ಒಂದು ಜಂಕ್ಷನ್‌; ಸಮಸ್ಯೆ ಹಲವು, ಜನರ ಗೋಳು!


Team Udayavani, Jun 13, 2018, 2:30 AM IST

morgangate-12-6.jpg

ಮಹಾನಗರ: ವರುಣ ತನ್ನ ಆರ್ಭಟ ಆರಂಭಿಸಿ ಕೆಲವೇ ದಿನಗಳಾಗಿವೆಯಷ್ಟೇ; ಆದರೆ ಇಲ್ಲಿನ ಜನರ ಸಮಸ್ಯೆ ಮಳೆಗಾಲ ಸಹಿತ ಎಲ್ಲ ಕಾಲಕ್ಕೂ ಶಾಶ್ವತವಾಗಿ ಇರವಂತದ್ದು. ಏಕೆಂದರೆ ಇದೊಂದು ನಗರ ವ್ಯಾಪ್ತಿಯಲ್ಲಿರುವ ನಾಲ್ಕು ಕಡೆಯ ರಸ್ತೆಗಳನ್ನು ಸಂಪರ್ಕಿಸುವ ಒಂದು ಜಂಕ್ಷನ್‌. ನಗರದ ಮಾರ್ಗನ್‌ ಗೇಟ್ಸ್‌ ಜಂಕ್ಷನ್‌ ನಡುವಿನ ರಸ್ತೆ ಮಳೆಗಾಲ ಆರಂಭವಾದ ಎರಡು ವಾರದಲ್ಲೇ ಗುಂಡಿ ಬಿದ್ದು ವಾಹನಗಳ ಸಂಚಾರಕ್ಕೆ ಅಡ್ಡಿಯುಂಟು ಮಾಡಿದೆ. ಈ ರಸ್ತೆಯಲ್ಲೇ ಮಳೆ ನೀರು ಹಾಗೂ ಒಳಚರಂಡಿ ನೀರು ಹರಿಯುತ್ತಿದೆ. ಪಾದಚಾರಿಗಳ ಸಂಚಾರಕ್ಕೆ ಫುಟ್‌ ಪಾತ್‌ ಕೂಡ ಇಲ್ಲ. ಇನ್ನು ಕೆಲವು ಕಡೆ ಅಳವಡಿಸಲಾಗಿರುವ ತುಂಡಾದ ಸ್ಲ್ಯಾಬ್‌ ಗಳು ಅಪಾಯದ ಮುನ್ಸೂಚನೆ ನೀಡುತ್ತಿವೆ. ಹೀಗಾಗಿ, ಈ ಭಾಗದ ಜನರು, ಈ ರಸ್ತೆಯಲ್ಲಿ ಸಂಚರಿಸುತ್ತಿರುವ ವಾಹನ ಸವಾರರು ದಿನನಿತ್ಯ ಸ್ಥಳೀಯಾಡಳಿತಕ್ಕೆ ಹಿಡಿಶಾಪ ಹಾಕುವ ಪರಿಸ್ಥಿತಿ ನಿರ್ಮಾಣವಾಗಿದೆ.

ಜಂಕ್ಷನ್‌ ನಲ್ಲೇ ಗುಂಡಿಗಳು

ಮಳೆಗಾಲ ಆರಂಭವಾಗಿ ಕೆಲವೇ ದಿನಗಳಾದರೂ ಈ ಭಾಗದ ರಸ್ತೆಗಳಲ್ಲಿ ಗುಂಡಿ ಬಿದ್ದಿವೆ. ಇದರಿಂದ ವಾಹನ ಸವಾರರು ಹೊಂಡಗುಂಡಿಗಳ ಮೂಲಕವೇ ಸಾಗಬೇಕಾದ ಸ್ಥಿತಿ ನಿರ್ಮಾಣವಾಗಿದೆ. ಮಾರ್ನಮಿಕಟ್ಟೆಯಿಂದ ಮೋರ್ಗನ್‌ ಗೇಟ್‌ ಮೂಲಕ ಮೊಗೇರ್‌, ಮಂಗಳಾದೇವಿ ಸಹಿತ ನಗರದ ಬಹುತೇಕ ಭಾಗಗಳಿಗೆ ತೆರಳುವ ರಸ್ತೆಗಳ ಮುಖ್ಯ ಜಂಕ್ಷನ್‌ ಇದಾಗಿರುವುದರಿಂದ ಈ ಭಾಗದಲ್ಲಿ ದಿನನಿತ್ಯ ವಾಹನದಟ್ಟಣೆ ಹಾಗೂ ಸಂಚಾರ ದಟ್ಟಣೆ ಇರುತ್ತದೆ. ಮಳೆಯಿಂದ ರಸ್ತೆಗಳಲ್ಲಿ ಉಂಟಾದ ಗುಂಡಿಗಳಿಂದ ನಿತ್ಯ ಈ ಭಾಗದಲ್ಲಿ ಟ್ರಾಫಿಕ್‌ ಜಾಮ್‌ ಹಾಗೂ ಅಪಘಾತಗಳು ಸಾಮಾನ್ಯವಾಗಿವೆ. 

ಒಳಚರಂಡಿ ನೀರಿನಿಂದ ವಾಸನೆ

ಜಂಕ್ಷನ್‌ ನಿಂದ ಮಂಗಳಾದೇವಿ ರಸ್ತೆ ಮಾರ್ಗವಾಗಿ ಮುಂದೆ ಸಾಗಿದರೆ ಒಳಚರಂಡಿ ಗಬ್ಬು ವಾಸನೆಯಿಂದ ಮೂಗು ಮುಚ್ಚಿಕೊಂಡು ಹೋಗಬೇಕಾದ ಸ್ಥಿತಿ ಇದೆ. ಖಾಸಗಿ ಕಟ್ಟಡವೊಂದರ ಚರಂಡಿ ವ್ಯವಸ್ಥೆ ಹದಗೆಟ್ಟಿರುವುದರಿಂದ ಮಳೆನೀರು ಹರಿಯಬೇಕಾದ ಚರಂಡಿಗೆ ಒಳಚರಂಡಿ ಸಂಪರ್ಕವನ್ನು ನೇರವಾಗಿ ಬಿಟ್ಟಿರುವುದರಿಂದ ಗಬ್ಬು ವಾಸನೆ ಬರುತ್ತಿದೆ. ಇದರೊಂದಿಗೆ ಮಳೆ ಬಂದರೆ ಆ ಕೊಳಜೆ ನೀರು ರಸ್ತೆಯಲ್ಲೇ ಹರಿಯುವಂತಾಗಿದೆ. ಇದರಿಂದ ಸ್ಥಳೀಯರು ಸಾಂಕ್ರಾಮಿಕ ರೋಗ ಹರಡುವ ಭೀತಿಯಿಂದ ದಿನ ದೂಡುತ್ತಿದ್ದಾರೆ.

ಬೀಳುವಂತಿದೆ ಸಿಸಿಟಿವಿ ಕಂಬ 

ಪೊಲೀಸರು ಸಾರ್ವಜನಿಕ ಹಿತಾಸಕ್ತಿಯಿಂದ ಜಂಕ್ಷನ್‌ ನಲ್ಲಿ ಅಳವಡಿಸಲಾದ ಸಿಸಿಟಿವಿ ಕೆಮರಾದ ಕಂಬಕ್ಕೆ ಬಸ್ಸೊಂದು ಗುದ್ದಿರುವುದರಿಂದ ಅದು ಒಂದು ಬದಿಗೆ ವಾಲಿದೆ. ಇನ್ನೊಂದು ಸಲ ಯಾವುದೇ ವಾಹನಗಳು ತಾಗಿದರೂ ಸಿಸಿಟಿವಿ ಕೆಮರಾದ ಕಂಬ ನೆಲಕ್ಕುರುಳುವುದು ಸತ್ಯ. ಈ ಬಗ್ಗೆ ಸಂಬಂಧಪಟ್ಟವರು ಕ್ರಮ ಕೈಗೊಳ್ಳಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.

ಅಪಾಯಕಾರಿ ಟ್ರಾನ್ಸ್‌ಫಾರ್ಮರ್‌ ಫೀಸ್‌ ಬಾಕ್ಸ್‌
ಜಂಕ್ಷನ್‌ ಸಮೀಪದಲ್ಲೇ ಇರುವ ಟ್ರಾನ್ಸ್‌ಫಾರ್ಮರ್‌ ನಲ್ಲಿ ಫೀಸ್‌ ಬಾಕ್ಸ್‌ ಅಳವಡಿಸಲಾಗಿದ್ದು, ಅದು ಇತ್ತೀಚೆಗೆ ಸುರಿದ ಭಾರೀ ಗಾಳಿ ಮಳೆಗೆ ಕೆಳಕ್ಕೆ ಜಾರಿದೆ. ಇದನ್ನು ಮಕ್ಕಳು ಮುಟ್ಟಿದರೆ ಅಪಾಯ ಕಟ್ಟಿಟ್ಟ ಬುತ್ತಿ. ಮಳೆಗಾಲ ಆರಂಭವಾದರೆ ವಿದ್ಯುತ್‌ ಗಳಲ್ಲಿ ಏರುಪೇರಾಗುತ್ತದೆ. ಇಂತಹ ಸಂದರ್ಭದಲ್ಲಿ ಇಂತಹ ಅವ್ಯವಸ್ಥೆಯಿಂದ ಜನರು ಗಾಬರಿಗೊಂಡಿದ್ದಾರೆ.

ಫುಟ್‌ಪಾತ್‌, ಸ್ಲ್ಯಾಬ್‌ ಗಳ ಕಥೆ ಹೇಳುವಂತಿಲ್ಲ

ಈ ಭಾಗದಲ್ಲಿ ಜನರಿಗೆ ಓಡಾಡಲು ಸೂಕ್ತ ಫುಟ್‌ ಪಾತ್‌ ವ್ಯವಸ್ಥೆ ಕಲ್ಪಿಸದೆ ಇರುವುದರಿಂದ ಜನರು ರಸ್ತೆಯಲ್ಲೇ ನಡೆದುಕೊಂಡು ಹೋಗ ಬೇಕಾಗಿದೆ. ಮಳೆಗಾಲ ಆರಂಭವಾಗಿರುವುದರಿಂದ ವಾಹನಗಳು ಚಲಿಸುವಾಗ ಮಳೆ ನೀರು ಪಾದಚಾರಿಗಳ ಮೇಲೆ ಎರಚುತ್ತದೆ. ಈ ಸಮಸ್ಯೆಯಿಂದ ತಪ್ಪಿಸಿಕೊಳ್ಳಲು ಕೊಡೆ ಅಥವಾ ಇನ್ನಿತರ ಮಾರ್ಗಗಳನ್ನು ಅನುಸರಿಸಬೇಕಾದ ಸ್ಥಿತಿ ನಿರ್ಮಾಣವಾಗಿದೆ. ಮಳೆಗಾಲಕ್ಕೂ ಮುನ್ನ ಈ ಸಮಸ್ಯೆಗಳಿಗೆ ಪರಿಹಾರ ಹುಡುಕುವ ಗೋಜಿಗೆ ಸ್ಥಳೀಯಾಡಳಿತ ಹೋಗಿಲ್ಲ  ಎಂಬುದು ಸ್ಥಳೀಯರ ಆರೋಪ.

ಶಾಶ್ವತ ಪರಿಹಾರ ಕೊಡಿ
ಮಾರ್ಗನ್‌ ಗೇಟ್‌ ಜಂಕ್ಷನ್‌ ಹಾಗೂ ಸುತ್ತಮುತ್ತಲಿನ ಜಾಗದಲ್ಲಿ  ಹಲವು ಸಮಸ್ಯೆಗಳು ಇವೆ. ಮಳೆಗಾಲ ಆರಂಭವಾಗಿರುವುದರಿಂದ ಅದು ಇನ್ನಷ್ಟು ಹೆಚ್ಚಾಗಿದೆ. ಈ ಬಗ್ಗೆ ಸಂಬಂಧಪಟ್ಟವರ ಗಮನಕ್ಕೆ ತರಲಾಗಿದೆ. ನಮಗೆ ಈ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಬೇಕಾಗಿದೆ.
– ದೇವದಾಸ್‌ ಶೆಟ್ಟಿ, ಸ್ಥಳೀಯ ನಿವಾಸಿ

– ಪಾದಚಾರಿಗಳಿಗೆ ನಡೆಯಲು ಫ‌ುಟ್‌ ಪಾತ್‌ ಇಲ್ಲ
– ಅಪಾಯಕ್ಕೆ ಆಹ್ವಾನ ನೀಡುತ್ತಿರುವ ತುಂಡಾದ ಸ್ಲ್ಯಾಬ್‌ ಗಳು
– ರಸ್ತೆಯಲ್ಲೇ ಗುಂಡಿಗಳು; ವಾಹನ ಸವಾರರ ಪರದಾಟ

ಮುಂಗಾರು ಆರಂಭವಾಗಿ ವಾರ ಕಳೆದಿಲ್ಲ; ಆಗಲೇ ನಗರದ ಕೆಲವು ರಸ್ತೆಗಳಲ್ಲಿ ಹೊಂಡಗಳು ಕಾಣಿಸಿಕೊಂಡಿವೆ. ಕಳೆದ ವರ್ಷ ಮಳೆಗಾಲ ಮುಗಿಯುವ ವೇಳೆಗೆ ನಗರದ ಬಹುತೇಕ ಡಾಮರು ರಸ್ತೆಗಳಲ್ಲಿ ಹೊಂಡಗಳು ಸೃಷ್ಟಿಯಾಗಿ ವಾಹನ ಸವಾರರು ನಿತ್ಯ ಪರದಾಡುವಂತಾಗಿತ್ತು. ಹೀಗಿರುವಾಗ, ಮಹಾನಗರ ಪಾಲಿಕೆಯು ಈಗಲೇ ಎಚ್ಚೆತ್ತುಕೊಂಡು ಈ ರಸ್ತೆಗಳ ದುರಸ್ತಿಗೆ ಗಮನಹರಿಸಿದರೆ ಉತ್ತಮ ಎನ್ನುವುದು ನಗರವಾಸಿಗಳ ಅಭಿಪ್ರಾಯ. ಈ ಬಗ್ಗೆ  ಸುದಿನ ರಿಯಾಲಿಟಿ ಚೆಕ್‌ ನಡೆಸಿದ್ದು, ಸಂಬಂಧಪಟ್ಟ ಅಧಿಕಾರಿಗಳ ಗಮನಸೆಳೆಯುವ ಪ್ರಯತ್ನ ಮಾಡಿದೆ. ಇದೇ ರೀತಿಯ ರಸ್ತೆಗಳಿರುವುದು ಗಮನಕ್ಕೆ ಬಂದರೆ ಓದುಗರು ಕೂಡ ಫೋಟೋ ಸಹಿತ ವಿವರಣೆಯನ್ನು ನಮ್ಮ ವಾಟ್ಸಪ್‌ ಸಂಖ್ಯೆ 9900567000ಗೆ ಕಳುಹಿಸಬಹುದು.

— ಪ್ರಜ್ಞಾ ಶೆಟ್ಟಿ

ಟಾಪ್ ನ್ಯೂಸ್

5-agri

Bengaluru: ಸಾವಯವ, ಸಿರಿಧಾನ್ಯ ಉತ್ಪನ್ನಕ್ಕೆ ಮುಗಿಬಿದ್ದ ಜನ

24 Karnataka players in IPL Mega Auction; Here is the list

IPL Mega Auction: ಅದೃಷ್ಟ ಪರೀಕ್ಷೆಯಲ್ಲಿ ಕರ್ನಾಟಕದ 24 ಮಂದಿ ಆಟಗಾರರು; ಇಲ್ಲಿದೆ ಪಟ್ಟಿ

Tragedy: ಓವರ್ ಟೇಕ್ ಮಾಡಲು ಹೋಗಿ ಭೀಕರ ಅಪಘಾತ… ನವ ವಧು-ವರ ಸೇರಿ 7 ಮಂದಿ ಮೃತ್ಯು

Tragedy: ಓವರ್ ಟೇಕ್ ಮಾಡಲು ಹೋಗಿ ಭೀಕರ ಅಪಘಾತ… ನವ ವಧು-ವರ ಸೇರಿ 7 ಮಂದಿ ಮೃತ್ಯು

jamia

Jamia Millia Islamia: ಇಸ್ಲಾಂಗೆ ಮತಾಂತರಗೊಳ್ಳಿ ಅಥವಾ ಅತ್ಯಾಚಾರಕ್ಕೆ ಒಳಗಾಗಿ: ಭಾರಿ ಆರೋಪ

Belagavi: ವಿವಾಹಿತ ಮಹಿಳೆ ಮತ್ತು ತಾಯಿಯ ಸೀರೆ ಬಿಚ್ಚಿ ಹಲ್ಲೆ ನಡೆಸಿದ ನೆರೆಹೊರೆಯವರು!

Tamil Director: ಖ್ಯಾತ ತಮಿಳು ಚಿತ್ರ ನಿರ್ದೇಶಕ ಸುರೇಶ್ ಸಂಗಯ್ಯ ನಿಧನ

Tamil Director: ಖ್ಯಾತ ತಮಿಳು ಚಿತ್ರ ನಿರ್ದೇಶಕ ಸುರೇಶ್ ಸಂಗಯ್ಯ ವಿಧಿವಶ

SMAT: ಸಯ್ಯದ್‌ ಮುಷ್ತಾಕ್‌ ಅಲಿ ಕೂಟಕ್ಕೆ ಬಲಿಷ್ಠ ಕರ್ನಾಟಕ ತಂಡ ಪ್ರಕಟ

SMAT 2024: ಸಯ್ಯದ್‌ ಮುಷ್ತಾಕ್‌ ಅಲಿ ಕೂಟಕ್ಕೆ ಬಲಿಷ್ಠ ಕರ್ನಾಟಕ ತಂಡ ಪ್ರಕಟ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Digi-Arrest

Mangaluru: ಡಿಜಿಟಲ್‌ ಅರೆಸ್ಟ್‌, ಷೇರು ಮಾರುಕಟ್ಟೆ ಹೂಡಿಕೆ ವಂಚನೆ ಪ್ರಕರಣ; ಮೂವರ ಬಂಧನ

1-qweqwe

ವಿಡಿಯೋ | Mangaluru; ಕದ್ರಿ ಪೊಲೀಸ್ ಠಾಣೆ ಬಳಿ ಇದ್ದಕ್ಕಿದ್ದಂತೆ ಹೊತ್ತಿ ಉರಿದ ಕಾರು

6

Hampanakatte: ಗುಟ್ಕಾ ಉಗುಳುವವರು, ಧೂಮಪಾನಿಗಳ ಹಾವಳಿ

5

Mangaluru: ತೆರೆದ ತೋಡಿನಲ್ಲಿ ಕೊಳಚೆ ನೀರು ಹರಿಯುವುದು ನಿಂತಿಲ್ಲ

4(1

Mangaluru: ಪಂಪ್‌ವೆಲ್‌-ಪಡೀಲ್‌ ನಡುವಿನ ಚತುಷ್ಪಥ ಕಾಮಗಾರಿ 3 ವರ್ಷ ಕಳೆದರೂ ಅಪೂರ್ಣ

MUST WATCH

udayavani youtube

ಕಾರಿನ ಟಯರ್ ಒಳಗಿತ್ತು ಬರೋಬ್ಬರಿ 50 ಲಕ್ಷ

udayavani youtube

ಹೊಸ ತಂತ್ರಜ್ಞಾನಕ್ಕೆ ತೆರೆದುಕೊಂಡ ತುಳುನಾಡ ಕಂಬಳ

udayavani youtube

ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಕಾರ್ತಿಕ ಲಕ್ಷದೀಪೋತ್ಸವ

udayavani youtube

ಪುಂಗನೂರು ತಳಿಯ ಹಾಲು ಯಾವೆಲ್ಲ ಕಾಯಿಲೆಗಳನ್ನು ಗುಣಪಡಿಸುತ್ತದೆ ?

udayavani youtube

ಪುಸ್ತಕ ನೋಡುವುದಿಲ್ಲ, ಗುರುವಿಲ್ಲ ಆದರೂ ಕಲೆ ತಾನಾಗಿಯೇ ಒಲಿದು ಬಂತು

ಹೊಸ ಸೇರ್ಪಡೆ

5-agri

Bengaluru: ಸಾವಯವ, ಸಿರಿಧಾನ್ಯ ಉತ್ಪನ್ನಕ್ಕೆ ಮುಗಿಬಿದ್ದ ಜನ

ಘನತ್ಯಾಜ್ಯ ವಿಲೇವಾರಿ ಮಾಡದ ಪಾಲಿಕೆ ವಿರುದ್ದ ಲೋಕಾಯುಕ್ತ ಸ್ವಯಂ ಪ್ರಕರಣ ದಾಖಲು

Kalaburagi: ಘನತ್ಯಾಜ್ಯ ವಿಲೇವಾರಿ ಮಾಡದ ಪಾಲಿಕೆ ವಿರುದ್ದ ಲೋಕಾಯುಕ್ತ ಸ್ವಯಂ ಪ್ರಕರಣ ದಾಖಲು

9-bng

Bengaluru: ಭುವನೇಶ್ವರಿ ಪ್ರತಿಮೆಗೆ ಹಾನಿ: ಆಕ್ರೋಶ

8-bng

Bengaluru: ಕದ್ದ ಮೊಬೈಲ್‌ ಕೊರಿಯರ್‌ ಮೂಲಕ ಕೇರಳಕ್ಕೆ ರವಾನೆ!

Siraguppa: ಮುಂಜಾನೆ ತಾಲೂಕಿನಲ್ಲಿ ದಟ್ಟ ಮಂಜು… ವಾಹನ ಸವಾರರ ಪರದಾಟ

Siraguppa: ಮುಂಜಾನೆ ತಾಲೂಕಿನಲ್ಲಿ ದಟ್ಟ ಮಂಜು… ವಾಹನ ಸವಾರರ ಪರದಾಟ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.