ಅಡುಗೆ ಮಾಡಿ ಪ್ರತಿಭಟಿಸಿದ್ರು!
Team Udayavani, Jun 12, 2018, 4:06 PM IST
ಮೊಳಕಾಲ್ಮೂರು: ವೇತನ ಬಿಡುಗಡೆಗೆ ಆಗ್ರಹಿಸಿ ಪಟ್ಟಣ ಪಂಚಾಯತ್ ಹೊರಗುತ್ತಿಗೆ ಪಛರಕಾರ್ಮಿಕರು ಪಪಂ ಕಾರ್ಯಾಲಯದ ಆವರಣದಲ್ಲಿ ನಡೆಸುತ್ತಿರುವ ಅನಿರ್ದಿಷ್ಟಾವಧಿ ಧರಣಿ ಸೋಮವಾರ ಒಂಭತ್ತು ದಿನ ಪೂರೈಸಿತು. ಪ್ರತಿಭಟನಾಕಾರರು ಧರಣಿ ಸ್ಥಳದಲ್ಲೇ ಅಡುಗೆ ಮಾಡಿ ಆಕ್ರೋಶ ವ್ಯಕ್ತಪಡಿಸಿದರು.
ಧರಣಿಗೆ ಬೆಂಬಲ ವ್ಯಕ್ತಪಡಿಸಿದ ಭಾರತ್ ಕಮ್ಯೂನಿಸ್ಟ್ ಪಕ್ಷದ ತಾಲೂಕು ಪ್ರಧಾನ ಕಾರ್ಯದರ್ಶಿ ಜಾಫರ್ ಶರೀಫ್
ಮಾತನಾಡಿ, ಪೌರಕಾರ್ಮಿಕರು ಪಟ್ಟಣದ ನಾಗರಿಕರ ಆರೋಗ್ಯ ಕಾಪಾಡಲು ಚರಂಡಿಗಳಲ್ಲಿನ ಗಲೀಜು, ಬಸ್ ನಿಲ್ದಾಣ ಮತ್ತು ಪಟ್ಟಣದ ಬೀದಿಗಳಲ್ಲಿನ ಕಸ ಮತ್ತು ಕೊಳಚೆ ಪ್ರದೇಶದಲ್ಲಿರುವ ಕೊಳಚೆಯನ್ನು ಸ್ವತ್ಛಗೊಳಿಸುತ್ತಿದ್ದಾರೆ. ಯಾವುದೇ ಸಾಂಕ್ರಾಮಿಕ ರೋಗಗಳು ಹರಡದಂತೆ ಸತತ 22 ವರ್ಷಗಳ ಕಾಲ ಸೇವೆ ಸಲ್ಲಿಸಿದ ಗುತ್ತಿಗೆ ಪೌರಕಾರ್ಮಿಕರಿಗೆ 12 ತಿಂಗಳುಗಳ ಕಾಲ ವೇತನ ನೀಡದಿರುವುದು ನಾಚಿಕೆಗೇಡಿನ ಸಂಗತಿ ಎಂದು ಆರೋಪಿಸಿದರು.
ಪಟ್ಟಣದ 15 ವಾರ್ಡ್‌ಗಳಲ್ಲಿ ಕಸದ ರಾಶಿ ಬಿದ್ದಿದೆ. ಚರಂಡಿಗಳಲ್ಲಿ ಕೊಳಚೆ ತುಂಬಿ ಗಬ್ಬು ನಾರುತ್ತಿದೆ.
ಕೊಳಚೆಯನ್ನು ಸ್ವತ್ಛಗೊಳಿಸದೆ ಕೇವಲ ನಾಲ್ಕು ಕಾಯಂ ಪೌರಕಾರ್ಮಿಕರಿಂದ ಬಸ್ ನಿಲ್ದಾಣದ ಆವರಣದ ಕಸವನ್ನು
ಮಾತ್ರ ಸ್ವತ್ಛಗೊಳಿಸಲಾಗುತ್ತಿದೆ. ಮೇಲಾಧಿಕಾರಿಗಳಿಗೆ ಸ್ವತ್ಛತಾ ಕಾರ್ಯ ಮಾಡಲಾಗಿದೆ ಎಂದು ಸುಳ್ಳು ಮಾಹಿತಿ ನೀಡಲಾಗುತ್ತಿದೆ.
ಆದ್ದರಿಂದ ಪಟ್ಟಣದ ನಾಗರಿಕರೂ ಎಚ್ಚೆತ್ತುಕೊಂಡು ಪಪಂ ಅಧಿಕಾರಿಗಳು ಮತ್ತು ಸರ್ಕಾರದ ಅವೈಜ್ಞಾನಿಕ ಆದೇಶದ
ವಿರುದ್ಧ ಹೋರಾಟಕ್ಕೆ ಬೆಂಬಲ ನೀಡಬೇಕು ಎಂದು ಮನವಿ ಮಾಡಿದರು.
ಪೌರಕಾರ್ಮಿಕ ವೃತ್ತಿಯನ್ನೇ ನಂಬಿರುವ ಈ ನೌಕರರಿಗೆ 12 ತಿಂಗಳುಗಳ ವೇತನ ನೀಡಿಲ್ಲ. ಇದರಿಂದ ಕುಟುಂಬಗಳ
ಜೀವನ ನಿರ್ವಹಣೆ ಕಷ್ಟವಾಗಿದೆ.ಪಟ್ಟಣ ಪಂಚಾಯತ್ ಕೌನ್ಸಿಲ್ ತೀರ್ಮಾನವನ್ನೇ ಧಿಕ್ಕರಿಸಿ ಅಭಿವೃದ್ಧಿ ಕಾರ್ಯ ಕೈಗೊಳ್ಳುವಲ್ಲಿ ಸಂಪೂರ್ಣವಾಗಿ ವಿಫಲವಾಗಿರುವ ಪಪಂ ಮುಖ್ಯಾಧಿಕಾರಿ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು. ಇಲ್ಲದಿದ್ದರೆ ಉಗ್ರ ಪ್ರತಿಭಟನೆ ಮಾಡಲಾಗುವುದು ಎಂದು ಎಚ್ಚರಿಸಿದರು.
ಧರಣಿಯಲ್ಲಿ ಸಿಪಿಐನ ಈರಣ್ಣ, ಬೋರಯ್ಯ, ಸಂದೀಪ್‌ಕುಮಾರ್, ಓಬಣ್ಣ, ಲಕ್ಷ್ಮಣ್ಣ, ಈಶ್ವರ, ಪಾಪಣ್ಣ, ಮಲ್ಲಯ್ಯ, ದುರುಗೇಶ್, ಉಮೇಶ್, ಸುಬಾನಿ, ಗುತ್ತಿಗೆ ಪೌರಕಾರ್ಮಿಕರಾದ ಕೃಷ್ಣಮೂರ್ತಿ, ಕೆ. ರಾಮಣ್ಣ, ಎಚ್. ನಾಗರಾಜ್, ಬಿ. ಸಿದ್ದಪ್ಪ, ತುಪ್ಪದಮ್ಮ, ಓಬಕ್ಕ, ಮಲ್ಲಮ್ಮ, ಗೋಪಿ, ಟಿ. ದಾಸಪ್ಪ, ಬಡಪ್ಪ, ಕುಮಾರಸ್ವಾಮಿ, ಡಿ. ಸಿದ್ದಪ್ಪ, ಎಚ್. ಮರಿಸ್ವಾಮಿ, ಎಂ .ಹನುಮಂತಪ್ಪ, ಗಂಗಮ್ಮ, ತಿಮ್ಮಕ್ಕ, ತಿಮ್ಮಣ್ಣ, ಜಯಣ್ಣ ಭಾಗವಹಿಸಿದ್ದರು
ಪಪಂ ಗುತ್ತಿಗೆ ಪೌರಕಾರ್ಮಿಕರು ಅನಿರ್ದಿಷ್ಟಾವಧಿ ಧರಣಿ ಕೈಗೊಂಡು ಒಂಭತ್ತು ದಿನ ಕಳೆದರೂ ತಹಶೀಲ್ದಾರ್, ಜಿಲ್ಲಾಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪೌರಕಾರ್ಮಿಕರ ಅಹವಾಲು ಆಲಿಸಿಲ್ಲ. ಪಪಂ ಮುಖ್ಯಾಧಿಕಾರಿಗಳು ನೀಡುವ
ಸುಳ್ಳು ವರದಿಯನ್ನು ನಂಬಿ ಎಲ್ಲಾ ಸರಿ ಇದೆ ಎಂದು ನಿರ್ಲಕ್ಷ್ಯ ಮಾಡದೆ ವಸ್ತುಸ್ಥಿತಿಯ ಪರಿಶೀಲನೆ ನಡೆಸಬೇಕು.
ಜಾಫರ್ ಶರೀಫ್, ಸಿಪಿಐ ತಾಲೂಕು ಪ್ರಧಾನ ಕಾರ್ಯದರ್ಶಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Chitradurga: ಒಟ್ಟು 6 ಜನ ಅಕ್ರಮ ಬಾಂಗ್ಲಾ ವಲಸಿಗರ ಪತ್ತೆ
Chitradurga: ಪತಿ ಸಾವು: ಜಿಗುಪ್ಸೆಯಿಂದ ಪತ್ನಿ, ಪುತ್ರಿ ನೇಣಿಗೆ ಶರಣು
Holalkere: ಕೆರೆಗೆ ಉರುಳಿದ ಕಾರು: ಅತ್ತೆ-ಸೊಸೆ ಸಾವು
Bharamasagara: ಅರಣ್ಯ ಇಲಾಖೆ ಕಾರ್ಯಾಚರಣೆ; ಗ್ರಾಮಸ್ಥರ ನಿದ್ದೆಗೆಡಿಸಿದ್ದ ಚಿರತೆ ಸೆರೆ
Chitradurga: ಅಡಿಕೆ ಖರೀದಿಸಿ ಹಣ ನೀಡದೆ ವಂಚನೆ; ಆತ್ಮಹ*ತ್ಯೆಗೆ ಶರಣಾದ ವ್ಯಾಪಾರಿ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.