ಫ್ರೆಂಚ್‌ ಓಪನ್‌ನಲ್ಲಿ ಸೆರೆನಾ ಭಿನ್ನ ಅವತಾರ


Team Udayavani, Jun 9, 2018, 11:45 AM IST

66.jpg

ಅಂತೂ ಅಮ್ಮ ಸೆರೆನಾ ವಿಲಿಯಮ್ಸ್‌ ಗ್ರಾನ್‌ಸ್ಲಾಂನಲ್ಲಿ ಆಡಿದರು. ಫ್ರಾನ್ಸ್‌ನ ರೋಲ್ಯಾಂಡ್‌ ಗ್ಯಾರಸ್‌ನಲ್ಲಿ ಅವರ ಹೊಸ ಇನಿಂಗ್ಸ್‌ನ ಆಟ ನೋಡಲು ಬಂದವರು ದಂಗಾದದ್ದಂತೂ ನಿಜ. ಅವರ ಆಟ ನೋಡಿಯಲ್ಲ. ಅವರ ಕಪ್ಪು ಬಣ್ಣದ ಮೈಗಂಟಿದ ಕ್ಯಾಟ್‌ ಸೂಟ್‌ ನೋಡಿ! ನಮಗೆ ಮಹಿಳಾ ಟೆನಿಸ್‌ ಡ್ರೆಸ್‌ ಎಂದರೆ ಸ್ಕರ್ಟ್‌, ಶರ್ಟ್‌ ಹಾಗೂ ಇಣುಕುವ ಒಳ ಚಡ್ಡಿ ಎಂದಷ್ಟೇ ಅಂದುಕೊಂಡಿದ್ದವರಿಗೆ ಸೆರೆನಾ ಭಿನ್ನವಾಗಿ ಕಂಡರು. ಈ ಪ್ರತ್ಯೇಕತೆ ಕಳೆದ ವಾರವಿಡೀ ಒಂದು ವಿವಾದದ ಅಲೆಯನ್ನೂ ಹುಟ್ಟುಹಾಕಿತು.

ಕಪ್ಪು ಬಣ್ಣದ ಅಡಿಯಿಂದ ಮುಡಿಯವರೆಗೆ ದೇಹವನ್ನು ಮುಚ್ಚಿದ, ಆದರೆ ಮುಚ್ಚಿದರೂ ಇರುವಂತೆಯೇ ಆಕಾರ ಪ್ರದರ್ಶಿಸುವ ಈ ಡ್ರೆಸ್‌ ಕ್ಯಾಟ್‌ ಸೂಟ್‌ 2 ಎಂದು ಕರೆಸಿಕೊಂಡಿದೆ. ಅದಕ್ಕೆ ಹೊಟ್ಟೆಯ ಭಾಗದಲ್ಲಿ ಉದ್ದಕ್ಕೆ ಸಾಗಿಹೋದ ಕೆಂಪು ಪಟ್ಟಿಯ ಮಿಂಚು ಬೇರೆ. ಕ್ಯಾಟ್‌ ಸೂಟ್‌ 1ನ್ನು ಕೂಡ ಇದೇ ಫ್ಯಾಶನ್‌ ಡಿಸೈನಿಂಗ್‌ ಭಕ್ತೆ ಸೆರೆನಾ ಈ ಹಿಂದೆ ಯುಎಸ್‌  ಓಪನ್‌ 2002ರ‌ಲ್ಲಿ ಪ್ರದರ್ಶಿಸಿದ್ದರು. ಕಪ್ಪು ಮೈಗಂಟಿದ ಮೇಲುಡುಗೆಯ ಜೊತೆಗೆ ಕಪ್ಪನೆಯ ಫಿಟ್‌ ಚೆಡ್ಡಿಯಾಗಿತ್ತದು. 

500 ದಿನಗಳ ಈಚೆಗೆ ಸ್ಪರ್ಧಾತ್ಮಕ ಟೆನಿಸ್‌ ಆಡದ ಸೆರೆನಾ ತಮ್ಮ ಪುತ್ರಿಗೆ ಜನ್ಮ ನೀಡಲು ರಜೆ ತೆಗೆದುಕೊಂಡಿದ್ದರು. ಹೆರಿಗೆ ಸಮಯದಲ್ಲಿನ ರಕ್ತ ಹೆಪ್ಪುಗಟ್ಟುವ ಒಂದು ತೊಂದರೆಯಿಂದ ಅವರು ಸಾವಿನ ಹತ್ತಿರ ಹೋಗಿಬಂದಿದ್ದೂ ನಿಜ. ಈ ಉಡುಪು ಈ ಸಮಸ್ಯೆಗೆೊಂದು ಮಟ್ಟಿನ ಪರಿಹಾರವಾಗಿಯೂ ಬಳಕೆಯಾಗುತ್ತದೆ ಎಂಬುದು ಸೆರೆನಾ ಪ್ರತಿಪಾದನೆ. ದೇಹವನ್ನು ಹೆಚ್ಚು ತಣ್ಣಗಾಗಿರಿಸುವ ವೈಶಿಷ್ಟ್ಯ ಇದಕ್ಕೆ ಇನ್ನಷ್ಟು ಮೆರಗು ಕೊಟ್ಟಿದೆ.

ಡ್ರೆಸ್‌ ಕೋಡ್‌ ಎಂಬ ಹಲ್ಲಿಲ್ಲದ ಹಾವು?
ಟೆನಿಸ್‌ಗಷ್ಟೇ ಸೀಮಿತವಾಗಿ ಹೇಳುವುದಾದರೆ, ಇಲ್ಲಿನ ಪ್ರತಿ ಗ್ರಾನ್‌ಸ್ಲಾಂನಲ್ಲಿ ಡ್ರೆಸ್‌ ಕೋಡ್‌ ಜಾರಿಯಲ್ಲಿದೆ. ಫ್ರೆಂಚ್‌ ಓಪನ್‌ನ ನಿಯಮಗಳ ಪ್ರಕಾರ, ಜೀನ್ಸ್‌ ಕಟ್‌ಆಫ್‌ಗಳು, ಟೀ-ಶರ್ಟ್‌, ಜಿಮ್‌ ಸೂಟ್‌ಗಳು ನಿಷಿದ್ಧ. ಈ ಪಟ್ಟಿಯಲ್ಲಿ ಯಾವ್ಯಾವುದು ನಿಷಿದ್ಧ ಎಂದು ಇನ್ನಷ್ಟು ಐಟಂಗಳನ್ನು ಹೆಸರಿಸಿಲ್ಲ, ವಿಸ್ತಾರವಾಗಿ ಹೇಳಿಲ್ಲ. ಬಚಾವ್‌ ಸೆರೆನಾ! ನಿಯಮಗಳನ್ನು ವಿಶ್ಲೇಷಿಸಿ ಹೇಳಬೇಕಾದ ಸಂಘಟಕರು ಸುಮ್ಮನಿದ್ದರಿಂದ ಸೆರೆನಾ ಸ್ಪರ್ಧೆಯಲ್ಲಿದ್ದಷ್ಟೂ ಸುತ್ತುಗಳಲ್ಲಿ ಇದೇ ಉಡುಗೆ ಬಳಸಿದರು.

ತಣ್ಣನೆಯ ಈ ಔಟ್‌ಫಿಟ್‌ ಸೆರೆನಾ ಗಾಯಾಳುವಾಗುವುದನ್ನಂತೂ ತಪ್ಪಿಸಲಿಲ್ಲ. ಆದರೆ ವಿವಾದಗಳೇಳುತ್ತಿದ್ದಂತೆ ಖುಷಿಯಾಗಿತ್ತು, ಈ ಡ್ರೆಸ್‌ ವಿನ್ಯಾಸಕ ನೈಕ್‌ ಕಂಪನಿ. 2016ರಲ್ಲಿ ವಿಂಬಲ್ಡನ್‌ನಲ್ಲಿ ಮಕ್ಕಳ ಟಾಪ್‌ ಬಾಟಮ್‌ ಒಂದೇ ಆಗಿರುವ ಬೇಬಿ ವೈಟ್‌ ಸೂಟ್‌ನ್ನು ಇದೇ ನೈಕ್‌ ಆಟಗಾರರ ಮೂಲಕ ಪ್ರದರ್ಶಿಸಿತ್ತು. ಈ ಉಡುಪು ಸರ್ವ್‌ ಮಾಡುವ ಸಂದರ್ಭದಲ್ಲಂತೂ ಆಟಗಾರ್ತಿಯರ “ಸೌಂದರ್ಯ ಪ್ರದರ್ಶಿಸುವುದನ್ನು ಗಮನಿಸಿದ ವಿಂಬಲ್ಡನ್‌, ಇದು ಡ್ರೆಸ್‌ ಕೋಡ್‌ ಉಲ್ಲಂಘನೆ ಎಂದು ಘೋಷಿಸಿತ್ತು. ನೈಕ್‌ ಹ್ಯಾಪಿ, ಅದಕ್ಕೆ ಬೇಕಾದ ಪ್ರಚಾರ ಅದಾಗಲೇ ಸಿಕ್ಕಿತ್ತು!

ನಿಯಮಗಳಲ್ಲಿ ಸ್ಪಷ್ಟತೆ ಇಲ್ಲದಿದ್ದ ಸಂದರ್ಭದಲ್ಲಿ ಟಾಪ್‌ ಆಟಗಾರರನ್ನು ಪ್ರಶ್ನಿಸಲು ಸಂಘಟಕರು ಹೋಗುವುದಿಲ್ಲ. ಸೆರೆನಾ ಈ ಬಾರಿ ಕೆಂಪು ಜೇಡಿ ಮಣ್ಣಿನಂಕಣದಲ್ಲಿ ಧರಿಸಿದ ಉಡುಗೆ ವೃತ್ತಿಪರವಾಗಿಯೂ ಇರಲಿಲ್ಲ, ಅತ್ತ ಸಾಂಪ್ರದಾಯಿಕ ಟೆನಿಸ್‌ ಉಡುಗೆಯ ರೂಪದಲ್ಲಿಯೂ ಇರಲಿಲ್ಲ ಎಂಬುದನ್ನು ಹಲವರು ಹೇಳುತ್ತಾರೆ. ಸೆರೆನಾ ಎದುರು ಮೊದಲ ಸುತ್ತಿನ ಸಿಂಗಲ್ಸ್‌ನಲ್ಲಿ ಪರಾಜಿತರಾದ ಕ್ರಿಸ್ಟಿಯಾನಾ ಪ್ಲಿಸ್ಕೋವಾ ಹೇಳುತ್ತಾರೆ, ಎಲ್ಲರೂ ನಿಯಮಗಳಿಗೆ ಅನ್ವಯವಾಗುವ ಉಡುಗೆ ತೊಡಬೇಕು. ಇಲ್ಲದಿದ್ದರೆ ಸೆರೆನಾ ತರದವರು ಬೆತ್ತಲಾಗಿಯೇ ಪಂದ್ಯ ಆಡಲು ಬರಲಿ! 

ವಿಂಬಲ್ಡನ್‌ ಭಿನ್ನ!: 
ಡ್ರೆಸ್‌ ಕೋಡ್‌ ವಿಚಾರದಲ್ಲಿ ವಿಂಬಲ್ಡನ್‌ ಹೆಚ್ಚು ಕಟ್ಟುನಿಟ್ಟು. ಶೂಗಳಿಗೆ ಕಟ್ಟುವ ದಾರ ಬಿಳಿಯದ್ದಾಗಿರಲಿಲ್ಲ ಎಂಬ ಕಾರಣಕ್ಕೆ ಖುದ್ದು ರೋಜರ ಫೆಡರರ್‌ರ ಪಂದ್ಯಕ್ಕೆ ಬ್ರೇಕ್‌ ಹಾಕಿ ಲೇಸ್‌ ಬದಲಿಸಿದ ಉದಾಹರಣೆಯಿದೆ. ಅ—ಕೃತ ವಿಂಬಲ್ಡನ್‌ ಲೋಗೋ ಹಾಕಿದ ಹೆಡ್‌ಬ್ಯಾಂಡ್‌ನ್ನು ನಿಕ್‌ ಕರ್ಗೋಯಿಸ್‌ರಿಂದ ತೆಗೆಸಿದ ದೃಷ್ಟಾಂತ ಇದೆ. ಗಿನ್ನಿ ಬೋಚಾರ್ಡ್‌ ತೊಟ್ಟ ಬ್ರಾಗೆ ಕಪ್ಪು ಎಂಬ್ರಾಯಡರಿಯ ಲೇಸ್‌ ಇರುವುದರಿಂದ ಅದನ್ನು ಬದಲಿಸಲು ಸೂಚಿಸಿದ್ದನ್ನು ನಾವು ಕಂಡಿದ್ದೇವೆ. ಇನ್ನು ಬಣ್ಣಬಣ್ಣದ ಅಂಡರ್‌ ವೇರ್‌ ಧರಿಸಿದವರನ್ನು ನೇರವಾಗಿ ಆಟಗಾರರ ಲಾಂಜ್‌ಗೆ ಕಳುಹಿಸಿದ ಉದಾಹರಣೆಗಳು ಹಲವು. ಅನ್ನೆ ವೈಟ್‌ ಎಂಬಾಕೆ ಬಿಳಿಯ ಬಣ್ಣದ ಕ್ಯಾಟ್‌ ಸೂಟ್‌ ಹಾಕಿ ವಿಂಬಲ್ಡನ್‌ ಆಡಲು ಬಂದಿದ್ದರೂ ಅಂಕಣಕ್ಕಿಳಿಯಲು ಅವಕಾಶ ಕಲ್ಪಿಸಿರಲಾಗಿರಲಿಲ್ಲ. ಹಾಗಾಗಿಯೇ ಆಟಗಾರರು ವಿಂಬಲ್ಡನ್‌ನಲ್ಲಿ ತಮ್ಮ ವಸ್ತ್ರ ಪ್ರಾಯೋಜಕರ ಜೊತೆ ಸೇರಿ ಸಂಘಟಕರ ಕಣ್ಣಿಗೆ ಮಣ್ಣು ಎರಚುವ ಕೆಲಸ ಮಾಡುವುದಿಲ್ಲ. ನೈಕ್‌ ಕಂಪನಿ ಅಂತಹ ನಿಯಮಗಳ ಅಡಿಯಲ್ಲಿಯೇ ಫ್ಯಾಶನ್‌ ಪ್ರಸ್ತುತಪಡಿಸುವ ಕೆಲಸ ಮಾಡುವುದಕ್ಕಂತೂ ಪ್ರಯತ್ನಿಸುತ್ತಿದೆ.

ಬಹುಷ: ಯುಎಸ್‌ ಓಪನ್‌  ಫ್ಯಾಶನ್‌ ಡಿಸೈನರ್‌ಗಳು ಆಟಗಾರರ ಕೋರ್ಟ್‌ಗಳನ್ನೇ ಫ್ಯಾಶನ್‌ ಷೋ ಪೋಡಿಯಂ ಮಾಡಿಕೊಂಡಿರುವ ಜಾಗ. ನೈಕ್‌ ಜೊತೆ ಒಪ್ಪಂದ ಮಾಡಿಕೊಂಡ ಸೆರೆನಾ ವಿಲಿಯಮ್ಸ್‌ ಇಲ್ಲಿ ಆಡಿದ ಪ್ರತಿ ಸೀಸನ್‌ನಲ್ಲಿ ಹೊಸದೊಂದು ಬಗೆಯ ಔಟ್‌ ಫಿಟ್‌ ಪ್ರದರ್ಶಿಸಿದ್ದಾರೆ. 2004ರಲ್ಲಿ ಮೊದಲ ಬಾರಿಗೆ ನೈಕ್‌ ಜೊತೆ ಕೈಜೋಡಿಸಿ ಡೆನಿಮ್‌ ಸ್ಕರ್ಟ್‌, ಲೆದರ್‌ ಮೋಟಾರ್‌ ಸೈಕಲ್‌ ಜಾಕೆಟ್‌, ಬೆತ್ತಲೆ ಹೊಟ್ಟೆ ಭಾಗದಿಂದ ಮಿಂಚಿದರೆ 2015ರ ವೇಳೆಗೆ ಸೆರೆನಾ ಗ್ರೇಟೆ°ಸ್‌ ಲೈನ್‌ ಎಂಬ ಪ್ರತ್ಯೇಕ ಬ್ರಾಂಡಿಂಗ್‌ ಶುರು ಮಾಡಿದ್ದರು. ಆಸ್ಟ್ರೇಲಿಯನ್‌ ಓಪನ್‌ ಕೂಡ ಹಲವು ಬಾರಿ ಫ್ಯಾಶನ್‌ ಔಟ್‌ಫಿಟ್‌ಗಳ ಅನಾವರಣಕ್ಕೆ ವೇದಿಕೆಯಾಗಿದೆ.

ಆ್ಯಡ್ರಿ ಅಗಾಸ್ಸಿ, ಜೇಮ್ಸ್‌ ಡೇನ್‌, ಅನ್ನಾ ಕುರ್ನಿಕೋವಾ ಮೊದಲಾದ ಹಲವು ಆಟಗಾರರು ಆಟದಷ್ಟೇ ಅವರ ವಿಭಿನ್ನ ವಸ್ತ್ರ ವಿನ್ಯಾಸದಿಂದಲೂ ಪ್ರಚಾರ ಪಡೆದಿದ್ದರು. 2002ರಲ್ಲಿ ಅನ್ನಾ ಕುರ್ನಿಕೋವಾರ ಶರ್ಟ್‌, ಸ್ಕರ್ಟ್‌ಗಳ ನಡುವೆ ದೇಹ ಸೌಂದರ್ಯ ಇಣುಕುವ ಮಿನಿ ಮಿನಿ ಸ್ಕರ್ಟ್‌ ಅಭಿಮಾನಿಗಳನ್ನು ಆಟದಿಂದ ಕಣ್ಣು ಕೀಲಿಸಿದಂತೆ ನೋಡಿಕೊಂಡಿತ್ತು. ಟಾಮಿ ಹ್ಯಾಸ್‌ ತೋಳಿಲ್ಲದ ಶರ್ಟ್‌ ತೊಟ್ಟಾಗ ವಿವಾದ ಎದ್ದು ತೋಳಿರುವ ಶರ್ಟ್‌ ಧರಿಸುವಂತಾದರೆ ರಫೆಲ್‌ ನಡಾಲ್‌ರಂತಹ ತಾರೆ ಮಿನುಗುವಾಗ ಈ ಉಡುಪು ಓಕೆ ಎಂದಂತಹ ಉದಾಹರಣೆಗಳೂ ಇವೆ!

ಕುತೂಹಲ ಕ್ಷಣಿಕ, ಸಾಧನೆ ಶಾಶ್ವತ!
ಟೆನಿಸ್‌ನ ಜನಪ್ರಿಯತೆಯನ್ನು ಉಡುಪುಗಳ ಮೂಲಕ ಅಳೆದ ಷಟಲ್‌ ಬ್ಯಾಡ್ಮಿಂಟನ್‌ನಲ್ಲಿ ಕೂಡ ಡ್ರೆಸ್‌ ಕೋಡ್‌ನ್ನು ಗ್ಲಾಮರ್‌ಗಾಗಿ ಜಾರಿಗೆ ತರಲು ಪ್ರಯತ್ನಿಸಿದ್ದನ್ನೂ ನಾವು ನೋಡಿದ್ದೇವೆ. ಕೊನೆಗೂ ಹೆಚ್ಚು ಪ್ರತಿಭೆಯುಳ್ಳ ಆಟಗಾರರೇ ವಿನೂತನ ಉಡುಗೆ ಪ್ರದರ್ಶಿಸಿದರೆ ಅದು ಆಕರ್ಷಣೆಯನ್ನು ಪಡೆಯುತ್ತದೆಯೇ ವಿನಃ ಮೊದಲ ಸುತ್ತುಗಳಿಂದ ಮಾಯವಾಗುವ ಆಟಗಾರರ ಸಾಹಸಗಳು ವ್ಯರ್ಥವಾಗುತ್ತವೆ. ಈ ಹಿನ್ನೆಲೆಯಲ್ಲಿ ನಾವು ಹೊಸ ಗಾದೆ ಹುಟ್ಟಿಸಬಹುದು, ಕುತೂಹಲ ಕ್ಷಣಿಕ, ಸಾಧನೆ ಶಾಶ್ವತ!

ಮಾ.ವೆಂ.ಸ.ಪ್ರಸಾದ್‌

ಟಾಪ್ ನ್ಯೂಸ್

75752

Max Movie: ಅಂತೂ ಬಂದೇ ಬಿಡ್ತು ʼಮ್ಯಾಕ್ಸ್‌ʼ ರಿಲೀಸ್‌ ಡೇಟ್..‌ ಫ್ಯಾನ್ಸ್‌ ಖುಷ್

Revanna

Congress ಸರಕಾರ 2018 ರಲ್ಲಿ ಜಿ.ಟಿ.ದೇವೇಗೌಡರನ್ನು ಬಂಧಿಸಲು ಮುಂದಾಗಿತ್ತು: ರೇವಣ್ಣ ಬಾಂಬ್

Mangaluru: ಸ್ಪ್ಯಾಮ್ ಕರೆ ಪತ್ತೆಗೆ ಎಐ ತಂತ್ರಜ್ಞಾನ ಬಳಕೆ; ಏರ್‌ಟೆಲ್ ನಿಂದ ಹೊಸ ವ್ಯವಸ್ಥೆ

Mangaluru: Spam Call ಪತ್ತೆಗೆ ಎಐ ತಂತ್ರಜ್ಞಾನ ಬಳಕೆ… ಏರ್‌ಟೆಲ್ ನಿಂದ ಹೊಸ ವ್ಯವಸ್ಥೆ

BBK11: ಮಂಜುಗೆ ʼಥೂ..ʼ ಎಂದು ಉಗಿದ ಮೋಕ್ಷಿತಾ; ದೊಡ್ಮನೆಯಲ್ಲಿ ಜೋರಾಯಿತು ಯೋಗ್ಯತೆ ಮಾತು

BBK11: ಮಂಜುಗೆ ʼಥೂ..ʼ ಎಂದು ಉಗಿದ ಮೋಕ್ಷಿತಾ; ದೊಡ್ಮನೆಯಲ್ಲಿ ಜೋರಾಯಿತು ಯೋಗ್ಯತೆ ಮಾತು

Tragedy: ಆಗ್ರಾ-ಲಕ್ನೋ ಎಕ್ಸ್‌ಪ್ರೆಸ್‌ವೇಯಲ್ಲಿ ಭೀಕರ ಅಪಘಾತ: 5ವೈದ್ಯರು ಸ್ಥಳದಲ್ಲೇ ಮೃತ್ಯು

Tragedy: ಆಗ್ರಾ-ಲಕ್ನೋ ಎಕ್ಸ್‌ಪ್ರೆಸ್‌ವೇಯಲ್ಲಿ ಭೀಕರ ಅಪಘಾತ: 5ವೈದ್ಯರು ಸ್ಥಳದಲ್ಲೇ ಮೃತ್ಯು

Road Mishap: ಭೀಕರ ಕಾರು ಅಪಘಾತ; ಖ್ಯಾತ ನಿರ್ದೇಶಕನ ಪುತ್ರ ಸೇರಿ ಇಬ್ಬರು ಮೃತ್ಯು

Road Mishap: ಭೀಕರ ಕಾರು ಅಪಘಾತ; ಖ್ಯಾತ ನಿರ್ದೇಶಕನ ಪುತ್ರ ಸೇರಿ ಇಬ್ಬರು ಮೃತ್ಯು

1-ddssas

Jammu; ವೈಷ್ಣೋದೇವಿ ರೋಪ್‌ವೇ ವಿವಾದ: ಪ್ರತಿಭಟನೆಗಿಳಿದವರು ವಶಕ್ಕೆ, ಎಫ್ಐಆರ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

bahumuki

ಅರಮನೆಯಂಥ ಬಂಗಲೆ ಇದೆ, ಏನುಪಯೋಗ?

ಮೊದಲ ಗುರಿಯೇ ಕೊನೆಯದೂ ಆಗಿದೆ!

ಮೊದಲ ಗುರಿಯೇ ಕೊನೆಯದೂ ಆಗಿದೆ!

bahumuki

ಹುಡುಗಿಯ ಚುಂಬನ ಮತ್ತು ಆಗಸದ ತಾರೆ

ಟೊಮೇಟೊ ಹಣ್ಣಿನ ಗೊಜ್ಜು

ಟೊಮೇಟೊ ಹಣ್ಣಿನ ಗೊಜ್ಜು

ದೀಪವನ್ನೇ ಏಕೆ ಬಳಸಬೇಕು?

ದೀಪವನ್ನೇ ಏಕೆ ಬಳಸಬೇಕು?

MUST WATCH

udayavani youtube

ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ

udayavani youtube

ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

ಹೊಸ ಸೇರ್ಪಡೆ

12

Kollegala: ಮರಳೆಕಾಯಿ ತಿಂದು ವಾಂತಿ-ಭೇದಿ; 13 ಜನರು ಆಸ್ಪತ್ರೆಗೆ ದಾಖಲು

75752

Max Movie: ಅಂತೂ ಬಂದೇ ಬಿಡ್ತು ʼಮ್ಯಾಕ್ಸ್‌ʼ ರಿಲೀಸ್‌ ಡೇಟ್..‌ ಫ್ಯಾನ್ಸ್‌ ಖುಷ್

Revanna

Congress ಸರಕಾರ 2018 ರಲ್ಲಿ ಜಿ.ಟಿ.ದೇವೇಗೌಡರನ್ನು ಬಂಧಿಸಲು ಮುಂದಾಗಿತ್ತು: ರೇವಣ್ಣ ಬಾಂಬ್

11-uv-fusion

Simple Life: ಬದುಕು ನಿರಾಡಂಬರವಾಗಿರಲಿ

Mangaluru: ಸ್ಪ್ಯಾಮ್ ಕರೆ ಪತ್ತೆಗೆ ಎಐ ತಂತ್ರಜ್ಞಾನ ಬಳಕೆ; ಏರ್‌ಟೆಲ್ ನಿಂದ ಹೊಸ ವ್ಯವಸ್ಥೆ

Mangaluru: Spam Call ಪತ್ತೆಗೆ ಎಐ ತಂತ್ರಜ್ಞಾನ ಬಳಕೆ… ಏರ್‌ಟೆಲ್ ನಿಂದ ಹೊಸ ವ್ಯವಸ್ಥೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.