ಹಳೆ ವಸ್ತುಗಳಿಗೆ ಮರುಜೀವ
Team Udayavani, Jun 9, 2018, 3:36 PM IST
ಮನೆಯನ್ನು ಸಿಂಗಾರಗೊಳಿಸುವುದು ಒಂದು ಅಪರೂಪದ ಸೃಜನಾಶೀಲ ಕಲೆ. ವೇಸ್ಟ್ ಎಂದು ಬಿಸಾಡುವ ತ್ಯಾಜ್ಯ, ಮನೆಯ ಅಲಂಕಾರದಲ್ಲಿ ಕಸ, ಪ್ಲಾಸ್ಟಿಕ್, ಗಾಜಿನ ಬಾಟಲಿಗಳು ಇಂತಹ ಯಾವುದೇ ವಸ್ತುಗಳಿಗೆ ಜೀವ ತುಂಬುವುದು ಅಪರೂಪದ ಕಲೆಯಾಗಿದೆ. ಈ ಕಲೆಯ ಬಗ್ಗೆ ತಿಳಿದುಕೊಂಡರೆ ಸಾಕು, ಮನೆಯ ಅಂದವನ್ನು ಕೇವಲ ಒಂದು ರೂ. ವೆಚ್ಚ ಮಾಡದೇ ತಮ್ಮ ಸೃಜನಾಶೀಲತೆಯಿಂದ ಸಿಂಗರಿಸಿ ಮನೆಯನ್ನು ಶ್ರೀಮಂತಗೊಳಿಸಬಹುದು.
ಮನೆಯ ಅಚ್ಚುಕಟ್ಟು ನಿರ್ವಹಣೆಗೆ ಬಹುಮುಖ್ಯ ತಾಳ್ಮೆ. ಮನೆಯ ಶ್ರೀಮಂತಿಕೆಯನ್ನು ಹೆಚ್ಚಿಸುವುದಕ್ಕಿಂತ ಮುಖ್ಯವಾಗಿ ಸಾಂಪ್ರಾದಾಯಿಕ ಲುಕ್ ನೀಡುವುದಕ್ಕೆ ತುಂಬಾ ಗಮನ ಹರಿಸುತ್ತೇವೆ. ಅದಕ್ಕಾಗಿ ಲಕ್ಷಾಂತರ ರೂ. ಖರ್ಚು ಮಾಡಿ, ಅನೇಕ ಶ್ರೀಮಂತಿಕೆ ವಸ್ತುಗಳು ತಂದಿಟ್ಟು ಮನೆಯ ಕಳೆಯನ್ನು ಹೆಚ್ಚಿಸುತ್ತೇವೆ. ಆದರೆ ಇದೊಂದು ದುಂದು ವೆಚ್ಚವಷ್ಟೇ, ನಮ್ಮಲ್ಲಿ ಸೃಜನಾಶೀಲ ಕಲೆಯೊಂದಿದ್ದರೆ ಸಾಕು, ಮನೆಯಲ್ಲಿ ಬಿದ್ದಿರುವ ಕಸ, ಕಡ್ಡಿ, ಗಾಜಿನ ಬಾಟಲಿಗಳಿಂದ ಕಲಾಕೃತಿಗಳನ್ನು ತಯಾರಿಸಬಹುದು. ಅಂತಹ ಹಲವಾರು ಮುಖ್ಯ ಸಂಗತಿಗಳು ಇಲ್ಲಿವೆ.
ಗಾಜಿನ ಬಾಟಲಿಗಳಿಂದ ಹೂ ಕುಂಡ
ಮನೆಯಲ್ಲಿ ಉಪಯೋಗಿಸಿದ ಗಾಜಿನ ಬಾಟಲಿಗಳನ್ನು ಎಸೆಯದೇ ಅದರಿಂದ ನಮ್ಮ ಮನೆ ಶೃಂಗಾರಕ್ಕೆ ಬಳಕೆ ಮಾಡಬಹುದು. ಗಾಜಿನ ಬಾಟಲಿಗಳಿಂದ ಅವುಗಳ ಮೇಲೆ ಬಣ್ಣ ಬಣ್ಣದ ದಾರಗಳು, ಇಲ್ಲವೇ ಬಣ್ಣ ಬಣ್ಣದ ದಾರಗಳನ್ನು ಸುತ್ತಿ ಅದನ್ನು ನಾವು ಹೂ ಕುಂಡಲಿಗಳನ್ನಾಗಿ ಮಾಡಿ, ಮನೆಯ ಅವರಣದಲ್ಲಿ ಇಡಬಹುದು. ಇನ್ನು ಪ್ಲಾಸ್ಟಿಕ್ ಬಾಟಲಿಗಳಿಂದ ಅನೇಕ ರೀತಿಯ ಪ್ರಯೋಜನಗಳಿದ್ದು, ಅವುಗಳನ್ನು ವಿವಿಧ ಕಲಾಕೃತಿಯಾಗಿ ಕತ್ತರಿಸಿ, ಅದನ್ನೇ ನಾವು ಹೂ ಕುಂಡಲಿಯನ್ನಾಗಿ ಮಾಡಿ, ಅದಕ್ಕೆ ವೈವಿಧ್ಯಮಯವಾದ ಬಣ್ಣವನ್ನು ಲೇಪಿಸಿ ಮನೆಯ ಷೋ ಕೇಸ್ಗಳಲ್ಲಿ ಇಟ್ಟರೇ ಮನೆಯ ಶೃಂಗಾರ ಹೆಚ್ಚಬಹುದು.
ಗಾಜಿನ ಬಾಟಲಿಯ ದೀಪ
ಮನೆಯ ಗಾಜಿನ ಬಾಟಲಿಗಳಿಂದ ದೀಪದ ಹಣತೆಗಳನ್ನಾಗಿ ಮಾಡಿ, ಮನೆಯ ಶೃಂಗಾರ ಹೆಚ್ಚಿಸುವುದು ಕೂಡ ಸೃಜನಾತ್ಮಕ ಕಲೆ. ಗಾಜಿನ ಬಾಟಲಿಗಳ ಮೇಲೆ ಫೆವಿಕ್ವಿಕ್ನಿಂದ ಬಣ್ಣದ ಮಿಂಚು ಅಥವಾ ಬಣ್ಣದ ಕಾಗದವನ್ನು ಅಂಟಿಸಿ, ಅನಂತರ ಮೇಣದ ಬತ್ತಿ (ಕ್ಯಾಂಡಲ್ ಗಳನ್ನು) ಇಟ್ಟು, ದೀಪ ಹಚ್ಚಬಹುದು. ಗಾಜಿನ ಬಾಟಲಿಗಳನ್ನು ಹೀಗೂ ಬಳಸಬಹುದು. ಗಾಜಿನ ಬಾಟಲಿಯಲ್ಲಿ ಗೋಲಿಗಳನ್ನು ಹಾಕಿ, ಅದಕ್ಕೆ ಮೇಲೆ ಪ್ಲಾಸ್ಟಿಕ್ ಹೂ ಇಟ್ಟು ಮನೆಯ ಟಿವಿ, ಷೋ ಕೇಸ್ಗಳಲ್ಲಿ ಇಡಬಹುದು. ಹಾಗೆಯೇ, ಗಾಜಿನ ಬಾಟಲಿಗಳಲ್ಲಿ ನೀರು ಹಾಕಿ, ಮೀನು ಬಿಟ್ಟರೆ, ಮಿನಿ ಫಿಶ್ ಟ್ಯಾಂಕ್ ಆಗಿ ಮಾಡಬಹುದು.
ಡಬ್ಬಗಳಿಂದ ಟೇಬಲ್ಗಳು
ಮನೆಯಲ್ಲಿರುವ ಅಡುಗೆ ಆಯಿಲ್ ಡಬ್ಬಗಳನ್ನು ಎಸೆಯದೇ, ಅದನ್ನು ಕೂಡ ಮನೆಯ ಸೌಂದರ್ಯಕ್ಕೆ ಬಳಕೆ ಮಾಡಬಹುದು. ಡಬ್ಬಗಳಿಗೆ ಚಿತ್ರಾಕೃತಿ ಇರುವ ಬಣ್ಣದ ಬಟ್ಟೆಯನ್ನು ಸುತ್ತಿ ಅದನ್ನು ಸುಂದರ ಟೇಬಲ್ ಥರ ಪರಿವರ್ತಿಸಿ ಪುಸ್ತಕ, ಅಗತ್ಯ ವಸ್ತುಗಳನ್ನು ಇಡಲು ಬಳಸಬಹುದು. ಇಂತಹ ಸಾಮಗ್ರಿಗಳಿಂದ ಮನೆಯೂ ಸುಂದರವಾಗಿ ಕಾಣುತ್ತದೆ.
ಶಿವ ಸ್ಥಾವರಮಠ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
ICC U19 ವನಿತಾ ಟಿ20 ವಿಶ್ವಕಪ್: ಭಾರತಕ್ಕೆ ನಿಕಿ ಪ್ರಸಾದ್ ನಾಯಕಿ
Maharashtra: ಬಾಸ್ ಜತೆ ಸೆ*ಕ್ಸ್ಗೆ ಒಪ್ಪದ ಪತ್ನಿಗೆ ಐಟಿ ಉದ್ಯೋಗಿ ತಲಾಖ್
PM Modi: ಇಂದು ಕೆನ್-ಬೆತ್ವಾ ನದಿ ಜೋಡಣೆಗೆ ಮೋದಿ ಶಂಕುಸ್ಥಾಪನೆ
A.B.Vajpayee Birth Century: ಅಜಾತಶತ್ರು, ಬಹುಮುಖಿ ವ್ಯಕ್ತಿತ್ವದ ಅಟಲ್ ಬಿಹಾರಿ ವಾಜಪೇಯಿ
Election Commission: ದಾಖಲಾದ ಮತದಲ್ಲಿಏರಿಕೆ ಆಗುವುದು ಸಾಮಾನ್ಯ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.