ಹವ್ಯಕ ವೆಲ್ಫೇರ್ ಸಂಸ್ಥೆ: ಅಖಿಲ ಭಾರತ ಕನ್ನಡ ಕವನ ಸ್ಪರ್ಧೆಗೆ ಆಹ್ವಾನ
Team Udayavani, Jun 13, 2018, 4:33 PM IST
ಮುಂಬಯಿ: ಹವ್ಯಕ ವೆಲ್ಫೇರ್ ಸಂಸ್ಥೆ ಮುಂಬಯಿ ವತಿಯಿಂದ ಕರ್ನಾಟಕ ಸಾಹಿತ್ಯ ಅಕಾಡೆಮಿ ಗೌರವ ಪ್ರಶಸ್ತಿ ಪುರಸ್ಕೃತ, ಕನ್ನಡದ ಉದ್ದಾಮ ಕವಿ ದಿ| ವಿ. ಜಿ. ಭಟ್ಟರ ಸ್ಮರಣಾರ್ಥಕವಾಗಿ ಅಖೀಲ ಭಾರತ ಕವನ ಸ್ಪರ್ಧೆಯನ್ನು ಆಯೋಜಿಸಲಾಗಿದೆ.
ಆಸಕ್ತರು ಯಾವುದೇ ವಿಷಯದ ಕುರಿತಂತೆ ಕನ್ನಡ ಕವಿತೆಗಳನ್ನು ರಚಿಸಿ ಕಳುಹಿಸಬಹುದು. ಸ್ಪರ್ಧೆಗೆ ಯಾವುದೇ ರೀತಿಯ ಪ್ರವೇಶ ಶುಲ್ಕವಿಲ್ಲ. ವಿಜೇತ ಸ್ಪರ್ಧಿಗಳಿಗೆ ಪ್ರಥಮ 10 ಸಾವಿರ ರೂ., ದ್ವಿತೀಯ 5 ಸಾವಿರ ರೂ., ತೃತೀಯ 3 ಸಾವಿರ ರೂ. ಹಾಗೂ ಪ್ರೋತ್ಸಾಹಕ 1 ಸಾವಿರ ರೂ. ನಗದು ಬಹುಮಾನವನ್ನು ನೀಡಲಾಗುವುದು. ಕವನಗಳ ಸ್ವರಚಿತವಾಗಿದ್ದು, ಅನುವಾದ, ಅನುಕರಣೆ ಆಗಿರಕೂಡದು ಹಾಗೂ ಕವನಗಳು ಸುಮಾರು ಮೂವತ್ತು ಸಾಲಿನ ಮಿತಿಯಲ್ಲಿದ್ದು, ಕಾಗದದ ಒಂದೇ ಮಗ್ಗುಲಲ್ಲಿ ಚಿತ್ತಿಲ್ಲದಂತೆ ಸ್ಪುಟವಾಗಿ ಬರೆದಿರಬೇಕು. ಹಸ್ತ ಲಿಖೀತ ಅಥವಾ ಕಂಪ್ಯೂಟರ್ ಮುದ್ರಿತವಾಗಿದ್ದರೂ ಸ್ಪರ್ಧೆಗೆ ಪರಿಗಣಿಸಲಾಗುವುದು.
ಕವನದ ಕವಿಗಳ ಹೆಸರು, ವಿಳಾಸ, ಮೊಬೈಲ್ ಸಂಖ್ಯೆ ಹಾಗೂ ಇಮೇಲ್‌ನ್ನು ಪ್ರತ್ಯೇಕ ಕಾಗದದಲ್ಲಿ ಬರೆದಿರಬೇಕು. ಸ್ಪರ್ಧೆಗೆ ಕಳುಹಿಸಿದ ಕವನಗಳು ಫಲಿತಾಂಶ ಬರುವ ತನಕ ಬೇರೆ ಎಲ್ಲಿಯೂ ಪ್ರಕಟವಾಗಬಾರದು. ಒಬ್ಬರು ಒಂದೇ ಕವನವನ್ನು ಬರೆದು ಕಳುಹಿಸತಕ್ಕದ್ದು. ಸ್ಪರ್ಧೆಗೆ ಬಂದ ಕವನಗಳನ್ನು ಹಿಂತಿರುಗಿಸಲಾಗುವುದಿಲ್ಲ. ತೀರ್ಪುಗಾರರ ತೀರ್ಮಾನವೇ ಅಂತಿಮವಾಗಿದ್ದು, ಕವನಗಳನ್ನು ಜುಲೈ 30 ರೊಳಗೆ ಕಳುಹಿಸಬಹುದು.
Havyaka Welfare Trust, B-207, Valmiki Apts, Near Pharmacy College, Sundar Nagar, Kalina, Vidyanagari P.O, Mumbai-400098ಅಥವಾ [email protected] ಇಲ್ಲಿಗೆ ಕಳುಹಿಸಿಕೊಡುವಂತೆ ಸಂಸ್ಥೆಯ ಪ್ರಕಟನೆ ತಿಳಿಸಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Desi Swara: ಲಕ್ಸಂಬರ್ಗ್ ಕನ್ನಡೋತ್ಸವದಲ್ಲಿ ಬಿಲ್ಲಹಬ್ಬ
ಇಂಗ್ಲೆಂಡ್‌ನ ರಾದರಮ್ ನದಿ ತೀರದಲ್ಲರಳಿದ ಸುವರ್ಣ ಕುಸುಮ: ಒಂದು ಕೂಚಿಪುಡಿ ರಂಗಪ್ರವೇಶ
Desi Swara@150:ವಿದೇಶ ನೆಲದಲ್ಲಿ ಕರ್ನಾಟಕದ ಖಾದ್ಯವನ್ನು ಉಣಬಡಿಸುತ್ತಿರುವ ದಂಪತಿ
Desi Swara@150: ದಾಸರೆಂದರೆ ದಾಸರಯ್ಯಾ…ಸಾಹಿತ್ಯ ಲೋಕದಲ್ಲಿ “ಕನ್ನಡ ಮತ್ತು ಕರ್ನಾಟಕ’
Desi Swra@150:ಕೊವೆಂಟ್ರಿಯಲ್ಲಿ ಕನ್ನಡಿಗರ ಮನರಂಜಿಸಿದ ಅನುರಾಧ ಭಟ್
MUST WATCH
ಹೊಸ ಸೇರ್ಪಡೆ
Wayanad Results 2024:ವಯನಾಡ್ ನಲ್ಲಿ ಪ್ರಿಯಾಂಕಾಗೆ 3.68 ಲಕ್ಷಕ್ಕೂ ಅಧಿಕ ಮತಗಳ ಮುನ್ನಡೆ!
Video: ವಿದ್ಯಾರ್ಥಿಯಿಂದ ಕಾಲು ಒತ್ತಲು ಹೇಳಿ ಶಾಲೆಯಲ್ಲೇ ವಿಶ್ರಾಂತಿಗೆ ಜಾರಿದ ಶಿಕ್ಷಕ
Sandur Result: ಭದ್ರಕೋಟೆಯಲ್ಲಿ ಮತ್ತೆ ಗೆದ್ದ ಕಾಂಗ್ರೆಸ್: ಇಲ್ಲಿದೆ ಮತಎಣಿಕೆಯ ಪೂರ್ಣವಿವರ
Bengaluru: ಠಾಣೆಯಲ್ಲಿ ಪೊಲೀಸ್ ಸಿಬ್ಬಂದಿ ನಡುವೆ ಜಗಳ: ವಿಡಿಯೋ ವೈರಲ್
Karnataka By Poll Results: ಜೆಡಿಎಸ್ ಅಂತಿಮ ದಿನ ಎಣಿಸತೊಡಗಿದೆ: ಸಿ.ಪಿ.ಯೋಗೇಶ್ವರ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.