ನಿಮ್ಮಲ್ಲಿ 1 ಲಕ್ಷ ಇದೆ;ವರ್ಷದ ಮಟ್ಟಿಗೆ ಲಾಭ ಬರಲು ಇಲ್ಲಿಟ್ರೆ ಬೆಸ್ಟ್
Team Udayavani, Jun 11, 2018, 12:03 PM IST
ನಮ್ಮಲ್ಲೀಗ ಒಂದು ಲಕ್ಷ ರೂ. ನಗದು ಹಣ ಇದೆ ಎನ್ನೋಣ. ಒಂದು ವರ್ಷ ಅಥವಾ ಅದಕ್ಕಿಂತ ಕಡಿಮೆಯ ಅವಧಿಗೆ ಅದನ್ನು ಎಲ್ಲಿ ಇಟ್ಟರೆ ಹೆಚ್ಚು ಲಾಭ ಎಂಬ ಪ್ರಶ್ನೆ ನಮ್ಮನ್ನು ಕಾಡುವುದು ಸಹಜವೇ. ಅದಕ್ಕೆ ಉತ್ತರ ಇಲ್ಲಿದೆ.
ಹನಿ ಕೂಡಿ ಹಳ್ಳ ತೆನೆ ಕೂಡಿ ಕಣಜ ಎಂಬ ಮಾತಿಗೆ ಅನುಗುಣವಾಗಿ ಬದುಕಿನಲ್ಲಿ ಉಳಿತಾಯಕ್ಕೆ ಪ್ರಾಧಾನ್ಯ ನೀಡುವ ಬುದ್ಧಿವಂತ ಮತ್ತು ದೂರದೃಷ್ಟಿಯ ಹಲವರಲ್ಲಿ ಸಹಜವಾಗಿಯೇ ಉಳಿಸಿದ ಹಣ ಬೆಳೆಯುತ್ತಿರುತ್ತದೆ. ಆದರೆ ಹೀಗೆ ಉಳಿಸಿದ ಹಣ ಒಂದು ಲಕ್ಷ ರೂಪಾಯಿ ಆದಾಗ ಅದನ್ನು 1 ವರ್ಷಕ್ಕಿಂತ ಕಡಿಮೆ ಅವಧಿಗೆ ಲಾಭದಾಯಕವಾಗಿ ಎಲ್ಲಿ ಇಡೋಣ ಎಂಬ ಪ್ರಶ್ನೆ ನಮ್ಮನ್ನು ಕಾಡುತ್ತದೆ. ಏಕೆಂದರೆ 1 ಲಕ್ಷ ರೂ.ಗಳನ್ನು ಹಾಗೆಯೇ ಎಸ್ ಬಿ (ಉಳಿತಾಯ) ಖಾತೆಯಲ್ಲಿ ಇರಿಸಿದರೆ ಸಿಗುವ ಬಡ್ಡಿ ಕೇವಲ ಶೇ.ನಾಲ್ಕು. ಅಂತಿರುವಾಗ ಇದಕ್ಕಿಂತ ಹೆಚ್ಚಿನ ಬಡ್ಡಿಗೆ, ಆದರೆ ನೆನಪಿಡಿ – ಸುರಕ್ಷಿತವಾಗಿ, ಎಲ್ಲಿ ಇರಿಸೋಣ ಎಂಬುದನ್ನು ನಾವು ತಿಳಿಯಬೇಕಾಗುತ್ತದೆ.
1. ಬ್ಯಾಂಕ್ ನಿರಖು ಠೇವಣಿ : ಒಂದು ವರ್ಷ ಅಥವಾ ಅದಕ್ಕಿಂತ ಕಡಿಮೆ ಅವಧಿಗೆ ಉಳಿತಾಯದ ಹಣವನ್ನು ಲಾಭದಾಯಕವಾಗಿ ಇರಿಸುವುದಕ್ಕೆ ಬ್ಯಾಂಕ್ ಎಫ್ ಡಿ ಸೂಕ್ತ. ಡೆಪಾಸಿಟ್ ಇನುÏರೆನ್ಸ್ ಆ್ಯಂಡ್ ಕ್ರೆಡಿಟ್ ಗ್ಯಾರಂಟಿ ಕಾರ್ಪೊರೇಶನ್ (ಡಿಐಸಿಜಿಸಿ) ನಿಯಮದಡಿ 1 ಲಕ್ಷ ರೂ. ವರೆಗಿನ ಠೇವಣಿಯ ಅಸಲು ಮತ್ತು ಬಡ್ಡಿಗೆ ವಿಮೆ ಸೌಕರ್ಯ ಇದೆ. ಬ್ಯಾಂಕ್ ಠೇವಣಿಗಳನ್ನು 6, 9, 12 ತಿಂಗಳು ಅಥವಾ ಅದಕ್ಕೂ ಮೀರಿದ ಅವಧಿಗೆ ಇಡಬಹುದಾಗಿದೆ. ಹೆಚ್ಚಿನ ಅವಧಿಗೆ ಠೇವಣಿ ಇಟ್ಟರೆ ಬಡ್ಡಿ ಪ್ರಮಾಣ ಕಡಿಮೆ ಇರುವುದನ್ನು ಕೂಡ ನಾವು ಗಮನಿಸಬೇಕಾಗುತ್ತದೆ !
ಬ್ಯಾಂಕ್ ಠೇವಣಿ ಮೇಲಿನ ಬಡ್ಡಿಯನ್ನು ಮಾಸಿಕ, ತ್ತೈಮಾಸಿಕ, ಅರ್ಧ ವಾರ್ಷಿಕ ಮತ್ತು ವಾರ್ಷಿಕ ನೆಲೆಯಲ್ಲಿ ಅಥವಾ ಚಕ್ರಬಡ್ಡಿ ಆಯ್ಕೆಯಲ್ಲಿ ಪಡೆಯಬಹುದಾಗಿದೆ. 1ರಿಂದ 2 ವರ್ಷದ ಅವಧಿಯ ಠೇವಣಿಗೆ ಈಗ ವಾರ್ಷಿಕ ಶೇ.7.25 ಬಡ್ಡಿ ಇದೆ; ಹಿರಿಯ ನಾಗರಿಕರಿಗೆ ಶೇ.0.5ರಷ್ಟು ಹೆಚ್ಚು ಬಡ್ಡಿ ಸಿಗುತ್ತದೆ.
ಮಾಗಿದ ಠೇವಣಿಗಳನ್ನು ನವೀಕರಿಸಬಹುದು; ಹಿಂಪಡೆಯಬಹುದು. ಆದರೆ ಠೇವಣಿ ಮೇಲಿನ ಬಡ್ಡಿಯು ನಮ್ಮ ಆದಾಯಕ್ಕೆ ಸೇರುತ್ತದೆ ಮತ್ತು ಅದು ನಮ್ಮ ತೆರಿಗೆ ಸ್ಲಾಬ್ಗ ಅನುಗುಣವಾಗಿ ತೆರಿಗೆಗೆ ಒಳಪಡುತ್ತದೆ.
ಪೋಸ್ಟ್ ಆಫೀಸ್ ಅವಧಿ ಠೇವಣಿಗಳು : ಇವುಗಳು 1, 2, 3, ಮತ್ತು 5 ವರ್ಷಗಳದ್ದಾಗಿರುತ್ತವೆ. ಕಿರು ಅವಧಿಯ ಉದ್ದೇಶಕ್ಕಾದರೆ ಒಂದು ವರ್ಷದ ಅವಧಿಯನ್ನು ಆಯ್ಕೆ ಮಾಡಬಹುದು. ಒಂದು ವರ್ಷದ ಅವಧಿಯ ಠೇವಣಿಯ ಮೇಲೆ ವಾರ್ಷಿಕ ಬಡ್ಡಿ ನೀಡಲಾಗುತ್ತದೆ; ಹಾಗಿದ್ದರೂ ಇದನ್ನು ತ್ತೈಮಾಸಿಕವಾಗಿ ಲೆಕ್ಕ ಹಾಕಲಾಗುತ್ತದೆ.
ಅತ್ಯಂತ ಸುರಕ್ಷಿತವಾಗಿರುವ ಕಾರಣಕ್ಕೆ ನಾವು ಪೋಸ್ಟ್ ಆಫೀಸ್ ಠೇವಣಿಗಳ ಬಗ್ಗೆ ಮತ್ತು ಅವುಗಳಿಗೆ ಸಿಗುವ ಬಡ್ಡಿ ಪ್ರಮಾಣವನ್ನು ತಿಳಿಯುವುದು ಅಗತ್ಯ. ಒಂದು ವರ್ಷದ ಪೋಸ್ಟ್ ಆಫೀಸ್ ಠೇವಣಿಗೆ ಶೇ.6.6, ಎರಡು ವರ್ಷದ ಠೇವಣಿಗೆ ಶೇ.6.7, ಮೂರು ವರ್ಷದ ಠೇವಣಿಗೆ ಶೇ.6.9 ಮತ್ತು ಐದು ವರ್ಷಗಳ ಠೇವಣಿಗೆ ಶೇ.7.4 ದರದಲ್ಲಿ ಪ್ರಕೃತ ಬಡ್ಡಿ ಇದೆ. ಬಡ್ಡಿಯನ್ನು ತ್ತೈಮಾಸಿಕ ನೆಲೆಯಲ್ಲಿ ಲೆಕ್ಕ ಹಾಕಲಾಗುತ್ತದೆ. ಯಾವುದೇ ಮೊತ್ತದ ಠೇವಣಿಗೆ ಇಲ್ಲಿ ಅವಕಾಶವಿದೆ.
ಹಿರಿಯ ನಾಗರಿಕರಿಗೆ ಅತ್ಯಂತ ಸುಭದ್ರವೆನಿಸುವ ಪೋಸ್ಟ್ ಆಫೀಸ್ ಸೀನಿಯರ್ ಸಿಟಿಜನ್ಸ್ ಅಕೌಂಟ್ನಲ್ಲಿ ಗರಿಷ್ಠ 15 ಲಕ್ಷ ರೂ. ಇಡಬಹುದು; ಬಡ್ಡಿ ದರ ಶೇ.8.30 ಇದೆ. ಸೆ.80ಸಿ ಅಡಿ ತೆರಿಗೆ ರಿಯಾಯಿತಿ ಸೌಕರ್ಯವೂ ಇದೆ.
ಪೋಸ್ಟ್ ಆಫೀಸ್ನ ಐದು ವರ್ಷ ಅವಧಿಯ ಎಂ ಐ ಎಸ್ (ಮಂತ್ಲೀ ಇಂಟರೆಸ್ಟ್ ಸ್ಕೀಮ್) ನಲ್ಲಿ ಜಂಟಿ ಹೆಸರಲ್ಲಿ 9 ಲಕ್ಷ ರೂ. ಠೇವಣಿ ಇಡುವುದಕ್ಕೆ ಅವಕಾಶವಿದೆ; ಒಂಟಿ ಹೆಸರಲ್ಲಾದರೆ ಗರಿಷ್ಠ 4.5 ಲಕ್ಷ ರೂ. ಇಡಬಹುದು. ತಿಂಗಳು-ತಿಂಗಳು ಬಡ್ಡಿ ಪಡೆಯುವುದು ಬೇಕಾಗಿಲ್ಲವೆಂದರೆ ಈ ಠೇವಣಿ ಆರಂಭಿಸಿದೊಡನೆಯೇ ಇದರ ಬಡ್ಡಿಗೆ ಅನುಗುಣವಾಗಿ ಐದು ವರ್ಷದ ಒಂದು ಆರ್ ಡಿ (ರಿಕರಿಂಗ್ ಡೆಪಾಸಿಟ್) ಓಪನ್ ಮಾಡಿದರೆ ಐದು ವರ್ಷ ಮುಗಿದಾಗ ಅತ್ತ ಠೇವಣಿ ಮೊತ್ತ ಮತ್ತು ಇತ್ತ ಆರ್ ಡಿ ಮೆಚ್ಯುರಿಟಿ ಮೊಡ್ಡ ಸೇರಿ ಉಳಿತಾಯದ ಗಂಟು ಬಹಳಷ್ಟು ದೊಡ್ಡದಾಗುವುದನ್ನು ಕಾಣಬಹುದು – ಇದೇನೂ ಮ್ಯಾಜಿಕ್ ಅಲ್ಲ; ವಾಸ್ತವ !
ಪಿಪಿಎಫ್, ಕಿಸಾನ್ ವಿಕಾಸ್ ಪತ್ರ, ಸುಕನ್ಯಾ ಸಮೃದ್ಧಿ
ಸೆ.80ರ ಅಡಿ ತೆರಿಗೆ ವಿನಾಯಿತಿ ಸೌಕರ್ಯದೊಂದಿಗೆ ಆತ್ಯಾಕರ್ಷಕ ಹಣ ಹೂಡಿಕೆಗೆ 20 ವರ್ಷ ಅವಧಿಯ ಪಿಪಿಎಫ್ (ಪಬ್ಲಿಕ್ ಪ್ರಾವಿಡೆಂಟ್ ಫಂಡ್ ಖಾತೆ) ಆರಂಭಿಸಬಹುದು.ಇದರ ಮೇಲಿನ ಬಡ್ಡಿ ಶೇ.7.6ರ ಪ್ರಮಾಣದಲ್ಲಿದೆ.
ಕಿಸಾನ್ ವಿಕಾಸ್ ಪತ್ರದಲ್ಲಿ ಹಣ ಇಟ್ಟರೆ ವರ್ಷಕ್ಕೆ ಶೇ.7.3ರ ಬಡ್ಡಿ ಇದೆ. ಮಕ್ಕಳ ಶ್ರೇಯೋಭಿವೃದ್ಧಿಗಾಗಿರುವ ಸುಕನ್ಯಾ ಸಮೃದ್ಧಿ ಖಾತೆಯನ್ನು ತೆರೆದರೆ ಅದರಲ್ಲಿ ಇರಿಸುವ ಹಣಕ್ಕೆ ಶೇ.8.10 ಬಡ್ಡಿ ಇದೆ.
ಪಿಪಿಎಫ್, ಕೆವಿಪಿ, ಸುಕನ್ಯಾ ಖಾತೆಗೆ ಸಂಬಂಧಿಸಿ ವಾರ್ಷಿಕ ನೆಲೆಯಲ್ಲಿ ಬಡ್ಡಿಯನ್ನು ಲೆಕ್ಕ ಹಾಕಲಾಗುತ್ತದೆ.
ಇದೇ ವೇಳೆ ಇನ್ನೊಂದು ವಿಷಯವನ್ನು ಹೇಳಲೇಬೇಕು : ಒಂದು ವರ್ಷದ ಬಳಿಕದಲ್ಲಿ ಯಾವುದೋ ಒಂದು ನಿರ್ದಿಷ್ಟ ಉದ್ದೇಶಕ್ಕೆ ಒಂದು ನಿರ್ದಿಷ್ಟ ಮೊತ್ತದ ಹಣದ ಗಂಟು ನಿಮಗೇ ಬೇಕೇ ಬೇಕು ಎಂದು ಅನ್ನಿಸಿದಲ್ಲಿ ಈಗಿಂದೀಗಲೇ ಯಾವುದೇ ಬ್ಯಾಂಕಿನಲ್ಲಿ ಆನ್ಲೈನ್ ಮೂಲಕ ಒಂದು ಆರ್ ಡಿ ಓಪನ್ ಮಾಡಿ.
ಉಳಿತಾಯದ ಶಿಸ್ತನ್ನು ರೂಢಿಸಿಕೊಳ್ಳುವುದರೊಂದಿಗೆ ನಿರ್ದಿಷ್ಟ ಉದ್ದೇಶದ ಸಾಧನೆ ಸುಲಭವಾಗುತ್ತದೆ. ಒಂದು ವರ್ಷದ ಬಳಿಕ ಕೈವಶವಾಗುವ ಈ ಉಳಿತಾಯದ ಗಂಟನ್ನು ಅತ್ಯಂತ ಸಮರ್ಪಕ ಉದ್ದೇಶಕ್ಕೆ ಬಳಸುವ ಆಯ್ಕೆ ನಿಮ್ಮದಾಗಿರುತ್ತದೆ. ಆದುದರಿಂದ ಸಾಲದ ಹಣದಿಂದ ಈಡೇರಿಸಿಕೊಳ್ಳಬೇಕೆಂದಿದ್ದ ಯಾವುದೋ ಒಂದು ನಿರ್ದಿಷ್ಟ ಉದ್ದೇಶವನ್ನು ಒಂದು ವರ್ಷದ ಮಟ್ಟಿಗೆ ಪೋಸ್ಟ್ ಪೋನ್ ಮಾಡಿ; ಆ ಮೂಲಕ ಸಾಲವನ್ನು ತಪ್ಪಿಸಿ; ಉಳಿತಾಯದ ಬಲದಲ್ಲೇ ನಿಮ್ಮ ಉದ್ದೇಶ ಸಾಧಿತವಾಗುವ ಸಂತಸವನ್ನು ಎಂಜಾಯ್ ಮಾಡಿ !
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kambala ಓಟಕ್ಕೆ ಹೈಟೆಕ್ ಸ್ಪರ್ಶ; ಗೇಟ್ ತೆರೆದ ಕೂಡಲೇ ಓಟ ಶುರು; ಇಲ್ಲಿದೆ ಸಮಗ್ರ ಮಾಹಿತಿ
JioSpace Fiber: ಭಾರತದಲ್ಲಿ ಮತ್ತೊಂದು ಇಂಟರ್ನೆಟ್ ಕ್ರಾಂತಿಗೆ ಜಿಯೋ ಮುನ್ನುಡಿ… ಏನಿದು.?
“ಈ ಕಾಯಿಲೆ” ಇರುವವರು ಅರಿಶಿನ ಹಾಕಿದ ಹಾಲು ಸೇವಿಸಬಾರದು…
ನೀವು ಮುಖಕ್ಕೆ ಅರಿಶಿನ ಹಚ್ತೀರಾ..? ಹಾಗಾದ್ರೆ ಈ ತಪ್ಪುಗಳನ್ನು ಮಾಡಿರೋದು ಪಕ್ಕಾ!
ಒಂದು ಜಾಹೀರಾತು ದೇಶಕ್ಕೆ ಬೆಂಕಿ ಹಚ್ಚಿತ್ತು.. ಏನಿದು ಪೆಪ್ಸಿಯ ನಂಬರ್ ಫೀವರ್
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Congress: ಗ್ಯಾರಂಟಿಗಳ ಹಿಂಭಾರ, ಮುಂಭಾರ ಹೆಚ್ಚಾಗಿ ಮುಗ್ಗರಿಸುತ್ತಿದೆ ಸರಕಾರ: ಸಿ.ಟಿ.ರವಿ
Higher Education: ಕಾಲೇಜು ಸಿಬಂದಿ ರಜೆ ಹಾಕದೆ ಕೇಂದ್ರ ಕಚೇರಿಗೆ ಬರುವಂತಿಲ್ಲ
Local Bodies: ಸ್ಥಳೀಯ ಸಂಸ್ಥೆ ಉಪಚುನಾವಣೆ: ಕಾಂಗ್ರೆಸ್ 8, ಬಿಜೆಪಿ 3, ಪಕ್ಷೇತರ 1
Medical Asist: ಪತ್ರಿಕಾ ವಿತರಕರಿಗೆ ವೈದ್ಯ ನೆರವು: 70 ವರ್ಷಕ್ಕೆ ವಯೋಮಿತಿ ಹೆಚ್ಚಳ
MUDA Case: ಮುಡಾ ನಿವೇಶನ ಹಗರಣ ಸಿಬಿಐಗೆ: ಡಿ. 10ಕ್ಕೆ ವಿಚಾರಣೆ ಮುಂದೂಡಿಕೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.