ಅವೈಜ್ಞಾನಿಕ ಅಂಪಾರು ವೃತ್ತ: ಅಪಘಾತಕ್ಕೆ ಆಹ್ವಾನ
Team Udayavani, Jun 12, 2018, 6:15 AM IST
ಸಿದ್ದಾಪುರ: ಸುರಕ್ಷತೆಯ ದೃಷ್ಟಿಯಲ್ಲಿ ಎರಡು ರಾಜ್ಯ ಹೆದ್ದಾರಿಗಳು ಸಂಧಿಸುವ ಅಂಪಾರು ಪೇಟೆಯಲ್ಲಿ ಕೋಟಿ ಮೊತ್ತದಲ್ಲಿ ಬೃಹತ್ ಸರ್ಕಲ್ ನಿರ್ಮಾಣವಾಗುತ್ತಿದೆ. ಅವೈಜ್ಞಾನಿಕ ಯೋಜನೆಯಿಂದಾಗಿ ಸರ್ಕಲ್ ವಾಹನ ಸವಾರರಿಗೆ ಅಸುರಕ್ಷಿತವಾಗಿದೆ.
ಅಂಪಾರು ಪೇಟೆ ಬೈಂದೂರು- ವಿರಾಜಪೇಟೆ ಹಾಗೂ ಕುಂದಾಪುರ- ಶಿವಮೊಗ್ಗ ರಾಜ್ಯ ಹೆದ್ದಾರಿ ಹಾದುಹೋಗಿದೆ. ಪೇಟೆಯಲ್ಲಿ ಆಗಾಗ ಅಪಘಾತಗಳು ನಡೆಯುತ್ತಿರುತ್ತವೆ. ಇದನ್ನು ತಪ್ಪಿಸುವ ಉದ್ದೇಶದಿಂದ ಲೋಕೋಪಯೋಗಿ ಇಲಾಖೆ ಒಂದು ದೊಡ್ಡದಾದ ಸರ್ಕಲ್ ನಿರ್ಮಾಣಕ್ಕೆ ಮುಂದಾಗಿದೆ.
ಅವೈಜ್ಞಾನಿಕ ವೃತ್ತ
ನಾಲ್ಕು ಮಾರ್ಗಗಳಲ್ಲಿ ಎರಡು ಮಾರ್ಗಗಳು ಮಾತ್ರ ಸರ್ಕಲ್ ಬಳಸಿದರೆ, ಉಳಿದ ಎರಡು ಮಾರ್ಗಗಳು ಸರ್ಕಲ್ ಬಳಸದೆ ನೆರವಾಗಿ ಸಾಗುತ್ತವೆ. ಇದರ ಪರಿಣಾಮ ಮೊದಲಿನಂತೆ ಪೇಟೆಯ ಸರ್ಕಲ್‌ನಲ್ಲಿ ಅಪಘಾತಗಳು ನಡೆಯುವ ಸಾಧ್ಯತೆ ಇದೆ.
ವಿರಾಜಪೇಟೆ ರಾಜ್ಯ ಹೆದ್ದಾರಿಯಿಂದ ಕೊಲ್ಲೂರಿನಿಂದ ಧರ್ಮಸ್ಥಳಕ್ಕೆ ಹೋಗುವ ವಾಹನ ಸವಾರರಿಗೆ, ಕುಂದಾಪುರದಿಂದ ಶಿವಮೊಗ್ಗದ ಕಡೆಗೆ ಹೋಗುವ ವಾಹನ ಸವಾರರು ಈ ಸರ್ಕಲ್ ಬಳಸುತ್ತಿಲ್ಲ. ಸಿದ್ದಾಪುರ – ಕೊಲ್ಲೂರಿಗೆ ಹಾಗೂ ಕುಂದಾಪುರದಿಂದ ಕೊಲ್ಲೂರು ಹಾಗೂ ಶಂಕರನಾರಾಯಣ ಕಡೆಗಳಿಗೆ ಹೋಗುವ ವಾಹನ ಸವಾರರಿಗೆ ಮಾತ್ರ ಸರ್ಕಲ್ ಬಳಕೆಯಾಗುತ್ತಿದೆ.
ಪ್ಲಾನ್ ಬದಲಾಯಿಸಿ
ಕೋಟಿ ಮೊತ್ತ ವ್ಯಯಮಾಡಿಯೂ ಮೊದಲಿನಂತೆ ಅಪಘಾತಗಳು ನಡೆಯುವುದಾದರೆ ಸರ್ಕಲ್ ನಿರ್ಮಾಣ ಅಗತ್ಯ ಇದೆಯೇ? ಅವೈಜ್ಞಾನಿಕ ಯೋಜನೆಯಿಂದಾಗಿ ಅಸುರಕ್ಷಿತವಾಗಿದೆ. ನಿರ್ಮಾಣ ಹಂತದಲ್ಲಿಯೇ ಪ್ಲಾನ್ ಬದಲಾಯಿಸಿ ಎಂಬ ಬೇಡಿಕೆಯನ್ನು ಸಾರ್ವಜನಿಕರು ಇಟ್ಟಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Yakshagana: ಮಾಂಬಾಡಿ ಸುಬ್ರಹ್ಮಣ್ಯ ಭಟ್ ಅವರ ಯಕ್ಷ ಸೇವೆಗೆ ಪಾರ್ತಿಸುಬ್ಬ ಪ್ರಶಸ್ತಿ ಗರಿ
Gundlupete: ಹುರುಳಿ ಕಾವಲು ಕಾಯುತ್ತಿದ್ದ ರೈತನ ಮೇಲೆ ಆನೆ ದಾಳಿ; ಕೈ ಕುತ್ತಿಗೆಗೆ ಗಾಯ
BIFF:16ನೇ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವಕ್ಕೆ ಕಿಶೋರ್ ರಾಯಭಾರಿ
Uppinangady: ನೇಜಿಕಾರ್ ಅಕ್ಷರ ಕರಾವಳಿ ಕಟ್ಟಡ ಇನ್ನು ನೆನಪಷ್ಟೆ
EV ದ್ವಿಚಕ್ರ ವಾಹನ ಮಾರಾಟ: ಏಥರ್ ಸಂಸ್ಥೆ ಪಾಲು ಶೇ.25
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.