ಕುಸುಬಿ ಎಲೆಯಲ್ಲಿ ಧಾರವಾಡ ಕೃಷಿ ವಿವಿ ಚಹಾ


Team Udayavani, Jun 10, 2018, 5:22 PM IST

10-june-20.jpg

ಧಾರವಾಡ: ಕಷ್ಟಪಟ್ಟು ಬೆಳೆದ ಬೆಳೆಗಳಿಗೆ ಬೆಲೆ ಸಿಗದೆ ರೈತರು ಕಂಗಾಲಾಗುತ್ತಿರುವ ಈ ದಿನಗಳಲ್ಲಿ, ಬೆಳೆಯುವ ಬೆಳೆಗಳಿಗೆ ಮೌಲ್ಯವರ್ಧನೆ ಮಾಡುವ ಪ್ರಯತ್ನಗಳು ಕೆಲವು ಕಡೆ ನಡೆಯತ್ತಿವೆ. ಇಂತಹದೇ ಪ್ರಯತ್ನವೊಂದನ್ನು ಸತತ ನಾಲ್ಕು ವರ್ಷಗಳಿಂದ ತೆರೆಮರೆಯಲ್ಲೇ ಮಾಡುತ್ತಿರುವ ಧಾರವಾಡದ ಕೃಷಿ ವಿವಿ, ಉತ್ತರ ಕರ್ನಾಟಕದ ಬರಗಾಲದ ಬೆಳೆ ಎಂದೇ ಖ್ಯಾತವಾಗಿರುವ ಕುಸುಬಿ (ಸಾಪ್ಲವರ್‌)ಯಲ್ಲಿನ ಔಷಧೀಯ ಗುಣಗಳನ್ನು ಜನರಿಗೆ ಪರಿಚಯಿಸುವ ಪ್ರಯತ್ನಕ್ಕೆ ಕೈ ಹಾಕಿದೆ.

ಮೆದುಳು ಸಂಬಂಧಿ ಕಾಯಿಲೆಗಳು, ಸಂಧಿವಾತ, ತೀವ್ರ ರಕ್ತದೊತ್ತಡ, ಕುತ್ತಿಗೆ ನೋವು, ಉಸಿರಾಟದ ತೊಂದರೆ, ಶ್ವಾಸಕೋಶ ಸಂಬಂಧಿ ಕಾಯಿಲೆಗಳು, ಹೃದ್ರೋಗ ಸೇರಿದಂತೆ 200ಕ್ಕೂ ಹೆಚ್ಚು ದೇಹ ಸಂಬಂಧಿ ಕಾಯಿಲೆಗಳಿಗೆ ಕುಸುಬಿ ಎಣ್ಣೆ, ಕುಸುಬಿ ಎಲೆ ಮತ್ತು ಕುಸುಬಿ ದಳಗಳು ಔಷಧಿಯಾಗಿ ಕೆಲಸ ಮಾಡಬಲ್ಲವು. ಇದನ್ನು ಈಗಾಗಲೇ ಕೃಷಿ ವಿಜ್ಞಾನಿಗಳು ಮತ್ತು ಆಯುರ್ವೇದ ತಜ್ಞರು ಜಂಟಿಯಾಗಿ ಅಧ್ಯಯನ ನಡೆಸಿ ಹೇಳಿದ್ದು, ಇದನ್ನೇ ಜನರಿಗೆ ತಿಳಿಸಿ, ಕುಸುಬಿ ಬೆಳೆ ಪ್ರೋತ್ಸಾಹಕ್ಕೆ ಕೃಷಿ ವಿಶ್ವವಿದ್ಯಾಲಯ ಸಜ್ಜಾಗಿದೆ. 

ಕುಸುಬಿ ದಳಗಳಲ್ಲಿ ಶೇ.5ರಷ್ಟು ಎಣ್ಣೆ ಅಂಶವಿದೆ. ಅಲ್ಲದೇ ಅಲ್ಪ-ಲಿನೋಲೆನಿಕ್‌ (ಶೇ.15-19ರಷ್ಟಿದೆ), ಗಾಮಾ-ಲಿನೋಲೆನಿಕ್‌ (ಶೇ.2-3 ರಷ್ಟಿದೆ) ಉಬ್ಬಯ ಪಾಲ್ಮಿಟಿಕ್‌ (ಶೇ.14-16ರಷ್ಟಿದೆ). ಸ್ಯಾಪ್ಲೋಮಿನ್‌ (ಶೇ.28-36) ಹಳದಿ ಬಣ್ಣದ ಕಣಗಳು, ಕಾಥೇಮಿನ್‌ (ಶೇ.0.3-0.6ರಷ್ಟಿದೆ) ಎಂಬ ಕೆಂಪು ಬಣ್ಣದ ಕಣಗಳಿದ್ದು, ಇದರ ಸೇವನೆಯಿಂದ ರೋಗಗಳನ್ನು ದೂರ ಇಡಬಹುದಾಗಿದೆ. ಇನ್ನು ಒಮೆಗಾ-3, ಒಮೆಗಾ-6 ಈ ಎರಡೂ ಕೊಬ್ಬಿನಾಮ್ಲಗಳು ದೇಹಕ್ಕೆ ಅಗತ್ಯ. ಈ ಎರಡು ಕೂಡ ಕುಸಬಿ ಎಣ್ಣೆಯಲ್ಲಿ ಇತರ ಎಣ್ಣೆಗಳಿಗಿಂತಲೂ ಶೇ.76ರಷ್ಟು ಪ್ರಮಾಣದಲ್ಲಿವೆ. ಇದು ಆರೋಗ್ಯಕ್ಕೆ ಹೆಚ್ಚು ಹತ್ತಿರವಿರುವ ಅಂಶವಾಗಿದೆ ಎಂಬುದನ್ನು ಕೃಷಿ ವಿವಿ ಮತ್ತೊಮ್ಮೆ ಜನರಿಗೆ ತಿಳಿಸಲು ಮುಂದಾಗಿದೆ.

ಚೀನಾ ಮಾದರಿ: ಚೀನಾದಲ್ಲಿ ಕುಸುಬಿಯ ದಳಗಳನ್ನು ಒಣಗಿಸಿಕೊಂಡು ಚಹಾಪುಡಿ ಸಿದ್ಧಗೊಳಿಸಿ ಉತ್ತಮ ಚಹಾ
ಪಾನೀಯಕ್ಕೆ ಬಳಕೆ ಮಾಡಲಾಗುತ್ತಿದೆ. ಹೀಗಾಗಿ ಇಲ್ಲಿನ ಕುಸುಬಿ ಬೆಳೆದ ರೈತರಿಗೆ ಉತ್ತಮ ಮಾರುಕಟ್ಟೆ ಲಭಿಸುತ್ತಿದೆ. ಇದೇ ಮಾದರಿಯನ್ನು ಉತ್ತರ ಕರ್ನಾಟಕದ ಕುಸುಬಿಗೂ ಅಳವಡಿಸಲು ಕೃಷಿ ವಿವಿ ಹೊಸ ಯೋಜನೆಯೊಂದನ್ನು ರೂಪಿಸುತ್ತಿದೆ. ಇದು ಯಶಸ್ವಿಯಾದರೆ ಉತ್ತರ ಕರ್ನಾಟಕದ ಬರಗಾಲ ಪೀಡಿತ ಪ್ರದೇಶದಲ್ಲಿ ಬೆಳೆಯುವ ಕುಸುಬಿಗೆ ಕನಿಷ್ಠ ಬೆಂಬಲ ಬೆಲೆ ಸಿಗಲು ಸಾಧ್ಯವಿದೆ ಎನ್ನುವುದು ಕೃಷಿ ವಿವಿ ಲೆಕ್ಕಾಚಾರ.

ಜನ, ಜಾನುವಾರು, ಜಮೀನು: ಕುಸಬಿ ಎಣ್ಣೆ ಮನೆಯ ಅಡುಗೆಗಾದರೆ ಇದರಿಂದ ಬಂದ ಹಿಂಡಿ ಜಾನುವಾರುಗಳಿಗೆ. ಇನ್ನು ಬರಗಾಲದಲ್ಲೂ ಚೆನ್ನಾಗಿ ಬೆಳೆಯುವ ಗುಣ ಹೊಂದಿರುವ ಕುಸುಬಿ ಕಪ್ಪು ಮಣ್ಣಿನ ಬೆಳೆಯಾಗಿದ್ದು ಆಳವಾಗಿ ಬೇರು ಬಿಟ್ಟು ಭೂಮಿಗೆ ಅಗತ್ಯವಾದ ಪೊಷಕಾಂಶಗಳನ್ನು ನೀಡಬಲ್ಲದು. ಆದರೆ ಕುಸುಬಿ ಬೆಳೆಯನ್ನು ವಿದೇಶಿ ಕಂಪನಿಗಳು ಅಪ ಪ್ರಚಾರದಿಂದ ಮೂಲೆಗೆ ಸರಿಸಿದ್ದು ಇದೀಗ ಇತಿಹಾಸ. ಕೆಟ್ಟ ಕೊಲೆಸ್ಟ್ರಾಲ್‌ ಮಟ್ಟವನ್ನು (ಎಲ್‌ಡಿಎಲ್‌) ಕಡಿಮೆಗೊಳಿಸುವ ಇದರಲ್ಲಿನ ಕೊಬ್ಬಿನಾಂಶಗಳು ಆರೋಗ್ಯಕ್ಕೆ ಹಾನಿಕರ ಎಂದು ಅಪಪ್ರಚಾರ ಮಾಡಲಾಯಿತು. ತನ್ನ ವ್ಯಾಪ್ತಿಯ ಏಳು ಜಿಲ್ಲೆಗಳಲ್ಲಿ ಎಲ್ಲೆಲ್ಲಿ ಕುಸುಬಿ ಬೆಳೆಯಲಾಗುತ್ತಿದೆಯೋ, ಅಲ್ಲಿ ಸ್ಥಳೀಯವಾಗಿಯೇ ಕುಸಿಬಿ ಎಣ್ಣೆ, ಹಿಂಡಿ ಮಾರಾಟಕ್ಕೆ ಅಗತ್ಯವಾದ ಸಣ್ಣ ಸಣ್ಣ
ಉದ್ಯಮಿಗಳನ್ನು ಕೂಡ ಕೃಷಿ ವಿವಿ ಹುಡುಕುತ್ತಿದೆ.

ಪರೀಕ್ಷೆಗೆ ಕೃಷಿ ವಿವಿ ಒಪ್ಪಂದ: ಧಾರವಾಡ ಕೃಷಿ ವಿಶ್ವವಿದ್ಯಾಲಯ ಕುಸುಬಿಯನ್ನು ಹೆಚ್ಚು ಬಳಕೆ ಮಾಡಬೇಕು ಎನ್ನುವುದಕ್ಕೆ ಒತ್ತು ಕೊಟ್ಟು ಜಾಗೃತಿ ಕಾರ್ಯಕ್ರಮ ಹಮ್ಮಿಕೊಳ್ಳುತ್ತಿದೆ. ಅದರ ಭಾಗವಾಗಿ ಜನ-ಜಾನುವಾರು-ಭೂಮಿ ಎನ್ನುವ ಹೊಸ ಪರಿಕಲ್ಪನೆಯನ್ನು ಆರಂಭಿಸಿದ್ದು, ಈ ಮೂರಕ್ಕೂ ಕುಸುಬಿಯಿಂದ ಆರೋಗ್ಯ ಹೇಗೆ ಲಭಿಸುತ್ತದೆ ಎಂಬುದನ್ನು ರೈತರ ಮನೆ ಮತ್ತು ಮನಕ್ಕೆ ತಟ್ಟುವಂತೆ ಮಾಡುತ್ತಿದೆ. ಇದರಲ್ಲಿನ ಔಷಧೀಯ ಗುಣ ಕುರಿತು ಅಧ್ಯಯನ ನಡೆಸಲು ಸರ್ಕಾರಿ ಅಥವಾ ಖಾಸಗಿ ವೈದ್ಯಕೀಯ ಸಂಸ್ಥೆಯೊಂದಿಗೆ ಒಪ್ಪಂದ ಮಾಡಿಕೊಳ್ಳಲು ಸಜ್ಜಾಗಿದೆ. ಅಷ್ಟೇಯಲ್ಲ, ಕುಸುಬಿ ಉತ್ಪಾದನೆ ಕುಸಿಯಲು ಇರದಲ್ಲಿನ ಮುಳ್ಳು ಕಾರಣ. ಆದರೆ ಇದೀಗ ಯಂತ್ರಾಧಾರಿತವಾಗಿಯೇ ಕುಸುಬಿ ಬಿತ್ತಿ,ಬೆಳೆದು, ಒಕ್ಕನೆ ಮಾಡುವ ವಿನೂತನ ತಂತ್ರಜ್ಞಾನ ಕೂಡ ಧಾರವಾಡ ಕೃಷಿ ವಿವಿ ಸಂಶೋಧನೆ ಮಾಡಿದೆ.

ಹಿತ್ತಲ ಗಿಡಗಳು ಮದ್ದಲ್ಲ ಎಂದು ಸುಮ್ಮನಿದ್ದ ದೇಶದ ಕೃಷಿ ವಿಜ್ಞಾನಿಗಳಿಗೆ ಇದೀಗ ಕುಸುಬಿಯಂತಹ ದೇಶಿ ಬೆಳೆಯ ಮಹತ್ವ ಗೊತ್ತಾಗಿದೆ. ಮೆಡಿಟರೇನಿಯನ್‌ ಪ್ರದೇಶಕ್ಕೆ ಸೀಮತವಾಗಿದ್ದ ಆಲೀವ್‌ ಗಿಡದ ಉತ್ಪನ್ನ ಇಂದು ಜಗತ್ತಿನಾದ್ಯಂತ ಹೆಚ್ಚು ಜನರು ಔಷಧೀಯ ಕಾರ್ಯಕ್ಕೆ ಬಳಕೆ ಮಾಡುವ ಹಂತಕ್ಕೆ ಹೋಗಿದ್ದು ಆ ದೇಶದ ಉತ್ಪನ್ನವೊಂದರ ಮೌಲ್ಯವರ್ಧನೆಗೆ ಸಾಕ್ಷಿಯಾಗಿದೆ. ಇದೇ ಮಾದರಿಯಲ್ಲಿ ಕುಸುಬಿ ಕೊಂಡೊಯ್ಯುಬೇಕು ಎಂಬುದು ಧಾರವಾಡ ಕೃಷಿ ವಿವಿಯ ಕನಸು.

ಬಸವರಾಜ್‌ ಹೊಂಗಲ್ 

ಟಾಪ್ ನ್ಯೂಸ್

UV-Navaroopa

Manipal: ಗ್ರಾಮೀಣ ಓದುಗರ ಸ್ಪಂದನೆಯೇ ಯಶಸ್ಸು: ಎಂಡಿ, ಸಿಇಒ ವಿನೋದ್‌ ಕುಮಾರ್‌

uppunda1

Uppunda: ಶ್ರೀದುರ್ಗಾಪರಮೇಶ್ವರಿ ಅಮ್ಮನವರ ಸಂಭ್ರಮದ ಮನ್ಮಹಾರಥೋತ್ಸವ

Govinda-pai-Book

Udupi: ಗೋವಿಂದ ಪೈಗಳ ಸಂಶೋಧನ ಬರಹಗಳು ಸಮಗ್ರತೆಯ ಹೂರಣ: ಡಾ.ವಿವೇಕ್‌ ರೈ

DK SHI NEW

MLAs 50 ಕೋಟಿ ರೂ.; ಸಾಕ್ಷಿ ಕೊಡುವ ಹೊಣೆ ಯತ್ನಾಳ್‌ದು: ಡಿಕೆಶಿ

Patla-yakshadruva

Mangaluru: ಎಲ್ಲ ವರ್ಗದ ಜನರ ಸಹಕಾರದಿಂದ ಸಾಮಾಜಿಕ ಸಾಧನೆ: ಕನ್ಯಾನ ಸದಾಶಿವ ಶೆಟ್ಟಿ

Vijayendra (2)

Congress 40 ಪರ್ಸೆಂಟ್‌ ಕಮಿಷನ್‌ ಆರೋಪ ಸುಳ್ಳೆಂದು ಸಾಬೀತು: ಬಿಜೆಪಿ

police

Belgavi; ವೇಶ್ಯಾವಾಟಿಕೆ ಆರೋಪ: ತಾಯಿ, ಮಗಳನ್ನು ರಸ್ತೆಗೆ ಎಳೆದು ಹಲ್ಲೆ!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Santhosh-lad

Dharawad: ಬಿಜೆಪಿಯವರಿಗೆ ವಕ್ಫ್ ಬಿಟ್ಟು ಬೇರೆ ವಿಷಯವೇ ಇಲ್ಲ: ಸಚಿವ ಸಂತೋಷ್‌ ಲಾಡ್‌

Hubli: ವಿದ್ಯಾರ್ಥಿನಿಗೆ ಚುಡಾಯಿಸಿದ ಇಬ್ಬರು, ಸಹಕರಿಸಿದ ಮೂವರ ಬಂಧನ

Hubli: ವಿದ್ಯಾರ್ಥಿನಿಗೆ ಚುಡಾಯಿಸಿದ ಇಬ್ಬರು, ಸಹಕರಿಸಿದ ಮೂವರ ಬಂಧನ

KLE Technological University: Awarded Honorary Doctorate to Murugesh Nirani

KLE Technological University: ಮುರುಗೇಶ್‌ ನಿರಾಣಿ ಅವರಿಗೆ ಗೌರವ ಡಾಕ್ಟರೇಟ್ ಪ್ರದಾನ

5-

NABARD ನಿರ್ಧಾರದಿಂದ ಕೃಷಿಗೆ ಹಿನ್ನಡೆ; ಸಾಲದ ಮೊತ್ತ ಕಡಿತ ಮಾಡದಿರಲು ಸಚಿವ ಪಾಟೀಲ ಆಗ್ರಹ

4-

ಸಿಎಂ ಆಗಿದ್ದವರು ಈ‌ ರೀತಿ ಹೇಳಿಕೆ ನೀಡುವ ಬದಲು, ಸ್ಪಷ್ಟ ಹೇಳಿಕೆ ನೀಡಲಿ: ಸಚಿವ ಶಿವಾನಂದ

MUST WATCH

udayavani youtube

ಇಂಗ್ಲೀಷ್ ಒಂದು ಭಾಷೆ ಅನ್ನೋದೇ ತಪ್ಪು -ಪ್ರಕಾಶ್ ಬೆಳವಾಡಿ

udayavani youtube

ಕಾರಿನ ಟಯರ್ ಒಳಗಿತ್ತು ಬರೋಬ್ಬರಿ 50 ಲಕ್ಷ

udayavani youtube

ಹೊಸ ತಂತ್ರಜ್ಞಾನಕ್ಕೆ ತೆರೆದುಕೊಂಡ ತುಳುನಾಡ ಕಂಬಳ

udayavani youtube

ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಕಾರ್ತಿಕ ಲಕ್ಷದೀಪೋತ್ಸವ

udayavani youtube

ಪುಂಗನೂರು ತಳಿಯ ಹಾಲು ಯಾವೆಲ್ಲ ಕಾಯಿಲೆಗಳನ್ನು ಗುಣಪಡಿಸುತ್ತದೆ ?

ಹೊಸ ಸೇರ್ಪಡೆ

UV-Navaroopa

Manipal: ಗ್ರಾಮೀಣ ಓದುಗರ ಸ್ಪಂದನೆಯೇ ಯಶಸ್ಸು: ಎಂಡಿ, ಸಿಇಒ ವಿನೋದ್‌ ಕುಮಾರ್‌

puttige-4

Udupi; ಗೀತಾರ್ಥ ಚಿಂತನೆ 96 : ವ್ಯಾಮೋಹ ಜಾಲ vs ಜಾಗೃತಾತ್ಮ

uppunda1

Uppunda: ಶ್ರೀದುರ್ಗಾಪರಮೇಶ್ವರಿ ಅಮ್ಮನವರ ಸಂಭ್ರಮದ ಮನ್ಮಹಾರಥೋತ್ಸವ

Govinda-pai-Book

Udupi: ಗೋವಿಂದ ಪೈಗಳ ಸಂಶೋಧನ ಬರಹಗಳು ಸಮಗ್ರತೆಯ ಹೂರಣ: ಡಾ.ವಿವೇಕ್‌ ರೈ

DK SHI NEW

MLAs 50 ಕೋಟಿ ರೂ.; ಸಾಕ್ಷಿ ಕೊಡುವ ಹೊಣೆ ಯತ್ನಾಳ್‌ದು: ಡಿಕೆಶಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.