ಕೀನ್ಯಾ ವಿರುದ್ಧ ಚೆಟ್ರಿ ಪಡೆಯೇ ಫೇವರಿಟ್
Team Udayavani, Jun 10, 2018, 11:12 AM IST
ಮುಂಬಯಿ: ತನ್ನ ಹೃದಯ ತಟ್ಟುವ ಕೋರಿಕೆಯಿಂದ ಅತ್ಯಧಿಕ ಸಂಖ್ಯೆಯ ವೀಕ್ಷಕರನ್ನು ಸ್ಟೇಡಿಯಂಗೆ ಸೆಳೆಯಲು ಸಫಲರಾದ ಸುನೀಲ್ ಚೆಟ್ರಿ ಪಾಲಿಗೆ ಈಗ ಸವಾಲೊಂದು ಕಾದಿದೆ. ಅದು ಇಂಟರ್‌ಕಾಂಟಿನೆಂಟಲ್ ಕಪ್ ಫುಟ್‌ಬಾಲ್ ಫೈನಲ್.
ಈ ಕೂಟದ ಪ್ರಶಸ್ತಿ ಸಮರ ರವಿವಾರ ರಾತ್ರಿ 8.30ಕ್ಕೆ “ಮುಂಬೈ ಫುಟ್‌ಬಾಲ್ ಅರೆನಾ’ದಲ್ಲಿ ನಡೆ ಯಲಿದ್ದು, ಭಾರತ-ಕೀನ್ಯಾ ಮುಖಾಮುಖೀಯಾಗಲಿವೆ. ಇಲ್ಲಿ ತಂಡವನ್ನು ಚಾಂಪಿಯನ್ ಪಟ್ಟಕ್ಕೇರಿಸಿ ಭಾರತೀಯ ಫುಟ್‌ಬಾಲ್‌ನತ್ತ ಹೆಚ್ಚು ಮಂದಿ ಆಕರ್ಷಿತರಾಗುವಂತೆ ಮಾಡುವುದು ಹಾಗೂ ದೇಶದ ಕ್ರೀಡಾಪ್ರಿಯರನ್ನು ಫಿಫಾ ವಿಶ್ವಕಪ್ ವೀಕ್ಷಣೆಗೆ ಹೆಚ್ಚು ಖುಷಿಯಿಂದ ಅಣಿಗೊಳಿಸುವುದು ಚೆಟ್ರಿ ಪಡೆಯ ಮುಂದಿರುವ ಮಹತ್ವದ ಜವಾಬ್ದಾರಿ.
ಅನುಮಾನವೇ ಬೇಡ, ಈ ಪಂದ್ಯದಲ್ಲಿ ಭಾರತವೇ ಪ್ರಶಸ್ತಿ ಗೆಲ್ಲುವ ಫೇವರಿಟ್. ನಾಯಕ ಸುನೀಲ್ ಚೆಟ್ರಿಯೇ ಸ್ಟಾರ್ ಫುಟ್ಬಾಲಿಗ. ಈ ಕೂಟದ ವೇಳೆ 100ನೇ ಅಂತಾರಾಷ್ಟ್ರೀಯ ಪಂದ್ಯವಾಡಿದ, ಚೈನೀಸ್ ತೈಪೆ ವಿರುದ್ಧ ಹ್ಯಾಟ್ರಿಕ್ ಸಾಧಿಸಿದ್ದು ಚೆಟ್ರಿ ಪಾಲಿನ ಹೆಗ್ಗಳಿಕೆ. ಲೀಗ್ ಹಂತದಲ್ಲಿ ನ್ಯೂಜಿಲ್ಯಾಂಡಿಗೆ 1-2ರಿಂದ ಸೋತದ್ದನ್ನು ಬಿಟ್ಟರೆ ಭಾರತದ ಒಟ್ಟಾರೆ ಸಾಧನೆ ಪ್ರಶಂಸನೀಯ.
ಫೈನಲಿಸ್ಟ್ ಕೀನ್ಯಾ ವಿರುದ್ಧದ ಲೀಗ್ ಪಂದ್ಯದಲ್ಲಿ ಭಾರತ 3-0 ಜಯ ಸಾಧಿಸಿದ್ದನ್ನು ಮರೆಯುವಂತಿಲ್ಲ. ಇದೇ ಆಟವನ್ನು ಪುನರಾವರ್ತಿಸಿದರೆ ಭಾರತ ಚಾಂಪಿಯನ್ ಆಗುವುದನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ. ಆದರೆ ಕೀನ್ಯಾವನ್ನು ಯಾವ ಕಾರಣಕ್ಕೂ ಲಘುವಾಗಿ ಪರಿಗಣಿಸಬೇಡಿ ಎಂದು ಕೋಚ್ ಸ್ಟೀಫನ್ ಕಾನ್‌ಸ್ಟಂಟೈನ್ ಎಚ್ಚರಿಕೆ ನೀಡಿದ್ದಾರೆ. ಕಾರಣ, ಅದು ನ್ಯೂಜಿಲ್ಯಾಂಡನ್ನು 2-1ರಿಂದ, ಹಾಗೆಯೇ ಚೈನೀಸ್ ತೈಪೆಯನ್ನು 4-0 ಗೋಲುಗಳಿಂದ ಮಣಿಸಿತ್ತು.
ಈ ಪಂದ್ಯಕ್ಕಾಗಿ ಭಾರತ ಸಶಕ್ತ ಆಟಗಾರರ ಬಲಿಷ್ಠ ಪಡೆಯನ್ನೇ ಕಣಕ್ಕಿಳಿಸುತ್ತದೆ ಎಂದು ಕಾನ್‌ಸ್ಟಂಟೈನ್ ಹೇಳಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Test: ಇಂಗ್ಲೆಂಡ್ ಸರಣಿಯ ಬಳಿಕ ಟೆಸ್ಟ್ ಕ್ರಿಕೆಟ್ ನಿಂದ ದೂರವಾಗಲಿದ್ದಾರೆ ಕಿವೀಸ್ ಆಟಗಾರ
Ranji Trophy: ಇನ್ನಿಂಗ್ಸ್ ನ ಎಲ್ಲಾ 10 ವಿಕೆಟ್ ಕಿತ್ತು ಅನ್ಶುಲ್ ಕಾಂಬೋಜ್ ದಾಖಲೆ
India Vs India A ಅಭ್ಯಾಸ ಪಂದ್ಯ: ಅಗ್ಗಕ್ಕೆ ಔಟಾದ ಕೊಹ್ಲಿ, ಪಂತ್; ಗಾಯಗೊಂಡ ರಾಹುಲ್
India-South Africa; ನಾಲ್ಕನೇ ಟಿ20 ಪಂದ್ಯ ಇಂದು: ಸರಣಿ ಗೆಲುವಿನ ನಿರೀಕ್ಷೆಯಲ್ಲಿ ಭಾರತ
K.L. Rahul; ಕುಡ್ಲದ ಜನರ ಬೆಂಬಲವೇ ಸಾಧನೆಗೆ ಕಾರಣ
MUST WATCH
ಹೊಸ ಸೇರ್ಪಡೆ
Organ Donation: ಸಾವಿನ ನಂತರವೂ ನೆರವಾದ ಜೀವ
Anandapura: ಸಾಲದ ಬಾಧೆ ತಾಳಲಾರದೆ ರೈತ ಆತ್ಮಹ*ತ್ಯೆ
Maharashtra Election: ಅಮಿತ್ ಶಾ ಅವರ ಬ್ಯಾಗ್ ಪರೀಕ್ಷಿಸಿದ ಚುನಾವಣಾ ಅಧಿಕಾರಿಗಳು
Bengaluru: ವೈದ್ಯೆಗೆ ಲೈಂಗಿಕ ಕಿರುಕುಳ: ಪಿಎಸ್‌ಐ ವಿರುದ್ದ ಪೊಲೀಸ್ ಆಯುಕ್ತರಿಗೆ ದೂರು
Bengaluru: ಆತ್ಮಹತ್ಯೆಗೆ ಯತ್ನಿಸಿದ ವ್ಯಕ್ತಿಯ ಜೀವ ಉಳಿಸಿದ ಸಂಚಾರ ಪೊಲೀಸರು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.