ಭಾರತದಲ್ಲಿ ಫಿಫಾ ಕ್ರೇಜ್ ಹೇಗಿದೆ?
Team Udayavani, Jun 12, 2018, 6:00 AM IST
ವಿಶ್ವಕಪ್ ಫುಟ್‌ಬಾಲ್ ಕ್ರೇಜ್ ಭಾರತದಲ್ಲಿ ಹೇಗಿದೆ ಎಂಬ ಬಗ್ಗೆ ನಡೆದ ರಾಷ್ಟ್ರ ಮಟ್ಟದ ಸಮೀಕ್ಷೆಯೊಂದು ಬಹಳಷ್ಟು ರೋಚಕ ಸಂಗತಿಗಳನ್ನು ಹೊರಗೆಡಹಿದೆ. “ಎಕ್ಸ್‌ಚೇಂಜ್ 4 ಮೀಡಿಯಾ.ಕಾಮ್’ ಈ ಸಮೀಕ್ಷೆ ನಡೆಸಿದೆ.
ಭಾರತದಲ್ಲಿ ಶೇ. 83ರಷ್ಟು ಮಂದಿ ಫಿಫಾ ವಿಶ್ವಕಪ್ ಬಗ್ಗೆ ಅರಿತಿಕೊಂಡಿರುವುದೇ ಹೆಮ್ಮೆಯ ಸಂಗತಿ. ದೇಶದಲ್ಲಿ ಶೇ. 85ರಷ್ಟು ಮಂದಿ ಫುಟ್‌ಬಾಲ್ ಪಂದ್ಯಗಳನ್ನು ವೀಕ್ಷಿಸುವ ಯೋಜನೆ ಹಾಕಿಕೊಂಡಿದ್ದಾರೆ. ಇದರಲ್ಲಿ ಶೇ. 31ರಷ್ಟು ಮಂದಿ ಅಪ್ಪಟ ಫುಟ್‌ಬಾಲ್ ಅಭಿಮಾನಿಗಳು. ಇವರು ಎಲ್ಲ ಪಂದ್ಯವನ್ನೂ ನೋಡಲು ಬಯಸಿದ್ದಾರೆ. ಉಳಿದಂತೆ ಶೇ. 28ರಷ್ಟು ಮಂದಿ ತಮ್ಮ ನೆಚ್ಚಿನ ತಂಡಗಳ ಆಟವನ್ನಷ್ಟೇ ನೋಡಲು ನಿರ್ಧರಿಸಿದ್ದಾರೆ. ಶೇ. 26 ಮಂದಿ ಸಮಯ ಸಂದರ್ಭ ನೋಡಿಕೊಂಡು ಪಂದ್ಯ ವೀಕ್ಷಿಸಲಿದ್ದಾರೆ. ಕೇವಲ ಶೇ. 15ರಷ್ಟು ಜನರಷ್ಟೇ ಯಾವುದೇ ಪಂದ್ಯ ವೀಕ್ಷಿಸುವುದಿಲ್ಲ ಎಂದಿದ್ದಾರೆ.
ತಮ್ಮ ಗೆಳೆಯರೊಂದಿಗೆ ಅಥವಾ ಕುಟುಂಬದ ವರೊಂದಿಗೆ ಪಂದ್ಯ ವೀಕ್ಷಿಸುವುದು ಶೇ. 85ರಷ್ಟು ಫುಟ್‌ಬಾಲ್ ಪ್ರಿಯರ ಬಯಕೆ. ಶೇ. 69 ಮಂದಿ ಸಹೋದ್ಯೋಗಿಗಳೊಂದಿಗೆ ನೋಡುವುದಾಗಿ ಹೇಳಿದರೆ, ಶೇ. 62 ಮಂದಿ ಬಾರ್ ಆ್ಯಂಡ್ ರೆಸ್ಟೋರೆಂಟ್‌ಗಳಿಗೆ ಹೋಗಿ ಕಾಲ್ಚೆಂಡಿನ ಕಿಕ್ ಪಡೆಯಲು ಬಯಸಿದ್ದಾರೆ.
ವಿಶ್ವಕಪ್ ಪಂದ್ಯಗಳನ್ನು ಯಾವುದರಲ್ಲಿ ನೋಡು ತ್ತೀರಿ? ಟಿವಿ, ದೈತ್ಯ ಟೆಲಿವಿಷನ್ ಪರದೆ ಅಥವಾ ಮೊಬೈಲ್ ಇತ್ಯಾದಿಗಳಲ್ಲಿ… ಎಂಬ ಕುರಿತೂ ಈ ಸಮೀಕ್ಷೆ ಸ್ವಾರಸ್ಯಕರ ಅಂಕಿಅಂಶವನ್ನು ಬಿಚ್ಚಿಟ್ಟಿದೆ. 10ರಲ್ಲಿ 6 ಮಂದಿಗೆ (ಶೇ. 62ರಷ್ಟು) ಈಗಲೂ ಟೆಲಿವಿಷನ್ನೇ ಇಷ್ಟ. ಶೇ. 45ರಷ್ಟು ಜನರು ಇಂಟರ್ನೆಟ್‌ನಲ್ಲಿ, ಶೇ. 32ರಷ್ಟು ಜನರು ಮೊಬೈಲ್‌ನಲ್ಲಿ ಹಾಗೂ ಕೇವಲ ಶೇ. 15ರಷ್ಟು ಜನರು ಐಪ್ಯಾಡ್ ಹಾಗೂ ಟ್ಯಾಬ್ಲೆಟ್ಸ್‌ಗಳಲ್ಲಿ ನೋಡುವುದಾಗಿ ಹೇಳಿದ್ದಾರೆ. ಶೇ. 86ರಷ್ಟು ಭಾರತೀಯರು ರಶ್ಯ ಆತಿಥ್ಯದ ಬಗ್ಗೆ ಸಹಮತಿ ವ್ಯಕ್ತಪಡಿಸಿದ್ದಾರೆ.
ಗೆಲ್ಲುವವರು ಯಾರು?
ಸಮೀಕ್ಷೆಯ ವೇಳೆ ಈ ಬಾರಿಯ ಚಾಂಪಿಯನ್ ತಂಡ ಯಾವುದಾಗಬಹುದೆಂಬ ಬಗ್ಗೆಯೂ ಪ್ರಶ್ನೆಯನ್ನು ಕೇಳಲಾಯಿತು. ಅತ್ಯಧಿಕ ಮಂದಿ ಬ್ರಝಿಲ್ ಕಪ್ ಎತ್ತುವುದಾಗಿ ಹೇಳಿದರು. (ಶೇ. 22). ಆರ್ಜೆಂಟೀನಾ (ಶೇ. 14) ಮತ್ತು ಜರ್ಮನಿ (ಶೇ. 13) ಅನಂತರದ ಸ್ಥಾನದಲ್ಲಿವೆ. ಭಾರತೀಯರ ರನ್ನರ್ ಅಪ್ ಲೆಕ್ಕಾಚಾರವೂ ಸ್ವಾರಸ್ಯಕರವಾಗಿದೆ. ಇಲ್ಲಿಯೂ ಬ್ರಝಿಲ್ ತಂಡವೇ ಅಗ್ರಸ್ಥಾನದಲ್ಲಿ ಕಾಣಿಸಿಕೊಂಡಿದೆ (ಶೇ. 13). ಜರ್ಮನಿ (ಶೇ. 12) ಮತ್ತು ಆರ್ಜೆಂಟೀನಾ (ಶೇ. 12) ಅನಂತರದ ಸ್ಥಾನ ಪಡೆದಿವೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Himachal Pradesh; ಸಿಎಂಗೆ ತಂದಿದ್ದ ಸಮೋಸಾ ಮಾಯ: ಸಿಐಡಿ ತನಿಖೆ?
Minister Sudhakar: ಸೀಟ್ ಬ್ಲಾಕಿಂಗ್ ದಂಧೆ ವಿರುದ್ಧ ಕ್ರಿಮಿನಲ್ ಕೇಸ್ ಅಸ್ತ್ರ
Trump ಗೆಲ್ಲುತ್ತಿದ್ದಂತೆ ಅಮೆರಿಕ ತೊರೆಯಲು ಜನರಿಂದ ಭರದ ಸಿದ್ಧತೆ
Yogi ‘ಬಟೇಂಗೆ’ಹೇಳಿಕೆ ಒಪ್ಪಲ್ಲ ಎಂದ ಅಜಿತ್: ಮಹಾಯುತೀಲಿ ಬಿರುಕು?
Canada; ನಮ್ಮಲ್ಲಿರುವ ಎಲ್ಲ ಹಿಂದೂಗಳು ಮೋದಿ ಬೆಂಬಲಿಗರಲ್ಲ: ಟ್ರಾಡೋ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.