ಮಳೆಗಾಲದಲ್ಲಿ ಮತ್ತೆ ಆರಂಭವಾಯ್ತು ಸರ್ಕಸ್ ಸಂಚಾರ
Team Udayavani, Jun 12, 2018, 6:15 AM IST
ಕೋಟ: ಪಾರಂಪಳ್ಳಿ – ಸಾಲಿಗ್ರಾಮ ನಡುವಿನ ಸಂಪರ್ಕದ ಪ್ರಮುಖ ಕೊಂಡಿಯಾಗಿರುವ ತೋಡ್ಕಟ್ಟು, ನಾಯ್ಕನಬೆ„ಲು ಮರದ ಸೇತುವೆಯಲ್ಲಿ ಪ್ರತಿ ಮಳೆಗಾಲದಲ್ಲಿ ಸಂಚರಿಸುವುದು ತುಂಬಾ ದುಃಸ್ತರವಾಗಿದ್ದು ಈ ಬಾರಿ ಕೂಡ ಸಮಸ್ಯೆ ಮುಂದುವರಿದಿದೆ.
ಇಲ್ಲಿನ ನಿವಾಸಿಗಳು ಬೇರೆ ಮಾರ್ಗದ ಮೂಲಕ ಸಾಲಿಗ್ರಾಮ, ಕೋಟ ತಲುಪಬೇಕಾದರೆ 8 ಕಿ.ಮೀ. ಸುತ್ತುವರಿಯಬೇಕು. ಆದರೆ ಈ ಮರದ ಸೇತುವೆ ಮೂಲಕ ಕೇವಲ 2 ಕಿ.ಮೀ. ಪ್ರಯಾಣಿಸಿ ಈ ಪ್ರದೇಶಗಳನ್ನು ತಲುಪಬಹುದು. ಹೀಗಾಗಿ ಈ ಸೇತುವೆ ಪ್ರಾಮುಖ್ಯತೆ ಪಡೆದಿದೆ.
ಮಳೆಗಾಲದಲ್ಲಿ ಸರ್ಕಸ್
ಸೇತುವೆ ಸಂಪೂರ್ಣ ಶಿಥಿಲಗೊಂಡಿರುವುದು ಇದರಿಂದ ಮಳೆಗಾಲದಲ್ಲಿ ಸ್ಥಳೀಯರು ಜೀವ ಕೈಯಲ್ಲಿ ಹಿಡಿದು ಸಂಚರಿಸುತ್ತಾರೆ ಹಾಗೂ ನೀರು ನಿಂತಾಗ ಸೇತುವೆ ಜಾರುಬಂದಿಯಂತೆ ಜಾರುತ್ತದೆ. ಶಾಲೆಗಳಿಗೆ ತೆರಳುವ ಪುಟ್ಟ ಮಕ್ಕಳನ್ನ ಹೆತ್ತವರೇ ಸೇತುವೆ ದಾಟಿಸಿ ಬರುತ್ತಾರೆ. ರೈತರು ನೇಜಿ ಮುಂತಾದವುಗಳನ್ನು ಸೇತುವೆಯ ಇನ್ನೊಂದು ಕಡೆ ಸಾಗಿಸಲು ಹರಸಾಹಸ ಪಡುತ್ತಾರೆ ಹಾಗೂ ಈ ಸಂದರ್ಭ ಸ್ವಲ್ಪ ಎಚ್ಚರ ತಪ್ಪಿದರು ದೊಡ್ಡ ಅನಾಹುತ ಘಟಿಸುತ್ತದೆ. ಶಾಶ್ವತ ಸೇತುವೆ ನಿರ್ಮಿಸುವಂತೆ ಇಲ್ಲಿನ ನಿವಾಸಿಗಳು ಹಲವು ಬಾರಿ ಜನಪ್ರತಿನಿಧಿಗಳಿಗೆ ಮನವಿ ಸಲ್ಲಿಸಿದ್ದರು. ಇವರ ಮನವಿಗೆ ಸರಿಯಾದ ಪುರಸ್ಕಾರ ದೊರೆತಿಲ್ಲ. ಒಟ್ಟಾರೆ ಮರದ ಸೇತುವೆ ಜಾಗದಲ್ಲಿ ಕಾಂಕ್ರೇಟ್ ಸೇತುವೆ ಯಾವಾಗ ನಿರ್ಮಾಣಗೊಳ್ಳುತ್ತದೆ? ನಮ್ಮ ಈ ಸರ್ಕಸ್ ಯಾವಾಗ ಅಂತ್ಯಗೊಳ್ಳುತ್ತದೆ ಎನ್ನುವ ನಿರೀಕ್ಷೆಯಲ್ಲಿ ಇಲ್ಲಿನ ನಿವಾಸಿಗಳಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.