ಮನಸಿನ ದಾರಿ ಹುಡುಕುವ ವಿಡಿಯೋ ಆಲ್ಬಂ
Team Udayavani, Jun 11, 2018, 10:52 AM IST
ಒಂದು ಕಡೆ ಕಿರುಚಿತ್ರ ಮಾಡುವ ಟ್ರೆಂಡ್ ಜೋರಾಗಿ ನಡೆಯುತ್ತಿದ್ದರೆ, ಇನ್ನೊಂದು ಕಡೆ ವಿಡಿಯೋ ಆಲ್ಬಂ ಸಾಂಗ್ ಮಾಡುವವರ ಸಂಖ್ಯೆಯೂ ಹೆಚ್ಚುತ್ತಿದೆ. ಈ ಮೂಲಕ ಬಣ್ಣದ ಲೋಕದಲ್ಲಿ ಪುಟ್ಟ ಹೆಜ್ಜೆಗುರುತು ಮೂಡಿಸಲು ಪ್ರಯತ್ನಿಸುತ್ತಾರೆ. ಈಗ “ಮನಸ್ಸೆ ನಿನ್ನ ದಾರಿಯೂ ಎಲ್ಲಿಗೆ’ ಎಂಬ ವಿಡಿಯೋ ಆಲ್ಬಂವೊಂದು ತಯಾರಾಗಿದ್ದು, ಇತ್ತೀಚೆಗೆ ಬಿಡುಗಡೆಯಾಗಿದೆ. ಶರಣ್ ಚೌಧರಿ ಈ ಆಲ್ಬಂಗೆ ಸಂಗೀತ ನೀಡಿ, ನಿರ್ದೇಶ ಮಾಡಿದ್ದಾರೆ.
ಶರಣ್ ಮ್ಯೂಸಿಕ್ ಆಕಾಡೆಮಿ ನಡೆಸುತ್ತಿರುವ ಇವರು ಆ ಸಂಸ್ಥೆ ಮೂಲಕ ವಿಡಿಯೋ ಆಲ್ಬಂ ಮಾಡಿದ್ದಾರೆ. ಈ ಹಿಂದೆ “ಗೆಳೆತನ’ ಎಂಬ ಆಲ್ಬಂ ಮಾಡಿದ್ದ ಶರಣ ಈಗ “ಮನಸ್ಸೆ ನಿನ್ನ ದಾರಿಯೂ ಎಲ್ಲಿಗೆ’ ಆಲ್ಬಂ ಮಾಡಿ ಬಿಡುಗಡೆಗೊಳಿಸಿದ್ದಾರೆ. ಇದು ಕೇವಲ ಕನ್ನಡವಷ್ಟೇ ಅಲ್ಲದೇ, ಹಿಂದಿಯಲ್ಲೂ ತಯಾರಾಗಿದ್ದು, “ಹೇ ಮನ್ ಕಹಾ ಚಲಾ’ ಎಂಬ ಹೆಸರಿನಲ್ಲಿ ಬಿಡುಗಡೆಯಾಗಿದೆ.
ವಿಜಯ್ ವಿ ಅವರ ಸಾಹಿತ್ಯ ಈ ಆಲ್ಬಂಗಿದ್ದು, ಕನ್ನಡ, ಹಿಂದಿ ಎರಡೂ ವರ್ಶನ್‌ಗೂ ಅವರೇ ಸಾಹಿತ್ಯ ಬರೆದಿದ್ದಾರೆ. ಅನುರಾಧ ಭಟ್ ಹಾಗೂ ರುಮಿತ್ ಅವರ ಗಾಯನದಲ್ಲಿ ಈ ಆಲ್ಬಂ ಮೂಡಿಬಂದಿದೆ. ಇನ್ನು, ಗಾಯಕ ರುಮಿತ್ ಅವರೇ ತೆರೆಮೇಲೂ ಕಾಣಿಸಿಕೊಂಡಿದ್ದು, ಅವರಿಗೆ ಜೋಡಿಯಾಗಿ ಧನುಶ್ರೀ ಇದ್ದಾರೆ. “ಟಗರು ಬಂತು ಟಗರು’ ಹಾಡನ್ನು ನೃತ್ಯ ನಿರ್ದೇಶನ ಮಾಡಿರುವ ರಾಜು ಅವರು ಈ ಹಾಡಿಗೆ ನೃತ್ಯ ನಿರ್ದೇಶನ ಮಾಡಿದ್ದಾರೆ.
“ಶರಣ್ ಮ್ಯೂಸಿಕ್ ಅಕಾಡೆಮಿಯಿಂದ ಸಾಕಷ್ಟು ಕಾರ್ಯಗಳು ನಡೆಯುತ್ತಿದ್ದು, ಅದರಲ್ಲಿ ಈ ಆಲ್ಬಂ ಕೂಡಾ ಒಂದು. ಕನ್ನಡ ಹಾಗೂ ಹಿಂದಿಯಲ್ಲಿ ತಯಾರಾಗಿದ್ದು, ಈ ಮೂಲಕ ಹೆಚ್ಚು ಮಂದಿಗೆ ತಲುಪುತ್ತದೆ ಎಂಬ ವಿಶ್ವಾಸವಿದೆ’ ಎನ್ನುವುದು ಶರಣ್ ಚೌಧರಿಯವರ ಮಾತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kantara: Chapter 1: ‘ಕಾಂತಾರ’ ಸೆಟ್ ಗೆ ಮರಳಿದ ರಿಷಬ್; ಮೂರನೇ ಹಂತದ ಚಿತ್ರೀಕರಣ ಶುರು
Lawyer Jagadish: ಕೊಲೆ ಬೆದರಿಕೆ; ದರ್ಶನ್, ಅಭಿಮಾನಿ ಮೇಲೆ ದೂರು ದಾಖಲಿಸಿದ ಜಗದೀಶ್
BBK11: ಮಂಜು ಮ್ಯಾಚ್ ಫಿಕ್ಸಿಂಗ್ ಗೇಮ್: ಮೋಕ್ಷಿತಾ ,ಗೌತಮಿ ಜತೆ ಫ್ರೆಂಡ್ಸ್ ಶಿಪ್ ಬ್ರೇಕ್
Anthamthana Kannada Movie: ಶೂಟಿಂಗ್‌ನತ್ತ ಅಣ್ತಮ್ತನ
45 Movie: ಕರಾಟೆ ಗೊತ್ತುಂಟು, ಹತ್ತಿರ ಬಂದ್ರೆ ಜಾಗ್ರತೆ!
MUST WATCH
ಹೊಸ ಸೇರ್ಪಡೆ
Crime: ಶೀಲ ಶಂಕಿಸಿ ಪತ್ನಿ ಕತ್ತು ಸೀಳಿಆತ್ಮಹತ್ಯೆಗೆ ಯತ್ನಿಸಿದ ಪತಿ
Thalapathy 69: ರಿಲೀಸ್ ಗೂ ಮುನ್ನ ಕೋಟಿ ಕೋಟಿ ಕಮಾಯಿ ಮಾಡಿದ ವಿಜಯ್ ಕೊನೆಯ ಸಿನಿಮಾ
Kantara: Chapter 1: ‘ಕಾಂತಾರ’ ಸೆಟ್ ಗೆ ಮರಳಿದ ರಿಷಬ್; ಮೂರನೇ ಹಂತದ ಚಿತ್ರೀಕರಣ ಶುರು
Bengaluru; ಶೋಕಿಗಾಗಿ ಸರಗಳ್ಳತನ: 70 ಲಾರಿಗಳ ಮಾಲಿಕ ಸೆರೆ!!
Lokayukta ಕಚೇರಿಗೆ ಆಗಮಿಸಿದ ಸಿಎಂ ಸಿದ್ದರಾಮಯ್ಯ: ಬಿಜೆಪಿಯಿಂದ ಪ್ರತಿಭಟನೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.