ಸ್ಪೀಡ್ ಬ್ರೇಕರ್ಗಳಾದ ರಸ್ತೆ ಹೊಂಡಗಳು!
Team Udayavani, Jun 11, 2018, 1:12 PM IST
ಸುರತ್ಕಲ್ : ಇಲ್ಲಿಯ ಕಾನಾದಿಂದ ಎಂಆರ್ಪಿಎಲ್ ಕಾರ್ಗೊಗೇಟ್ ವರೆಗಿನ ರಸ್ತೆ ಒಂದೇ ಮಳೆಗೆ ಕೆಟ್ಟು ಹೋಗಿದ್ದು, ತಾತ್ಕಾಲಿಕ ದುರಸ್ತಿ ಹೇಳ ಹೆಸರಿಲ್ಲದಂತೆ ನಾಪತ್ತೆಯಾಗಿದೆ.
ರಸ್ತೆ ನಡುವೆಯೇ ಬೃಹತ್ ಹೊಂಡಗಳಾಗಿದ್ದು, ಘನ ಲಾರಿಗಳ ಓಡಾಟದಿಂದ ಪ್ರತಿನಿತ್ಯ ಮತ್ತಷ್ಟು ಹಾಳಾಗುತ್ತಿವೆ. ಕಳೆದ ಸೆಪ್ಟಂಬರ್ ತಿಂಗಳಲ್ಲಿ ತೀರಾ ಹದೆಗೆಟ್ಟಿದ್ದ ರಸ್ತೆಯನ್ನು ಸ್ಥಳೀಯರ, ಸಂಘ-ಸಂಸ್ಥೆಗಳ ಹೋರಾಟದ ಫಲವಾಗಿ ನಿಕಟಪೂರ್ವ ಶಾಸಕ ಮೊಯಿದಿನ್ ಬಾವಾ ಸುಮಾರು 75 ಲಕ್ಷ ರೂಪಾಯಿ ವೆಚ್ಚದಲ್ಲಿ ತಾತ್ಕಾಲಿಕ ದುರಸ್ತಿಗೆ ಕ್ರಮ ಕೈಗೊಂಡಿದ್ದರು. ಇದರ ಜತೆಗೆ ಉಳಿದ ಭಾಗದಲ್ಲಿ ಹಾಕಲಾದ ಪ್ಯಾಚ್ ವರ್ಕ್ ಹತ್ತು ತಿಂಗಳಲ್ಲಿ ಎದ್ದು ಹೋಗಿ ಪ್ರಥಮ ಮಳೆಗೆ ಹೊಂಡ ಬಿದ್ದಿದ್ದು ವಾಹನ ಸವಾರರು ಇನ್ನು ಮಳೆಗಾಲ ಮುಗಿಯುವ ತನಕ ಕಚ್ಚಾ ರಸ್ತೆಯಲ್ಲಿಯೇ ಓಡಾಟ ನಡೆಸಬೇಕಾದ ಸ್ಥಿತಿ ಉಂಟಾಗಿದೆ.
ವಾಹನಗಳ ಡ್ಯಾನ್ಸ್ !
ಬೃಹತ್ ಹೊಂಡ ತಪ್ಪಿಸುವ ಭರದಲ್ಲಿ ವಾಹನಗಳು ದಿಢೀರನೇ ತಿರುಗಿಸುವ ಕಾರಣ ಎಲ್ಲಿ ಅಪಘಾತವಾಗುವುದೋ ಎಂದು ಭೀತಿ ಪಡುವಂತಾಗಿದೆ. ಈಗ ಹೊಂಡ ತುಂಬೆಲ್ಲ ನೀರು ನಿಂತು ಆಳ ತಿಳಿಯದೆ ವಾಹನ ನಿಯಂತ್ರಣ ತಪ್ಪುವ
ಆತಂಕವೂ ಇದೆ.
ಬೃಹತ್ ಕಂಪೆನಿಗಳ ಮುಂಭಾಗ ರಸ್ತೆ ನಾಮಾವಶೇಷ !
ಕಾನಾದಿಂದ ಗಣೇಶಪುರದವರೆಗೆ ಬೃಹತ್ ಕಂಪೆನಿಗಳಿದ್ದು, ಇವುಗಳ ಮುಂಭಾಗ ರಸ್ತೆ ಇದೆಯೆ ಎಂಬ ಅನುಮಾನ ಮೂಡದಿರದು. ಘನ ವಾಹನಗಳ ಓಡಾಟದಿಂದ ಡಾಮರು ಕಿತ್ತುಹೋಗಿದೆ. ಹಿಂದಿನ ಸರಕಾರ ಈ ರಸ್ತೆಗೆ 58 ಕೋಟಿ ರೂ. ಮಂಜೂರು ಮಾಡಿದ್ದು, ಮಾಜಿ ಶಾಸಕ ಬಾವಾ ಚತುಷ್ಪಥ ರಸ್ತೆಯಾಗಲಿದೆ ಎಂದು ಘೋಷಣೆ ಮಾಡಿದ್ದರು. ಆದರೆ ಟೆಂಡರು ಅನುಮೋದನೆ ಸಿಗುವ ಮೊದಲೇ ಸರಕಾರ ಬದಲಾಗಿದ್ದು, ಹೊಸ ಸರಕಾರ ಯಾವ ನಿರ್ಧಾರ ಕೈಗೊಳ್ಳಲಿದೆ ಎಂಬುದನ್ನು ಕಾದು ನೋಡಬೇಕಿದೆ.
ರಸ್ತೆ ನಿರ್ಮಾಣಕ್ಕೆ ಆದ್ಯತೆ
ಕಾನಾ ಬಾಳ ರಸ್ತೆ ನಾದುರಸ್ತಿಯಲ್ಲಿರುವುದು ಗಮನಕ್ಕೆ ಬಂದಿದೆ. ಹೊಸ ಸರಕಾರದ ಮೇಲೆ ಒತ್ತಡ ಹಾಕುವ ಮೂಲಕ ಅನುದಾನ ಹಿಂದಕ್ಕೆ ಹೋಗದಂತೆ ಕ್ರಮ ವಹಿಸಿ ಉತ್ತಮ ರಸ್ತೆ ನಿರ್ಮಾಣಕ್ಕೆ ಆದ್ಯತೆ ನೀಡಲಾಗುವುದು. ನೂತನ ಲೋಕೋಪಯೋಗಿ ಸಚಿವ ಎಚ್.ಡಿ. ರೇವಣ್ಣ ಅವರನ್ನು ಭೇಟಿ ಮಾಡಿ ಟೆಂಡರು ಅನುಮೋದನೆಗೆ ಒತ್ತಡ ಹೇರಲಾಗುವುದು. ಅಭಿವೃದ್ಧಿಗೆ ಸರಕಾರ ಸ್ಪಂದಿಸುವ ಆಶಾಭಾವನೆ ಹೊಂದಿದ್ದೇನೆ.
– ಡಾ| ವೈ. ಭರತ್ ಶೆಟ್ಟಿ ,
ಶಾಸಕರು ಮಂಗಳೂರು ಉತ್ತರ
ಟೆಂಡರ್ ವಿಳಂಬ ಸಾಧ್ಯತೆ
ಸುರತ್ಕಲ್ ಗಣೇಶಪುರವರೆಗೆ 58 ಕೋಟಿ ರೂ.ವೆಚ್ಚದಲ್ಲಿ ಚತುಷ್ಪಥ ರಸ್ತೆ ನಿರ್ಮಾಣಕ್ಕೆ ಟೆಂಡರು ಪ್ರಕ್ರಿಯೆ ನಡೆದಿದ್ದು ಅಂತಿಮ ಹಂತದಲ್ಲಿತ್ತು. ಹಿಂದಿನ ಸರಕಾರ ಅನುಮೋದನೆ ಕೊಡುವ ಮೊದಲೇ ಚುನಾವಣೆ ಘೋಷಣೆಯಾಗಿದ್ದರಿಂದ ಇನ್ನು ಹೊಸ ಸರಕಾರದ ನಿರ್ಧಾರವೇ ಅಂತಿಮವಾಗಲಿದೆ. ಇದು ಮತ್ತಷ್ಟು ವಿಳಂಬವಾಗುವ ಸಾಧ್ಯತೆಯಿದ್ದು, ಮಳೆಗಾಲದಲ್ಲಿ ಪಾಲಿಕೆ ತಾತ್ಕಾಲಿಕ ದುರಸ್ತಿ ಮಾಡುವ ಅಗತ್ಯವಿದೆ.
– ಕಾಂತರಾಜು,
ಲೋಕೋಪಯೋಗಿ ಇಲಾಖೆ ಅಧಿಕಾರಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
8 ಮಸೂದೆ ಮಂಡನೆಗೆ ಸಂಪುಟ ಒಪ್ಪಿಗೆ; ವಿಧಾನಮಂಡಲದ ಅಧಿವೇಶನದಲ್ಲಿ ಮಂಡನೆ
Elephant: ಬಂಡೀಪುರದಲ್ಲಿ ಆನೆ ಮೃತದೇಹ ಪತ್ತೆ: ಆಂಥ್ರಾಕ್ಸ್ ಸೋಂಕು ಶಂಕೆ
Ballari District Hospital: ಬಾಣಂತಿಯರ ಸಾವಿಗೆ ವೈದ್ಯರಲ್ಲ, ದ್ರಾವಣ ಕಾರಣ’
ನಕ್ಸಲರ ಪತ್ತೆಗೆ ಶಿವಮೊಗ್ಗ ಪೊಲೀಸರು ಸಜ್ಜು : ಎಎನ್ಎಫ್ ಮಾದರಿಯಲ್ಲಿ ವಿಶೇಷ ಪೊಲೀಸ್ ಪಡೆ
Hassan: ಅಂಗಾಂಗ ದಾನ ಮಾಡಿ ಸಾವಿನಲ್ಲೂ ಸಾರ್ಥಕ್ಯ ಮೆರೆದ ಕಾರ್ಮಿಕನ ಕುಟುಂಬ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.