ಸೋಲಾರ್ ಡಸ್ಟ್ ಬಿನ್
Team Udayavani, Jun 10, 2018, 4:44 PM IST
ನಗರದಲ್ಲಿ ತ್ಯಾಜ್ಯ ತೊಟ್ಟಿಗಳು ಬೇಕೆಬೇಕು. ಆದರೆ ಅವುಗಳ ಸೂಕ್ತ ನಿರ್ವಹಣೆಯಿಲ್ಲದಿದ್ದರೆ ಅಲ್ಲಿ ಓಡಾಡುವ ಜನಸಾಮಾನ್ಯರಿಗೂ ಕಿರಿಕಿರಿ. ಹೀಗಾಗಿ ಇದಕ್ಕೊಂದು ಪರಿಹಾರ ಅತ್ಯಗತ್ಯ. ಅದಕ್ಕಾಗಿ ಬಂದಿದೆ ಸ್ಮಾರ್ಟ್ ಡಸ್ಟ್ ಬಿನ್ .
ಪ್ರತಿ ವರ್ಷವೂ ತ್ಯಾಜ್ಯ ಪ್ರಮಾಣ ಹೆಚ್ಚಾಗುತ್ತಿದೆ ಮತ್ತು ಸಂಗ್ರಹಣೆ ಸೇವೆಗಳಿಗೆ ದುಪ್ಪಟ್ಟು ಖರ್ಚಾಗುತ್ತವೆ. ಅದಕ್ಕೆ ಪರ್ಯಾಯ ವಿಧಾನವಾಗಿ ಇಂತಹ ಸೋಲಾರ್ ತ್ಯಾಜ್ಯ ತೊಟ್ಟಿ ಬಳಸಬಹುದು. ಇದು ಸೌರಶಕ್ತಿಯನ್ನು
ಬಳಸಿ ಇನ್‌ಫಾರ್ಮೇಶನ್ ಟೆಕ್ನಾಲಜಿ ಮೂಲಕ ಕಾರ್ಯ ನಿರ್ವಹಿಸುತ್ತದೆ ಹಾಗೂ ಇದಕ್ಕೆ ಪ್ರತ್ಯೇಕ ನೆಟ್ ವರ್ಕ್ ಅನ್ನು ಹೊಂದಿದ್ದು, ಅದರ ಮೂಲಕ ಎಲ್ಲ ಅಪ್‌ಡೇಟ್ ಅನ್ನು ಸಂಗ್ರಹಕರಿಗೆ ನೀಡುತ್ತದೆ.
ಅಧಿಕ ಪ್ರಮಾಣದ ತ್ಯಾಜ್ಯ ಸಂಗ್ರಹಣೆ
ಸೌರಶಕ್ತಿಯಿಂದ ಸ್ವಯಂ ಚಾಲಿತವಾಗುವ ಈ ತ್ಯಾಜ್ಯ ತೊಟ್ಟಿ ಕಸ ಸಂಗ್ರಹಣೆ ಪ್ರಮಾಣ ಅಧಿಕ. ಇತರೆ ಬಿನ್ ಸಾಮರ್ಥ್ಯಕ್ಕಿಂತ 5-8 ಬಿನ್ ಹೆಚ್ಚು ಕಸ ಶೇಖರಣೆಯನ್ನು ಮಾಡುತ್ತದೆ. ಇದರರ್ಥ ನೀವು 100 ಲೀಟರ್ ಬಿನ್‌ನಲ್ಲಿ 500- 800 ಲೀಟರ್ ತ್ಯಾಜ್ಯವನ್ನು ತುಂಬಲು ಸಾಧ್ಯವಾಗುತ್ತದೆ ಮತ್ತು ದೈನಂದಿನ ಸಂಗ್ರಹಣೆಗಳಿಂದ ವಾರಕ್ಕೊಂದು
ಬಾರಿ ಸಂಗ್ರಹಿಸುವಂತೆ ಮಾಡಲು ಸಹಕಾರಿಯಾಗಿದೆ.
ಸೌರ ಕಸದ ತೊಟ್ಟಿಗಳು ಸ್ವಚ್ಛ ನಗರವನ್ನಾಗಿಸುತ್ತದೆ. ಸಂಗ್ರಹ ಕಸವನ್ನು ಒತ್ತಡದ ಮೂಲಕ ಕಡಿಮೆ ಮಾಡುವುದರ ಜತೆಗೆ, ಪ್ರತಿ ಬಿನ್ ಫಿಲ್ – ಲೆವೆಲ್ ಸ್ಥಿತಿಯ ಬಗ್ಗೆ ಸಂಗ್ರಹಣ ಸಿಬಂದಿಗೆ ಫಿಲ್ – ಲೆವೆಲ್ ಡೇಟಾವನ್ನು ಕಳುಹಿಸುತ್ತವೆ. ಬಿನ್ ಪೂರ್ಣಗೊಂಡಾಗ ತಂತ್ರಾಂಶವು ಸ್ವಯಂ ಚಾಲಿತವಾಗಿ ತಳ್ಳುವ ಮೂಲಕ ಇನ್ನಷ್ಟು ಕಸ ಸಂಗ್ರಹಿಸುತ್ತದೆ. ಈಗಾಗಲೇ ತೊಟ್ಟಿ ಎಷ್ಟು ಸಂಗ್ರಹಿಸಿದೆ ಮತ್ತು ಯಾವಾಗ ಫುಲ್ ಆಗುತ್ತದೆ ಎಂಬ ಮಾಹಿತಿಯನ್ನು ಸಿಬಂದಿಗೆ ಸೂಚಿಸುತ್ತದೆ.
ವೆಚ್ಚದಲ್ಲಿ ಉಳಿತಾಯ
ಸೌರ ಕಸದ ತೊಟ್ಟಿ ಬಳಕೆಯಿಂದ ತ್ಯಾಜ್ಯ ನಿರ್ವಹಣೆ ಕಂಪೆನಿಗಳಿಗೆ ದೈನಂದಿನ ಕಸ ಸಂಗ್ರಹದ ಬದಲು ವಾರಕ್ಕೊಮ್ಮೆ ಸಂಗ್ರಹ ಮಾಡಬಹುದು. ಇದು ಸಂಚಾರ, ಕೆಲಸದ ಸಮಯ, ಇಂಧನ ವೆಚ್ಚ ಮತ್ತು ವಾಹನ ನಿರ್ವಹಣೆ ವೆಚ್ಚಗಳ ಮೇಲೆ ಭಾರೀ ಪ್ರಭಾವವನ್ನು ಬೀರುತ್ತದೆ. ಒಟ್ಟಾರೆಯಾಗಿ ಸೌರ ಕಸದ ತೊಟ್ಟಿಗಳು ತ್ಯಾಜ್ಯ ಸಂಗ್ರಹ ವೆಚ್ಚವನ್ನು ಶೇ. 80ರ ವರೆಗೆ ಕಡಿಮೆಗೊಳಿಸುತ್ತದೆ.
ಮಂಗಳೂರು ಸ್ಮಾರ್ಟ್ ನಗರವಾಗುತ್ತಿರುವುದರಿಂದ ಪ್ರಮುಖ ನಗರ ಕೇಂದ್ರಗಳು, ಸಾರಿಗೆ ಕೇಂದ್ರಗಳು, ಉದ್ಯಾನವನಗಳು, ಶಾಪಿಂಗ್ ಮಾಲ್ ಗಳು ಹೀಗೆ ಹೆಚ್ಚಿನ ಪಾದಚಾರಿ ಸಂಚಾರಿ ಪ್ರದೇಶಗಳಲ್ಲಿ ತ್ಯಾಜ್ಯ ಸಂಗ್ರಹಣೆ ಮತ್ತು ನಿರ್ವಹಣೆಯ ಸಮಸ್ಯೆಯನ್ನು ಪರಿಹರಿಸಬಹುದು. ಅದಕ್ಕೆ ಸೌರಶಕ್ತಿ ಚಾಲಿತ ಕಸದ ತೊಟ್ಟಿಗಳನ್ನು ಅಳವಡಿಸುವುದರಿಂದ ಮಾರ್ಗೋಪಾಯವನ್ನು ಕಂಡುಕೊಳ್ಳಬಹುದು.
ಯುಎಸ್ ಮತ್ತು 47 ಇತರ ರಾಷ್ಟ್ರಗಳಲ್ಲಿ ಬಿಗ್ ಬೆಲ್ಲಿ ಎಂಬ ಸಂಸ್ಥೆಯಿಂದ ಈ ಸೌರಚಾಲಿತ ತ್ಯಾಜ್ಯ ಸಂಗ್ರಹಣೆ ಪ್ರಾರಂಭವಾಯಿತು. ನ್ಯೂ ಯಾರ್ಕ್, ಬೋಸ್ಟನ್, ಚಿಕಾಗೊ, ಆಮ್ ಸ್ಟಾರ್ಡ್ಯಾಮ್, ಹ್ಯಾಂಬರ್ಗ್ ಮತ್ತು ಸ್ಟಾಕ್ಹೋಮ್ ಮುಂತಾದ ಅನೇಕ ನಗರಗಳಲ್ಲಿ ಇಂತಹ ತಂತ್ರಜ್ಞಾನವನ್ನು ಅಳವಡಿಸಿ ಯಶಸ್ವಿಯಾಗಿದೆ. ಈ ವ್ಯವಸ್ಥೆ ನಮ್ಮ ಮಂಗಳೂರಿಗೂ ಬಂದರೆ ಸ್ವಚ್ಛ ಭಾರತ ಅಭಿಯಾನ ಹಾಗೂ ಡಿಜಿಟಲ್ ಇಂಡಿಯಾ ಅಡಿಯಲ್ಲಿ ನಮ್ಮ ನಗರವೂ ಸ್ವಚ್ಛ ಸುಂದರ ನಗರವಾಗುವುದಲ್ಲದೇ ಸ್ಮಾರ್ಟ್ ನಗರದ ಕಲ್ಪನೆಗೊಂದು ಅರ್ಥ ಸಿಕ್ಕಂತಾಗುತ್ತದೆ.
ಭರತ್ ರಾಜ್ ಕರ್ತಡ್ಕ
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.