ಎತ್ತಿನ ಬಂಡಿ ಸ್ಪರ್ಧೆಗೆ ಸಾಕ್ಷಿಯಾದ ಜನಸಮೂಹ
Team Udayavani, Jun 11, 2018, 11:13 AM IST
ವಿಜಯಪುರ: ನಗರದ ದರ್ಗಾ ಪ್ರದೇಶದಲ್ಲಿನ ಹಜರತ್ ಖ್ವಾಜಾ ಅಮೀನ್ ದರ್ಗಾದ ಉರುಸಿನ ಅಂಗವಾಗಿ ಜಾನಪದ ಗ್ರಾಮೀಣ ಕ್ರೀಡಾಕೂಟಕ್ಕಾಗಿ ಹಮ್ಮಿಕೊಂಡಿದ್ದ ರಾಷ್ಟ್ರ ಮಟ್ಟದ ಎತ್ತಿನಗಾಡಿ ಸ್ಪರ್ಧೆ ರೋಮಾಂಚನ ಮೂಡಿಸಿತು.
ರವಿವಾರ ನಗರದ ಸರ್ವಧರ್ಮ ಸಮನ್ವಯತೆ ಕೇಂದ್ರವಾಗಿರುವ ಹಜರತ್ ಖ್ವಾಜಾ ಅಮೀನ್ ದರ್ಗಾದ ಉತ್ಸವ ನಿಮಿತ್ತ ರಾಷ್ಟ್ರ ಮಟ್ಟದ ಎತ್ತಿನ ಗಾಡಿ ಓಟದ ಸ್ಪರ್ಧೆ ಆಯೋಜಿಸಲಾಗಿತ್ತು. ಹಜರತ್ ಖ್ವಾಜಾ ಅಮೀನ್ ದರ್ಗಾದ ಉರುಸಿನ ಅಂಗವಾಗಿ ಹಲವು ವರ್ಷಗಳಿಂದ ಗ್ರಾಮೀಣ ಸೊಗಡಿನ ಸಾಹಸ ಕ್ರೀಡೆಗಳನ್ನು ಆಯೋಜಿಸುತ್ತ ಬರಲಾಗುತ್ತದೆ. ಇದರ ಅಂಗವಾಗಿ ಪ್ರಸಕ್ತ ವರ್ಷ ರಾಷ್ಟ್ರ ಮಟ್ಟದ ಎತ್ತಿನಗಾಡಿ ಸ್ಪರ್ಧೆ ಆಯೋಜಿಸಲಾಗಿತ್ತು.
ಮಾಲೀಕನ ಮನೋಭಾವಕ್ಕೆ ತಕ್ಕಂತೆ ಎತ್ತುಗಳು ಬಂಡಿಗಳನ್ನು ಹೊತ್ತು ಓಡುತ್ತಿದ್ದ ದೃಶ್ಯ ನೆರೆದ ಜನರಲ್ಲಿ ರೋಮಾಂಚನ ಮೂಡಿಸುವಂತೆ ಮಾಡಿತ್ತು. ದರ್ಗಾ ಪ್ರದೇಶದ ರಿಂಗ್ ರಸ್ತೆಯಿಂದ ರೇಡಿಯೋ ಮೈದಾನದವರೆಗೆ ಬಂಡಿಯ ನೊಗೆ ಹೊತ್ತ ಜೋಡೆತ್ತುಗಳು ಓಡುತ್ತಲೇ ಇದ್ದವು.
ರಸ್ತೆಯ ಇಕ್ಕೆಲಗಳಲ್ಲಿ ನೆರೆದಿದ್ದ ಗ್ರಾಮೀಣ ಸಾಹಸ ಕ್ರೀಡಾಸಕ್ತರು ಚಪ್ಪಾಳೆ ಮೂಲಕ ಎತ್ತುಗಳನ್ನು ಹಾಗೂ ಚಕ್ಕಡಿಯಲ್ಲಿ ಕುಳಿತ ಸವಾರನ್ನು ಉತ್ತೇಜಿಸುವ ಕೆಲಸ ಮಾಡುತ್ತಿದ್ದರು. ಸದರಿ ಸ್ಪರ್ಧೆಯಲ್ಲಿ ಕರ್ನಾಟಕ ಮಾತ್ರವಲ್ಲದೇ ನೆರೆಯ ಮಹಾರಾಷ್ಟ್ರ, ತೆಲಂಗಾಣ, ಸೀಮಾಂಧ್ರ, ಗೋವಾ ರಾಜ್ಯಗಳ ಸುಮಾರು 60ಕ್ಕೂ ಹೆಚ್ಚು ಎತ್ತಿನ ಗಾಡಿ ಸ್ಪರ್ಧಿಗಳು ಭಾಗವಹಿಸಿದ್ದರು. ಸ್ಪರ್ಧೆಯನ್ನು ಮೂರು ಭಾಗಗಳಾಗಿ ವಿಂಗಡಿಸಲಾಗಿತ್ತು. ಪ್ರತಿ ವಿಭಾಗದ ಸ್ಪರ್ಧೆಯನ್ನೂ ಪ್ರತ್ಯೇಕವಾಗಿಯೇ ನಡೆಸಲಾಯಿತು.
ಒಂದು ಕುದುರೆ ಮತ್ತು ಎತ್ತುಗಳ ಜೊತೆಯಾಗಿ ಸ್ಪರ್ಧೆ, ಮಧ್ಯ ವಯಸ್ಸಿನ ಜೋಡಿ ಎತ್ತಿನ ಗಾಡಿ ಓಟದ ಸ್ಪರ್ಧೆ ಹಾಗೂ ಎರಡು ಮತ್ತು ನಾಲ್ಕು ಹಲ್ಲು ಹಚ್ಚಿದ ಎತ್ತುಗಳ ಓಟದ ಸ್ಪರ್ಧೆ ನಡೆಯಿತು. ಯುವ ಮುಖಂಡ ಜಾವೇದ್ ಜಮಾದಾರ ಸ್ಪರ್ಧೆಗೆ ಚಾಲನೆ ನೀಡಿದರು. ಗ್ರಾಮೀಣ ಕ್ರೀಡಾ ಸಾಹಸ ಸ್ಪರ್ಧೆ ಸಂಘಟಕ ಹಾಸಿಂಪೀರ್ ವಾಲೀಕಾರ ಮಾತನಾಡಿದರು. ನಬಿಲಾಲ್ ಕರ್ಜಗಿ, ಮುಖಂಡರಾದ ಜಹಾಂಗಿರ ಮಮದಾಪುರ, ಮೆಹಬೂಬ ಮಮದಾಪುರ,
ಅಪ್ಪುಗೌಡ ಪಾಟೀಲ, ಕಾಂತು ಹದನೂರ, ಬಸಪ್ಪ ಶೆಟಗಾರ, ಮಸ್ತಾನ್ ಯಾದಗಿರ, ಬಾಳು ಹದನೂರ ಇದ್ದರು.
13.25 ಲಕ್ಷ ರೂ. ಬಹುಮಾನ: ಒಂದು ಕುದುರೆ ಮತ್ತು ಎತ್ತುಗಳ ಜೊತೆಯಾಗಿ ಸ್ಪರ್ಧೆಯಲ್ಲಿ ಪಾಪಟ ಸಿಂಧೆ ಚಿಕ್ಕೋಡಿ ಪ್ರಥಮ ಬಹುಮಾನ ಒಂದು ಲಕ್ಷ ರೂ. ಗಿಟ್ಟಿಸಿಕೊಂಡರು. ನಿಪ್ಪಾಣಿಯ ಹೇಮಂತ ಹರಿರಾ 50 ಸಾವಿರ ರೂ. ಬಂದಾ ಕಿಲಾರಿ ಕೊಲ್ಹಾರ ತೃತೀಯ 25 ಸಾವಿರ ರೂ. ಬಹುಮಾನ ಪಡೆದುಕೊಂಡರು.
ಎರಡನೇಯದಾಗಿ ಮಧ್ಯವಯಸ್ಸಿನ ಜೋಡಿ ಎತ್ತಿನ ಸ್ಪರ್ಧೆಯಲ್ಲಿ ಶಂಕರ ಜೊಗನಿ ಪ್ರಥಮ ಸ್ಥಾನ ಪಡೆದು 2 ಲಕ್ಷ ರೂ. ನಗದು ಬಹುಮಾನ, ರಾಮದುರ್ಗದ ತಿಪ್ಪಣ್ಣ ಹುದ್ದಾರ ದ್ವಿತೀಯ ಬಹುಮಾನ ಪಡೆದು 1 ಲಕ್ಷ ರೂ. ಹಾಗೂ ಮುಸಾ ಮುಜಾವರ ಕೊಲ್ಹಾರ 50 ಸಾವಿರ ರೂ. ತೃತೀಯ ಬಹುಮಾನ ಗಿಟ್ಟಿಸಿದರು. ಮೂರನೆಯದಾಗಿ ಎರಡು ಮತ್ತು ನಾಲ್ಕು ಹಲ್ಲು ಹಚ್ಚಿದ ಎತ್ತುಗಳ ಓಟದಲ್ಲಿ ಪ್ರಥಮ ಬಹುಮಾನ ಬಂಡಾ ಸಿದ್ದೇವಾಡಿ ಮಿರಜ 5 ಲಕ್ಷ ರೂ. ಪಡೆದರು. ದ್ವಿತೀಯ ಬಹುಮಾನ ಸಾದಿಕ ಅಜರಾ ಕೊಲ್ಹಾಪುರ 2.50 ಲಕ್ಷ ರೂ. ಪಡೆದರು. ತೃತೀಯ ಬಹುಮಾನ ಅಪ್ಪುಗೌಡ ಪಾಟೀಲ, ಗೋವಿಂದಪುರ ಸಾಂಗ್ಲಿ 1.50 ಲಕ್ಷ ರೂ. ಪಡೆದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
By Election: ಮೂರು ಕ್ಷೇತ್ರದಲ್ಲೂ ಬಿಜೆಪಿ ಸೋತಿದ್ದಕ್ಕೆ ಟಿವಿಯನ್ನೇ ಒಡೆದು ಹಾಕಿದ ಮುಖಂಡ!
Vijayapura: 22 ಲಕ್ಷ ರೂ.ಮೌಲ್ಯದ ಗಾಂಜಾ ಜಪ್ತಿ, 2 ಕಾರು ವಶಕ್ಕೆ ಪಡೆದ ಪೊಲೀಸರು
Waqf Protest: 1974ರಿಂದ ಇದುವರೆಗೆ ಬಿಜೆಪಿ ಯಾಕೆ ಹೋರಾಟ ಮಾಡಿಲ್ಲ: ಎಂ.ಬಿ.ಪಾಟೀಲ್
Muddebihal: ತೆರೆದ ಬಾವಿಯಲ್ಲಿ ತಾಯಿ-ಮಗಳ ಶವ ಪತ್ತೆ
K.S.Eshwarappa;’ಕ್ರಾಂತಿವೀರ’ ಹೊಸ ಬ್ರಿಗೇಡ್ ಘೋಷಣೆ: ಫೆ.4ರಂದು ಉದ್ಘಾಟನೆ
MUST WATCH
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|
ಹೊಸ ಸೇರ್ಪಡೆ
Lakkundi: ಹೊಸದಾಗಿ 5 ಬಾವಿ, 5 ಶಾಸನಗಳು, ಸಾವಿರಕ್ಕೂ ಹೆಚ್ಚು ಶಿಲ್ಪಕಲೆಗಳ ಅನ್ವೇಷಣೆ
Madikeri: ಹಾಡಹಗಲೇ ಹಾರ್ಡ್ ವೇರ್ ಅಂಗಡಿಗೆ ನುಗ್ಗಿ ಒಂಟಿ ಮಹಿಳೆಯ ಸರಗಳ್ಳತನ
Commissioner: ಗೂಂಡಾ ವರ್ತನೆ ತೋರಿದರೆ ಕ್ರಮ; ಕಮಿಷನರ್ ಎಚ್ಚರಿಕೆ
ಪತ್ರಕರ್ತರಿಂದ…ಪತ್ರಕರ್ತರಿಗಾಗಿ… ಕಷ್ಟದಲ್ಲಿ ಕೈಹಿಡಿಯುವ ಆಪದ್ಭಾಂಧವ!
Someshwara: ಸಮುದ್ರಕ್ಕೆ ಹಾರಿದ ಯುವತಿಯ ರಕ್ಷಣೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.