ಚಂದದ ರಸ್ತೆಯಿದೆ, ಚರಂಡಿಯೇ ಇಲ್ಲ!

Team Udayavani, Jun 10, 2018, 6:15 AM IST

0906kdlm11ph1.jpg

ಕುಂದಾಪುರ: ಮುಖ್ಯ ರಸ್ತೆಯ ಸೂರ್ನಳ್ಳಿ ರಸ್ತೆ ಮೂಲಕ ಸಾಗಿದಂತೆ ಉತ್ತಮವಾದ ರಸ್ತೆಯೇನೋ ಸಿಗುತ್ತದೆ. ವಾಹನ ಸಂಚಾರವೂ ಇರುತ್ತದೆ. ಜನವಸತಿ ಇರುವ ಪ್ರದೇಶದಲ್ಲಿ ಮಳೆ ಬಂದರೆ ಕಷ್ಟ. 

ಉತ್ತಮ ರಸ್ತೆಯಿದ್ದರೂ, ವಾಹನಗಳು ಬಂದರೆ ಪಾದಚಾರಿಗಳು ಒದ್ದೆಯಾಗು ವುದು ಖಚಿತ. ಇಲ್ಲಿ ನೀರು ಕಾಂಕ್ರೀಟ್‌ ರಸ್ತೆಯಲ್ಲೇ ಹೋಗಬೇಕಿದೆ. 

ಹೇಗಿದೆ ವಾರ್ಡ್‌?
ವಾರ್ಡ್‌ನ ರಸ್ತೆಗಳಲ್ಲಿ ಹೋಗು ತ್ತಿದ್ದಂತೆ ಕಾಣುತ್ತಿದ್ದುದು ಮಾತ್ರ ಚರಂಡಿಯಿಲ್ಲದ ರಸ್ತೆ. ವಾರ್ಡ್‌ ಎಷ್ಟೇ ಅಭಿವೃದ್ಧಿ ಯಾಗಿದ್ದರೂ, ಜನರಿಗೆ ಎಷ್ಟೇ ಉತ್ತಮ ಸೌಲಭ್ಯಗಳು, ಸೌಕರ್ಯಗಳು ದೊರೆತಿದ್ದರೂ ನೀರೆಲ್ಲ ರಸ್ತೆಯಲ್ಲಿಯೇ ಹರಿಯುವುದು ಕಾಣುತ್ತದೆ. ಇದು ಇಡೀ ವಾರ್ಡಿನ ಹೆಸರಿಗೆ ಒಂದು ಕಪ್ಪುಚುಕ್ಕೆ. ಇಲ್ಲಿ ಚರಂಡಿ ಮಾಡಲು ಅವಕಾಶವೇ ಇಲ್ಲದಂತೆ ರಸ್ತೆ ಆವರಿಸಿದೆ. ರಸ್ತೆಯ ಇಕ್ಕೆಲದಲ್ಲಿ ಕಂಪೌಂಡ್‌ ಗೋಡೆಗಳಿವೆ. ಹಾಗಾಗಿ ಚರಂಡಿ ಕೆಲಸ ಬಾಕಿ 
ಆಗಿರಬಹುದು. ಕಾಂಕ್ರೀಟ್‌ ರಸ್ತೆ ಮಾಡಿದ ಕಾರಣ ಕಾಂಕ್ರಿಟ್‌ ರಸ್ತೆಯಡಿ ಭಾಗದಲ್ಲಿ ಚರಂಡಿ ಮಾಡಿ ಅದರ ಮೇಲೆ ಗಟ್ಟಿ ಸ್ಲಾéಬ್‌ ಹಾಕುವ ಮೂಲಕ ನೀರಿನ ಸರಾಗ ಹರಿವಿಗೆ ವ್ಯವಸ್ಥೆ ಮಾಡಬಹುದಿತ್ತು. 

ಮಳೆ ಬಂದರೆ ಸಮಸ್ಯೆ 
ಚರಂಡಿ ಇಲ್ಲದ್ದರಿಂದ ನೀರು ಆಸುಪಾಸಿನ ಮನೆಗಳಿಗೆ ಬಾರದಂತೆ ತಡೆ ಇಲ್ಲ. ಮಳೆ ನೀರು ತಡೆಯಲು ನಿವಾಸಿಗಳಿಗೆ ಪ್ರಾರ್ಥನೆಯೊಂದಷ್ಟೇ ಇದೆ. ಇಲ್ಲಿ ಘನ ವಾಹನ ಸಂಚರಿಸುವುದಿಲ್ಲ. ಆದ್ದರಿಂದ ಚರಂಡಿಗೆ ಪರ್ಯಾಯ ವ್ಯವಸ್ಥೆ ಮಾಡಬಹುದಿತ್ತು ಎನ್ನುತ್ತಾರೆ ಸ್ಥಳೀಯರು. ಇದೇ ರಸ್ತೆಯಲ್ಲಿ ಮುಂದೆ ಸಾಗಿದಂತೆ ಆದಿಶಕ್ತಿ ಕಾಳಿ ದೇವಸ್ಥಾನವಿದೆ. ಅಲ್ಲಿಗೂ ಭಕ್ತರು ಆಗಮಿಸುತ್ತಾರೆ. ಆದರೆ ಮಳೆ ಬಂದರೆ ಇದೇ ತೊಂದರೆಯಾಗಿದೆ. ಇಲ್ಲಿನ ಆಡಳಿತ ಚರಂಡಿ ವ್ಯವಸ್ಥೆಗೆ ಅನುದಾನ ಬಿಡುಗಡೆ ಮಾಡುವ ಮೂಲಕ ಈ ಪ್ರದೇಶದ ಜನರ ಗೋಳು ನಿವಾರಿಸಬೇಕಿದೆ. 

ಜಾಗದ ಸಮಸ್ಯೆ
ನಾನು ಸುಮಾರು 20 ಮನೆಗಳಿಗೆ ತೊಂದರೆಯಾಗದಂತೆ ಕ್ರಮ ತೆಗೆದು ಕೊಂಡಿದ್ದೇನೆ. ಚರಂಡಿ ರಚನೆಗೆ ಅತಿಕ್ರಮಣವಾದ ಜಾಗದ ಸಮಸ್ಯೆ ಇದ್ದು ಜನರ ಸಹಕಾರವಿದ್ದರೆ ಕಾಮಗಾರಿ ನಡೆಸಲಾಗುವುದು.
– ನಾಗರಾಜ್‌ ಕಾಮಧೇನು, ವಾರ್ಡ್‌ ಸದಸ್ಯರು

ಚರಂಡಿ ಇಲ್ಲ
ರಸ್ತೆಯ ಎರಡೂ ಬದಿ ಚರಂಡಿ ಇಲ್ಲ. ಹಾಗಾಗಿ ಮಳೆ ನೀರು ಮನೆಯಂಗಳಕ್ಕೆ ಬರುತ್ತದೆ ಅಥವಾ ರಸ್ತೆಯಲ್ಲಿಯೇ ಹರಿದು ನಡೆದಾಡಲೂ ತ್ರಾಸ ಪಡುವಂತಾಗುತ್ತದೆ. ಸ್ವಲ್ಪ ಗಮನ ನೀಡಿದರೆ ಒಳಿತು. 
– ಜಯಂತಿ, ಸ್ಥಳೀಯರು

– ಲಕ್ಷ್ಮೀ ಮಚ್ಚಿನ

ಟಾಪ್ ನ್ಯೂಸ್

1-traa

Udupi- Mangaluru; ವರ್ಷಾಂತ್ಯಕ್ಕೆ ಹೆಚ್ಚಿದ ಪ್ರವಾಸಿಗರು: ಟ್ರಾಫಿಕ್‌ ಜಾಮ್‌

Pro Kabaddi League: ಗುಜರಾತ್‌ ಜೈಂಟ್ಸ್‌ ವಿರುದ್ಧದಬಾಂಗ್‌ ಡೆಲ್ಲಿಗೆ ಗೆಲುವುPro Kabaddi League: ಗುಜರಾತ್‌ ಜೈಂಟ್ಸ್‌ ವಿರುದ್ಧದಬಾಂಗ್‌ ಡೆಲ್ಲಿಗೆ ಗೆಲುವು

Pro Kabaddi League: ಗುಜರಾತ್‌ ಜೈಂಟ್ಸ್‌ ವಿರುದ್ಧದಬಾಂಗ್‌ ಡೆಲ್ಲಿಗೆ ಗೆಲುವು

ಸರಣಿ ಕ್ಲೀನ್‌ ಸ್ವೀಪ್‌ ಗೈದ ಪಾಕಿಸ್ಥಾನ

PAK Vs SA: ಸರಣಿ ಕ್ಲೀನ್‌ ಸ್ವೀಪ್‌ ಗೈದ ಪಾಕಿಸ್ಥಾನ

BCCI: ಇನ್ನೆರಡು ಟೆಸ್ಟ್‌ ನಿಂದ ಮೊಹಮ್ಮದ್‌ ಶಮಿ ಹೊರಕ್ಕೆ

BCCI: ಇನ್ನೆರಡು ಟೆಸ್ಟ್‌ ನಿಂದ ಮೊಹಮ್ಮದ್‌ ಶಮಿ ಹೊರಕ್ಕೆ

Khel Ratna ನಾಮನಿರ್ದೇಶಿತರ ಪಟ್ಟಿಯಲ್ಲಿ ಭಾಕರ್‌ ಹೆಸರಿಲ್ಲ?

Khel Ratna ನಾಮನಿರ್ದೇಶಿತರ ಪಟ್ಟಿಯಲ್ಲಿ ಭಾಕರ್‌ ಹೆಸರಿಲ್ಲ?

Khattar (2)

Kasaragod: ಸ್ಥಳ ನೀಡಿದರೆ ಕೇರಳದಲ್ಲಿ ಅಣು ಶಕ್ತಿ ನಿಲಯ: ಕೇಂದ್ರ ಸಚಿವ ಖಟ್ಟರ್‌

AUS v NZ: ಆಸ್ಟ್ರೇಲಿಯ ವನಿತೆಯರಿಗೆ ಸರಣಿ

AUS v NZ: ಆಸ್ಟ್ರೇಲಿಯ ವನಿತೆಯರಿಗೆ ಸರಣಿ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-traa

Udupi- Mangaluru; ವರ್ಷಾಂತ್ಯಕ್ಕೆ ಹೆಚ್ಚಿದ ಪ್ರವಾಸಿಗರು: ಟ್ರಾಫಿಕ್‌ ಜಾಮ್‌

police

Udupi: ಕೋಳಿ ಅಂಕಕ್ಕೆ ದಾಳಿ; 9 ಕೋಳಿ ಸಹಿತ ನಾಲ್ವರ ವಶ

police crime

Gangolli, Ajekaru; ಮಹಿಳೆಯರಿಗೆ ಜೀವ ಬೆದರಿಕೆ

suicide (2)

Manipal: ಬಾವಿಗೆ ಬಿದ್ದು ಕಾರ್ಮಿಕ ಸಾ*ವು

Missing Case ಶಿರ್ವ: ವ್ಯಕ್ತಿ ನಾಪತ್ತೆ; ಪ್ರಕರಣ ದಾಖಲು

Missing Case ಶಿರ್ವ: ವ್ಯಕ್ತಿ ನಾಪತ್ತೆ; ಪ್ರಕರಣ ದಾಖಲು

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

1-traa

Udupi- Mangaluru; ವರ್ಷಾಂತ್ಯಕ್ಕೆ ಹೆಚ್ಚಿದ ಪ್ರವಾಸಿಗರು: ಟ್ರಾಫಿಕ್‌ ಜಾಮ್‌

Pro Kabaddi League: ಗುಜರಾತ್‌ ಜೈಂಟ್ಸ್‌ ವಿರುದ್ಧದಬಾಂಗ್‌ ಡೆಲ್ಲಿಗೆ ಗೆಲುವುPro Kabaddi League: ಗುಜರಾತ್‌ ಜೈಂಟ್ಸ್‌ ವಿರುದ್ಧದಬಾಂಗ್‌ ಡೆಲ್ಲಿಗೆ ಗೆಲುವು

Pro Kabaddi League: ಗುಜರಾತ್‌ ಜೈಂಟ್ಸ್‌ ವಿರುದ್ಧದಬಾಂಗ್‌ ಡೆಲ್ಲಿಗೆ ಗೆಲುವು

ಸರಣಿ ಕ್ಲೀನ್‌ ಸ್ವೀಪ್‌ ಗೈದ ಪಾಕಿಸ್ಥಾನ

PAK Vs SA: ಸರಣಿ ಕ್ಲೀನ್‌ ಸ್ವೀಪ್‌ ಗೈದ ಪಾಕಿಸ್ಥಾನ

1-subb

Eshwara Khandre; ಕುಕ್ಕೆ, ಧರ್ಮಸ್ಥಳದಲ್ಲಿ: ಕಸ್ತೂರಿ ರಂಗನ್‌ ವರದಿ ಸಂಪೂರ್ಣ ತಿರಸ್ಕಾರ

BCCI: ಇನ್ನೆರಡು ಟೆಸ್ಟ್‌ ನಿಂದ ಮೊಹಮ್ಮದ್‌ ಶಮಿ ಹೊರಕ್ಕೆ

BCCI: ಇನ್ನೆರಡು ಟೆಸ್ಟ್‌ ನಿಂದ ಮೊಹಮ್ಮದ್‌ ಶಮಿ ಹೊರಕ್ಕೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.