೈಬರ್‌ ದೋಣಿಗಳನ್ನು ಸಜ್ಜುಗೊಳಿಸಲಾಗುವುದು. ಬೋಟ್‌ಗಳ, ದೋಣಿಗಳ ಕಾರ್ಮಿಕರಲ್ಲದೆ ತರಬೇತಿ ಪಡೆದ ಸುರಕ್ಷಾ ಜವಾನರನ್ನು ಮೀನುಗಾರಿಕಾ ಇಲಾಖೆ ರಕ್ಷಣಾ ಕಾರ್ಯಕ್ಕೆ ನೇಮಿಸಲಿದೆ. ತುರ್ತು ಸಂದರ್ಭಗಳಲ್ಲಿ ಕೋಸ್ಟ್‌ಗಾರ್ಡ್‌ ಮತ್ತು ನೌಕಾಪಡೆಯ ನೆರವನ್ನು ಪಡೆಯಲಾಗುವುದು. ಫಿಶರೀಸ್‌ ಇಲಾಖೆ ಆರಂಭಿಸಿದ ಕಂಟ್ರೋಲ್‌ ರೂಂಗಳಲ್ಲೂ, ಜಿಲ್ಲಾ ಕೇಂದ್ರಗಳಲ್ಲೂ, ತಾಲೂಕು ಕಚೇರಿಗಳಲ್ಲೂ ಕಾರ್ಯಾಚರಿಸುವ ಕಂಟ್ರೋಲ್‌ ರೂಂಗಳಲ್ಲೂ ಅಪಘಾತ ಮಾಹಿತಿಗಳನ್ನು ಸಲ್ಲಿಸಬಹುದು.

ಪರಂಪರಾಗತ ಮೀನುಗಾರಿಕೆ ನಡೆಸುವ ಬೆಸ್ತರು ಸಾಕಷ್ಟು ಜೀವ ರಕ್ಷಾ ಉಪಕರಣಗಳು, ಲೈಫ್ ಜಾಕೆಟ್‌, ಅಗತ್ಯಕ್ಕೆ ತಕ್ಕಂತೆ ಇಂಧನ, ಟೂಲ್‌ ಕಿಟ್‌ ಮೊದಲಾದವುಗಳನ್ನು ದೋಣಿಗಳಲ್ಲಿ ಇರಿಸಿಕೊಳ್ಳಬೇಕು. ದೋಣಿಗಳಲ್ಲಿ ಮೀನುಗಾರಿಕೆ ನಡೆಸುವ ಕಾರ್ಮಿಕರ ಪೂರ್ಣ ಮಾಹಿತಿಗಳನ್ನು ದೋಣಿಯ ಮಾಲಕರು ದಾಖಲಿಸಿಕೊಂಡಿರಬೇಕು.

ಟ್ರಾಲಿಂಗ್‌ ನಿಷೇಧ ಕಾಲಾವಧಿಯಲ್ಲಿ ಸಮುದ್ರದಲ್ಲಿ ಪೆಟ್ರೋಲಿಂಗ್‌ ಹಾಗೂ ರಕ್ಷಣಾ ಚಟುವಟಿಕೆಗಳಿಗಾಗಿ ಜಿಲ್ಲೆಯಲ್ಲಿ ಒಂದು ಯಾಂತ್ರೀಕೃತ ಬೋಟ್‌ ಹಾಗೂ ಒಂದು ಫೈಬರ್‌ ದೋಣಿಗಳನ್ನು ಸಜ್ಜುಗೊಳಿಸಲಾಗಿದೆ. ತುರ್ತು ಸಂದರ್ಭದಲ್ಲಿ ರಕ್ಷಣೆಗಾಗಿ ಕೋಸ್ಟ್‌ ಗಾರ್ಡ್‌, ನೌಕಾ ಪಡೆಯ ನೆರವನ್ನು ಪಡೆದುಕೊಳ್ಳಲಾಗುವುದು.

12 ನಾಟಿಕಲ್‌ ಮೈಲ್‌ : ಸಮುದ್ರ ಕಿನಾರೆಯಿಂದ 12 ನಾಟಿಕಲ್‌ ಮೈಲ್‌ ದೂರದ ವರೆಗೆ ಜುಲೈ 31ರ ಮಧ್ಯರಾತ್ರಿವರೆಗೆ ಟ್ರಾಲಿಂಗ್‌ ನಿಷೇಧ ಜಾರಿಯಲ್ಲಿರುವುದು. ಪ್ರಸ್ತುತ ವರ್ಷ 52 ದಿನಗಳ ವರೆಗೆ ಟ್ರಾಲಿಂಗ್‌ ನಿಷೇಧವಿದೆ. ಕಳೆದ ವರ್ಷಗಳಿಗಿಂತ ಐದು ದಿನ ಹೆಚ್ಚು ಟ್ರಾಲಿಂಗ್‌ ನಿಷೇಧಿಸಲಾಗಿದೆ. ಈ ಕಾಲಾವಧಿಯಲ್ಲಿ ಪರಂಪರಾಗತ ದೋಣಿ ಮತ್ತು ಇನ್‌ ಬೋರ್ಡ್‌ಗಳಲ್ಲಿ ಮೀನುಗಾರಿಕೆಗೆ ತಡೆಯಿಲ್ಲ. ಮೀನುಗಾರಿಕೆಗೆ ಹೋಗುವ ಮೀನು ಕಾರ್ಮಿಕರು ಕಡ್ಡಾಯವಾಗಿ ಬಯೋಮೆಟ್ರಿಕ್‌ ಗುರುತು ಚೀಟಿ ತಮ್ಮ ಕೈಯಲ್ಲಿರಿಸಿಕೊಳ್ಳಬೇಕು. ಮೀನುಗಾರಿಕೆ ಸಂದರ್ಭದಲ್ಲಿ ಲೈಫ್‌ ಜಾಕೆಟ್‌ ಕಡ್ಡಾಯವಾಗಿ ಧರಿಸಬೇಕೆಂದು ಫಿಶರೀಸ್‌ ಡೆಪ್ಯೂಟಿ ಡೈರೆಕ್ಟರ್‌ ಕೆ.ಸುಹೈರ್‌ ತಿಳಿಸಿದ್ದಾರೆ.

ಈ ಸಂಬಂಧವಾಗಿ ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ ಸಭೆಯಲ್ಲಿ ಎಡಿಎಂ ಎನ್‌. ದೇವಿದಾಸ್‌ ಅಧ್ಯಕ್ಷತೆ ವಹಿಸಿದರು. ಕಾಸರಗೋಡು ಆರ್‌ಡಿಒ ಅಬ್ದುಲ್‌ ಸಮದ್‌, ಫಿಶರೀಸ್‌ ಅಸಿಸ್ಟೆಂಟ್‌ ಡೈರೆಕ್ಟರ್‌ ಪಿ.ವಿ. ಸತೀಶನ್‌, ಗ್ರಾಮ ಪಂಚಾಯತ್‌ ಪ್ರತಿನಿಧಿಗಳು, ಮೀನು ಕಾರ್ಮಿಕ ಪ್ರತಿನಿಧಿಗಳು, ಫಿಶರೀಸ್‌ ಅಧಿಕಾರಿಗಳು, ಕೋಸ್ಟಲ್‌ ಪೊಲೀಸರು ಹಾಗೂ ಜಿಲ್ಲಾ ಮಟ್ಟದ ಅಧಿಕಾರಿಗಳು ಭಾಗವಹಿಸಿದರು.

ಮೀನುಗಾರಿಕೆ ನಡೆಸಿದರೆ ಬೋಟ್‌ ವಶಕ್ಕೆ 
ಜುಲೈ 31ರ ವರೆಗೆ ಟ್ರಾಲಿಂಗ್‌ ಬಳಸಿ ಮೀನುಗಾರಿಕೆ ನಿಷೇಧದ ಹಿನ್ನೆಲೆಯಲ್ಲಿ ಈ ಕಾಲಾವಧಿಯಲ್ಲಿ ಟ್ರಾಲಿಂಗ್‌ ಬಳಸಿ ಮೀನುಗಾರಿಕೆ ನಡೆಸುವ ಬೋಟ್‌ಗಳನ್ನು ವಶಪಡಿಸಿಕೊಳ್ಳಲಾಗುವುದೆಂದು  ಫಿಶರೀಸ್‌ ಇಲಾಖೆ ಅಧಿಕಾರಿಗಳು ಮುನ್ನೆಚ್ಚರಿಕೆ ನೀಡಿದ್ದಾರೆ. ಅನ್ಯ ರಾಜ್ಯಗಳಿಂದ ಬಂದ ಯಂತ್ರ ಜೋಡಿಸಿದ ಬೋಟ್‌ಗಳು ಕೇರಳ ಕರಾವಳಿ ಪ್ರದೇಶದಿಂದ ವಾಪಸಾಗಬೇಕೆಂದು ಆದೇಶ ನೀಡಲಾಗಿದೆ. ಕೇರಳ ಕರಾವಳಿಯಿಂದ ವಾಪಸಾಗದ ಬೋಟ್‌ಗಳಲ್ಲಿ ಜುಲೈ 31 ರ ವರೆಗೆ ಮೀನುಗಾರಿಕೆಗೆ ಅವಕಾಶ ನೀಡುವುದಿಲ್ಲ. ಈ ಸಂದರ್ಭದಲ್ಲಿ ಮೀನುಗಾರಿಕೆ ನಡೆಸಿದರೆ ಬೋಟ್‌ಗಳನ್ನು ವಶಪಡಿಸಿಕೊಳ್ಳುವುದಾಗಿ ತಿಳಿಸಿದ್ದಾರೆ. ಯಾಂತ್ರೀಕೃತ ಬೋಟ್‌ಗಳಿಗೆ ಡೀಸೆಲ್‌ ವಿತರಿಸುತ್ತಿದ್ದ ಬಂಕ್‌ಗಳಿಂದ ಈ ಕಾಲಾವಧಿಯಲ್ಲಿ ಡೀಸೆಲ್‌ ವಿತರಿಸದಿರುವಂತೆ ತಿಳಿಸಲಾಗಿದೆ.

– ಪ್ರದೀಪ್‌ ಬೇಕಲ್‌

ಟಾಪ್ ನ್ಯೂಸ್

Deepfake: ಇನ್ಫಿ ಮೂರ್ತಿ, ಅಂಬಾನಿ ಡೀಪ್‌ಫೇಕ್‌ ವಿಡಿಯೋ ಬಳಸಿ 82.7 ಲಕ್ಷ ರೂ. ವಂಚನೆ

Deepfake: ಇನ್ಫಿ ಮೂರ್ತಿ, ಅಂಬಾನಿ ಡೀಪ್‌ಫೇಕ್‌ ವಿಡಿಯೋ ಬಳಸಿ 82.7 ಲಕ್ಷ ರೂ. ವಂಚನೆ

Explainer-US Result: ಅಧ್ಯಕ್ಷ ಗಾದಿ ಯಾರಿಗೆ; ಟ್ರಂಪ್‌ ಮುನ್ನಡೆ, 7 ರಾಜ್ಯಗಳು ನಿರ್ಣಾಯಕ!

Explainer-US Result: ಅಧ್ಯಕ್ಷ ಗಾದಿ ಯಾರಿಗೆ; ಟ್ರಂಪ್‌ ಮುನ್ನಡೆ, 7 ರಾಜ್ಯಗಳು ನಿರ್ಣಾಯಕ!

Thalapathy 69: ರಿಲೀಸ್ ಗೂ ಮುನ್ನ ಕೋಟಿ‌ ಕೋಟಿ ಕಮಾಯಿ ಮಾಡಿದ ವಿಜಯ್ ಕೊನೆಯ ಸಿನಿಮಾ

Thalapathy 69: ರಿಲೀಸ್ ಗೂ ಮುನ್ನ ಕೋಟಿ‌ ಕೋಟಿ ಕಮಾಯಿ ಮಾಡಿದ ವಿಜಯ್ ಕೊನೆಯ ಸಿನಿಮಾ

Kantara: Chapter 1: ‘ಕಾಂತಾರ’ ಸೆಟ್ ಗೆ ಮರಳಿದ ರಿಷಬ್; ಮೂರನೇ ಹಂತದ ಚಿತ್ರೀಕರಣ ಶುರು

Kantara: Chapter 1: ‘ಕಾಂತಾರ’ ಸೆಟ್ ಗೆ ಮರಳಿದ ರಿಷಬ್; ಮೂರನೇ ಹಂತದ ಚಿತ್ರೀಕರಣ ಶುರು

1-poli

Bengaluru; ಶೋಕಿಗಾಗಿ ಸರಗಳ್ಳತನ: 70 ಲಾರಿಗಳ ಮಾಲಿಕ ಸೆರೆ!!

siddaramaiah

Lokayukta ಕಚೇರಿಗೆ ಆಗಮಿಸಿದ ಸಿಎಂ ಸಿದ್ದರಾಮಯ್ಯ: ಬಿಜೆಪಿಯಿಂದ ಪ್ರತಿಭಟನೆ

1

Lawyer Jagadish: ಕೊಲೆ ಬೆದರಿಕೆ; ದರ್ಶನ್, ಅಭಿಮಾನಿ ಮೇಲೆ ದೂರು ದಾಖಲಿಸಿದ ಜಗದೀಶ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Edaneer-swmij

Attack On Car: ಎಡನೀರು ಸ್ವಾಮೀಜಿ ಕಾರಿನ ಮೇಲೆ ದಾಳಿ: ಕಸಾಪ, ಬ್ರಾಹ್ಮಣ ಮಹಾಸಭಾ ಖಂಡನೆ

k

Kasaragod: ಎಡನೀರು ಶ್ರೀಗಳ ವಾಹನದ ಮೇಲೆ ದಾಳಿ: ಪ್ರತಿಭಟನೆ

2

Kasaragod: ರೈಲು ಹಳಿಯಲ್ಲಿ ಬಾಟಲಿ, ನಾಣ್ಯ ಇರಿಸಿ ದುಷ್ಕೃತ್ಯಕ್ಕೆ ಸಂಚು

kalla

Kasaragod: ಆರಾಧನಾಲಯಗಳ ಸರಣಿ ಕಳವಿನ ಹಿಂದೆ ಒಂದೇ ತಂಡ?

Court-1

Kasaragod: ಪಟಾಕಿ ದುರಂತ; ಜಾಮೀನು ರದ್ದುಗೊಳಿಸುವಂತೆ ಅರ್ಜಿ

MUST WATCH

udayavani youtube

ಗೋವಿನ ಪೂಜೆ ಯಾಕಾಗಿ ಮಾಡಬೇಕು?

udayavani youtube

ಮೇಲುಕೋಟೆಯಲ್ಲಿ ದೀಪಾವಳಿ ಆಚರಿಸುವುದಿಲ್ಲ ಎಂಬ ಮಾತು ನಿಜವೋ ಸುಳ್ಳೋ

udayavani youtube

ಗಣಪತಿ ಸಹಕಾರಿ ವ್ಯವಸಾಯಕ ಸಂಘ ‘ನಿ.’ ಕೆಮ್ಮಣ್ಣು ಶತಾಭಿವಂದನಂ ಸಮಾರೋಪ ಸಂಭ್ರಮ ಸಂಪನ್ನ

udayavani youtube

ಉದಯವಾಣಿ’ಚಿಣ್ಣರ ಬಣ್ಣ -2024

udayavani youtube

ಹಬ್ಬದ ಊಟವೇ ಈ ಹೋಟೆಲ್ ನ ಸ್ಪೆಷಾಲಿಟಿ

ಹೊಸ ಸೇರ್ಪಡೆ

Deepfake: ಇನ್ಫಿ ಮೂರ್ತಿ, ಅಂಬಾನಿ ಡೀಪ್‌ಫೇಕ್‌ ವಿಡಿಯೋ ಬಳಸಿ 82.7 ಲಕ್ಷ ರೂ. ವಂಚನೆ

Deepfake: ಇನ್ಫಿ ಮೂರ್ತಿ, ಅಂಬಾನಿ ಡೀಪ್‌ಫೇಕ್‌ ವಿಡಿಯೋ ಬಳಸಿ 82.7 ಲಕ್ಷ ರೂ. ವಂಚನೆ

Explainer-US Result: ಅಧ್ಯಕ್ಷ ಗಾದಿ ಯಾರಿಗೆ; ಟ್ರಂಪ್‌ ಮುನ್ನಡೆ, 7 ರಾಜ್ಯಗಳು ನಿರ್ಣಾಯಕ!

Explainer-US Result: ಅಧ್ಯಕ್ಷ ಗಾದಿ ಯಾರಿಗೆ; ಟ್ರಂಪ್‌ ಮುನ್ನಡೆ, 7 ರಾಜ್ಯಗಳು ನಿರ್ಣಾಯಕ!

2-hunsur

Hunsur: ಗೃಹಿಣಿ ನಾಪತ್ತೆ :ದೂರು ದಾಖಲು; ಪತ್ತೆಗಾಗಿ ಮನವಿ

Bengaluru: ಕಳೆದ ದೀಪಾವಳಿಗಿಂತ ಶೇ.34 ತಗ್ಗಿದ ವಾಯುಮಾಲಿನ್ಯ

Bengaluru: ಕಳೆದ ದೀಪಾವಳಿಗಿಂತ ಶೇ.34 ತಗ್ಗಿದ ವಾಯುಮಾಲಿನ್ಯ

Crime: ಶೀಲ ಶಂಕಿಸಿ ಪತ್ನಿ  ಕತ್ತು ಸೀಳಿಆತ್ಮಹತ್ಯೆಗೆ ಯತ್ನಿಸಿದ ಪತಿ

Crime: ಶೀಲ ಶಂಕಿಸಿ ಪತ್ನಿ ಕತ್ತು ಸೀಳಿಆತ್ಮಹತ್ಯೆಗೆ ಯತ್ನಿಸಿದ ಪತಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.