ಮಂಗಳನಲ್ಲಿ ಕಲ್ಲು ಪತ್ತೆ!
Team Udayavani, Jun 9, 2018, 6:00 AM IST
ವಾಷಿಂಗ್ಟನ್: ನಾಸಾದ ಕ್ಯೂರಿಯಾಸಿಟಿ ರೋವರ್ ಮಂಗಳನಲ್ಲಿ ಕಟ್ಟಡದ ರಚನೆಗಳನ್ನು ಕಂಡುಹಿಡಿದಿದೆ. ಇದು ಮಂಗಳನಲ್ಲಿ ಹಿಂದೊಂದು ದಿನ ಜೀವಿಗಳಿದ್ದವು ಮತ್ತು ಈಗಲೂ ಇದ್ದಿರಬಹುದು ಎಂಬ ಕುತೂಹಲಕ್ಕೆ ಇನ್ನಷ್ಟು ಇಂಬು ನೀಡಿವೆ. 300 ಕೋಟಿ ವರ್ಷಗಳ ಹಿಂದಿನ ಗಡುಸಾದ ಜಡ ಸಾವಯವ ಕಣಗಳನ್ನು ಒಳಗೊಂಡಿರುವ ಕಲ್ಲುಗಳು ಕಂಡುಬಂದಿವೆ. ಇವುಗಳ ಮೇಲೆ ಕಾಲಗಳು ಬದಲಾದ ಚಿಹ್ನೆಗಳೂ ಇವೆ. ಆದರೆ ಈ ಸಾವಯವ ಕಣಗಳು ಜೀವಿಗಳಲ್ಲದ ಸಾಮಾನ್ಯ ಅಜೈವಿಕ ಪ್ರಕ್ರಿಯೆಯಿಂದಲೂ ನಿರ್ಮಿತವಾಗಿರಬಹುದು ಎಂದೂ ವಿಜ್ಞಾನಿಗಳು ಅಭಿಪ್ರಾಯಪಟ್ಟಿದ್ದಾರೆ.