ಏನ್‌ ಕಾರಣ?

Team Udayavani, Jun 14, 2018, 6:00 AM IST

m-2.jpg

ಎಲ್ಲವಕ್ಕೂ ಕಾರಣ ಇರುತ್ತೆ. ತಿಳಿದುಕೊಳ್ಳೋ ಆಸಕ್ತಿ ನಿಮಗಿದ್ದರೆ ಉತ್ತರ ಇಲ್ಲಿದೆ.

1. ತಪಾಸಣಾ ಯಂತ್ರಗಳು ಹಿಮ ಕರಡಿಯನ್ನು ಪತ್ತೆ ಮಾಡಲಾರವು
ಕೆಲ ಸಾರ್ವಜನಿಕ ಸ್ಥಳಗಳಲ್ಲಿ ಸುರಕ್ಷತೆ ಒದಗಿಸಲು ತಪಾಸಣ ಯಂತ್ರಗಳನ್ನು ಇಟ್ಟಿರುವುದನ್ನು ನೀವು ನೋಡಿರಬಹುದು. ಇವುಗಳಲ್ಲಿ ಥರ್ಮಲ್‌ ಸೆನ್ಸಾರ್‌ಗಳಿಂದ ಕೆಲಸ ಮಾಡುವಂಥ ಯಂತ್ರಗಳಿರುತ್ತವೆ. ಅಂದರೆ ವಸ್ತುವೊಂದು ಹೊರಸೂಸುವ ಶಾಖದಿಂದ ಅದರ ತಪಾಸಣೆ ಮಾಡುತ್ತವೆ. ಈ ಯಂತ್ರದೊಳಗೆ ಹಿಮ ಕರಡಿ ಏನಾದರೂ ಹೋದರೆ ಅವನ್ನು ಯಂತ್ರ ಪತ್ತೆ ಮಾಡುವುದೇ ಇಲ್ಲ. ಮನುಷ್ಯರು ಹೋದರೆ ಮಾತ್ರ ಪತ್ತೆ ಮಾಡುತ್ತದೆ. ಅದು ಯಾಕೆ ಗೊತ್ತಾ ಮೊದಲೇ ಹೇಳಿದಂತೆ ಈ ಥರ್ಮಲ್‌ ಸೆನ್ಸಾರ್‌ಗಳು ಕೆಲಸ ಮಾಡುವುದು ವಸ್ತು ಹೊರಸೂಸುವ ಶಾಖವನ್ನು ಅವಲಂಬಿಸಿ. ಆದರೆ ಹಿಮಕರಡಿಯ ಮೈ ಶಾಖವನ್ನು ಹೊರಸೂಸುವುದೇ ಇಲ್ಲ. ಅವುಗಳು ವಾಸಿಸುವುದು ಶೀತಲ ಪ್ರದೇಶದಲ್ಲಾದ್ದರಿಂದ ಅಲ್ಲಿ ದೇಹದ ಉಷ್ಣತೆಯನ್ನು ಕಾಪಾಡಿಕೊಳ್ಳುವ ಅಗತ್ಯ ತುಂಬಾ ಇರುತ್ತೆ ಹೀಗಾಗಿ ಅದರ ಮೈ ಶಾಖವನ್ನು ಹಿಡಿದಿಟ್ಟುಕೊಳ್ಳುತ್ತದೆಯೇ ಹೊರತು ಹೊರಸೂಸುವುದಿಲ್ಲ. 

2. ಎತ್ತರದಿಂದ ಉಲ್ಟಾಪಲ್ಟಾ ಬಿದ್ದರೂ ಬೆಕ್ಕು ತನ್ನ ಕಾಲುಗಳ ಮೇಲೆ ನಿಲ್ಲುತ್ತೆ
ಯಾವತ್ತಾದರೂ ಬೆಕ್ಕು ಮೇಲಿನಿಂದ ಕೆಳಗೆ ಹಾರುವುದನ್ನು ನೋಡಿದ್ದೀರ? ಅದು ಬೇಕಂತಲೇ ಹಾರಲಿ ಅಥವಾ ಅಕಸ್ಮಾತ್‌ ಆಗಿ ಮೇಲಿನಿಂದ ಬೀಳುವುದಿರಲಿ, ಹೇಗೇ ಬಿದ್ದರೂ ಅದಕ್ಕೆ ಅಪಾಯ ತುಂಬಾ ಕಡಿಮೆ. ಅದು ಸುರಕ್ಷಿತವಾಗಿ ಭೂಮಿಗೆ ಬಂದು ಬೀಳುತ್ತದೆ. ಬೀಳುವಾಗ ತಲೆ ಕೆಳಗಾಗಿದ್ದರೂ ನೆಲ ಮುಟ್ಟುವ ಹೊತ್ತಿನಲ್ಲಿ ಕಾಲುಗಳು ಸರಿಯಾಗಿ ನೆಲದ ಮೇಲೆ ಊರಿರುತ್ತವೆ. ಅದೆಷ್ಟೋ ಅಂತಸ್ತಿನ ಮಹಡಿಯಿಂದ ಬಿದ್ದ ಬೆಕ್ಕೂ ಪ್ರಾಣಪಾಯದಿಂದ ಪಾರಾಗಿದೆ. ಇದಕ್ಕೆ ಕಾರಣ ಅವುಗಳ ಫ್ಲೆಕ್ಸಿಬಲ್‌ ಬೆನ್ನು. ಇದರಿಂದಾಗಿಯೇ ಅವುಗಳ ದೇಹ ಉಲ್ಟಾ ಇದ್ದರೂ ಕೂಡ ಭೂಮಿಗೆ ಬರುವಾಗ ಸರಿಯಾಗಿ ಅದು ಕಾಲಿನ ಮೇಲೆ ನಿಂತುಕೊಳ್ಳುತ್ತದೆ. ಆ ಸಮಯದಲ್ಲಿ ಕಾಲು, ಬೆನ್ನು ಎಲ್ಲವೂ ಒಂದು ಸ್ಪ್ರಿಂಗ್‌ ರೀತಿ ವರ್ತಿಸುತ್ತದೆ. ಹೀಗಾಗಿ ಎತ್ತರದಿಂದ ಬೀಳುವಾಗ ಅವುಗಳಿಗೆ ಅಪಾಯ ಕಡಿಮೆ.

ಟಾಪ್ ನ್ಯೂಸ್

Puttur ಸರ್ವೆ: ಮನೆಗೆ ನುಗ್ಗಿ ಲಕ್ಷಾಂತರ ರೂ. ಮೌಲ್ಯದ ಚಿನ್ನಾಭರಣ, ನಗದು ಕಳ್ಳತನ

Puttur ಸರ್ವೆ: ಮನೆಗೆ ನುಗ್ಗಿ ಲಕ್ಷಾಂತರ ರೂ. ಮೌಲ್ಯದ ಚಿನ್ನಾಭರಣ, ನಗದು ಕಳ್ಳತನ

Manipal: ಕಾರು ಅಪಘಾತ: ಪ್ರಯಾಣಿಕರು ಪಾರು

Manipal: ಕಾರು ಅಪಘಾತ: ಪ್ರಯಾಣಿಕರು ಪಾರು

Mangaluru: ಮಾದಕ ವಸ್ತು ಸೇವನೆ ಆರೋಪ; 5 ಮಂದಿ ಸೆರೆ

Mangaluru: ಮಾದಕ ವಸ್ತು ಸೇವನೆ ಆರೋಪ; 5 ಮಂದಿ ಸೆರೆ

ಮುಮ್ತಾಜ್‌ ಅಲಿ ಆತ್ಮಹ*ತ್ಯೆ ಪ್ರಕರಣ: ಆರೋಪಿಗಳನ್ನು ಪೊಲೀಸ್‌ ವಶಕ್ಕೆ ನೀಡಲ್ಲ

High Court: ಮುಮ್ತಾಜ್‌ ಅಲಿ ಆತ್ಮಹ*ತ್ಯೆ ಪ್ರಕರಣ: ಆರೋಪಿಗಳನ್ನು ಪೊಲೀಸ್‌ ವಶಕ್ಕೆ ನೀಡಲ್ಲ

Karnataka: ಲೋಕಾಯುಕ್ತ ದಾಳಿ; ಕಂತೆ ಕಂತೆ ಹಣ ವಶಕ್ಕೆ

Karnataka: ಲೋಕಾಯುಕ್ತ ದಾಳಿ; ಕಂತೆ ಕಂತೆ ಹಣ ವಶಕ್ಕೆ

24 ಕಂಬಳ ಕೂಟಕ್ಕೆ ತಲಾ 5 ಲಕ್ಷದಂತೆ ಅನುದಾನ: ಸಚಿವ ಎಚ್‌.ಕೆ. ಪಾಟೀಲ್‌

24 ಕಂಬಳ ಕೂಟಕ್ಕೆ ತಲಾ 5 ಲಕ್ಷದಂತೆ ಅನುದಾನ: ಸಚಿವ ಎಚ್‌.ಕೆ. ಪಾಟೀಲ್‌

Mandya; ಕನ್ನಡ ಸಾಹಿತ್ಯ ಸಮ್ಮೇಳನ: “ಉದಯವಾಣಿ’ ವಿಶೇಷ ಪುರವಣಿ ಬಿಡುಗಡೆ

Mandya; ಕನ್ನಡ ಸಾಹಿತ್ಯ ಸಮ್ಮೇಳನ: “ಉದಯವಾಣಿ’ ವಿಶೇಷ ಪುರವಣಿ ಬಿಡುಗಡೆ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ten-ten

ಏರ್‌ ಡೆಕ್ಕನ್‌ ವಿಮಾನಯಾನ ಸಂಸ್ಥಾಪಕ ಜಿ. ಆರ್‌. ಗೋಪಿನಾಥ್‌

farmer

ದೇವರು ಬಿತ್ತಿದ ಕಾಳು

ಟೋಪಿಯಿಂದ ಸೃಷ್ಟಿ

ಟೋಪಿಯಿಂದ ಸೃಷ್ಟಿ

ಚಿಕ್ಕ ಮೀನಿನ ದೊಡ್ಡ ಆಸೆ

ಚಿಕ್ಕ ಮೀನಿನ ದೊಡ್ಡ ಆಸೆ

ಫ್ಲೈಟ್‌ ವಿಲೇಜ್‌

ಫ್ಲೈಟ್‌ ವಿಲೇಜ್‌

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

ಕಾರ್ನಾಡಿನಲ್ಲಿ ನಡೆದ ಕೊ*ಲೆ ಪ್ರಕರಣ ಇಬ್ಬರಿಗೆ ಜೀವಾವಧಿ ಶಿಕ್ಷೆ

Mangaluru: ಕಾರ್ನಾಡಿನಲ್ಲಿ ನಡೆದ ಕೊ*ಲೆ ಪ್ರಕರಣ ಇಬ್ಬರಿಗೆ ಜೀವಾವಧಿ ಶಿಕ್ಷೆ

Puttur ಸರ್ವೆ: ಮನೆಗೆ ನುಗ್ಗಿ ಲಕ್ಷಾಂತರ ರೂ. ಮೌಲ್ಯದ ಚಿನ್ನಾಭರಣ, ನಗದು ಕಳ್ಳತನ

Puttur ಸರ್ವೆ: ಮನೆಗೆ ನುಗ್ಗಿ ಲಕ್ಷಾಂತರ ರೂ. ಮೌಲ್ಯದ ಚಿನ್ನಾಭರಣ, ನಗದು ಕಳ್ಳತನ

Manipal: ಕಾರು ಅಪಘಾತ: ಪ್ರಯಾಣಿಕರು ಪಾರು

Manipal: ಕಾರು ಅಪಘಾತ: ಪ್ರಯಾಣಿಕರು ಪಾರು

Mangaluru: ಮಾದಕ ವಸ್ತು ಸೇವನೆ ಆರೋಪ; 5 ಮಂದಿ ಸೆರೆ

Mangaluru: ಮಾದಕ ವಸ್ತು ಸೇವನೆ ಆರೋಪ; 5 ಮಂದಿ ಸೆರೆ

ಮುಮ್ತಾಜ್‌ ಅಲಿ ಆತ್ಮಹ*ತ್ಯೆ ಪ್ರಕರಣ: ಆರೋಪಿಗಳನ್ನು ಪೊಲೀಸ್‌ ವಶಕ್ಕೆ ನೀಡಲ್ಲ

High Court: ಮುಮ್ತಾಜ್‌ ಅಲಿ ಆತ್ಮಹ*ತ್ಯೆ ಪ್ರಕರಣ: ಆರೋಪಿಗಳನ್ನು ಪೊಲೀಸ್‌ ವಶಕ್ಕೆ ನೀಡಲ್ಲ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.