ಅಂತಾರಾಜ್ಯ ಸಂಪರ್ಕ ರಸ್ತೆ: ಸಂಚಾರ ಸ್ಥಗಿತ
Team Udayavani, Jun 9, 2018, 2:55 AM IST
ಪುತ್ತೂರು: ಸುಬ್ರಹ್ಮಣ್ಯ – ಮಂಜೇಶ್ವರ ಅಂತಾರಾಜ್ಯ ಹೆದ್ದಾರಿಯ ಪುತ್ತೂರು ತಾ| ವ್ಯಾಪ್ತಿಯ ಕುಂಜೂರು ಪಂಜದಲ್ಲಿ ರಸ್ತೆ ಅಭಿವೃದ್ಧಿ ಕಾಮಗಾರಿ ಸಕಾಲದಲ್ಲಿ ಮುಗಿಸಲು ಸಾಧ್ಯವಾಗದ ಕಾರಣದಿಂದ ಸಂಚಾರ ಸ್ಥಗಿತಗೊಂಡಿದೆ. ಇದರಿಂದ ವಾಹನಗಳು ಪರ್ಯಾಯ ರಸ್ತೆಯಲ್ಲಿ ಸಂಚರಿಸಬೇಕಾಗಿದೆ. ಸುಬ್ರಹ್ಮಣ್ಯದಿಂದ ಕಾಣಿಯೂರು, ಸವಣೂರು ಮೂಲಕ ಪುತ್ತೂರಿಗೆ ಬಂದು ಕುಂಜೂರುಪಂಜ, ದೇವಸ್ಯ, ಪುಣಚ, ಬುಳೇರಿಕಟ್ಟೆ, ಪುಣಚ ಮೂಲಕ ಮಂಜೇಶ್ವರ ಸಂಪರ್ಕಿಸುತ್ತದೆ. ಈ ಹೆದ್ದಾರಿ ಲೋಕೋಪಯೋಗಿ ಇಲಾಖೆಯಡಿಯಲ್ಲಿದ್ದು, ಶಕುಂತಳಾ ಶೆಟ್ಟಿ ಶಾಸಕಿಯಾಗಿದ್ದ ಅವಧಿಯಲ್ಲಿ ಕುಂಜೂರುಪಂಜದಲ್ಲಿ ಅಪಘಾತ ವಲಯ ಅಭಿವೃದ್ಧಿಗಾಗಿ 4.80 ಕೋಟಿ ರೂ. ಮಂಜೂರಾಗಿತ್ತು. 18 ಸೆಂಟ್ಸ್ ಖಾಸಗಿ ಜಮೀನು ಸ್ವಾಧೀನಗೊಳಿಸಿ 5 ತಿಂಗಳ ಹಿಂದೆ ಕೆಲಸ ಆರಂಭಿಸಲಾಗಿದೆ. ಬೆಂಗಳೂರಿನ ಯೋಜನೆ, ರಸ್ತೆ ಆಸ್ತಿ ನಿರ್ವಹಣಾ ಕೇಂದ್ರ (ಪಿಆರ್‌ಎಎಂಸಿ) ಕಾಮಗಾರಿಯ ಮೇಲುಸ್ತುವಾರಿ ವಹಿಸಿದೆ.
ಪುತ್ತೂರಿನಿಂದ 4 ಕಿ. ಮೀ. ದೂರದಲ್ಲಿರುವ ಕುಂಜೂರು ಪಂಜ ಸಮೀಪ ತಗ್ಗು ಮತ್ತು ತಿರುವು ಹೊಂದಿದ್ದ ರಸ್ತೆಯನ್ನು ಸಂಪೂರ್ಣ ಎತ್ತರಿಸಿ, ಇಕ್ಕೆಲಗಳಲ್ಲಿ 7 ಮೀ. ಎತ್ತರದ ಭದ್ರ ತಡೆಗೋಡೆ ನಿರ್ಮಿಸಿ, ಕಾಂಕ್ರೀಟ್ ಸ್ಲ್ಯಾಬ್ ನ ಚರಂಡಿ ನಿರ್ಮಿಸಿ ಸುಮಾರು 100 ಮೀ. ಅಭಿವೃದ್ಧಿ ಮಾಡಲಾಗುತ್ತಿದೆ. ಕಾಮಗಾರಿ ನಡೆದರೆ ಇಲ್ಲಿನ ಅಪಘಾತ ವಲಯ ಹಣೆಪಟ್ಟಿಯೂ ದೂರವಾಗಲಿದೆ. ಜನವರಿಯಲ್ಲಿ ಆರಂಭಿಸಿದ ಕಾಮಗಾರಿಯನ್ನೂ ಜೂನ್ ಮೊದಲು ಮುಗಿಸದ ಕಾರಣ ಮತ್ತು ಮಳೆಯಲ್ಲೂ ಮಣ್ಣಿನ ಕೆಲಸ ಮುಂದುವರಿಸಿದ ಕಾರಣ ಕಾಮಗಾರಿ ಸ್ಥಳ ಸಂಪೂರ್ಣ ಕೆಸರುಮಯ, ಮಣ್ಣು ಕುಸಿತವೂ, ವಾಹನಗಳು ಓಡಾಡಲು, ನಡೆದಾಡಲೂ ಸಾಧ್ಯವಾಗದ ಸ್ಥಿತಿ ನಿರ್ಮಾಣವಾಗಿದೆ.
ಗುತ್ತಿಗೆದಾರರ ತಪ್ಪು…!
ಕುಂಜೂರು ಪಂಜದ ಅಭಿವೃದ್ಧಿ ಕಾಮಗಾರಿ ಮಾತ್ರ ಹೀಗಾಗಿದೆ. ಗುತ್ತಿಗೆದಾರರ ಕೆಲಸದ ಮೇಲೆ ಇಲಾಖೆ ನಿಗಾ ಇಡುತ್ತಿಲ್ಲ. ಅಧಿಕಾರಿಗಳು ಗುತ್ತಿಗೆದಾರರ ಮುಲಾಜಿಗೆ ಬಿದ್ದವರಂತೆ ವರ್ತಿಸುತ್ತಾರೆ. ಕಾಮಗಾರಿ ಅರ್ಧವಷ್ಟೇ ಮುಗಿದಿರುವುದರಿಂದ ಶಾಲಾ – ಕಾಲೇಜು ಮಕ್ಕಳ ಸಹಿತ ನೂರಾರು ಮಂದಿ ಪರ್ಯಾಯ ರಸ್ತೆಗಳನ್ನು ಅವಲಂಭಿಸಬೇಕಾಗಿದೆ ಎಂದು ಸಾರ್ವಜನಿಕರು ಆಪಾದಿಸಿದ್ದಾರೆ. ಜೂನ್‌ಗೆ ಮೊದಲೇ ಕಾಮಗಾರಿ ಸ್ಥಳದಲ್ಲಿ ಜಲ್ಲಿ ಹಾಸಿ ಕೆಲಸ ನಿಲ್ಲಿಸಬಹುದಿತ್ತು. ಅಥವಾ ಒಂದು ಪಾರ್ಶ್ವದಿಂದ ರಸ್ತೆಯನ್ನು ಸರಿ ಪಡಿಸಿಕೊಡಬಹುದಿತ್ತು ಎನ್ನುವುದು ಸಾರ್ವಜನಿಕರ ಆರೋಪ. ಕಳೆದೆ ಮೂರು ದಿನಗಳಿಂದ ಮಳೆಯಲ್ಲೇ ಜೆಸಿಬಿ ಮೂಲಕ ಕೆಲಸ ಮಾಡಿಸಲಾಗುತ್ತಿದೆ. ಈ ರೂಟಿನಲ್ಲಿ ಹೆಚ್ಚು ಖಾಸಗಿ ಬಸ್ಸುಗಳು ಸಂಚರಿಸುತ್ತಿದ್ದು, ಸಂಚಾರ ಸ್ಥಗಿತಗೊಳಿಸಿವೆ. ಬುಳೇರಿಕಟ್ಟೆ ಕಡೆಯ ಬಸ್‌ಗಳು ಬಲ್ನಾಡು, ಉಜುರುಪಾದೆ ಕಡೆಯಿಂದ ಇಕ್ಕಟ್ಟಾದ ರಸ್ತೆಯಲ್ಲಿ ಪುತ್ತೂರಿಗೆ ಬಂದರೆ ಪಾಣಾಜೆ ಕಡೆಯ ಬಸ್ ಸಹಿತ ಇತರ ವಾಹನಗಳು ಸಂಟ್ಯಾರ್ ಮೂಲಕ ಬರುತ್ತಿವೆ.
ರಸ್ತೆ ಸಂಚಾರ ದುಸ್ತರಗೊಂಡಿರುವ ಕುರಿತು ತಾಲೂಕು ಆಡಳಿತವಾಗಲಿ, ಲೋಕೋಪಯೋಗಿ ಇಲಾಖೆಯಾಗಲಿ ಜನರಿಗೆ ಅಧಿಕೃತ ಮಾಹಿತಿ ನೀಡಿಲ್ಲ. ಅಧಿಕೃತವಾಗಿ ಸಂಚಾರ ಬದಲಾವಣೆ ವ್ಯವಸ್ಥೆಯನ್ನೂ ಮಾಡಿಕೊಟ್ಟಿಲ್ಲ. ಕೆಲವು ವಾಹನ ಸವಾರರು ಅನಿವಾರ್ಯವಾಗಿ ಸವಾಲಿನ ಸಂಚಾರ ಮಾಡುತ್ತಿದ್ದಾರೆ. ಸಂಚಾರ ಸಮಸ್ಯೆಯಾಗಿರುವ ಕುರಿತು ಉಪ ನ್ಯಾಸಕರೊಬ್ಬರು ಪುತ್ತೂರು ಸಹಾಯಕ ಕಮಿಷನರ್‌ಗೆ ದೂರು ನೀಡಿದ ಮೇಲೆ ಬಂದ ಸೂಚನೆಯ ಮೇರೆಗೆ ಕಾಮಗಾರಿಯನ್ನು ತಾತ್ಕಾಲಿಕ ವಾಗಿ ಸರಿಪಡಿಸಿ ನಿಲ್ಲಿಸಲು ಕ್ರಮ ಕೈಗೊಳ್ಳಲಾಗುತ್ತದೆ ಎಂದು ಗುತ್ತಿಗೆದಾರರು ತಿಳಿಸಿದ್ದಾರೆ.
ತಾತ್ಕಾಲಿಕ
ಜಾಗ ಇದ್ದ ಸ್ಥಿತಿಯಲ್ಲಿ ವ್ಯತ್ಯಾಸ ಮಾಡುವ ನಿಟ್ಟಿನಲ್ಲಿ ಸಾಕಷ್ಟು ಕೆಲಸಗಳಾಗಿವೆಯೇ ಹೊರತು ಲೋಪವಾಗಿಲ್ಲ. ಭಾರೀ ಪ್ರಮಾಣದಲ್ಲಿ ಮಣ್ಣು ತುಂಬಿಸುವ ಅನಿವಾರ್ಯತೆಯೂ ಇತ್ತು. ಕಾಂಕ್ರೀಟ್ ಸ್ಲ್ಯಾಬ್ ನ ಕಾಲುವೆಯನ್ನೂ ನಿರ್ಮಿಸಲಾಗಿದೆ. ಇಷ್ಟೆಲ್ಲ ಕೆಲಸ ಮುಗಿದಾಗ ಮಳೆಗಾಲ ಆರಂಭವಾಗಿದೆ. ತತ್ ಕ್ಷಣಕ್ಕೆ ರಸ್ತೆ ಮೇಲಿನ ಕೆಸರು ಮಣ್ಣನ್ನು ತೆರವು ಮಾಡಿ 20 ಲೋಡ್ ನಷ್ಟು ಜಲ್ಲಿ ಹರಡಿ ಸಂಚಾರಕ್ಕೆ ಅನುಕೂಲ ಮಾಡಿ ಮಳೆಗಾಲ ಬಳಿಕ ಕಾಮಗಾರಿ ಮುಂದುವರಿಸಲಾಗುತ್ತದೆ.
– ಪ್ರಮೋದ್ ಕುಮಾರ್, ಸಹಾಯಕ ಎಂಜಿನಿಯರ್, ಲೋಕೋಪಯೋಗಿ ಇಲಾಖೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Subramanya: ಗುಂಡ್ಯದಲ್ಲಿ ಮಂಗಳೂರು- ಬೆಂಗಳೂರು ಹೆದ್ದಾರಿ ತಡೆ ನಡೆಸಿದ ಪ್ರತಿಭಟನಾಕಾರರು
Bantwala: ಶಾಲಾ ವಾಹನ ಡಿಕ್ಕಿಯಾಗಿ ಗಂಭೀರ ಗಾಯಗೊಂಡಿದ್ದ ಸ್ಕೂಟರ್ ಸವಾರ ಮೃತ್ಯು
Sullia: ಬಿಎಸ್ಸೆನ್ನೆಲ್ ಟವರ್‌ಗೆ ಸೋಲಾರ್ ಪವರ್!
Subramanya: ಕಸ್ತೂರಿ ರಂಗನ್ ವರದಿ ವಿರುದ್ಧ ಗುಂಡ್ಯದಲ್ಲಿ ಬೃಹತ್ ಪ್ರಭಟನಾ ಸಭೆ ಆರಂಭ
ಧರ್ಮಾಧಿಕಾರಿ ಡಾ| ಹೆಗ್ಗಡೆ ಸರ್ವಜನರ ವಿಕಾಸಕ್ಕೆ ಸಾಕ್ಷಿ
MUST WATCH
ಹೊಸ ಸೇರ್ಪಡೆ
Organ Donation: ಸಾವಿನ ನಂತರವೂ ನೆರವಾದ ಜೀವ
Anandapura: ಸಾಲದ ಬಾಧೆ ತಾಳಲಾರದೆ ರೈತ ಆತ್ಮಹ*ತ್ಯೆ
Maharashtra Election: ಅಮಿತ್ ಶಾ ಅವರ ಬ್ಯಾಗ್ ಪರೀಕ್ಷಿಸಿದ ಚುನಾವಣಾ ಅಧಿಕಾರಿಗಳು
Bengaluru: ವೈದ್ಯೆಗೆ ಲೈಂಗಿಕ ಕಿರುಕುಳ: ಪಿಎಸ್‌ಐ ವಿರುದ್ದ ಪೊಲೀಸ್ ಆಯುಕ್ತರಿಗೆ ದೂರು
Bengaluru: ಆತ್ಮಹತ್ಯೆಗೆ ಯತ್ನಿಸಿದ ವ್ಯಕ್ತಿಯ ಜೀವ ಉಳಿಸಿದ ಸಂಚಾರ ಪೊಲೀಸರು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.