ಮುಂಬಯಿಯಲ್ಲಿ ಜಡಿಮಳೆ, ರಸ್ತೆಯಲ್ಲಿ ನೆರೆ, ರೈಲು ಸೇವೆ ಬಾಧಿತ
Team Udayavani, Jun 9, 2018, 4:34 PM IST
ಮುಂಬಯಿ : ನಿನ್ನೆಯಿಂದ ಮುಂಬಯಿ ಮಹಾನಗರಿಯಲ್ಲಿ ಆರಂಭಗೊಂಡಿರುವ ಮಳೆ-ಗಾಳಿಯ ಆರ್ಭಟ ಇಂದು ಇನ್ನೂ ಪ್ರಬಲವಾಗಿ ಮುಂದುವರಿದಿರುವ ಪರಿಣಾಮವಾಗಿ ರಸ್ತೆಗಳು ನೆರೆ ನೀರಲ್ಲಿ ಮುಳುಗಿವೆ. ವಾಹನಗಳು ದೋಣಿಗಳಂತೆ ನೆರೆ ನೀರಲ್ಲಿ ನಿಧಾನಗತಿಯಲ್ಲಿ ಸಾಗುತ್ತಿವೆ. ಜನರು ಕಷ್ಟಪಟ್ಟು ದಾರಿ ಅಂದಾಜಿಸುತ್ತಾ ಭಯಪೀಡಿತರಾಗಿ ತೆವಳು ಹೆಜ್ಜೆ ಹಾಕುತ್ತಿದ್ದಾರೆ.
ಮಹಾನಗರಿಯ ಅಂಧೇರಿ, ದಾದರ್, ಪರೇಲ್, ಕಫ್ ಪರೇಡ್ ಮತ್ತು ಬೊರಿವಲಿ ಪ್ರದೇಶಗಳು ನೀರಲ್ಲಿ ಮುಳುಗಿರುವಂತೆ ತೋರಿಬರುತ್ತಿವೆ. ಕಾರುಗಳು, ಮೋಟಾರು ವಾಹನಿಗಳು ರಸ್ತೆಯಲ್ಲಿನ ನೆರೆ ನೀರಿನಲ್ಲಿ ಸಿಲುಕಿಕೊಂಡಿವೆ. ನಾಳೆ ಭಾನುವಾರ ಕೂಡ ಇದೇ ರೀತಿಯ ಪರಿಸ್ಥಿತಿ ಇರಲಿದ್ದು ಜನರು ತಮ್ಮ ಮನೆಯಿಂದ ಹೊರ ಬರಬಾರದೆಂದು ಸ್ಥಳೀಯಾಡಳಿತೆ ಮುನ್ನೆಚ್ಚರಿಕೆ ನೀಡಿದೆ.
ಮುಂಬಯಿ ಮಹಾನಗರಿಯ ಜೀವನಾಡಿಯಾಗಿರುವ ಲೋಕಲ್ ಟ್ರೈನ್‌ಗಳು 10ರಿಂದ 30 ನಿಮಿಷಗಳಷ್ಟು ವಿಳಂಬಿತವಾಗಿ ಸಂಚರಿಸುತ್ತಿವೆ.
ಮುಂಬಯಿ ಮಹಾ ನಗರಿ ಪ್ರತೀ ವರ್ಷ ಕೇವಲ ಒಂದು ದಿನದ ಜಡಿಮಳೆಯಿಂದ ಉಂಟಾಗುವ ಕೃತಕ ನೆರೆಯಲ್ಲಿ ಮುಳುಗುವ ದುರಂತದಿಂದ ಜನರು ರೋಸಿಹೋಗಿದ್ದು ಇದಕ್ಕೆ ಸ್ಥಳೀಯಾಡಳಿತೆಯ ನಿರ್ಲಕ್ಷ್ಯವೇ ಕಾರಣವೆಂದು ದೂರುತ್ತಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Maharashtra Polls: ಪ್ರಾಣ ಬೆದರಿಕೆ ನಡುವೆ ಮತ ಹಾಕಿ ಫೋಟೋ ತೆಗೆಸಿದ ಸಲ್ಮಾನ್!
Aircel-Maxis Case: ಏರ್‌ಸೆಲ್-ಮ್ಯಾಕ್ಸಿಸ್ ಕೇಸಿನಲ್ಲಿ ಚಿದಂಬರಂ ವಿರುದ್ಧ ವಿಚಾರಣೆ ತಡೆ
Bhagyanagar: ಹೈದರಾಬಾದ್ ಅಲ್ಲ, ಭಾಗ್ಯನಗರ: ಆರೆಸ್ಸೆಸ್ ಮತ್ತೆ ಹಕ್ಕೊತ್ತಾಯ
Exit Poll: ಮಹಾರಾಷ್ಟ್ರ: ಬಿಜೆಪಿ ನೇತೃತ್ವಕ್ಕೆ ಮತ್ತೆ ಅಧಿಕಾರ, ಜಾರ್ಖಂಡ್‌ನಲ್ಲಿ ಪೈಪೋಟಿ?
Panaji: ಗೋವಾಕ್ಕೆ ಬರುತ್ತಿದ್ದ ವಿಮಾನದಲ್ಲಿ ಮಹಿಳೆಗೆ ಲೈಂಗಿಕ ಕಿರುಕುಳ; ಆರೋಪಿ ಬಂಧನ
MUST WATCH
ಹೊಸ ಸೇರ್ಪಡೆ
Govt Hospital: ಡಿ ಗ್ರೂಪ್ ಸಿಬ್ಬಂದಿಗೆ ಶೀಘ್ರನೇರ ಪಾವತಿ: ಸಚಿವ ದಿನೇಶ್ ಗುಂಡೂರಾವ್
Maharashtra Polls: ಪ್ರಾಣ ಬೆದರಿಕೆ ನಡುವೆ ಮತ ಹಾಕಿ ಫೋಟೋ ತೆಗೆಸಿದ ಸಲ್ಮಾನ್!
Aircel-Maxis Case: ಏರ್‌ಸೆಲ್-ಮ್ಯಾಕ್ಸಿಸ್ ಕೇಸಿನಲ್ಲಿ ಚಿದಂಬರಂ ವಿರುದ್ಧ ವಿಚಾರಣೆ ತಡೆ
Bhagyanagar: ಹೈದರಾಬಾದ್ ಅಲ್ಲ, ಭಾಗ್ಯನಗರ: ಆರೆಸ್ಸೆಸ್ ಮತ್ತೆ ಹಕ್ಕೊತ್ತಾಯ
Exit Poll: ಮಹಾರಾಷ್ಟ್ರ: ಬಿಜೆಪಿ ನೇತೃತ್ವಕ್ಕೆ ಮತ್ತೆ ಅಧಿಕಾರ, ಜಾರ್ಖಂಡ್‌ನಲ್ಲಿ ಪೈಪೋಟಿ?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.