ಮುಂಬಯಿ-ಅಹ್ಮದಾಬಾದ್ ಬುಲೆಟ್ ಟ್ರೈನ್ ಯೋಜನೆ ವಿಳಂಬ ಸಂಭವ
Team Udayavani, Jun 12, 2018, 11:32 AM IST
ಪಾಲ್‌ಘರ್, ಭಾರತ/ಟೋಕಿಯೋ : ಜಪಾನಿನ 17 ಶತಕೋಟಿ ಡಾಲರ್ ನೆರವಿನಲ್ಲಿ ರೂಪಿಸಲಾಗಿರುವ ಪ್ರಧಾನಿ ನರೇಂದ್ರ ಮೋದಿ ಅವರ ಅತ್ಯಂತ ಮಹತ್ವಾಕಾಂಕ್ಷೆಯ ಮುಂಬಯಿ – ಅಹ್ಮದಾಬಾದ್ ಬುಲೆಟ್ ಟ್ರೈನ್ ಯೋಜನೆಗೆ ಈ ವರ್ಷ ಡಿಸೆಂಬರ್ ಒಳಗಾಗಿ ಭೂ ಸ್ವಾಧೀನವನ್ನು ಪೂರ್ಣಗೊಳಿಸುವ ಗಡುವನ್ನು ಯಶಸ್ವಿಯಾಗಿ ನಿಭಾಯಿಸುವ ಲಕ್ಷಣಗಳು ಕಂಡು ಬರುತ್ತಿಲ್ಲ. ಹಾಗಾಗಿ ಈ ಯೋಜನೆ ವಿಳಂಬವಾಗುವ ಎಲ್ಲ ಸಾಧ್ಯತೆಗಳು ಈಗ ನಿಚ್ಚಳವಾಗುತ್ತಿವೆ.
ಬುಲೆಟ್ ಟ್ರೈನ್ ಯೋಜನೆಗೆ ಅವಶ್ಯವಿರುವ ಭೂಸ್ವಾಧೀನ ಕಾರ್ಯವನ್ನು ಈ ವರ್ಷ ಡಿಸೆಂಬರ್ ಒಳಗೆ ಪೂರ್ತಿಗೊಳಿಸುವುದಕ್ಕೆ ಹಣ್ಣು ಹಂಪಲು ಬೆಳೆಗಾರರ ಪ್ರತಿಭಟನೆಯೇ ಕಾರಣವಾಗಿದೆ. ತಮಗೆ ಜೀವನಾಧಾರವಾಗಿರುವ ಹಣ್ಣು ಹಂಪಲು ಬೆಳೆಯುವ ಪ್ರದೇಶಗಳನ್ನು ಸರಕಾರಕ್ಕೆ ಬಿಟ್ಟುಕೊಟ್ಟರೆ ಮುಂದೆ ತಮ್ಮ ಪಾಡೇನು ಎಂಬ ಪ್ರಶ್ನೆ ಅವರನ್ನು ಕಾಡುತ್ತಿದೆ.
ಹಾಗಿದ್ದರೂ ಭಾರತದ ಈ ಮಹತ್ವಾಕಾಂಕ್ಷೀ ಯೋಜನೆಯ ಪ್ರಗತಿಯನ್ನು ವಾರ-ವಾರದ ನೆಲೆಯಲ್ಲಿ ಕೂಲಂಷವಾಗಿ ಮೇಲುಸ್ತುವಾರಿ ನಡೆಸುತ್ತಿರುವ ಪ್ರಧಾನಿ ಕಾರ್ಯಾಲಯ, ಈಗ ಎದುರಾಗಿರುವ ಭೂ ಸ್ವಾಧೀನತೆಯ ಎಲ್ಲ ಎಡರು ತೊಡರುಗಳನ್ನು ನಿಶ್ಚಿತವಾಗಿಯೂ ನಿವಾರಿಸಲಾಗುವುದು ಎಂದು ಟೋಕಿಯೋದಲ್ಲಿನ ಅಧಿಕಾರಿಗಳಿಗೆ ಮನವರಿಕೆ ಮಾಡುತ್ತಿದೆ. ಇದೇ ರೀತಿ ಮಹಾರಾಷ್ಟ್ರದ ಮಾವು ಮತ್ತು ಚಿಕ್ಕು (ಸಪೋಟಾ) ಬೆಳೆಯುವ ರೈತರ ಮನವೊಲಿಸುವ ಯತ್ನವನ್ನು ಕೂಡ ಪಿಎಂಓ ಅಧಿಕಾರಿಗಳು ಜಾರಿಯಲ್ಲಿರಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Video: ಸಿಕ್ಕ ಸಿಕ್ಕವರನ್ನು ಎತ್ತಿ ಬಿಸಾಕಿದ ಗೂಳಿ… 3 ಗಂಟೆಗಳ ಕಾರ್ಯಾಚರಣೆ ಬಳಿಕ ಸೆರೆ
Udaipur Palace: ರಾಜಮನೆತನದ ಎರಡು ಗುಂಪುಗಳ ನಡುವೆ ಘರ್ಷಣೆ: ಮೂವರಿಗೆ ಗಾಯ
Parliament Session: ಗೂಂಡಾಗಿರಿ ಮೂಲಕ ಸಂಸತ್ ಮೇಲೆ ನಿಯಂತ್ರಣ ಸಾಧಿಸಲು ಯತ್ನ: ಮೋದಿ
Mosque survey: ಸಂಭಲ್ ಹಿಂಸೆ: ಎಸ್ಪಿ ಸಂಸದ ಸೇರಿ ಹಲವರ ವಿರುದ್ಧ ಕೇಸು
Adani Group: ಸಾಲ ಅಗತ್ಯವಿಲ್ಲ: ಅದಾನಿ “ಆರ್ಥಿಕ ಶಕ್ತಿ’ ಪ್ರದರ್ಶನ
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Pushpa 2: ಕಿಸಿಕ್ ಎಂದು ಕುಣಿದ ಶ್ರೀಲೀಲಾ
ಬೆಳ್ತಂಗಡಿ: ಗ್ರಾಪಂ 3ಸದಸ್ಯ ಸ್ಥಾನಕ್ಕೆ ಉಪ ಚುನಾವಣೆ, ಕಾಂಗ್ರೆಸ್ ಬೆಂಬಲಿತ 3ಅಭ್ಯರ್ಥಿಗಳ ಜಯ
Video: ಸಿಕ್ಕ ಸಿಕ್ಕವರನ್ನು ಎತ್ತಿ ಬಿಸಾಕಿದ ಗೂಳಿ… 3 ಗಂಟೆಗಳ ಕಾರ್ಯಾಚರಣೆ ಬಳಿಕ ಸೆರೆ
BBK11: ಮೋಕ್ಷಿತಾ ಎರಡು ತಲೆ ನಾಗರಹಾವು ಎಂದ ತ್ರಿವಿಕ್ರಮ್; ನಾಮಿನೇಟ್ ವಿಚಾರವಾಗಿ ವಾಗ್ವಾದ
Udaipur Palace: ರಾಜಮನೆತನದ ಎರಡು ಗುಂಪುಗಳ ನಡುವೆ ಘರ್ಷಣೆ: ಮೂವರಿಗೆ ಗಾಯ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.