ಧಾರವಾಡ ಕೃಷಿ ವಿವಿಯಿಂದ ಒಂಭತ್ತು ತಳಿ ಅಭಿವೃದ್ಧಿ


Team Udayavani, Jun 9, 2018, 6:55 AM IST

ban09061807medn.jpg

ಧಾರವಾಡ: ದೇಶದ ಉತ್ಕೃಷ್ಟ ಕೃಷಿ ವಿಶ್ವವಿದ್ಯಾಲಯಗಳ ಪಟ್ಟಿಯಲ್ಲಿ 5ನೇ ಸ್ಥಾನದಲ್ಲಿರುವ ಧಾರವಾಡ ಕೃಷಿ ವಿವಿ ಮತ್ತೆ ತನ್ನ ಸಂಶೋಧನಾ ಸಾಮರ್ಥ್ಯವನ್ನು ಇಡೀ ದೇಶಕ್ಕೆ ಸಾಬೀತು ಪಡಿಸಿದೆ.

ಬರೋಬ್ಬರಿ 9 ಹೊಸ ಸುಧಾರಿತ ಬೀಜ ತಳಿಗಳನ್ನು ಒಂದೇ ಸಮಯಕ್ಕೆ ಅಭಿವೃದ್ಧಿಗೊಳಿಸಿ ಸೈ ಎನಿಸಿಕೊಂಡಿದೆ.
ಮೂರೂವರೆ ದಶಕಗಳಿಂದಲೂ ಬೀಜೋತ್ಪಾದನೆಯಲ್ಲಿ ದೇಶದಲ್ಲಿಯೇ ಅಗ್ರ ಶ್ರೇಣಿಯಲ್ಲಿರುವ ಧಾರವಾಡ ಕೃಷಿ ವಿವಿ, ಕಳೆದ ವರ್ಷವಷ್ಟೇ ಇಟಲಿಯ ಆಲಿವ್‌ ಎಣ್ಣೆಗೆ ಸರಿಸಮನಾದ ಗುಣ ಹೊಂದಿದ ಶೇಂಗಾ ಬೀಜವನ್ನು
(ಶೇಂಗಾ ಡಿಎಚ್‌-245)ಅಭಿವೃದ್ಧಿ ಪಡಿಸಿ ದೇಶದ ಕೃಷಿ ವಿಜ್ಞಾನಿಗಳ ಗಮನ ಸೆಳೆದಿತ್ತು. ಒಂದು ಕೆಜಿಗೆ 900 ರೂ. ಬೆಲೆ ಇರುವ ಆಲೀವ್‌ ಎಣ್ಣೆ ವಿದೇಶದಿಂದಲೇ ಹೆಚ್ಚು ಆಮದಾಗುತ್ತಿದೆ.

ಅಂತಹದೇ ಗುಣ ಇರುವ ಶೇಂಗಾ ಬೀಜ ಸಂಶೋಧನೆ ಮಾಡಿ ಅದರಿಂದ ಎಣ್ಣೆ (ಆಲಿಕ್‌ ಆ್ಯಸಿಡ್‌ ಅಧಿಕ ಇರುವ)
ಉತ್ಪಾದನೆ ಮಾಡಿ ಮೌಲ್ಯವರ್ಧನೆಗೆ ಬಾಗಲಕೋಟೆ, ಧಾರವಾಡ ಕೃಷಿ ವಿಜ್ಞಾನ ಕೇಂದ್ರಕ್ಕೆ ಕೃಷಿ ವಿವಿ ಕೈ ಜೋಡಿಸಿದೆ.

ಇದರ ಯಶಸ್ಸಿನಿಂದ ಸ್ಫೂರ್ತಿ ಪಡೆದ ಕೃಷಿ ವಿವಿ ವಿಜ್ಞಾನಿಗಳು ಇದೀಗ ಒಂದೇ ಸಮಯಕ್ಕೆ ಗೋಧಿ,ಗೋವಿನಜೋಳ, ಸೋಯಾ ಅವರೆ, ಹೆಸರು,ಶೇಂಗಾ, ಎರಡು ಬಗೆಯ ಕಬ್ಬು, ಬದನೆಕಾಯಿ ಮತ್ತು ಬೆಳ್ಳುಳ್ಳಿಯ ವಿನೂತನ ತಳಿಗಳನ್ನು ಅಭಿವೃದ್ಧಿಪಡಿಸಿದ್ದಾರೆ. ಅಭಿವೃದ್ಧಿಪಡಿಸಿದ ಎಲ್ಲ ತಳಿಗಳು ಕೂಡ ವಿನೂತನ ಕೃಷಿ ತಂತ್ರಜ್ಞಾನ, ರೋಗ ನಿರೋಧಕತೆ, ಬರಗಾಲ ನಿರೋಧಕತೆ, ಹೆಚ್ಚು ಇಳುವರಿ ನೀಡುವ ಗುಣ ಹೊಂದಿವೆ.

ಸಂಶೋಧನೆಯಾದ ಪ್ರತಿ ತಳಿಯನ್ನು ಸುಧಾರಿತ ಬೀಜ ರೂಪದಲ್ಲಿ ಸಿದ್ಧಪಡಿಸಲು 7 ವರ್ಷಕ್ಕೂ ಅಧಿಕ ಸಮಯ ತಗುಲಿದ್ದು, ಇದೀಗ ಅಂತಿಮವಾಗಿ ಅವುಗಳನ್ನು ಪರೀಕ್ಷೆಗೆ ಒಳಪಡಿಸಿ ಸಾಧಕ-ಬಾಧಕ ಪರಿಶೀಲನೆ ಮಾಡಿ ಅವುಗಳ ಬೀಜೋತ್ಪಾದನೆಗೆ ಕೃಷಿ ವಿವಿ ಅವಕಾಶ ನೀಡಿದೆ.

ಬೀಜೋತ್ಪಾದನೆ: ಮೇ 31ರಂದು ಧಾರವಾಡದ ಕೃಷಿ ವಿವಿಯಲ್ಲಿ ನಡೆದ ಸಂಶೋಧನಾ ಸಮ್ಮೇಳನದಲ್ಲಿ ಈ ತಳಿಗಳ ಬೀಜೋತ್ಪಾದನೆಗೆ ಅವಕಾಶ ನೀಡಲಾಗಿದ್ದು, ಇವುಗಳು ರೈತರ ಹೊಲಕ್ಕೆ ಸೇರಲು ಇನ್ನೂ 2 ವರ್ಷ ಬೇಕು. ಧಾರವಾಡ ಕೃಷಿ ವಿವಿ 1986ರಿಂದ ಈವರೆಗೂ 200ಕ್ಕೂ ಹೆಚ್ಚು ಸುಧಾರಿತ ತಳಿಗಳು ಮತ್ತು 1100ಕ್ಕೂ ಹೆಚ್ಚು ಕೃಷಿ ತಾಂತ್ರಿಕತೆಗಳ ಸಂಶೋಧನೆ ಮಾಡಿದೆ.

28 ತಂತ್ರಜ್ಞಾನ: ಕಳೆದ 4 ವರ್ಷಗಳಿಂದ ರೈತರಿಗೆ ಇನ್ನಷ್ಟು ಸರಳ ಮಾರ್ಗದ ಮೂಲಕ ಬೆಳೆ ಬೆಳೆಯಲು 
ಸಹಕಾರಿಯಾಗುವ 28 ಸುಧಾರಿತ ಬೇಸಾಯ ಕ್ರಮಗಳನ್ನು ಕೂಡ ಕೃಷಿ ವಿವಿ ಸಂಶೋಧನೆ ಮಾಡಿದೆ. ಕಬ್ಬಿನ ಬೆಳೆಯಲ್ಲಿ ಕಳೆ ನಿರ್ವಹಣೆ,ತೊಗರಿ ಮತ್ತು ಹೆಸರಿನಲ್ಲಿ ಅಂತರ ಬೆಳೆ ಪದ್ಧತಿ, ಹಿಂಗಾರಿ ಬೀಜದಲ್ಲಿ ಬರ ನಿರೋಧಕತೆ ವೃದ್ಧಿಸುವ ವಿಧಾನಗಳು ವಿಶೇಷವಾಗಿವೆ. ಪುಂಡಿ ಮತ್ತು ಹತ್ತಿ ಬೀಜ ಮಿಶ್ರಣ ಮಾಡಿ ಕಾಗದ ಸಿದ್ಧಗೊಳಿಸುವ 
ತಂತ್ರಜ್ಞಾನ ಪರಿಸರ ಸ್ನೇಹಿ ಮತ್ತು ಗಿಡಮರಗಳ ಸಂರಕ್ಷಣೆಗೆ ಇನ್ನಷ್ಟು ಒತ್ತು ನೀಡುವಂತಿದೆ. ಇನ್ನು ನಾಯಿ ಮೆಂತೆ (ಕ್ಯಾಸಿಯಾ ಟೋರಾ)ದಿಂದ ಬಟ್ಟೆಯ ಮೇಲೆ ಅಲಂಕಾರಿಕ ಮುದ್ರಣವನ್ನು ಮಾಡುವ ತಂತ್ರಜ್ಞಾನವನ್ನು ವಿವಿಯ ವಿಜ್ಞಾನಿಗಳು ಸಂಶೋಧಿಸಿದ್ದಾರೆ.

ಹೊಸ ತಳಿಗಳು ಯಾವವು?: ಗೋಧಿ-ಉಎಎಸ್‌-375 (ಡಾ.ರುದ್ರಾ ನಾಯ್ಕ ಮತ್ತು ಸಂಗಡಿಗರ ಸಂಶೋಧನೆ), ಗೋವಿನಜೋಳ-ಜಿಪಿಎಂಎಚ್‌ -1101 (ಡಾ.ಆರ್‌.ಎಂ. ಕಾಚಪುರ) ಹೆಸರು-ಡಿಜಿಜಿ-7 (ಡಾ.ವಿಜಯ ಕುಮಾರ್‌), ಶೇಂಗಾ-ಐಸಿಜಿವಿ06189(ಡಾ.ಎಚ್‌.ಎಲ್‌. ನದಾಫ್‌),ಸೋಯಾ ಅವರೆ- ಡಿಎಸ್‌ಬಿ-23 (ಡಾ.ಜಿ.ಟಿ.ಬಸವರಾಜ), ಕಬ್ಬು-ಎಸ್‌ಕೆ09227 (ಡಾ.ಎಸ್‌.ಬಿ.ಪಾಟೀಲ), ಕಬ್ಬು-ಎಸ್‌ಎನ್‌ಕೆ-09293 (ಡಾ.ಎಸ್‌.ಬಿ. ಪಾಟೀಲ)ಬದನೆಕಾಯಿ-ಡಿಡಬ್ಲೂಬಿ-1(ಡಾ.ಪಿ.ಆರ್‌. ಧರಮಟ್ಟಿ), ಬೆಳ್ಳುಳ್ಳಿ-ಡಿಡಬ್ಲೂಡಿಜಿ-2 (ಡಾ. ಪಿ.ಆರ್‌. ಧರಮಟ್ಟಿ) ನೂತನ ತಳಿಗಳಾಗಿವೆ. ಈ ಎಲ್ಲ ತಳಿಗಳಿಗೂ ದೇಶದ ಇತರೆಡೆಯಿಂದ ಬೇಡಿಕೆ ಬರುತ್ತಿದೆ.

ಬೀಜೋತ್ಪಾದನೆಯಲ್ಲಿ ಕುಸಿತ: ಒಂದು ದಶಕದಿಂದ ಎಲ್ಲಾ ಬಗೆಯ ಉತ್ಕೃಷ್ಟ ಬೀಜೋತ್ಪಾದನೆಯಲ್ಲಿ ನಂ.1 ಸ್ಥಾನದಲ್ಲಿದ್ದ ಕೃಷಿ ವಿವಿ ಕಳೆದ 3 ವರ್ಷ ಸತತ ಬರಗಾಲ ಮತ್ತು ಅಕಾಲಿಕ ಮಳೆಯಿಂದಾಗಿ ಶೇಂಗಾ ಮತ್ತು ಸೋಯಾ ಅವರೆ ಉತ್ಪಾದನೆ ಕುಸಿತಗೊಂಡು ಇದೀಗ ಬಿಜೋತ್ಪಾದನೆಯಲ್ಲಿ 2ನೇ ಸ್ಥಾನಕ್ಕೆ ಕುಸಿದಿದೆ. ರಾಜ್ಯ ಸರ್ಕಾರ ಬೀಜ ಖರೀದಿಯಲ್ಲಿ ಮಾಡುತ್ತಿರುವ ಎಡವಟ್ಟು ಕೂಡ ಇದಕ್ಕೆ ಕಾರಣವಾಗಿದೆ. ಆರಂಭದಲ್ಲಿ ಬೇಡಿಕೆ ಪಟ್ಟಿ ಸಲ್ಲಿಸುವ ಸರ್ಕಾರ ನಂತರ ಖರೀದಿಗೆ ಆಸಕ್ತಿ ತೋರಿಸುತ್ತಿಲ್ಲ. ಹೀಗಾಗಿ ಬೀಜೋತ್ಪಾದನೆಗಿಂತ ತಳಿ ಸುಧಾರಣೆ ಮತ್ತು ವಿನೂತನ ತಂತ್ರಜ್ಞಾನಕ್ಕೆ ಕೃಷಿ ವಿವಿ ಒತ್ತು ನೀಡುತ್ತಿದೆ.

ಕೃಷಿ ವಿಜ್ಞಾನಿಗಳು ಸತತ ಪರಿಶ್ರಮದಿಂದ ಒಟ್ಟಿಗೆ 9 ಹೊಸ ತಳಿಗಳ ಅಭಿವೃದಿಟಛಿ ಮಾಡಿದ್ದು ಹೆಮ್ಮೆ ಎನಿಸುತ್ತಿದೆ. ಮುಂದಿನ ದಿನಗಳಲ್ಲಿ ಇನ್ನಷ್ಟು ಹೊಸ ಸಂಶೋಧನೆಗಳಿಗೆ ಅಗತ್ಯ ವ್ಯವಸ್ಥೆ ಮಾಡುತ್ತೇನೆ.
– ಡಾ. ವಿ.ಐ. ಬೆಣಗಿ,
ಕುಲಪತಿ, ಕೃಷಿ ವಿವಿ, ಧಾರವಾಡ

ದೇಶದಲ್ಲಿಯೇ ಇಂದಿಗೂ ಸುಧಾರಿತ ತಳಿ ಉತ್ಪಾದನೆಗೆ ಧಾರವಾಡ ಕೃಷಿ ವಿವಿ ಮುಂಚೂಣಿಯಲ್ಲಿದೆ. ಇದೀಗ 9 ತಳಿ
ಹಾಗೂ 28 ಕೃಷಿ ತಂತ್ರಗಳನ್ನು ಸಂಶೋಧನೆ ಮಾಡಿದ್ದೇವೆ. ಇದನ್ನು ರೈತರ ಮನೆಗೆ ತಲುಪಿಸುವ ಜವಾಬ್ದಾರಿಯನ್ನು ನಾವೇ ಹೊತ್ತಿದ್ದೇವೆ.

– ಡಾ. ಎಸ್‌.ಎಂ. ಮಂಟೂರ,
ಬೀಜೋತ್ಪಾದನೆ ವಿಶೇಷ ಅಧಿಕಾರಿ, ಕೃಷಿ ವಿವಿ, ಧಾರವಾಡ

– ಬಸವರಾಜ್‌ ಹೊಂಗಲ್‌

ಟಾಪ್ ನ್ಯೂಸ್

1-aaammm

Jammu and Kashmir; ಉಗ್ರವಾದ ಪರಿಸರ ವ್ಯವಸ್ಥೆ ಬಹುತೇಕ ಕೊನೆಗೊಂಡಿದೆ: ಶಾ

1-lok-sabha

BJP vs Congress; ಸಂಸತ್ತಿನಲ್ಲಿ ಕೋಲಾಹಲ: ಪೊಲೀಸರಿಗೆ ದೂರು,ಕಾಂಗ್ರೆಸ್ ಪ್ರತಿದೂರು

CT Ravi

Laxmi Hebbalkar; ಅವಾಚ್ಯ ಪದ ಬಳಕೆ ಕೇಸ್: ಸಿ.ಟಿ.ರವಿ ಬಂಧನ

Gadaga: ನೀರಿನ ಟ್ಯಾಂಕರ್ ಹರಿದು 2 ವರ್ಷದ ಮಗು ಸಾವು

Gadaga: ನೀರಿನ ಟ್ಯಾಂಕರ್ ಹರಿದು 2 ವರ್ಷದ ಮಗು ಸಾವು

dhankar (2)

Jagdeep Dhankhar; ರಾಜ್ಯಸಭಾ ಸಭಾಪತಿ ವಿರುದ್ದದ ಪ್ರತಿಪಕ್ಷಗಳ ಅವಿಶ್ವಾಸ ನಿರ್ಣಯ ತಿರಸ್ಕೃತ

Mollywood: ಸೂಪರ್‌ ಸ್ಟಾರ್ ಮೋಹನ್‌ ಲಾಲ್‌ಗೆ ‘ಆವೇಶಮ್‌ʼ ನಿರ್ದೇಶಕ ಆ್ಯಕ್ಷನ್ ಕಟ್

Mollywood: ಸೂಪರ್‌ ಸ್ಟಾರ್ ಮೋಹನ್‌ ಲಾಲ್‌ಗೆ ‘ಆವೇಶಮ್‌ʼ ನಿರ್ದೇಶಕ ಆ್ಯಕ್ಷನ್ ಕಟ್

ಅಮಿತ್ ಶಾಗೆ ಹುಚ್ಚು ಹಿಡಿದಿದೆ, ರಾಜೀನಾಮೆ ನೀಡುವುದು ಉತ್ತಮ: ಲಾಲು ಪ್ರಸಾದ್ ಯಾದವ್

ಅಮಿತ್ ಶಾಗೆ ಹುಚ್ಚು ಹಿಡಿದಿದೆ, ರಾಜೀನಾಮೆ ನೀಡುವುದು ಉತ್ತಮ: ಲಾಲು ಪ್ರಸಾದ್ ಯಾದವ್ ಕಿಡಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-eeee

Bhadravathi:ಬಾಯ್ಲರ್ ಸ್ಫೋ*ಟದಿಂದ ರೈಸ್‌ಮಿಲ್ ಕುಸಿತ:7 ಮಂದಿಗೆ ಗಾಯ

rape

Sringeri; ಅಸ್ಸಾಂ ಕಾರ್ಮಿಕನಿಂದ ಅಪ್ರಾಪ್ತ ಬಾಲಕಿ ಮೇಲೆ ಲೈಂಗಿ*ಕ ದೌರ್ಜನ್ಯ

CT Ravi

Laxmi Hebbalkar; ಅವಾಚ್ಯ ಪದ ಬಳಕೆ ಕೇಸ್: ಸಿ.ಟಿ.ರವಿ ಬಂಧನ

1-a-ct

Belagavi Session ಉದ್ವಿಗ್ನ:ಹೆಬ್ಬಾಳ್ಕರ್ ವಿರುದ್ದ ಅವಾಚ್ಯ ಪದ ಬಳಸಿದರೆ ಸಿ.ಟಿ.ರವಿ?

ಕಾರಂಜಾ ಸಂತ್ರಸ್ತರ ಸಮಸ್ಯೆ ಅಧ್ಯಯನಕ್ಕೆ ತಾಂತ್ರಿಕ ಸಮಿತಿ ರಚನೆ: ಸಿಎಂ ಸಿದ್ದರಾಮಯ್ಯ

Bidar: ಕಾರಂಜಾ ಸಂತ್ರಸ್ತರ ಸಮಸ್ಯೆ ಅಧ್ಯಯನಕ್ಕೆ ತಾಂತ್ರಿಕ ಸಮಿತಿ ರಚನೆ: ಸಿಎಂ ಸಿದ್ದರಾಮಯ್ಯ

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

1-aaammm

Jammu and Kashmir; ಉಗ್ರವಾದ ಪರಿಸರ ವ್ಯವಸ್ಥೆ ಬಹುತೇಕ ಕೊನೆಗೊಂಡಿದೆ: ಶಾ

1-eeee

Bhadravathi:ಬಾಯ್ಲರ್ ಸ್ಫೋ*ಟದಿಂದ ರೈಸ್‌ಮಿಲ್ ಕುಸಿತ:7 ಮಂದಿಗೆ ಗಾಯ

rape

Sringeri; ಅಸ್ಸಾಂ ಕಾರ್ಮಿಕನಿಂದ ಅಪ್ರಾಪ್ತ ಬಾಲಕಿ ಮೇಲೆ ಲೈಂಗಿ*ಕ ದೌರ್ಜನ್ಯ

1-lok-sabha

BJP vs Congress; ಸಂಸತ್ತಿನಲ್ಲಿ ಕೋಲಾಹಲ: ಪೊಲೀಸರಿಗೆ ದೂರು,ಕಾಂಗ್ರೆಸ್ ಪ್ರತಿದೂರು

CT Ravi

Laxmi Hebbalkar; ಅವಾಚ್ಯ ಪದ ಬಳಕೆ ಕೇಸ್: ಸಿ.ಟಿ.ರವಿ ಬಂಧನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.