‘ಪರಿಸರ ಸಂರಕ್ಷಣೆಗೆ ತ್ಯಾಜ್ಯ ನಿರ್ವಹಣೆಯೂ ಅತ್ಯಗತ್ಯ’
Team Udayavani, Jun 9, 2018, 10:42 AM IST
ಕೃಷ್ಣಾಪುರ : ಪರಿಸರ ಸಂರಕ್ಷಣೆಗಾಗಿ ಸಸಿ ನೆಡುವ ಜತೆಗೆ ಪರಿಣಾಮಕಾರಿಯಾದ ತ್ಯಾಜ್ಯ ನಿರ್ವಹಣೆಯೂ ಅತ್ಯಗತ್ಯ ಎಂದು ಅಲ್ ಬದ್ರಿಯಾ ಸಂಯುಕ್ತ ಪದವಿಪೂರ್ವ ಕಾಲೇಜಿನ ಅಧ್ಯಕ್ಷ ಹಾಜಿ ಬಿ.ಎ. ನಝೀರ್ ಅವರು ತಿಳಿಸಿದರು.
ಅಲ್ ಬದ್ರಿಯಾ ಸಮೂಹ ಸಂಸ್ಥೆಗಳ ಆಶ್ರಯದಲ್ಲಿ ನಡೆದ ವಿಶ್ವ ಪರಿಸರ ದಿನಾಚರಣೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು. ಪರಿಸರ ಸಂರಕ್ಷಣೆ ಜತೆಗೆ ಅಭಿವೃದ್ಧಿಯೂ ಅಗತ್ಯ. ಆದರೆ ಪರಿಸರ ಉಳಿಸಲು ಪ್ರತಿಯೊಬ್ಬರೂ ಕಟಿಬದ್ಧರಾಗಬೇಕಿದೆ. ಮಾಲಿನ್ಯದಿಂದ ಅನಾರೋಗ್ಯ ಹೆಚ್ಚುತ್ತಿರುವ ಬಗ್ಗೆ ಆರೋಗ್ಯ ಇಲಾಖೆಗಳು ಮಾಹಿತಿ ನೀಡುತ್ತಲೇ ಬರುತ್ತಿವೆ. ಹೀಗಾಗಿ ಭವಿಷ್ಯದ ಪೀಳಿಗೆಗಾಗಿ ಸುರಕ್ಷಿತ ಭೂಮಿಯನ್ನು ನಾವೆಲ್ಲ ಉಳಿಸಬೇಕಾಗಿದೆ ಎಂದರು.
ವಿದ್ಯಾರ್ಥಿಗಳು ಸಂಸ್ಥೆಯ ಸುತ್ತಮುತ್ತಲಿನ ಪರಿಸರದ ಪ್ಲಾಸ್ಟಿಕ್ ತ್ಯಾಜ್ಯಗಳನ್ನು ಸಂಗ್ರಹಿಸಿದರು. ಶಾಲಾ ಕೈತೋಟ ಸ್ವತ್ಛಗೊಳಿಸಿ ಹೊಸ ಸಸಿಗಳನ್ನು ನೆಡಲಾಯಿತು.
ಶಾಲಾ ಸಂಚಾಲಕ ಅಬ್ದುಲ್ ಹಮೀದ್ ಎಸ್.ಎಂ., ಕಾರ್ಯದರ್ಶಿ ಬಿ.ಎ. ಇಕ್ಬಾಲ್, ಜತೆ ಕಾರ್ಯದರ್ಶಿ ಫಿರೋಝ್ ಖಾನ್, ಕೋಶಾ ಧಿಕಾರಿ ಮಹಮ್ಮದ್ ಆಲಿ ತೋಟ ಉಪಸ್ಥಿತರಿದ್ದರು. ಶಾಲಾ ಪ್ರಭಾರ ಪ್ರಾಂಶುಪಾಲೆ ವಿಲ್ಮಾ ಡಿ’ಮೆಲ್ಲೊ ಸ್ವಾಗತಿಸಿದರು. ಮುಖ್ಯ ಶಿಕ್ಷಕ ಸತೀಶ ಎನ್. ನಿರೂಪಿಸಿದರು. ದೈಹಿಕ ಶಿಕ್ಷಕರಾದ ಹರೀಶ್ ಹಾಗೂ ನಿತಿನ್ ಕಾರ್ಯಕ್ರಮ ಸಂಯೋಜಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Supreme Court; CJI ಡಿ.ವೈ.ಚಂದ್ರಚೂಡ್ ಅವರಿಗೆ ಭಾವನಾತ್ಮಕ ವಿದಾಯ
By Election: ಸಿದ್ದರಾಮಯ್ಯ ಜೈಲಿಗೆ ಹೋಗುವುದು ನಿಶ್ಚಿತ: ಬಿ.ಎಸ್.ಯಡಿಯೂರಪ್ಪ ಭವಿಷ್ಯ
Udupi: ಇಂದ್ರಾಳಿ ರೈಲ್ವೇ ಮೇಲ್ಸೇತುವೆ ಕಾಮಗಾರಿ ಮಗುಚಿ ಬಿದ್ದ ಕ್ರೇನ್; ತಪ್ಪಿದ ಅನಾಹುತ
Udupi: ಬೆಂಬಲ ಬೆಲೆ ಯೋಜನೆಯಡಿ ಭತ್ತ ಖರೀದಿ
Moodbidri: ಆಳ್ವಾಸ್‌ನಲ್ಲಿ ದೀಪಾವಳಿ ಸಂಭ್ರಮ; ಸಂಪ್ರದಾಯ , ಸಂಸ್ಕೃತಿಯ ಅನಾವರಣ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.