ಹಳಿಯಾಳದಲ್ಲಿ ಓಡಾಡಿದ ಒಂಟಿ ಸಲಗ
Team Udayavani, Jun 9, 2018, 4:31 PM IST
ಹಳಿಯಾಳ: ಕಾಡಾನೆಯೊಂದು ಶುಕ್ರವಾರ ಬೆಳಗಿನಜಾವ ಹಳಿಯಾಳ ಪಟ್ಟಣಕ್ಕೆ ಲಗ್ಗೆ ಇಟ್ಟು ಎಲ್ಲರಿಗೂ ಅಚ್ಚರಿ ಮೂಡಿಸಿತು. ಹಾಗೆಯೇ ಭಯದ ವಾತಾವರಣ ಕೂಡ ಸೃಷ್ಟಿಯಾಗಿತ್ತು.
ಧಾರವಾಡ ರಸ್ತೆಯಿಂದ ಹಳಿಯಾಳ ಪಟ್ಟಣ ಪ್ರವೇಶ ಮಾಡಿರುವ ಒಂಟಿ ಸಲಗ ಸರ್ಕಾರಿ ಆಸ್ಪತ್ರೆ, ಅರಣ್ಯ ಇಲಾಖೆ ಎದುರಿನಿಂದಲೇ ರಾಜಾರೋಷವಾಗಿ ಸುತ್ತಾಡುತ್ತಾ ನಾನು ನಡೆದದ್ದೆ ದಾರಿ ಎಂದು ಸಾಗುತ್ತಾ ಶಿವಾಜಿ ವೃತ್ತ. ಪೋಲಿಸ್ ಠಾಣೆ ಎದುರುಗಡೆಯಿಂದ ದುರ್ಗಾದೇವಿ ದೇವಸ್ಥಾನ ಗೇಟ್ ಪ್ರವೇಶಿಸಿ ಅಲ್ಲಿಂದ. ಹೊರ ಬಂದು ದುರ್ಗಾನಗರದಲ್ಲಿಯೇ ಹೆಚ್ಚು ಸಮಯ ಸುತ್ತಾಡಿ ಅಲ್ಲಿಂದ ಮುಂದೆ ಆಲೊಳ್ಳಿ ರಸ್ತೆ ಮೂಲಕ. ಸಾಗಿ ದೇಶಪಾಂಡೆ ಅಶ್ರಯ ನಗರದ ಪಕ್ಕದಿಂದ ಹಳಿಯಾಳದ ಹುಲ್ಲಟ್ಟಿ ಭಾಗದಲ್ಲಿ ಇಐಡಿ ಪ್ಯಾರಿ ಸಕ್ಕರೆ ಕಾರ್ಖಾನೆ ಬಳಿಯ ಪರಿಸರದಲ್ಲಿ ಹೊಗಿ ನಿಂತು ಮುಂದೆ ಸಾಗಿತು. ಆದರೆ ಜನರ ಅದೃಷ್ಟವೊ ಎಂಬಂತೆ ಆನೆಗೆ ಮದವೇರದೆ ಇರುವುದು. ಯಾವುದೇ ಅವಘಡ ಸಂಭವಿಸಿಲ್ಲ ದಾರಿ ತಪ್ಪಿ ಬಂದ. ಆನೆ ಸಕ್ಕರೆ ಕಾರ್ಖಾನೆ ಬಳಿಯಿಂದ ಹಾಗೆ ಕೆಸರೊಳ್ಳಿ ಭಾಗದಲ್ಲೂ ಹೆದ್ದಾರಿ ಪಕ್ಕದಲ್ಲಿ ಸಮಯ ಕಳೆದಿದೆ.
ಬೆಳಗ್ಗೆ 6 ಗಂಟೆಗೆ ಹಳಿಯಾಳ ಪ್ರವೇಶ ಮಾಡಿದೆ ಎಂದು ಹೇಳಿರುವ ಈ ಆನೆ ಸುಮಾರು 30 ನಿಮಿಷಗಳ ಕಾಲ ದುರ್ಗಾನಗರದಲ್ಲಿಯೇ ಕಳೆದಿದೆ.
ಬಳಿಕ ಅರಣ್ಯ ಇಲಾಖೆಯವರು ಆನೆ ಓಡಿಸಲು ಗಾಳಿಯಲ್ಲಿ ಗುಂಡು ಹಾರಿಸಿ ಶಬ್ದ ಮಾಡಿ ಹೆದರಿಸಿ ಆನೆ ಮತ್ತೆ ಪಟ್ಟಣ ಪ್ರವೇಶ ಮಾಡದಂತೆ ಹೊರಗಿನ ದಾರಿ ಹಿಡಿಯುವಂತೆ ಮಾಡಿದ್ದರಿಂದ ಅದು ಅಲೊಳ್ಳಿ ರಸ್ತೆ ಮಾರ್ಗವಾಗಿ ಕೃಷಿ ಜಮೀನಿನ ಸಾಗಿ ಕೆಸರೊಳ್ಳಿ ಬಳಿ ಬಂದು ಇಲ್ಲಿ ಸುಮಾರು 1 ಗಂಟೆ ಕಾಲ ಸುತ್ತಾಡಿದ ಆನೆಯನ್ನು ಅರಣ್ಯ ಇಲಾಖೆಯವರು ದಾಂಡೇಲಿಯ ಆಲೂರು ಭಾಗದ ಅರಣ್ಯ ಪ್ರವೇಶಿಸುವಂತೆ ಸಿಬ್ಬಂದಿಗಳಿಂದ ಯಶಸ್ವಿ ಸುರಕ್ಷಿತ ಕಾರ್ಯಾಚರಣೆ ನಡೆಸಲಾಯಿತು. ಯಾರಿಗೂ ತೊಂದರೆ ನೀಡದೆ ಪಟ್ಟಣ ಹಾಗೂ ಕೆಲವು ಗ್ರಾಮಾಂತರ ಭಾಗ ಸುತ್ತಾಡಿ ಕೊನೆಗೂ ಕಾಡು ಸೇರಿದೆ.
ಅರಣ್ಯ ಇಲಾಖೆ ಅಧಿಕಾರಿಗಳಾದ ಎಸಿಎಫ್ ಸಂತೋಷ ಕೆಂಚಪ್ಪನವರ, ಆರ್‌ಎಫ್‌ಒ ಪ್ರಸನ್ನ ಸುಬೇದಾರ, ಪೊಲೀಸ್ ಇಲಾಖೆಯ ಸಿಪಿಐ ಸುಂದ್ರೇಶ ಹೊಳೆನ್ನವರ, ಪಿಎಸ್‌ಐ ಆನಂದಮೂರ್ತಿ ಇತರ ಇಲಾಖೆ ಅಧಿಕಾರಿಗಳು, ಸಿಬ್ಬಂದಿ, ನೂರಾರು ಜನತೆ ಜಮಾಯಿಸಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
NABARD ನಿರ್ಧಾರದಿಂದ ಕೃಷಿಗೆ ಹಿನ್ನಡೆ; ಸಾಲದ ಮೊತ್ತ ಕಡಿತ ಮಾಡದಿರಲು ಸಚಿವ ಪಾಟೀಲ ಆಗ್ರಹ
ಸಿಎಂ ಆಗಿದ್ದವರು ಈ ರೀತಿ ಹೇಳಿಕೆ ನೀಡುವ ಬದಲು, ಸ್ಪಷ್ಟ ಹೇಳಿಕೆ ನೀಡಲಿ: ಸಚಿವ ಶಿವಾನಂದ
dharwad: ಪೊಲೀಸ್ ಪೇದೆ ಮೇಲೆ ಕೈ ಮುಖಂಡ ತಮಟಗಾರ ಸಹೋದರ ಬ್ಲೇಡ್ ನಿಂದ ಹಲ್ಲೆ
Covid Scam: ಸಚಿವ ಸಂಪುಟದಲ್ಲಿ ಚರ್ಚಿಸಿ ಮುಂದಿನ ಕ್ರಮ: ಸಿಎಂ ಸಿದ್ದರಾಮಯ್ಯ
By Election: ಹಣ ಕೊಟ್ಟರೂ ಸಿಎಂ ಕಾರ್ಯಕ್ರಮಕ್ಕೆ ಜನ ಬರುತ್ತಿಲ್ಲ: ಬಿಎಸ್ ವೈ
MUST WATCH
ಹೊಸ ಸೇರ್ಪಡೆ
Kalaburagi: ಘನತ್ಯಾಜ್ಯ ವಿಲೇವಾರಿ ಮಾಡದ ಪಾಲಿಕೆ ವಿರುದ್ದ ಲೋಕಾಯುಕ್ತ ಸ್ವಯಂ ಪ್ರಕರಣ ದಾಖಲು
Bengaluru: ಭುವನೇಶ್ವರಿ ಪ್ರತಿಮೆಗೆ ಹಾನಿ: ಆಕ್ರೋಶ
Bengaluru: ಕದ್ದ ಮೊಬೈಲ್ ಕೊರಿಯರ್ ಮೂಲಕ ಕೇರಳಕ್ಕೆ ರವಾನೆ!
Siraguppa: ಮುಂಜಾನೆ ತಾಲೂಕಿನಲ್ಲಿ ದಟ್ಟ ಮಂಜು… ವಾಹನ ಸವಾರರ ಪರದಾಟ
IPL Mega Auction: ಅದೃಷ್ಟ ಪರೀಕ್ಷೆಯಲ್ಲಿ ಕರ್ನಾಟಕದ 24 ಮಂದಿ ಆಟಗಾರರು; ಇಲ್ಲಿದೆ ಪಟ್ಟಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.