ಮೆಕ್‌ ಡೊನಾಲ್ಡ್‌ ಸ್ಥಾಪಕ ಢಾಬಾ ನಡೆಸುತ್ತಿದ್ದರು: ರಾಹುಲ್‌ ಗಾಂಧಿ


Team Udayavani, Jun 11, 2018, 4:09 PM IST

rahul-talkatora-700.jpg

ಹೊಸದಿಲ್ಲಿ : ‘ಪ್ರಧಾನಿ ನರೇಂದ್ರ ಮೋದಿ ಅವರು ಬೆರಳೆಣಿಕೆಯ ದೊಡ್ಡ ಕೈಗಾರಿಕೋದ್ಯಮಿಗಳಿಗೆ ಮಾತ್ರವೇ ಮಹತ್ವ ನೀಡುತ್ತಾರೆ; ಸಾಮಾನ್ಯ ರೈತರನ್ನು, ಸಣ್ಣ ಉದ್ದಿಮೆದಾರರನ್ನು ಕಡೆಗಣಿಸುತ್ತಾರೆ’ ಎಂದು ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ ಅವರಿಂದು ಟೀಕಿಸಿದರು. 

”ಸಣ್ಣ ಮಟ್ಟದಲ್ಲಿರುವವರನ್ನು ಎಂದೂ ಕಡೆಗಣಿಸಬಾರದು; ಏಕೆಂದರೆ ಅವರೇ ಮುಂದೆ ದೊಡ್ಡ ಉದ್ಯಮಿಗಳಾಗುತ್ತಾರೆ ಎನ್ನುವುದಕ್ಕೆ ಸಾಕಷ್ಟು ಉದಾಹರಣೆಗಳು ಇವೆ. ಇವತ್ತು ವಿಶ್ವ ಪ್ರಸಿದ್ಧವಾಗಿರುವ ಕೋಕಾ ಕೋಲಾ ಕಂಪೆನಿಯನ್ನು ಸ್ಥಾಪಿಸಿದವರು ಹಿಂದೊಮ್ಮೆ ಅಮೆರಿಕದಲ್ಲಿ ಶಿಕಂಜಿ ಮಾರಿಕೊಂಡಿದ್ದರು; ಮೆಕ್‌ಡೊನಾಲ್ಡ್‌  ಸ್ಥಾಪಕರು ದೇಶದಲ್ಲಿ ಢಾಬಾ ನಡೆಸುತ್ತಿದ್ದರು” ಎಂದು ರಾಹುಲ್‌ ಹೇಳಿದರು. 

ರಾಹುಲ್‌ ಅವರು ಇಲ್ಲಿನ ತಲಕಟೋರಾ ಸ್ಟೇಡಿಯಂ ನಲ್ಲಿ ಏರ್ಪಟ್ಟಿದ್ದ ಕಾಂಗ್ರೆಸ್‌ ಪಕ್ಷದ ರಾಷ್ಟ್ರೀಯ ಒಬಿಸಿ ಸಮಾವೇಶದಲ್ಲಿ ಮಾತನಾಡುತ್ತಿದ್ದರು. 

“ಇವತ್ತು ಬಿಜೆಪಿಯ ಕಾರ್ಯ ತಂತ್ರ ಏನೆಂಬುದು ಸ್ಪಷ್ಟವಿದೆ. 15ರಿಂದ 20 ಸಿರಿವಂತ ಉದ್ಯಮಿಗಳು ಪ್ರಧಾನಿ ಮೋದಿ ಅವರಿಗೆ ಸಾವಿರಾರು ಕೋಟಿ ಕೊಡುತ್ತಾರೆ; ಹಾಗೆಯೇ ಎಲ್ಲ ಲಾಭಗಳು ಆ 15 – 20 ಮಂದಿ ಸಿರಿವಂತರಿಗೆ ಹೋಗುತ್ತಿದೆ; ಇವತ್ತು ನಮ್ಮ ದೇಶ ಕೇವಲ ಇಬ್ಬರು ಅಥವಾ ಮೂವರು ಬಿಜೆಪಿ ಮತ್ತು ಆರ್‌ಎಸ್‌ಎಸ್‌ ನಾಯಕರ ಗುಲಾಮ ಎಂಬ ಸ್ಥಿತಿಗೆ ತಲುಪಿದೆ….’

“….ಪ್ರತಿಯೋರ್ವ ಸಂಸದ ಮಾತನಾಡಲು ಹೆದರುತ್ತಾರೆ; ಅಥವಾ ಅವರಿಗೆ ಮಾತಾಡಲು ಬಿಡಲಾಗುತ್ತಿಲ್ಲ. ಮಾತನಾಡುವ ನಮ್ಮ ಮಾತುಗಳನ್ನು ಬಿಜೆಪಿಯವರು ಆಲಿಸುತ್ತಿಲ್ಲ. ಆರ್‌ಎಸ್‌ಎಸ್‌ಗೆ ಮಾತನಾಡಲು ಬಿಡಲಾಗುತ್ತಿದೆ; ದುಡಿಯುವ ಜನರನ್ನು ಇಂದು ಹಿಂಬದಿ ಕೋಣೆಗೆ ತಳ್ಳಲಾಗುತ್ತಿದೆ; ಆದರೆ ಅವರ ಪರಿಶ್ರಮದ ಲಾಭವನ್ನು ಯಾರೋ ಕೆಲವರು ಹೊಡೆದುಕೊಳ್ಳುತ್ತಿದ್ದಾರೆ’ ಎಂದು ರಾಹುಲ್‌ ಗಾಂಧಿ ಹೇಳಿದರು. 

ಟಾಪ್ ನ್ಯೂಸ್

Himanth-Bisw

Rahul Gandhi ಗುರಿ ತಪ್ಪಿದ ಕ್ಷಿಪಣಿ, ಸೋನಿಯಾರಿಂದ ತರಬೇತಿ ಅಗತ್ಯ: ಹಿಮಾಂತ

jairam 2

Constitution ಅಳಿಸಲೆಂದೇ ಜಾತಿಗಣತಿಗೆ ಮೋದಿ ವಿರೋಧ: ಜೈರಾಮ್‌

1-kashmir

Kashmir; ನಿಲ್ಲದ ಸ್ಥಾನಮಾನ ಗದ್ದಲ: ಸದನದಲ್ಲಿ ಜಟಾಪಟಿ

DK-Shivakuamar

Congress: ಸಿದ್ದರಾಮಯ್ಯ ಮಾಸ್‌ ಲೀಡರ್‌, ಮುಗಿಸಲು ಬಿಜೆಪಿ ಯತ್ನ: ಡಿ.ಕೆ.ಶಿವಕುಮಾರ್‌

Udupi: ಗೀತಾರ್ಥ ಚಿಂತನೆ-88: ಸಮಸ್ಯೆಯ ಮೂಲ ಹುಡುಕುವ ರೀತಿ

Udupi: ಗೀತಾರ್ಥ ಚಿಂತನೆ-88: ಸಮಸ್ಯೆಯ ಮೂಲ ಹುಡುಕುವ ರೀತಿ

1-crick

T20; ಸ್ಯಾಮ್ಸನ್‌ ಸತತ 2ನೇ ಶತಕ:ದಕ್ಷಿಣ ಆಫ್ರಿಕಾ ಎದುರು ಭಾರತಕ್ಕೆ ಅಮೋಘ ಜಯ

Kaup: ಪಠ್ಯದ ಜತೆಗೆ ಶಿಕ್ಷಣಕ್ಕೆ ಆದ್ಯತೆ ಅತ್ಯಗತ್ಯ: ಡಾ| ಕೆ. ಪ್ರಕಾಶ್‌ ಶೆಟ್ಟಿ

Kaup: ಪಠ್ಯದ ಜತೆಗೆ ಶಿಕ್ಷಣಕ್ಕೆ ಆದ್ಯತೆ ಅತ್ಯಗತ್ಯ: ಡಾ| ಕೆ. ಪ್ರಕಾಶ್‌ ಶೆಟ್ಟಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Himanth-Bisw

Rahul Gandhi ಗುರಿ ತಪ್ಪಿದ ಕ್ಷಿಪಣಿ, ಸೋನಿಯಾರಿಂದ ತರಬೇತಿ ಅಗತ್ಯ: ಹಿಮಾಂತ

CBI

Delhi; ಕಾನೂನು ಅಧಿಕಾರಿ ನಿವಾಸದಲ್ಲಿ 3.79 ಕೋಟಿ ನಗದು ಸಿಬಿಐನಿಂದ ವಶಕ್ಕೆ

jairam 2

Constitution ಅಳಿಸಲೆಂದೇ ಜಾತಿಗಣತಿಗೆ ಮೋದಿ ವಿರೋಧ: ಜೈರಾಮ್‌

1-kashmir

Kashmir; ನಿಲ್ಲದ ಸ್ಥಾನಮಾನ ಗದ್ದಲ: ಸದನದಲ್ಲಿ ಜಟಾಪಟಿ

1-CJI-BG

Supreme Court; CJI ಡಿ.ವೈ.ಚಂದ್ರಚೂಡ್ ಅವರಿಗೆ ಭಾವನಾತ್ಮಕ ವಿದಾಯ

MUST WATCH

udayavani youtube

ಗೋವಿನ ಪೂಜೆ ಯಾಕಾಗಿ ಮಾಡಬೇಕು?

udayavani youtube

ಮೇಲುಕೋಟೆಯಲ್ಲಿ ದೀಪಾವಳಿ ಆಚರಿಸುವುದಿಲ್ಲ ಎಂಬ ಮಾತು ನಿಜವೋ ಸುಳ್ಳೋ

udayavani youtube

ಗಣಪತಿ ಸಹಕಾರಿ ವ್ಯವಸಾಯಕ ಸಂಘ ‘ನಿ.’ ಕೆಮ್ಮಣ್ಣು ಶತಾಭಿವಂದನಂ ಸಮಾರೋಪ ಸಂಭ್ರಮ ಸಂಪನ್ನ

udayavani youtube

ಉದಯವಾಣಿ’ಚಿಣ್ಣರ ಬಣ್ಣ -2024

udayavani youtube

ಹಬ್ಬದ ಊಟವೇ ಈ ಹೋಟೆಲ್ ನ ಸ್ಪೆಷಾಲಿಟಿ

ಹೊಸ ಸೇರ್ಪಡೆ

Himanth-Bisw

Rahul Gandhi ಗುರಿ ತಪ್ಪಿದ ಕ್ಷಿಪಣಿ, ಸೋನಿಯಾರಿಂದ ತರಬೇತಿ ಅಗತ್ಯ: ಹಿಮಾಂತ

CBI

Delhi; ಕಾನೂನು ಅಧಿಕಾರಿ ನಿವಾಸದಲ್ಲಿ 3.79 ಕೋಟಿ ನಗದು ಸಿಬಿಐನಿಂದ ವಶಕ್ಕೆ

jairam 2

Constitution ಅಳಿಸಲೆಂದೇ ಜಾತಿಗಣತಿಗೆ ಮೋದಿ ವಿರೋಧ: ಜೈರಾಮ್‌

1-kashmir

Kashmir; ನಿಲ್ಲದ ಸ್ಥಾನಮಾನ ಗದ್ದಲ: ಸದನದಲ್ಲಿ ಜಟಾಪಟಿ

1-rb

ATP Finals Doubles; ಬೋಪಣ್ಣ ಜೋಡಿಗೆ 6ನೇ ಶ್ರೇಯಾಂಕ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.