ಮಣಿಪಾಲ: ವ್ಯವಸ್ಥಿತ ಚರಂಡಿ ಇಲ್ಲದೆ ರಸ್ತೆಯಲ್ಲೇ ನೀರು
Team Udayavani, Jun 12, 2018, 6:15 AM IST
ಉಡುಪಿ: ಉಡುಪಿ ನಗರಸಭೆ ವ್ಯಾಪ್ತಿಗೊಳಪಡುವ ಮಣಿಪಾಲದಲ್ಲಿ ವ್ಯವಸ್ಥಿತವಾದ ಚರಂಡಿ ವ್ಯವಸ್ಥೆಯೇ ಇಲ್ಲ. ಡ್ರೈನೇಜ್ ಹರಿಯಲು ಒಳಚರಂಡಿ ಸಂಪರ್ಕ ಯೋಜನೆಯೂ ಅನುಷ್ಠಾನಗೊಂಡಿಲ್ಲ. ಪರಿಣಾಮ ಮಳೆಗಾಲದಲ್ಲಿ ಇಲ್ಲಿ ರಸ್ತೆಯಲ್ಲಿ ನೀರು ಹರಿಯುವುದು ಮಾಮೂಲಾಗಿದೆ.
ಸುಮಾರು 55ಕ್ಕೂ ಅಧಿಕ ದೇಶಗಳ ವಿದ್ಯಾರ್ಥಿಗಳು ಕಲಿಯುವ ವಿಶ್ವಮಟ್ಟದ ಶೈಕ್ಷಣಿಕ ಕೇಂದ್ರವಾಗಿದ್ದು, 20 ಸಾವಿರಕ್ಕೂ ಅಧಿಕ ವಿದ್ಯಾರ್ಥಿಗಳು ಇಲ್ಲಿದ್ದಾರೆ. ಪ್ರತಿಷ್ಠಿತ ಆಸ್ಪತ್ರೆಯೂ ಇಲ್ಲಿದೆ. ನೂರಾರು ಬಹುಮಹಡಿ ಕಟ್ಟಡ, ಸಾವಿರಾರು ಮನೆಗಳು ಈ ಭಾಗದಲ್ಲಿವೆೆ. ಹತ್ತಾರು ಸಂಸ್ಥೆಗಳು, ನೂರಾರು ಕೈಗಾರಿಕೆಗಳು ಕಾರ್ಯ ನಿರ್ವಹಿಸುತ್ತಿ ದ್ದರೂ ಇಲ್ಲಿ ಸೂಕ್ತ ಚರಂಡಿ ವ್ಯವಸ್ಥೆ ಇಲ್ಲದ ಕಾರಣ ಪರಿಸ್ಥಿತಿ ಹೀಗಾಗಿದೆ…
ಮಳೆಗಾಲ ಆರಂಭ ವಾಯಿತು ಎಂದರೆ ಸಾಕು ರಸ್ತೆಯಲ್ಲೆಲ್ಲಾ ನೀರು ನಿಲ್ಲುವುದು, ಹರಿಯುವುದು ಸಾಮಾನ್ಯವಾಗಿ ಬಿಟ್ಟಿದೆ. ಮಣಿಪಾಲ ಬಸ್ಸು ನಿಲ್ದಾಣ ವಂತೂ ಕಳೆದ ಹಲವು ವರ್ಷಗಳಿಂದ ಕೆರೆ ಯಂತಾಗಿ ಬಿಡುತ್ತದೆ. ಸುಸಜ್ಜಿತ ಬಸ್ಸು ನಿಲ್ದಾಣ ಮಾಡ ಲಾಗುತ್ತದೆ ಎಂದು ಜನಪ್ರತಿನಿಧಿ ಗಳು ಹೇಳುತ್ತಿದ್ದಾರೆಯೇ ವಿನಾ ಇನ್ನೂ ಕಾರ್ಯಗತ ವಾಗಿಲ್ಲ. ಸಮಸ್ಯೆಯೂ ಹಾಗೆಯೇ ಮುಂದು ವರಿದಿದೆ. ಕಳೆದ ವರ್ಷ ಬಸ್ ನಿಲ್ದಾಣದಲ್ಲಿ ಗಾಳ ಹಾಕಿ ಪ್ರತಿಭಟಿಸಿದ್ದನ್ನು ಇಲ್ಲಿ ಸ್ಮರಿಸಬಹುದು.
ಉತ್ತಮ ಮಳೆ
ಕಾರ್ಕಳ, ಕುಂದಾಪುರ, ಉಡುಪಿ ನಗರ, ತೆಕ್ಕಟ್ಟೆ, ಪಡುಬಿದ್ರಿ, ಬ್ರಹ್ಮಾವರ, ಕಾಪು, ಮಣಿಪಾಲ, ಕೋಟ, ಸಾಲಿಗ್ರಾಮ ಮೊದಲಾದೆಡೆ ರವಿವಾರ ರಾತ್ರಿ ಮತ್ತು ಸೋಮವಾರ ಉತ್ತಮ ಮಳೆಯಾಗಿದೆ. ಕಾಪು ನಡಾÕಲು ಗ್ರಾಮದ ಅಖೀಲಾ ಅವರ ಮನೆ ಮೇಲೆ ಮರ ಬಿದ್ದು 40,000 ರೂ. ನಷ್ಟವಾಗಿದೆ.
ಜೂ. 10ರ ಬೆಳಗ್ಗೆ 8.30ಕ್ಕೆ ಮುಕ್ತಾಯಗೊಂಡಂತೆ ಹಿಂದಿನ 24 ತಾಸುಗಳಲ್ಲಿ ಉಡುಪಿಯಲ್ಲಿ 30.5 ಮೀ.ಮೀ., ಜಿಲ್ಲೆಯಲ್ಲಿ ಸರಾಸರಿ 40.76 ಮಿ.ಮೀ. ಮಳೆಯಾಗಿದೆ.
ಕಳೆದ ವರ್ಷ ಬಸ್ ನಿಲ್ದಾಣದಲ್ಲಿ ಗಾಳ ಹಾಕಿ ಪ್ರತಿಭಟಿಸಲಾಗಿತ್ತು. ಈ ಬಾರಿಯೂ ಜನ ಪ್ರತಿಭಟಿಸುವ ಮುನ್ನ ಜನಪ್ರತಿನಿಧಿಗಳು ಎಚ್ಚೆತ್ತು ಕೊಳ್ಳುವುದು ಅಗತ್ಯ.
ಹೂಳು ತುಂಬಿದ ಚರಂಡಿ
ಮಣಿಪಾಲದ ಪ್ರಧಾನ ಅಂಚೆ ಕಚೇರಿ ಹಾಗೂ ಮಾಧವಕೃಪಾ ಶಾಲೆಗೆ ಹೋಗುವ ಹೆದ್ದಾರಿಯನ್ನು ಎರಡು ಹಂತದಲ್ಲಿ ಕಾಂಕ್ರೀಟೀಕರಣಗೊಳಿಸಿ ಸುಸಜ್ಜಿತವಾಗಿ ಮಾಡಿದ್ದರೂ, ಮಳೆಯ ನೀರು ಹರಿಯಲು ಸಮರ್ಪಕವಾದ ಚರಂಡಿ ಆಗಿಲ್ಲ. ಇರುವ ಅರೆಬರೆ ಚರಂಡಿಯಲ್ಲೂ ಹೂಳು ತುಂಬಿದೆ. ಗಿಡಗಂಟಿಗಳು ಬೆಳೆದುಕೊಂಡು ನೀರು ಹರಿಯಲು ಅಡ್ಡಿಯಾಗಿದೆ. ಈ ಹಿನ್ನೆಲೆಯಲ್ಲಿ ಮಳೆಯ ಕೆಸರು ನೀರು ರಸ್ತೆಯಲ್ಲೇ ಸಾಗುತ್ತಿದೆ. ರಸ್ತೆಯಲ್ಲೇ ಹರಿಯುವ ನೀರಿನ ಮೇಲೆ ವಾಹನ ಸಾಗುವಾಗ ಪಾದಚಾರಿಗಳ ಮೈಮೇಲೆ ನೀರು ಹಾಯುತ್ತಿದೆ. ಕಚೇರಿ ಕೆಲಸಗಳಿಗೆ ಹೋಗುವ ಜನರ ಬಟ್ಟೆಗಳೆಲ್ಲ ಒದ್ದೆಯಾಗಿ ಹೋಗುವ ಸಂಭವ ಹೆಚ್ಚಿದೆ. ಸಂಬಂಧಪಟ್ಟವರು ಕೂಡಲೇ ಇತ್ತ ಗಮನಹರಿಸಬೇಕಾಗಿದೆ.
ಯುಜಿಡಿ ಪ್ಲಾನ್,ಸರ್ವೆ ಆಗಿದ್ದರೂ…
ಮಣಿಪಾಲದಲ್ಲಿ ಕುಡಿಯುವ ನೀರು ಮತ್ತು ಅಂಡರ್ಗ್ರೌಂಡ್ ಡ್ರೈನೇಜ್ (ಯುಜಿಡಿ) ಸಮಸ್ಯೆ ಮುಖ್ಯವಾಗಿ ಕಾಡುತ್ತಿದೆ. ಡ್ರೈನೇಜ್ ಹರಿಯಲು ವ್ಯವಸ್ಥೆ ಮಾಡಿಲ್ಲದ ಕಾರಣ ಮಳೆ ನೀರು ಹರಿಯುವ ಚರಂಡಿಗೆ ಕಟ್ಟಡ, ಮನೆ, ಸಂಸ್ಥೆಯವರು ಕೊಳಚೆ ನೀರು ಬಿಡುತ್ತಿದ್ದಾರೆ. ಈ ಪರಿಣಾಮದಿಂದ ಅಲ್ಲಲ್ಲಿ ಚರಂಡಿಯನ್ನು ಜನರೇ ಮುಚ್ಚಿದ್ದಾರೆ. ಹಿಂದೊಮ್ಮೆ 2 ಕೋ.ರೂ. ಖರ್ಚು ಮಾಡಿ ಕಾಂಕ್ರೀಟ್ ಚರಂಡಿ ಮಾಡಿದ್ದರೂ, ಕೆಲವೆಡೆಗಳಲ್ಲಿ ಕಸ ತುಂಬಿ ಅದು ಕೂಡ ಮುಚ್ಚಿ ಹೋಗಿದೆ. ಕೊಳಚೆ ನೀರು ಹರಿಯಲು ಯುಜಿಡಿ ಪ್ಲಾನ್, 4 ಬಾರಿ ಸರ್ವೇ ಆಗಿದೆ. ನಗರಸಭೆ ಮುತುವರ್ಜಿ ವಹಿಸಿಲ್ಲ. ಸರಕಾರದಿಂದ ಕುಡ್ಸೆಂಪ್ ಮೂಲಕ ಮಾಡುವ ಯೋಜನೆ ಇದ್ದಿತ್ತು. ಅದು ಕೂಡ ಅನುಷ್ಠಾನಗೊಂಡಿಲ್ಲ. ಹಾಗಾಗಿ ಮಳೆಗಾಲದಲ್ಲಿ ಮಣಿಪಾಲದಲ್ಲಿ ಚರಂಡಿ ಇಲ್ಲದ ಸಮಸ್ಯೆ ಎದ್ದು ಕಾಣುತ್ತದೆ. ಡ್ರೈನೇಜ್ ಸಮಸ್ಯೆ ವರ್ಷವಿಡೀ ಕಾಡುತ್ತದೆ.
– ನರಸಿಂಹ ನಾಯಕ್,
ನಗರಸಭಾ ಸದಸ್ಯರು ಮಣಿಪಾಲ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.