ದಾಸನಪುರದಲ್ಲಿ ಬಿಡಿಎ ವಿಲ್ಲಾ ನಿರ್ಮಾಣ
Team Udayavani, Jun 9, 2018, 11:59 AM IST
ಬೆಂಗಳೂರು: ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ) ತುಮಕೂರು ರಸ್ತೆಯ ದಾಸನಪುರದಲ್ಲಿ ಎರಡು, ಮೂರು ಹಾಗೂ ನಾಲ್ಕು ಬೆಡ್ರೂಮ್ಗಳನ್ನು ಒಳಗೊಂಡಿರುವ ವಿಲ್ಲಾಗಳನ್ನು ನಿರ್ಮಿಸಲು ಮುಂದಾಗಿದೆ.
ಈ ಸಂಬಂಧ ಸದ್ಯದಲ್ಲೇ ಮಂಡಳಿಯ ಸಭೆ ನಡೆಯಲಿದು, ಇಲ್ಲಿ ಅಂತಿಮ ತೀರ್ಮಾನ ಕೈಗೊಳ್ಳುವುದಾಗಿ ಪ್ರಾಧಿಕಾರದ ಹಿರಿಯ ಅಧಿಕಾರಿಗಳು “ಉದಯವಾಣಿ’ಗೆ ತಿಳಿಸಿದ್ದಾರೆ. ಈ ಹಿಂದೆ ದಾಸನಪುರದಲ್ಲಿ ಎರಡು, ಮೂರು ಹಾಗೂ ನಾಲ್ಕು ಬಿಎಚ್ಕೆ ವಿಲ್ಲಾಗಳನ್ನು ನಿರ್ಮಿಸಲು ಟೆಂಡರ್ ಕರೆಯಲು ತೀರ್ಮಾನಿಸಲಾಗಿತ್ತು.
ಆದರೆ, ಚುನಾವಣಾ ನೀತಿ ಸಂಹಿತೆ ಜಾರಿಯಾದ ಹಿನ್ನೆಲೆಯಲ್ಲಿ ಪ್ರಕ್ರಿಯೆ ಸ್ಥಗಿತಗೊಂಡಿತ್ತು. ಹೀಗಾಗಿ, ಮತ್ತೆ ಹೊಸ ಟೆಂಡರ್ ಕರೆಯಲು ಪ್ರಾಧಿಕಾರ ನಿರ್ಧರಿಸಿದೆ. ಒಟ್ಟು 195 ಕೋಟಿ ವೆಚ್ಚದ ಯೋಜನೆ ಇದಾಗಿದ್ದು, ಎರಡು ವರ್ಷಗಳಲ್ಲಿ ಯೋಜನೆ ಪೂರ್ಣಗೊಳಿಸುವ ನಿರೀಕ್ಷೆಯಿದೆ.
ಆಲೂರಿನಲ್ಲಿ ನಿರ್ಮಾಣಗೊಂಡ ವಿಲ್ಲಾಗಳಿಗಿಂತ ಈ ವಿಲ್ಲಾಗಳು ಭಿನ್ನವಾಗಿರಲಿವೆ. ಪ್ರತಿ ಮನೆಗೂ ಪ್ರತೇಕ ಕಾಂಪೌಂಡ್ ಇರುತ್ತದೆ. ಅಲ್ಲದೆ, ಡೂಪ್ಲೆಕ್ಸ್ ಮನೆಗಳೂ ಇರಲಿವೆ. ನಾಲ್ಕು ನೂರು ವಿಲ್ಲಾಗಳ ಜತೆಗೆ, ಒಂದು ಬಿಎಚ್ಕೆ ಅಪಾರ್ಟ್ಮೆಂಟ್ ಕೂಡ ನಿರ್ಮಾಣವಾಗಲಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Sullia: ಅಪಘಾತ; ಪರಾರಿಯಾಗಿದ್ದ ಲಾರಿ ವಶಕ್ಕೆ
K.S.Eshwarappa;’ಕ್ರಾಂತಿವೀರ’ ಹೊಸ ಬ್ರಿಗೇಡ್ ಘೋಷಣೆ: ಫೆ.4ರಂದು ಉದ್ಘಾಟನೆ
Davanagere: ಮೊಟ್ಟೆ ವಿತರಣೆಯಲ್ಲಿ ಲೋಪ; ಮುಖ್ಯ ಶಿಕ್ಷಕಿ, ದೈಹಿಕ ಶಿಕ್ಷಣ ಶಿಕ್ಷಕ ಅಮಾನತು
Kasargod: ನಾಟಕ ತಂಡ ಸಂಚರಿಸುತ್ತಿದ್ದ ಬಸ್ ಮಗುಚಿ ಇಬ್ಬರು ನಟಿಯರ ಸಾವು
Kasaragod: ಎಡನೀರು ಶ್ರೀ ವಿಷ್ಣುಮಂಗಲ ದೇವಸ್ಥಾನದಿಂದ ಕಳವು; ಆರೋಪಿಯ ಬಂಧನ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.