ದೃಢ ಸಂಕಲ್ಪವೇ ವ್ಯಸನಕ್ಕೆ ಮದ್ದು: ಡಾ| ಹೆಗ್ಗಡೆ
Team Udayavani, Jun 9, 2018, 4:53 PM IST
ಧಾರವಾಡ: ಮದ್ಯಪಾನ ವ್ಯಸನಕ್ಕೆ ಜಾತಿ, ಪಕ್ಷ, ಗುರು ಇಲ್ಲ. ಆದರೆ ಒಮ್ಮೆ ಈ ದುಶ್ಚಟಕ್ಕೆ ಬಲಿಯಾದರೆ ಹೊರಬರುವುದು ಕಷ್ಟ. ಇದರಿಂದ ಹೊರಬರಲು ದೃಢ ಸಂಕಲ್ಪವೊಂದೇ ದಾರಿಯಾಗಿದೆ ಎಂದು ಶ್ರೀಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ| ಡಿ.ವೀರೇಂದ್ರ ಹೆಗ್ಗಡೆ ಹೇಳಿದರು.
ಇಲ್ಲಿಯ ರಾಯಾಪುರದ ಮಹಿಳಾ ಜ್ಞಾನ ವಿಕಾಸ ಸಭಾಂಗಣದಲ್ಲಿ ಶುಕ್ರವಾರ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ, ರಾಜ್ಯ ಮದ್ಯಪಾನ ಸಂಯಮ ಮಂಡಳಿ ಹಾಗೂ ಮದ್ಯವರ್ಜನ ಶಿಬಿರ ವ್ಯವಸ್ಥಾಪನ ಸಮಿತಿ ವತಿಯಿಂದ ಹಮ್ಮಿಕೊಂಡಿದ್ದ ಮದ್ಯ ವರ್ಜನ ಶಿಬಿರ ಹಾಗೂ ಪಾನಮುಕ್ತರಾಗಿ ಸಾಧನೆ ಮಾಡಿದವರಿಗೆ ಪ್ರಶಸ್ತಿ ಪ್ರದಾನ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.
ಮದ್ಯಪಾನದಂತಹ ದುಶ್ಚಟಗಳಿಂದ ದೈಹಿಕ ಸಾಮರ್ಥ್ಯ ಕುಂಠಿತಗೊಳ್ಳುವುದರ ಜೊತೆಗೆ ಆರೋಗ್ಯ ಹಾಗೂ ಆರ್ಥಿಕ ಮಟ್ಟವೂ ಕುಸಿದು ಹೋಗಲಿದೆ. ಹೀಗಾಗಿ ಇಂತಹ ದುಶ್ಚಟಗಳಿಂದ ದೂರವಾಗಿ ನೆಮ್ಮದಿಯ ಬದುಕು ಸಾಗಿಸಬೇಕು. ಇದಕ್ಕೆ ಮನಸ್ಸಿನ ಭಾವನೆಯಿಂದ ಮಾತ್ರ ಪರಿವರ್ತನೆ ಸಾಧ್ಯವಿದೆ ಎಂದರು. ನಮಗೆ ಬೇಡವಾದ ಆಕರ್ಷಣೆಗಳಿಗೆ ಒಳಗಾಗಿ ನಾವು ಹಾಳಾಗುತ್ತಿದ್ದೇವೆ. ಹೀಗೆ ಹಾಳಾದವರು ತಮ್ಮನ್ನು ತಾವು ಹತೋಟಿಯಲ್ಲಿಟ್ಟುಕೊಳ್ಳಲು ಇಂತಹ ಶಿಬಿರ ನಡೆಸಲಾಗುತ್ತದೆ. ಎಂದಿಗೂ ದುಶ್ಚಟಕ್ಕೆ ಬಲಿಯಾಗದೆ ಮುಂದಿನ ಜೀವನವನ್ನು ಉತ್ತಮವಾಗಿ ನಡೆಸಬೇಕು ಎಂದು ಸಲಹೆ ನೀಡಿದರು.
ಸಾನ್ನಿಧ್ಯ ವಹಿಸಿದ್ದ ನವದೆಹಲಿಯ ಬಸವ ಮಂಟಪದ ಪೀಠಾಧ್ಯಕ್ಷ ಚನ್ನಬಸವಾನಂದ ಸ್ವಾಮೀಜಿ ಮಾತನಾಡಿ, ಕುಡಿತಕ್ಕೆ ಬಲಿಯಾದವರಿಗೆ ಈ ಶಿಬಿರ ನವ ಜೀವನ ನೀಡಿದೆ. ಹೀಗಾಗಿ ಈ ಶಿಬಿರದಲ್ಲಿ ಕಲಿತಿದ್ದನ್ನು ಜೀವನದುದ್ದಕ್ಕೂ ಕಾಪಾಡಿಕೊಳ್ಳಬೇಕು. ಹಿಂದಿನ ಜೀವನದತ್ತ ತಿರುಗಿ ನೋಡದೇ ಕುಟುಂಬದವ ರೊಂದಿಗೆ ಸುಖೀ ಜೀವನ ನಡೆಸಬೇಕು ಎಂದರು.
ಜನಜಾಗೃತಿ ವೇದಿಕೆ ಜಿಲ್ಲಾಧ್ಯಕ್ಷ ರಾಜಣ್ಣ ಕೊರವಿ ಅಧ್ಯಕ್ಷತೆ ವಹಿಸಿದ್ದರು. 25ಕ್ಕೂ ಹೆಚ್ಚು ಜನರು ಮದ್ಯಮುಕ್ತರಾಗಲು ಪ್ರೇರಣೆ ನೀಡಿದ ಮಡಿವಾಳಪ್ಪ ಬ್ಯಾಹಟ್ಟಿ, ಕರಿಗೌಡ ಶಿವನಗೌಡ್ರ, ನಿಜಗುಣಿ ಸುಭಾಷ್ ಅವರಿಗೆ ‘ಜಾಗೃತಿ ಮಿತ್ರ’ ಹಾಗೂ 50ಕ್ಕೂ ಹೆಚ್ಚು ಜನರು ಮದ್ಯಮುಕ್ತರಾಗಲು ಪ್ರೇರಣೆ ನೀಡಿದ ಚೆನ್ನಪ್ಪ ರಾಯಾಪುರ ಅವರಿಗೆ ‘ಜಾಗೃತಿ ಅಣ್ಣ’ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಶಿಬಿರಾರ್ಥಿಗಳ ಪರವಾಗಿ ಹರಿಶ್ಚಂದ್ರ ಕುಟಗಿ ಅನಿಸಿಕೆ ಹಂಚಿಕೊಂಡರು. ಹೋಟೆಲ್ ಅಸೋಸಿಯೇಶನ್ ಕೋಶಾಧಿ ಕಾರಿ ಶ್ರೀಧರ ಶೆಟ್ಟಿ, ಯೋಜನೆ ಪ್ರಾದೇಶಿಕ ನಿರ್ದೇಶಕರಾದ ಎನ್. ಜಯಶಂಕರ ಶರ್ಮಾ, ಸೀತಾರಾಮ ಶೆಟ್ಟಿ, ಅಖೀಲ ಕರ್ನಾಟಕ ಜನಜಾಗೃತಿ ವೇದಿಕೆ ನಿರ್ದೇಶಕ ವಿವೇಕ್ ವಿನ್ಸೆಂಟ್ ಪಾಯಸ್, ಸದಸ್ಯ ವಸಂತ ಅರ್ಕಾಚಾರ್ ಇದ್ದರು. ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ನಿರ್ದೇಶಕ ದಿನೇಶ ಎಂ. ಸ್ವಾಗತಿಸಿದರು. ಯೋಜನಾಧಿಕಾರಿ ಉಪ್ಪಾಸ್ ಮೇಸ್ತ ನಿರೂಪಿಸಿದರು. ಜಯಂತಿ ವಂದಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
NABARD ನಿರ್ಧಾರದಿಂದ ಕೃಷಿಗೆ ಹಿನ್ನಡೆ; ಸಾಲದ ಮೊತ್ತ ಕಡಿತ ಮಾಡದಿರಲು ಸಚಿವ ಪಾಟೀಲ ಆಗ್ರಹ
ಸಿಎಂ ಆಗಿದ್ದವರು ಈ ರೀತಿ ಹೇಳಿಕೆ ನೀಡುವ ಬದಲು, ಸ್ಪಷ್ಟ ಹೇಳಿಕೆ ನೀಡಲಿ: ಸಚಿವ ಶಿವಾನಂದ
dharwad: ಪೊಲೀಸ್ ಪೇದೆ ಮೇಲೆ ಕೈ ಮುಖಂಡ ತಮಟಗಾರ ಸಹೋದರ ಬ್ಲೇಡ್ ನಿಂದ ಹಲ್ಲೆ
Covid Scam: ಸಚಿವ ಸಂಪುಟದಲ್ಲಿ ಚರ್ಚಿಸಿ ಮುಂದಿನ ಕ್ರಮ: ಸಿಎಂ ಸಿದ್ದರಾಮಯ್ಯ
By Election: ಹಣ ಕೊಟ್ಟರೂ ಸಿಎಂ ಕಾರ್ಯಕ್ರಮಕ್ಕೆ ಜನ ಬರುತ್ತಿಲ್ಲ: ಬಿಎಸ್ ವೈ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.