ಉಚಿತ ಕರೆ ಹಿಂದಿನ ಸತ್ಯಗಳು ಹೀಗಿವೆ!
Team Udayavani, Jun 11, 2018, 11:43 AM IST
ನೆನಪಿರಲಿ, 1860ದಿಂದ ಆರಂಭವಾಗುವ ಕರೆಗಳನ್ನು ದೂರವಾಣಿ ಕ್ಷೇತ್ರದಲ್ಲಿ ಪ್ರೀಮಿಯಮ್ ಕರೆಗಳು ಎಂದೇ ಪರಿಗಣಿಸಲಾಗುತ್ತದೆ. ಐದಂಕಿಯ ನಂಬರ್‌ಗಳಿಗೆ ಮಾಡಿದಾಗ ಆಗುವ ವೆಚ್ಚದಂತೆ ಇಲ್ಲೂ ಕರೆ ಮಾಡಿದಾತನಿಗೇ ವೆಚ್ಚ. ಯಾವುದೇ ಉಚಿತ ಕರೆಗಳ ಎಸ್‌ಟಿ ಸ್ಪೆಷಲ್ ಟಾರಿಫ್ ವೋಚರ್ ಹಾಕಿದ್ದರೂ ಕೂಡ 1860ಗೆ ಮಾಡುವ ಕರೆಗೆ ಶುಲ್ಕ ಕಡಿತ ಗ್ಯಾರಂಟಿ.
ಗ್ರಾಹಕ ಸೇವೆಯ ಒಂದು ಭಾಗವಾಗಿ ವಿವಿಧ ಸೇವಾದಾತರು, ನಾನಾ ಉತ್ಪನ್ನಗಳ ತಯಾರಕರು, ಮಾಹಿತಿ ಕೇಂದ್ರಗಳು ದೂರವಾಣಿ ಬಳಕೆದಾರರಿಗೆ ಉಚಿತ ಕರೆ ಸೌಲಭ್ಯವನ್ನು ನೀಡುತ್ತಿದ್ದಾರೆ. ಭಾರತದಲ್ಲಿ ಅಚ್ಛೇ ದಿನ ಬಂದಿದೆ. ಸೇವಾ ಸರಕುಗಳನ್ನು ಮಾರಾಟ ಮಾಡುವವರು ವಂಚನೆ ರಹಿತ ವ್ಯಾಪಾರ ಮಾಡುತ್ತಾರೆ ಎಂದುಕೊಳ್ಳುವುದು ಸತ್ಯವಾದುದಾಗುವುದಿಲ್ಲ. ಈ ಕಾಲಘಟ್ಟದಲ್ಲಿ ಲೆಕ್ಕಾಚಾರಗಳು ಹೇಗಿವೆ ಎಂದರೆ, ಈ ರೀತಿಯ ಸೌಲಭ್ಯ ಕೊಡುತ್ತಿದ್ದೇವೆ ಎಂದು ಹೇಳಿಕೊಳ್ಳಲಾಗುತ್ತಿದೆ. ಅಷ್ಟೇ. ಆದರೆ ಅಂಥ ಯಾವುದೇ ಸೌಲಭ್ಯವನ್ನೂ ಕೊಡುವುದಿಲ್ಲ.
ಏನಿದು ಉಚಿತ ಕರೆ?
ಉಚಿತ ಕರೆಗಳು ಎಂಬ ಸ್ಲೋಗನ್ ನೋಡಿ ಪಿಗ್ಗಿ ಬೀಳುವುದನ್ನು ತಪ್ಪಿಸಿಕೊಳ್ಳಲು ಈ ಕುರಿತು ಆದಷ್ಟೂ ಮಾಹಿತಿ ಪಡೆಯುವುದು ಒಳ್ಳೆಯದು. ಉದಾಹರಣೆಗೆ, ಒಂದು ತಯಾರಕ ಕಂಪನಿ ಗ್ರಾಹಕ ಸೇವೆಗಾಗಿ ಒಂದು ದೂರವಾಣಿ ಸಂಖ್ಯೆಯನ್ನು ನಿರ್ದಿಷ್ಟವಾಗಿ ಇರಿಸಿ ಅದಕ್ಕೆ ಕರೆ ಮಾಡಲು ಹೇಳುತ್ತದೆ ಎಂದರೆ ಅದು ಭಿನ್ನ ಭಿನ್ನ ಸಂಖ್ಯೆಯಿಂದ ಆರಂಭವಾಗುವುದಿಲ್ಲ. ಭಾರತದಲ್ಲಿ ಅಂತಹ ಉಚಿತ ದೂರವಾಣಿ ಸಂಖ್ಯೆ 1800ದಿಂದ ಆರಂಭಿಸಿ ಮುಂದೆ 7 ಅಂಕಿಗಳಿರುತ್ತವೆ. ವಿಶ್ವದ ಬಹುಪಾಲು ದೇಶಗಳು ಈ ತರಹದ ನಿರ್ದಿಷ್ಟ ಸಂಖ್ಯೆಯಿಂದ ಆರಂಭವಾಗುವ ಉಚಿತ ಸಂಪರ್ಕ ದೂರವಾಣಿಯನ್ನೇ ಕಡ್ಡಾಯ ಮಾಡಿವೆ. ಅರ್ಜೆಂಟಿನಾ, ಆಸ್ಟ್ರಿಯಾ, ಬ್ರೆಜಿಲ್, ಬಲ್ಗೇರಿಯಾ, ಕ್ರೊಯೇಷಿಯಾ, ಈಜಿಪ್ಟ್, ಫ್ರಾನ್ಸ್ ಸೇರಿದಂತೆ ದೊಡ್ಡ ಸಂಖ್ಯೆಯ ದೇಶಗಳಲ್ಲಿ ಉಚಿತ ದೂರವಾಣಿ ಸಂಖ್ಯೆ ಆರಂಭವಾಗುವುದು 0800ದಿಂದ. ಭಾರತವಲ್ಲದೆ ಆಸ್ಟ್ರೇಲಿಯಾ, ಮಲೇಷಿಯಾ, ಪಿಲಿಫೈನ್ಸ್, ಸಿಂಗಾಪುರ್ ಮೊದಲಾದೆಡೆ 1800 ಎಂಬುದು, ಉಚಿತ ದೂರವಾಣಿಯ ಆರಂಭಿಕ ಸಂಖ್ಯೆ. ಅರ್ಮೇನಿಯಾದಲ್ಲಿ 800ರಿಂದ, ನೇಪಾಳದಲ್ಲಿ 1660, ಸ್ಪೇನ್‌ನಲ್ಲಿ 900, ಸ್ವೀಡನ್‌ನಲ್ಲಿ 020ದಿಂದ ಆರಂಭವಾಗುವ ಭಿನ್ನ ಉದಾಹರಣೆಗಳನ್ನೂ ಕೊಡಬಹುದು.
ಈ 1800 ಸಂಖ್ಯೆಯಿಂದ ಆರಂಭವಾಗುವ ನಂಬರಿಗೆ ಕರೆ ಮಾಡುವವರಿಗೆ ಉಚಿತ, ಕರೆ ಸ್ವೀಕರಿಸುವವರಿಗಲ್ಲ. ಇಲ್ಲಿನ ಪ್ರತಿ ಕರೆಗೆ ಸೇವಾದಾತನಿಗೆ ಕರೆ ಪಡೆಯುವ ಗ್ರಾಹಕ ಸೇವಾ ಶುಲ್ಕ ಪಾವತಿಸಬೇಕಾಗುತ್ತದೆ. ಈ ಕರೆ ಮಾಡುವಾತ ಎಲ್ಲಿಗೇ ಕರೆ ಮಾಡುವುದಿದ್ದರೂ ಎಸ್‌ಟಿಡಿ ಕೋಡ್ ಸೇರಿಸಬೇಕಾದ ಅಥವಾ +91 ಜೋಡಿಸುವ ಅಗತ್ಯವಿಲ್ಲ. ಸೇರಿಸುವುದರಿಂದ ಕರೆ ಕಾರ್ಯಗತವೂ ಆಗುವುದಿಲ್ಲ. ವಾಸ್ತವವಾಗಿ 1800ದಿಂದ ಆರಂಭವಾಗುವ ದೂರವಾಣಿ ಇರುವುದೇ ಇಲ್ಲ. ಒಂದು ಸೇವಾದಾತನ ನಿರ್ದಿಷ್ಟ ಫೋನ್ ಸಂಖ್ಯೆಗೆ, 1800 ಎಂಬ ಸಂಖ್ಯೆಗೆ ಮಾಡಿದ ಎಲ್ಲ ಕರೆಗಳನ್ನು ಆಟೋ ಫಾರ್ವರ್ಡ್ ಮಾಡಲಾಗುತ್ತದೆ. ಈ ಸೌಲಭ್ಯಕ್ಕೆ ಕರೆ ಸ್ವೀಕರಿಸುವವನಿಂದ ಶುಲ್ಕ ಪಡೆಯಲಾಗುತ್ತದೆ. ಇಪಿಬಿಎಕ್ಸ್, ಕೌÉಡ್ ಟೆಲಿಫೋನಿ ಮೊದಲಾದ ತಂತ್ರಜಾnನಗಳಿಂದ ಒಂದು 1800 ನಂಬರಿಗೆ ಒಂದಕ್ಕಿಂತ ಹೆಚ್ಚು ಲೈನ್‌ಗಳಿಂದ ಬರುವ ಕಾಲ್‌ಗಳನ್ನು ಒಮ್ಮೆಗೇ ಸ್ವೀಕರಿಸುವ ವ್ಯವಸ್ಥೆ ಮಾಡಬಹುದು. ಹೆಚ್ಚು ಕರೆಗಳನ್ನು ಒಮ್ಮೆಗೇ ಸ್ವೀಕರಿಸುವ ವ್ಯವಸ್ಥೆ ಮಾಡಿದಂತೆಲ್ಲ ಕರೆ ಸ್ವೀಕರಿಸುವವರು ಪಾವತಿಸಬೇಕಾದ ಬಿಲ್ ಹೆಚ್ಚಾಗುತ್ತದೆ. ಇದರಿಂದ ಹಲವು ವಿಷಯ ಸ್ಪಷ್ಟವಾಗುತ್ತದೆ. 1800ಗೆ ಕರೆ ಮಾಡಿದಾಗ ಅದು ಕಾರ್ಯನಿರತವಾಗಿದೆ ಎಂಬ ಸೂಚನೆ ಬಂದಿದೆ ಎಂದರೆ ಯಾರೋ ಒಬ್ಬರು ಆ ನಂಬರ್‌ಗೆ ಕರೆ ಮಾಡಿದರು ಎಂದಲ್ಲ. ಕರೆ ಸ್ವೀಕರಿಸುವವ ಹೊಂದಿದ ಲೈನ್‌ಗಳಿಗಿಂತ ಹೆಚ್ಚಿನ ಕರೆ ಬರುತ್ತಿದೆ ಎಂದರ್ಥ. ಪ್ರತಿ ಕರೆಯ ವೆಚ್ಚವನ್ನು ಕರೆ ಸ್ವೀಕರಿಸುವವ ತೆರಬೇಕಾಗಿರುವುದರಿಂದ ಆತ ಆದಷ್ಟೂ ಉಚಿತ ಕರೆಗಳು ಬರದಂತೆ ನೋಡಿಕೊಳ್ಳುತ್ತಾನೆ ಎಂಬುದನ್ನೂ ಈಗ ಅರಿತುಕೊಳ್ಳಬಹುದು!
1800 ಎಂಬ ಕಾಲ್ ಫಾರ್ವರ್ಡಿಂಗ್ ವ್ಯವಸ್ಥೆ
ಬಿಎಸ್‌ಎನ್‌ಎಲ್ ಮೂಲಕ ಈ ಕಾಲ್ ಫಾರ್ವರ್ಡಿಂಗ್ ಸೌಲಭ್ಯ ಪಡೆಯುವುದಾದರೆ 3 ಸಾವಿರ ರೂ. ಡಿಪಾಸಿಟ್, 10 ಸಾವಿರ ರೂ.ಗೆ ಕಡಿಮೆ ಇಲ್ಲದ ಎರಡು ತಿಂಗಳ ಬಿಲ್ ಅಡ್ವಾನ್ಸ್ ಸೇರಿಸಿ ನಿಗದಿತ ಅರ್ಜಿ ಸಲ್ಲಿಸಿದರೆ ಈ ಸೌಕರ್ಯಸಿಗುತ್ತದೆ. ಸ್ಥಿರ ದೂರವಾಣಿ, ಬಿಲ್‌ನಿಂದ ಮಾಡುವ ಕರೆಗೆ ವೃತ್ತದೊಳಗೆ 2 ನಿಮಿಷಕ್ಕೆ 1.20 ರೂ. ಇದ್ದರೆ, ಇತರರ ಕರೆಗೆ ನಿಮಿಷಕ್ಕೆ 1.20 ರೂ.ನಿಂದ 1.60 ರೂ.ವರೆಗೆ ಶುಲ್ಕ ತಗಲುತ್ತದೆ. ಮೊಬೈಲ್‌ನಿಂದ ಮಾಡುವ ಕರೆಗೆ ಸರಾಸರಿ ನಿಮಿಷಕ್ಕೆ 1.60 ರೂ. ತಗಲುತ್ತದೆ. ಮುಖ್ಯವಾಗಿ, ಬಿಲ್ ಮೊತ್ತ ಹೆಚ್ಚಾದಂತೆಲ್ಲ ಕೆಲವು ರಿಯಾಯಿತಿಗಳ ಸೌಲಭ್ಯ ಸಿಗಲಿದೆ. ಸ್ವಾರಸ್ಯ ಎಂದರೆ, ಈ ಸೌಲಭ್ಯದ ಬಗ್ಗೆ ಖುದ್ದು ಬಿಎಸ್‌ಎನ್‌ಎಲ್‌ನಿಂದ ಮಾಹಿತಿ ಪಡೆಯಲು ಉಚಿತ ದೂರವಾಣಿ ಸಂಖ್ಯೆ 1800-345-1800ಗೆ ಕರೆ ಮಾಡಬೇಕು!
ಈ ತರಹದ ಉಚಿತ 1800 ಸೌಲಭ್ಯವನ್ನು ಕಂಪನಿಗಳಿಗೆ ಇತರ ಸೇವಾದಾತರೂ ನೀಡುತ್ತಾರೆ. ಕೆಲವು ಟೆಲಿಕಾಂ ಫ್ರಾಂಚೈಸಿಗಳು ಇದಕ್ಕೆ ಆಫರ್ ಪ್ಯಾಕೇಜ್‌ಅನ್ನೂ ನೀಡುತ್ತವೆ. ಎಷ್ಟೋ ವ್ಯಾಪಾರಿ ಕಂಪನಿಗಳು ತಮ್ಮ ವಹಿವಾಟನ್ನು ಹೆಚ್ಚಿಸುವ ಒಂದು ಆಕರ್ಷಣೆಯಾಗಿ ಉಚಿತ ದೂರವಾಣಿ ಸಂಖ್ಯೆಗಳನ್ನು ಒದಗಿಸುತ್ತವೆ. ಆದರೆ ಭಾರತದ ಕಥೆಯಲ್ಲಿ ಮತ್ತೆ ವಂಚನೆಯ ಸೋಂಕು ತಗುಲಿರುವುದನ್ನು ಕಾಣುತ್ತೇವೆ. ಕಾನೂನಿನ ಅಗತ್ಯ ಪೂರೈಸಲು ಉಚಿತ ದೂರವಾಣಿ ಸೌಲಭ್ಯವನ್ನು ಅಳವಡಿಸಿಕೊಳ್ಳುವ ಇಂತಹವರು ಒಂದೋ ಈ ದೂರವಾಣಿ ಇದೆ ಎಂದು ಪ್ರಚಾರವನ್ನೇ ಕೊಡುವುದಿಲ್ಲ. ಇನ್ನೊಂದು ಮಾದರಿಯ ಉದ್ಯಮದ ಜನ, ಉಚಿತವೇನೋ ಎಂಬಂತೆ ಕಾಣುವ 1860ದಿಂದ ಆರಂಭವಾಗುವ ಗ್ರಾಹಕ ಸೇವಾ ಕೇಂದ್ರದ ಸಂಖ್ಯೆಯನ್ನು ಪರಿಚಯಿಸುತ್ತಾರೆ.
ಭಾರತದ ಜಾಯಮಾನದಲ್ಲಿಯೇ ಇಂತಹ ವಂಚನೆಯ, ರಂಗೋಲಿ ಕೆಳಗೆ ನುಸುಳುವ ಪ್ರವೃತ್ತಿ ಹಾಸುಹೊಕ್ಕಾಗಿದೆ. ಡಿಷ್ ಟಿವಿ ಒಂದು ಮಾಡೆಲ್ ಅಷ್ಟೇ. ಟಾಟಾ ಡೊಕೋಮೊ ಕರೆ ಸಂಖ್ಯೆ 1860-266-5555, ಉಚಿತಕ್ಕೆ ಗಿಟ್ಟಿಸಿದರೆ 1800-266-121, ಬ್ಲೂ ಡಾರ್ಟ್ ಕೊರಿಯರ್‌ನ 1860-233-1234, ಇಂಡುಸ್ ಲ್ಯಾಂಡ್ ಬ್ಯಾಂಕ್, ಹೆಚ್‌ಎಸ್‌ಬಿಸಿ ಕ್ರೆಡಿಟ್ ಕಾರ್ಡ್ ಗ್ರಾಹಕ ವಾಣಿ, ಪೇಟಿಎಂ, ಸಿಟಿ ಬ್ಯಾಂಕ್ ಕ್ರೆಡಿಟ್ ಕಾರ್ಡ್…. ಇಂತಹ ನೂರು ಕಂಪನಿಗಳ 1860 ಗ್ರಾಹಕ ಸೇವಾ ಕೇಂದ್ರದ ನಂಬರ್‌ಗಳನ್ನು ಕೊಡಬಹುದು.
ನೆನಪಿರಲಿ, 1860ದಿಂದ ಆರಂಭವಾಗುವ ಕರೆಗಳನ್ನು ದೂರವಾಣಿ ಕ್ಷೇತ್ರದಲ್ಲಿ ಪ್ರೀಮಿಯಮ್ ಕರೆಗಳು ಎಂದೇ ಪರಿಗಣಿಸಲಾಗುತ್ತದೆ. ಐದಂಕಿಯ ನಂಬರ್‌ಗಳಿಗೆ ಮಾಡಿದಾಗ ಆಗುವ ವೆಚ್ಚದಂತೆ ಇಲ್ಲೂ ಕರೆ ಮಾಡಿದಾತನಿಗೇ ವೆಚ್ಚ. ಯಾವುದೇ ಉಚಿತ ಕರೆಗಳ ಎಸ್‌ಟಿ ಸ್ಪೆಷಲ್ ಟಾರಿಫ್ ವೋಚರ್ ಹಾಕಿದ್ದರೂ ಕೂಡ 1860ಗೆ ಮಾಡುವ ಕರೆಗೆ ಶುಲ್ಕ ಕಡಿತ ಗ್ಯಾರಂಟಿ.
ಒಂದನ್ನಂತೂ ಅರ್ಥ ಮಾಡಿಕೊಳ್ಳಬಹುದು. 1800 ಬದಲು 1860 ಗ್ರಾಹಕ ಸೇವಾ ನಂಬರ್‌ನ್ನು ಪ್ರಚಾರ ಮಾಡುವ ಕಂಪನಿಯ ಗ್ರಾಹಕ ಸೇವಾ ಗುಣಮಟ್ಟ ಯಾವತ್ತಿಗೂ ಪ್ರಶ್ನಾರ್ಹ. ಅಂತಹ ಕಂಪನಿಗಳನ್ನು ಆಯ್ಕೆ ಮಾಡಿಕೊಳ್ಳುವ ಮುನ್ನ ನೂರು ಬಾರಿ ಯೋಚಿಸಿ. ಇಂತಹ ಕಂಪನಿಗಳ ಸೇವೆ, ತಯಾರಿಕೆಗಳನ್ನು ನಾವು ಖರೀದಿಸುವುದಿಲ್ಲ ಎಂದು ಭಾರತದ ಗ್ರಾಹಕ ತೀರ್ಮಾನಿಸಿದರೆ ಈ ಹಗಲು ದರೋಡೆಯ ತಂತ್ರಕ್ಕೆ ಕೊನೆ ಬೀಳುತ್ತದೆ.
1860ಗೆ ಶುಲ್ಕವಿದೆ, ನೆನಪಿರಲಿ!
1860 ಕೂಡ ಕರೆ ನಿರ್ದಿಷ್ಟ ದೂರವಾಣಿ ಸಂಖ್ಯೆಗೆ ವರ್ಗಾವಣೆಗೊಳ್ಳುವ ಒಂದು ವ್ಯವಸ್ಥೆ. ಇಲ್ಲಿ ಒಂದು ಕರೆಗೆ ಕರೆ ಮಾಡಿದಾತನ ಖಾತೆಯಿಂದಲೇ ಹಣ ಕಡಿತಗೊಳ್ಳುತ್ತದೆ. ಉಚಿತ ಅಲ್ಲ. ಪ್ರತಿ ನಿಮಿಷಕ್ಕೆ ಒಂದು ರೂ.ನ ದರ. ಭಾರತದಾದ್ಯಂತ ಈ ದರ ಎಲ್ಲಿಂದ ಎಲ್ಲಿಗೆ ಮಾಡಿದರೂ ಅನ್ವಯಿಸುತ್ತದೆ. ಒಂದು ಉದಾಹರಣೆ ನೋಡಿ. ದೂರವಾಣಿ ನಿಯಂತ್ರಣ ಪ್ರಾಧಿಕಾರದ (ಟ್ರಾಯ್) ಪ್ರಕಾರ, ಪ್ರತಿಯೊಬ್ಬ ಡಿಟಿಎಚ್ ಸೇವಾದಾತರೂ ತಮ್ಮ ಗ್ರಾಹಕರಿಗೆ ಉಚಿತ ಗ್ರಾಹಕ ಸೇವಾ ಸಂಖ್ಯೆಯನ್ನು ನೀಡಬೇಕು. ಈ ಕ್ಷೇತ್ರದ ದೊಡ್ಡಣ್ಣ ಡಿಷ್ ಟಿವಿಯ ಪರದೆಯ ಮೇಲೆ ಗಮನಿಸಿ, ಯಾವುದೇ ಸಮಸ್ಯೆಗೆ ಅಲ್ಲಿ ಕೊಟ್ಟಿರುವ ಸೂಚನೆ ಪ್ರಕಾರ 1860-258-3474ಗೆ ಕರೆ ಮಾಡಬೇಕು. ಗೂಗಲ್‌ನಲ್ಲಿ ಡಿಷ್ ಟಿವಿ ಕಸ್ಟಮರ್ ಕೇರ್ ನಂಬರ್ ಎಂದು ಟೈಪಿಸಿದರೂ ಇದೇ ಉತ್ತರ ಬರುತ್ತದೆ. ಹಾಗಂತ ನೀವು ಏಕೆ ಟ್ರಾಯ್ ಸೂಚನೆಯಂತೆ ಉಚಿತ ದೂರವಾಣಿ ನಂಬರ್ ಕೊಟ್ಟಿಲ್ಲ ಎಂದು ಗಟ್ಟಿಯಾಗಿ ಕೇಳಿ ನೋಡಿ, ಆಗವರು ಹೇಳುತ್ತಾರೆ. ಇದೆಲ್ಲ ಉಚಿತ ದೂರವಾಣಿ ಸಂಖ್ಯೆ 1800-258-3474!
-ಮಾ.ವೆಂ.ಸ.ಪ್ರಸಾದ್, ದತ್ತಿ ನಿರ್ದೇಶಕರು, ಬಳಕೆದಾರರ ವೇದಿಕೆ, ಸಾಗರ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
T20 series: ಪಾಕಿಸ್ಥಾನಕ್ಕೆ ವೈಟ್‌ವಾಶ್ ಟಿ20: ಆಸ್ಟ್ರೇಲಿಯ 3-0 ಜಯಭೇರಿ
Bidar: ದೇಶದ ಆರ್ಥಿಕತೆಗೆ ‘ಸಹಕಾರʼದ ಕೊಡುಗೆ ಶ್ರೇಷ್ಠ: ಸಚಿವ ಈಶ್ವರ ಖಂಡ್ರೆ
BGT 2024: ಐಪಿಎಲ್ ಹರಾಜಿನ ಕಾರಣಕ್ಕೆ ತಂಡ ತೊರೆದ ಆಸ್ಟ್ರೇಲಿಯಾದ ಸಹಾಯಕ ಕೋಚ್!
Manipal: ಆರ್ಯಭಟ ಪ್ರಶಸ್ತಿ ಪುರಸ್ಕೃತ, ಯಕ್ಷಗಾನ ಕಲಾವಿದ ಚೇರ್ಕಾಡಿ ಕಮಲಾಕ್ಷ ಪ್ರಭು ನಿಧನ
Hosanagar: ಶೈಕ್ಷಣಿಕ ಪ್ರವಾಸಕ್ಕೆ ತೆರಳುತ್ತಿದ್ದ ಬಸ್ ಅಪಘಾತ: 29 ಮಂದಿಗೆ ಗಾಯ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.