115 ವರ್ಷ ಹಳೆಯ ಧೂಳಂಗಡಿ ಶಾಲೆ ದುಃಸ್ಥಿತಿ ಕೇಳ್ಳೋರಿಲ್ಲ!
Team Udayavani, Jun 14, 2018, 6:00 AM IST
ಕೋಟ: ಬಾಲಕರಿಗೆ ಸರಿಯಾದ ಶೌಚಾಲಯ ಇಲ್ಲ,ಕಟ್ಟಡವೂ ಸೋರುತ್ತಿದೆ,ತರಗತಿ ಕೋಣೆ ಇಕ್ಕಟ್ಟಾಗಿದೆ. ಹೊಸ ಕಟ್ಟಡಕ್ಕೆ ಎಷ್ಟೇ ಬಾರಿ ಮನವಿ ಸಲ್ಲಿಸಿದರೂ ಸರಕಾರದಿಂದ ಪುರಸ್ಕಾರವಿಲ್ಲ. ಇದು ಐರೋಡಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಶತಮಾನ ಕಂಡ ಮಾಬುಕಳ ಧೂಳಂಗಡಿ ಹಿರಿಯ ಪ್ರಾಥಮಿಕ ಶಾಲೆಯ ದುಃಸ್ಥಿತಿ.
ಶತಮಾನೋತ್ತರ ಶಾಲೆ
ಧೂಳಂಗಡಿ ಶಾಲೆ 1903ರಲ್ಲಿ ಸ್ಥಾಪನೆಗೊಂಡಿದ್ದು, ಈ ಭಾಗದ ಅತ್ಯಂತ ಹಳೆಯ ಶಿಕ್ಷಣ ಸಂಸ್ಥೆಗಳಲ್ಲಿ ಒಂದು ಎನ್ನುವ ಹೆಗ್ಗಳಿಕೆಗೆ ಇದೆ. ಅನೇಕ ಮಂದಿ ಉನ್ನತ ಸ್ಥಾನ ತಲುಪಿದವರು ಇಲ್ಲಿನ ಹಳೆ ವಿದ್ಯಾರ್ಥಿಗಳಾಗಿದ್ದಾರೆ. ಆದರೆ ಶಾಲೆಯ ಈಗಿನ ಸ್ಥಿತಿ ಮಾತ್ರ ಶೋಚನೀಯ.
ಸಮಸ್ಯೆಗಳು ಹಲವು
ಈ ಶಾಲೆಯಲ್ಲಿ ಎರಡು ಕಟ್ಟಡಗಳಿದ್ದು ಒಂದು ಶತಮಾನಗಳ ಹಿಂದೆ ನಿರ್ಮಾಣಗೊಂಡ ಹಳೆಯ ಕಟ್ಟಡ ಹಾಗೂ ಇನ್ನೊಂದು ನಾಲ್ಕೈದು ದಶಕಗಳ ಹಿಂದೆ ನಿರ್ಮಾಣಗೊಂಡ ಕಟ್ಟಡವಾಗಿದೆ. ಶತಮಾನ ಕಂಡ ಹಳೆಯ ಕಟ್ಟಡ ಸಂಪೂರ್ಣ ಶಿಥಿಲಗೊಂಡಿದ್ದು ಮಳೆಗಾಲದಲ್ಲಿ ನೀರು ಸೋರುತ್ತಿದೆ. ಹೀಗಾಗಿ ಹಲವು ಸಮಯದ ಹಿಂದೆ ಇಲ್ಲಿ ತರಗತಿ ನಡೆಸುವುದನ್ನು ನಿಲ್ಲಿಸಿ ಎರಡನೇ ಕಟ್ಟಡಕ್ಕೆ ಸ್ಥಳಾಂತರಿಸಲಾಗಿದೆ. ಅಂದಿನಿಂದ ಇಕ್ಕಟ್ಟಾದ ಕೋಣೆಯಲ್ಲಿ ತರಗತಿಗಳನ್ನು ನಡೆಸಬೇಕಾದ ಅನಿವಾರ್ಯತೆ ಇದೆ.
ಮನವಿ ಫಲಿಸಲಿಲ್ಲ
ಹಳೆಯ ಕಟ್ಟಡಗಳನ್ನು ತೆರವುಗೊಳಿಸಿ ಹೊಸ ಕಟ್ಟಡ ಹಾಗೂ ರಂಗಮಂದಿರವನ್ನು ನಿರ್ಮಿಸುವಂತೆ ಇಲ್ಲಿನ ಶಾಲಾಭಿವೃದ್ಧಿ ಸಮಿತಿ ಹಾಗೂ ಶಿಕ್ಷಣಾಭಿಮಾನಿಗಳು ಹಲವು ಬಾರಿ ಮನವಿ ಸಲ್ಲಿಸಿದರು. ಅದರಂತೆ ಹಿಂದೊಮ್ಮೆ ಹೊಸ ಕಟ್ಟಡ ನಿರ್ಮಾಣಕ್ಕೆ ಹಣ ಮಂಜೂರಾಗಿದೆ ಎನ್ನುವ ಭರವಸೆ ಕೂಡ ದೊರೆತಿತ್ತು. ಆದರೆ ಭರವಸೆ ಕೇವಲ ಭರವಸೆಯಾಗಿಯೇ ಉಳಿದಿದೆ ಹೊರತು ಫಲ ದೊರಕಿಲ್ಲ.
ವಿದ್ಯುತ್ ಶಾಕ್
ಜೋರಾಗಿ ಮಳೆ ಬಂದರೆ ತರಗತಿ ಕೋಣೆಯ ತನಕ ನೀರು ಬರುತ್ತದೆ. ವಿದ್ಯುತ್ ವಯರಿಂಗ್ ಸಮಸ್ಯೆಯಿಂದ ಆಗಾಗ ಶಾಕ್ ಹೊಡೆಯುತ್ತದೆ. ರಂಗಮಂದಿರದ ವ್ಯವಸ್ಥೆ ಇಲ್ಲ. ಬಾಲಕರಿಗೆ ಸರಿಯಾದ ಶೌಚಾಲಯವಿಲ್ಲ. ಪ್ರಸ್ತುತ ಹಳೆಯ ಕಟ್ಟಡದಲ್ಲಿರುವ ಪಾಳು ಬಿದ್ದ ಶೌಚಾಲಯವೊಂದನ್ನು ಬಳಸಲಾಗುತ್ತಿದೆ.
ಮಕ್ಕಳನ್ನು ಶಾಲೆಗೆ ಸೇರಿಸಲು ಹಿಂದೇಟು
ಶಾಲೆಯಲ್ಲಿ ಹಲವು ಸಮಸ್ಯೆಗಳಿರುವುದರಿಂದ ಹಲವು ಮಂದಿ ಹೆತ್ತವರು ತಮ್ಮ ಮಕ್ಕಳನ್ನು ಈಗಾಗಲೇ ಬೇರೆ ಶಾಲೆಗೆ ದಾಖಲಿಸಿದ್ದಾರೆ ಹಾಗೂ ಹೊಸದಾಗಿ ದಾಖಲಿಸಲೂ ಹಿಂದೇಟು ಹಾಕುತ್ತಿದ್ದಾರೆ. ಹೀಗಾಗಿ ನಾಲ್ಕೈದು ವರ್ಷದ ಹಿಂದೆ 150ರಷ್ಟಿದ ವಿದ್ಯಾರ್ಥಿಗಳ ಸಂಖ್ಯೆ ಇದೀಗ 83ಕ್ಕೆ ಕುಸಿದಿದೆ.
ಮಳೆಗಾಲದಲ್ಲಿ ಸಮಸ್ಯೆ
ನಮ್ಮ ಶಾಲೆಗೆ ಶತಮಾನಗಳ ಇತಿಹಾಸವಿದೆ. ಆದರೆ ಇಲ್ಲಿನ ಕಟ್ಟಡದ ಸಮಸ್ಯೆಯಿಂದ ಮಕ್ಕಳಿಗೆ ಉತ್ತಮ ಶೈಕ್ಷಣಿಕ ವಾತಾವರಣ ಇಲ್ಲವಾಗಿದೆ. ಮಳೆಗಾಲದಲ್ಲಿ ಸಮಸ್ಯೆ ಬಹಳಷ್ಟು ಹೆಚ್ಚುತ್ತದೆ. ಬಾಲಕರ ಶೌಚಾಲಯ ಕೂಡ ಸರಿಯಾಗಿಲ್ಲ. ಇದರಿಂದ ದಾಖಲಾತಿ ವರ್ಷದಿಂದ ವರ್ಷಕ್ಕೆ ಕುಸಿಯುತ್ತಿದೆ. ಹೊಸ ಕಟ್ಟಡ ನಿರ್ಮಿಸಿಕೊಡುವಂತೆ ಹಲವು ಬಾರಿ ಮನವಿ ಸಲ್ಲಿಸಿದರೂ ಯಾವುದೇ ಪ್ರಯೋಜನವಾಗಿಲ್ಲ.
– ಪ್ರಕಾಶ್, ಅಧ್ಯಕ್ಷರು
ಎಸ್.ಡಿ.ಎಂ.ಸಿ. ಧೂಳಂಗಡಿ ಶಾಲೆ
ಪರಿಹಾರದ ಭರವಸೆ ದೊರಕಿದೆ
ಶಾಲೆಯಲ್ಲಿನ ಸಮಸ್ಯೆಗಳ ಬಗ್ಗೆ ಜನಪ್ರತಿನಿಧಿಗಳು, ಅಧಿಕಾರಿಗಳಿಗೆ ಅರಿವಿದೆ. ನಾವೂ ಮನವಿ ನೀಡಿದ್ದು, ಪರಿಹಾರದ ಭರವಸೆ ನೀಡಿದ್ದಾರೆ. ಸದ್ಯ ಶಾಲೆಯಲ್ಲಿ ಬಾಲಕಿಯರ ಶೌಚಾಲಯ ನಿರ್ಮಾಣವಾಗುತ್ತಿದೆ.
– ಸೇಸು, ಮುಖ್ಯಶಿಕ್ಷಕಿ ಧೂಳಂಗಡಿ ಶಾಲೆ
– ರಾಜೇಶ ಗಾಣಿಗ ಅಚ್ಲಾಡಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Manipal: ನಿತ್ಯ ಅಪಘಾತ ತಾಣವಾದ ಈಶ್ವರ ನಗರ-ಪರ್ಕಳ ರಸ್ತೆ
Karkala: ತಿಂಗಳ ಹಿಂದೆ ಮೃತಪಟ್ಟ ಪತಿ, ಮನನೊಂದು ಆತ್ಮಹತ್ಯೆಗೆ ಶರಣಾದ ಅಂಗನವಾಡಿ ಶಿಕ್ಷಕಿ
Karkala: ಅಣ್ಣನ ತಿಥಿಗೆ ಬಂದಿದ್ದ ತಂಗಿ ವಿದ್ಯುತ್ ಆಘಾತದಿಂದ ಮೃ*ತ್ಯು
Kundapura: ಅಕಾಲಿಕ ಮಳೆ; ಭತ್ತ ಕಟಾವಿಗೆ ಅಡ್ಡಿ; ಬೆಳೆ ನಾಶದ ಭೀತಿಯಲ್ಲಿ ರೈತರು
Udupi: ಮೀನುಗಾರರಿಗೆ ಎನ್‌ಎಫ್ಡಿಪಿ ಪೋರ್ಟಲ್‌ನಲ್ಲಿ ಶುಲ್ಕರಹಿತ ನೋಂದಣಿ
MUST WATCH
ಹೊಸ ಸೇರ್ಪಡೆ
Subramanya: ಗುಂಡ್ಯದಲ್ಲಿ ಮಂಗಳೂರು- ಬೆಂಗಳೂರು ಹೆದ್ದಾರಿ ತಡೆ ನಡೆಸಿದ ಪ್ರತಿಭಟನಾಕಾರರು
Mumbai: ಲಾರೆನ್ಸ್ ಬಿಷ್ಣೋಯ್ ಹಿಟ್ ಲಿಸ್ಟ್‌ನಲ್ಲಿ ಶ್ರದ್ಧಾ ವಾಕರ್ ಹತ್ಯೆ ಆರೋಪಿ: ವರದಿ
Test: ಇಂಗ್ಲೆಂಡ್ ಸರಣಿಯ ಬಳಿಕ ಟೆಸ್ಟ್ ಕ್ರಿಕೆಟ್ ನಿಂದ ದೂರವಾಗಲಿದ್ದಾರೆ ಕಿವೀಸ್ ಆಟಗಾರ
Priyanka Upendra: ಬ್ಯೂಟಿಫುಲ್ ಲೈಫ್ ನಲ್ಲಿ ಪ್ರಿಯಾಂಕಾ
Shimoga; ಕಾಂಗ್ರೆಸ್-ಮುಸ್ಲಿಮರ ವಿರುದ್ದ ಹೇಳಿಕೆ: ಈಶ್ವರಪ್ಪ ವಿರುದ್ದ ಸುಮೋಟೋ ಪ್ರಕರಣ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.