ಮಂ. ಗ್ರಾಮಾಂತರ: ಮತದಾನ ಶಾಂತಿಯುತ 


Team Udayavani, Jun 9, 2018, 11:05 AM IST

9-june-6.jpg

ಮಹಾನಗರ: ವಿಧಾನ ಪರಿಷತ್‌ ನೈಋತ್ಯ ಪದವೀಧರ ಹಾಗೂ ಶಿಕ್ಷಕರ ಕ್ಷೇತ್ರದ ಮತದಾನ ಪ್ರಕ್ರಿಯೆಯು ಶುಕ್ರವಾರ ನಡೆದಿದ್ದು ಮತದಾನ ಶಾಂತಿಯುತವಾಗಿ ನಡೆಯಿತು. ಉಳ್ಳಾಲ: ವಿಧಾನ ಪರಿಷತ್‌ನ ಪದವೀಧರ, ಶಿಕ್ಷಕ ಕ್ಷೇತ್ರಕ್ಕೆ ನಡೆಯುತ್ತಿರುವ ಚುನಾವಣೆಗೆ ಮಂಗಳೂರು ವಿಧಾನಸಭಾ ಕ್ಷೇತ್ರ ಉಳ್ಳಾಲ ಹೋಬಳಿಯಲ್ಲಿ ಶಿಕ್ಷಕ ಕ್ಷೇತಕ್ಕೆ 72.70, ಪದವೀಧರ ಕ್ಷೇತ್ರಕ್ಕೆ 67.08 ಮತದಾನವಾಗಿದೆ.

ಕ್ಷೇತ್ರ ವ್ಯಾಪ್ತಿಯ ಕೊಣಾಜೆ ವಿಶ್ವಮಂಗಳ ಶಾಲೆಯ ಕೇಂದ್ರದಲ್ಲಿ 132 ಶಿಕ್ಷಕ ಮತದಾರರಲ್ಲಿ 89 ಮಂದಿ ಮತದಾನ ಮಾಡಿದರೆ, 230 ಪದವೀಧರ ಮತದಾರರಲ್ಲಿ 173 ಮಂದಿ ಮತದಾನ ಮಾಡಿದ್ದಾರೆ. ಬಬ್ಬುಕಟ್ಟೆಯ ಪ್ರಾಥಮಿಕ ಶಾಲೆಯ ಮತದಾನ ಕೇಂದ್ರದಲ್ಲಿ 260 ಶಿಕ್ಷಕ ಮತದಾರರಲ್ಲಿ 196 ಮತದಾನವಾಗಿದ್ದು, 563 ಪದವೀಧರ ಮತದಾರರಲ್ಲಿ 356 ಮತದಾನವಾಗಿದೆ.

ಮೂಡಬಿದಿರೆ: ಚುನಾವಣೆಗೆ ಮೂಡಬಿದಿರೆ ತಾಲೂಕು ಮಟ್ಟದಲ್ಲಿ ಉತ್ತಮ ಪ್ರತಿಕ್ರಿಯೆ ಕಂಡುಬಂದಿದೆ. ಪುರಸಭಾ ಕಾರ್ಯಾಲಯದ ತಳ ಅಂತಸ್ತಿನಲ್ಲಿ ತಾಲೂಕಿನ 1139 ನೋಂದಾಯಿತ ಪದವೀಧರರಿಗಾಗಿ 9 ಮತ್ತು 9ಎ ಹೀಗೆ 2 ಮತಗಟ್ಟೆಗಳನ್ನೂ ಪ್ರಧಾನ ಕಚೇರಿಯಲ್ಲಿ 779 ಮಂದಿ ನೋಂದಾಯಿತ ಶಿಕ್ಷಕರಿಗಾಗಿ 9 ಸಂಖ್ಯೆಯ ಮತಗಟ್ಟೆಯನ್ನು ವ್ಯವಸ್ಥೆ ಮಾಡಲಾಗಿತ್ತು.

779 ಮಂದಿ ಶಿಕ್ಷಕರರಲ್ಲಿ 600 ಮಂದಿ ಮತ ಚಲಾಯಿಸುವ ಮೂಲಕ ಶೇ. 77.02 ಹಾಗೂ 1139 ಪದವೀಧರರಲ್ಲಿ 719 ಮಂದಿ ಮತ ಚಲಾಯಿಸುವ ಮೂಲಕ ಶೇ. 63.12 ಪ್ರಮಾಣದಲ್ಲಿ ಮತದಾನಗೈದರು. ಬಂದೋ ಬಸ್ತ್ ಏರ್ಪಡಿಸಲಾಗಿತ್ತು. ಪುರಸಭೆಯ ಹತ್ತಿರದ ಪ್ರವಾಸಿ ಬಂಗ್ಲೆಯ ಬಳಿ ವಿವಿಧ ಪಕ್ಷಗಳ ಬೂತ್‌ಗಳೂ ಭರ್ಜರಿ ಶಾಮಿಯಾನ ಹಾಕಿಕೊಂಡಿರುವುದು ಗಮನಾರ್ಹ ಬೆಳವಣಿಗೆಯಾಗಿತ್ತು.

ಮೂಲ್ಕಿ: ಮೂಲ್ಕಿ ಹೋಬಳಿ ಮಟ್ಟದ ಮತದಾರರು ಮೂಲ್ಕಿ ನಗರ ಪಂಚಾಯತ್‌ ನಲ್ಲಿ ಮತ ಚಲಾಯಿಸಿದರು. ಪದವೀಧರ ಕ್ಷೇತ್ರದಲ್ಲಿ ಶೇ.67 ಮತ್ತು ಶಿಕ್ಷಕರ ಕ್ಷೇತ್ರದಲ್ಲಿ ಶೇ. 79 ಮತದಾನ ನಡೆಯಿತು. ಮತದಾನ ಶಾಂತಿಯುತವಾಗಿ ಯಾವುದೇ ಅಡ್ಡಿ ಆತಂಕಗಳಿಲ್ಲದೆ ನಡೆದಿದ್ದು ಪೊಲೀಸ್‌ ಬಿಗಿ ಬಂದೋಬಸ್ತು ಏರ್ಪಡಿಸಲಾಗಿತ್ತು

ಮತದಾರರ ಓಲೈಕೆ ಯತ್ನ 
ಕಡಿಮೆ ಮತದಾರರಿದ್ದರು, ಈ ಎರಡೂ ಕೇಂದ್ರದಲ್ಲಿ ಮತದಾನ ಮಾಡಲು ಬರುವ ಮತದಾರರ ಓಲೈಕೆಯಲ್ಲಿ ಪ್ರಮುಖ ರಾಜಕೀಯ ಪಕ್ಷಗಳಾದ ಬಿಜೆಪಿ ಮತ್ತು ಕಾಂಗ್ರೆಸ್‌ ನಾಯಕರು ತೊಡಗಿದ್ದರೆ ಪಕ್ಷೇತರ ಅಭ್ಯರ್ಥಿ ಅಲೋಷಿಯಸ್‌ ಡಿ’ಸೋಜಾ ಪರವೂ ಮತ ಚಲಾಯಿಸುವಂತೆ ಓಲೈಕೆ ಮಾಡುವುದು ಕಂಡು ಬಂತು.

ಸರತಿ ಇಲ್ಲ
ಕೊಣಾಜೆ ವಿಶ್ವ ಮಂಗಳ ಮತ್ತು ಬಬ್ಬು ಕಟ್ಟೆ ಶಾಲೆ ಮತ ಕೇಂದ್ರಗಳಲ್ಲಿ ಬೆಳಗ್ಗಿನಿಂದಲೇ ನೀರಸ ಪ್ರತಿಕ್ರಿಯೆಯಿದ್ದು, ಯಾವುದೇ ಸರತಿ ಸಾಲಿಲ್ಲದೆ ಸಂಜೆವರೆಗೆ ಮತದಾರರು ನೇರ ಮತದಾನದ ಕೇಂದ್ರದೊಳಗೆ ಹೋಗಿ ತಮ್ಮ ಹಕ್ಕು ಚಲಾಯಿಸಿದರು. ಉಳ್ಳಾಲ, ಕೊಣಾಜೆ ಪೊಲೀಸರು ಭದ್ರತೆ ಏರ್ಪಡಿಸಿದ್ದರು.

ಟಾಪ್ ನ್ಯೂಸ್

NITK-Padavi-pradana

Surathkal: ಎಐಯಿಂದ ಉದ್ಯೋಗ, ನಂಬಿಕೆಗೆ ಕುತ್ತು: ಪ್ರೊ| ಗೋವಿಂದನ್‌ ರಂಗರಾಜನ್‌

Nalin-Kateel

Result: ಮಹಾರಾಷ್ಟ್ರದಲ್ಲಿ ಎನ್‌ಡಿಎಗೆ ಜಯಭೇರಿ; ಮೋದಿ ನಾಯಕತ್ವಕ್ಕೆ ಮನ್ನಣೆ: ನಳಿನ್‌

Padmaraj–JPoojary

Mangaluru: ಗೊಂದಲ ಮೂಡಿಸುವ ಬಿಜೆಪಿಗೆ ತಕ್ಕ ಪಾಠ: ಕೆಪಿಸಿಸಿ ಪ್ರ.ಕಾರ್ಯದರ್ಶಿ ಪದ್ಮರಾಜ್‌

Sanjeev-Matandoor

Putturu: ಬಜೆಟ್‌ನಲ್ಲಿ ಹೊರಡಿಸಿರುವ ಆದೇಶ ಅನುಷ್ಠಾನಿಸದೆ ಕೃಷಿಕರಿಗೆ ವಂಚನೆ: ಮಠಂದೂರು

Sri-Home-minister

Udupi: ಪೇಜಾವರ ಶ್ರೀವಿಶ್ವಪ್ರಸನ್ನತೀರ್ಥ ಸ್ವಾಮೀಜಿ -ಗೃಹ ಸಚಿವ ಅಮಿತ್‌ ಶಾ ಭೇಟಿ

Udupi-DC-Dr.-Vidya-kumari

Udupi: ಮಂಗನಕಾಯಿಲೆ ಪ್ರಕರಣ: ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಿ: ಡಿಸಿ ಡಾ.ವಿದ್ಯಾಕುಮಾರಿ

adani (2)

Adani; 2,200 ಕೋಟಿ ರೂ. ಲಂಚ: ಅಮೆರಿಕ ಸಮನ್ಸ್‌


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಬೋಂಡಾ, ಬನ್ಸ್ ಮತ್ತು ಕೇಕ್‌

ಬೋಂಡಾ, ಬನ್ಸ್ ಮತ್ತು ಕೇಕ್‌

promegrnate

ಉಪಬೆಳೆಯಾಗಿ ದಾಳಿಂಬೆ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

go-green

ಮನೆಯಲ್ಲೇ ಹಸಿರು ಕ್ರಾಂತಿಯಾಗಲಿ…

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

MUST WATCH

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

udayavani youtube

ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|

ಹೊಸ ಸೇರ್ಪಡೆ

NITK-Padavi-pradana

Surathkal: ಎಐಯಿಂದ ಉದ್ಯೋಗ, ನಂಬಿಕೆಗೆ ಕುತ್ತು: ಪ್ರೊ| ಗೋವಿಂದನ್‌ ರಂಗರಾಜನ್‌

Nalin-Kateel

Result: ಮಹಾರಾಷ್ಟ್ರದಲ್ಲಿ ಎನ್‌ಡಿಎಗೆ ಜಯಭೇರಿ; ಮೋದಿ ನಾಯಕತ್ವಕ್ಕೆ ಮನ್ನಣೆ: ನಳಿನ್‌

Padmaraj–JPoojary

Mangaluru: ಗೊಂದಲ ಮೂಡಿಸುವ ಬಿಜೆಪಿಗೆ ತಕ್ಕ ಪಾಠ: ಕೆಪಿಸಿಸಿ ಪ್ರ.ಕಾರ್ಯದರ್ಶಿ ಪದ್ಮರಾಜ್‌

Sanjeev-Matandoor

Putturu: ಬಜೆಟ್‌ನಲ್ಲಿ ಹೊರಡಿಸಿರುವ ಆದೇಶ ಅನುಷ್ಠಾನಿಸದೆ ಕೃಷಿಕರಿಗೆ ವಂಚನೆ: ಮಠಂದೂರು

Sri-Home-minister

Udupi: ಪೇಜಾವರ ಶ್ರೀವಿಶ್ವಪ್ರಸನ್ನತೀರ್ಥ ಸ್ವಾಮೀಜಿ -ಗೃಹ ಸಚಿವ ಅಮಿತ್‌ ಶಾ ಭೇಟಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.