ಪೈ ಇಂಟರ್‌ನ್ಯಾಷನಲ್ ಲಕ್ಕಿ ಡ್ರಾ: 1200 ಗ್ರಾಹಕರಿಗೆ ಉಡುಗೊರೆ
Team Udayavani, Jun 10, 2018, 8:00 AM IST
ಬೆಂಗಳೂರು: ಗೃಹೋಪಯೋಗಿ ವಸ್ತುಗಳ ಮಾರುಕಟ್ಟೆಯಲ್ಲಿ ಮುಂಚೂಣಿಯಲ್ಲಿರುವ ಪ್ರತಿಷ್ಠಿತ ಪೈ ಇಂಟರ್‌ನ್ಯಾಷನಲ್ ಸಂಸ್ಥೆಯು ತನ್ನ ಗ್ರಾಹಕರಿಗಾಗಿ ಕಳೆದ ಭಾನುವಾರ ಲಕ್ಕಿ ಡ್ರಾ “ಅದೃಷ್ಟ ಪರೀಕ್ಷೆ’ ಏರ್ಪಡಿಸಿತ್ತು. ಇದರಲ್ಲಿ 1,200 ಗ್ರಾಹಕರಿಗೆ ಕೊಡುಗೆ ದೊರೆಯಿತು.
ಎರಡು ಸಾವಿರ ರೂ.ಗಿಂತ ಅಧಿಕ ಮೊತ್ತದ ಖರೀದಿ ಮಾಡಿದ ಪ್ರತಿ ಗ್ರಾಹಕರಿಗೆ ಪೈ ಇಂಟರ್‌ನ್ಯಾಷನಲ್ ತಲಾ ಒಂದು ಕೂಪನ್ ಕೊಟ್ಟಿತ್ತು. ಇಂತಹ ಲಕ್ಷಾಂತರ ಮಂದಿಗಾಗಿ “ಲಕ್ಕಿ ಡ್ರಾ’ ಹಮ್ಮಿಕೊಂಡಿತ್ತು. ಆ ಅದೃಷ್ಟಶಾಲಿಗಳಿಗೆ ಕನಿಷ್ಠ 5 ಸಾವಿರದಿಂದ ಗರಿಷ್ಠ 1 ಲಕ್ಷ ರೂ.ವರೆಗೆ ನಗದು ಬಹುಮಾನ ಕೂಡ ಇಡಲಾಗಿತ್ತು.
ಜ್ಞಾನಜ್ಯೋತಿ ಸಭಾಂಗಣದಲ್ಲಿ ಲಕ್ಕಿ ಡ್ರಾ ನಡೆಯಿತು. ಕಾರ್ಯಕ್ರಮದಲ್ಲಿ ಗ್ರಾಹಕರ ಎದುರೇ ಲಕ್ಕಿ ನಂಬರ್ ಎತ್ತಲಾಯಿತು. 3288 ಸಂಖ್ಯೆಯ ಗ್ರಾಹಕರಿಗೆ ಒಂದು ಲಕ್ಷ ರೂ. ನಗದು ಬಹುಮಾನ ಒಲಿಯಿತು. ಸಾಮಾನ್ಯವಾಗಿ ಮಾರುಕಟ್ಟೆಯಲ್ಲಿ ಎಲ್ಲ ಸೀಜನ್‌ಗಳಲ್ಲೂ ಲಕ್ಕಿ ಡ್ರಾ ಮಾಡುತ್ತಾರೆ. ಆದರೆ, ಅದರಲ್ಲಿ ಬಹುತೇಕ ಪಾರದರ್ಶಕವಾಗಿ ಇರುವುದೇ ಇಲ್ಲ. ಪೈ ಇಂಟರ್‌ನ್ಯಾಷನಲ್ ಅತ್ಯಂತ ಪಾರದರ್ಶಕವಾಗಿ ಇದನ್ನು ನಡೆಸಿಕೊಂಡು ಬರುತ್ತಿದೆ ಎಂದು ಗ್ರಾಹಕರು ಮೆಚ್ಚುಗೆ ವ್ಯಕ್ತಪಡಿಸಿದರು.
“ಕಳೆದ ವರ್ಷವೂ ಗಿಫ್ಟ್ ಬಂದಿತ್ತು’
ತುಂಬಾ ಖುಷಿ ಆಗುತ್ತಿದೆ. ಕಳೆದ ಬಾರಿ ಪೈ ಇಂಟರ್‌ನ್ಯಾಷನಲ್‌ನಲ್ಲಿ ರೆಫ್ರಿಜರೇಟರ್ ಖರೀದಿಸಿದ್ದೆವು. ಆಗ ಸಾವಿರ ರೂ. ಗಿಫ್ಟ್ ಬಂದಿತ್ತು. ಈ ಬಾರಿ ಕೂಡ ಆಕರ್ಷಕ ಕೊಡುಗೆ ಬಂದಿದೆ. ಯಾವುದೇ ಮೋಸ-ವಂಚನೆ ಇಲ್ಲದೆ, ಲಕ್ಕಿ ಡ್ರಾ ನಡೆಸಿಕೊಂಡು ಬರಲಾಗುತ್ತಿದೆ. ಇದರ ಜತೆಗೆ ಮತ್ತಿತರ ಸಮಾಜ ಸೇವೆಯಲ್ಲೂ ಪೈ ಇಂಟರ್‌ನ್ಯಾಷನಲ್ ತೊಡಗಿಕೊಂಡಿದೆ. ಸಮಾಜದಿಂದ ಪಡೆದಿದ್ದನ್ನು ಸಮಾಜಕ್ಕೆ ಹಿಂತಿರುಗಿಸುವ ಈ ಕೆಲಸ ಶ್ಲಾಘನೀಯ ಎಂದು ಮಲ್ಲೇಶ್ವರ ನಿವಾಸಿ ವಿನಯ್ ತಿಳಿಸಿದರು.
ಫುಟ್‌ಪಾತ್ ವ್ಯಾಪಾರದ ಮೆಲುಕು…
ಈ ಸಂದರ್ಭದಲ್ಲಿ ಮಾತನಾಡಿದ ಪೈ ಇಂಟರ್‌ನ್ಯಾಷನಲ್ ಮಾಲೀಕ ರಾಜಕುಮಾರ್ ಪೈ, ನಾನು ಬಡ ಕುಟುಂಬದಿಂದ ಬಂದವನು. 8ನೇ ತರಗತಿಯಲ್ಲಿದ್ದಾಗ ಫುಟ್‌ಪಾತ್‌ನಲ್ಲಿ ತರಕಾರಿ ವ್ಯಾಪಾರ ಮಾಡಿದ್ದು, ತಾಯಿ ಮತ್ತು ಅಕ್ಕ ಕೆಲಸಕ್ಕಾಗಿ ಅಲೆದಾಡಿದ್ದು ನನಗೆ ಈಗಲೂ ನೆನಪಿದೆ. ಕಷ್ಟಪಟ್ಟು ದುಡಿದಿದ್ದಕ್ಕೆ ಇಂದು ನೂರು ಷೋರೂಂ ತೆರೆದಿದ್ದೇನೆ ಹಾಗೂ ನಾಲ್ಕು ಸಾವಿರ ಜನರಿಗೆ ಕೆಲಸ ನೀಡಲು ಸಾಧ್ಯವಾಗಿದೆ. ನಾನು ಪಡೆದಿದ್ದರಲ್ಲಿ ಸಾಧ್ಯವಾದಷ್ಟು ಸಮಾಜ ಸೇವೆಗೆ ವಿವಿಧ ರೂಪದಲ್ಲಿ ಮೀಸಲಿಡುತ್ತಿದ್ದೇನೆ ಎಂದು ಹೇಳಿದರು.
ಗ್ರಾಹಕರ ಖಾತೆಗೇ ಜಮಾ
ಪೈ ಇಂಟರ್‌ನ್ಯಾಷನಲ್‌ನಲ್ಲಿ ಗೆದ್ದ ಬಹುಮಾನದ ಮೊತ್ತ ಮುಂದಿನ ದಿನಗಳಲ್ಲಿ ಗ್ರಾಹಕರ ಖಾತೆಗೇ ಜಮಾ ಆಗಲಿದೆ ಎಂದು ರಾಜಕುಮಾರ್ ಪೈ ತಿಳಿಸಿದರು. ಲಕ್ಕಿ ಡ್ರಾ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಸಣ್ಣ-ಪುಟ್ಟ ಬಹುಮಾನಗಳು ಬಂದಾಗ, ಇನ್ಮುಂದೆ ಆ ಕೂಪನ್ ಹಿಡಿದುಕೊಂಡು ಗ್ರಾಹಕರು ಷೋರೂಂವರೆಗೆ ಬರುವ ಅವಶ್ಯಕತೆ ಇಲ್ಲ. ಆ ಬಹುಮಾನದ ಮೊತ್ತವನ್ನು ಗ್ರಾಹಕರ ಖಾತೆಗೇ ಜಮೆ ಮಾಡಲಾಗುವುದು ಎಂದು ಹೇಳಿದರು. ಅಷ್ಟೇ ಅಲ್ಲ, ಅತಿ ಹೆಚ್ಚು ಗ್ರಾಹಕರಿಗೆ ಬಹುಮಾನವನ್ನು ತಲುಪಿಸುವ ಪೈ ಇಂಟರ್‌ನ್ಯಾಷನಲ್ ಸಂಸ್ಥೆಯಲ್ಲಿ ಉದ್ಯೋಗಿಗೂ ಆಕರ್ಷಕ ಬಹುಮಾನ ನೀಡಲಾಗುವುದು. ಪ್ರಸ್ತುತ ನೂರು ಷೋರೂಂಗಳಿದ್ದು, ನಾಲ್ಕು ಸಾವಿರ ಜನ ಕೆಲಸ ಮಾಡುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಷೋರೂಂ ಸಂಖ್ಯೆಯನ್ನು ಸಾವಿರಕ್ಕೆ ಹೆಚ್ಚಿಸುವುದು ನಮ್ಮ ಗುರಿ ಎಂದು ಇದೇ ವೇಳೆ ಪೈ ತಿಳಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Basavaraj Bommai: ಹಣದ ಹೊಳೆಹರಿಸಿ ಕಾಂಗ್ರೆಸ್ ಗೆಲುವು: ಬೊಮ್ಮಾಯಿ ಆರೋಪ
By Election Result: ನಾನು ದಂತದ ಗೋಪುರದಲ್ಲಿ ಕೂತವನಲ್ಲ,ಜನರೊಂದಿಗೆ ಸದಾ ಒಡನಾಟವಿದೆ: ಸಿಎಂ
ಮಹಾರಾಷ್ಟ್ರ ಸೋಲಿನ ಬೆನ್ನಲ್ಲೇ ಇವಿಎಂ ಬಗ್ಗೆ ಅನುಮಾನ ವ್ಯಕ್ತಪಡಿಸಿದ ಸತೀಶ್ ಜಾರಕಿಹೊಳಿ
Belagavi: ಗ್ಯಾರಂಟಿ ವಿರೋಧಿಸಿದ ವಿಪಕ್ಷಗಳಿಗೆ ಸ್ಪಷ್ಟ ಉತ್ತರ ನೀಡಿದ ಮತದಾರ: ಹೆಬ್ಬಾಳ್ಕರ್
Channaptna Result: ಕೊನೆ ಕ್ಷಣದಲ್ಲಿ ಪಕ್ಷ ಬದಲಿಸಿದರೂ ಗೆದ್ದ ಸೈನಿಕ: ನೆರವಾದ ಡಿಕೆ ತಂತ್ರ
MUST WATCH
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|
ಹೊಸ ಸೇರ್ಪಡೆ
Maharashtra ; ಕೈ ಯಿಂದ ಲೋಕಸಭಾ ಸ್ಥಾನ ಕಸಿದ ಬಿಜೆಪಿ: ರಾಜ್ಯಸಭೆ ಬಹುಮತದತ್ತ ಚಿತ್ತ
By Election: ಮೂರು ಕ್ಷೇತ್ರದಲ್ಲೂ ಬಿಜೆಪಿ ಸೋತಿದ್ದಕ್ಕೆ ಟಿವಿಯನ್ನೇ ಒಡೆದು ಹಾಕಿದ ಮುಖಂಡ!
Basavaraj Bommai: ಹಣದ ಹೊಳೆಹರಿಸಿ ಕಾಂಗ್ರೆಸ್ ಗೆಲುವು: ಬೊಮ್ಮಾಯಿ ಆರೋಪ
Maharashtra; ಮಹಾಯುತಿಯ ಮಹಾ ಗೆಲುವಿನಲ್ಲಿ ಆರ್ ಎಸ್ಎಸ್ ದೊಡ್ಡ ಕೊಡುಗೆ
Pakistan: ಪಾಕ್‌ನಲ್ಲಿ ಹಿಂಸಾಚಾರ; ಒಟ್ಟು 37 ಮಂದಿ ಸಾವು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.