ಕಾಸರಗೋಡು,ಕಾಂಞಂಗಾಡ್ ನಗರ,ಮಂಜೇಶ್ವರ ಆಯ್ಕೆ
Team Udayavani, Jun 14, 2018, 6:15 AM IST
ಕಾಸರಗೋಡು: ಅಲ್ಪ ಸಂಖ್ಯಾಕ ಬಾಹುಳ್ಯವಿರುವ ಜಿಲ್ಲೆಗಳಲ್ಲಿ, ನಗರಗಳಲ್ಲಿ ವಿದ್ಯಾಭ್ಯಾಸ ಸಂಸ್ಥೆಗಳು, ಆರೋಗ್ಯ ಕೇಂದ್ರಗಳು, ಕುಡಿಯುವ ನೀರು ಯೋಜನೆ ಮೊದಲಾದ ಅಭಿವೃದ್ಧಿ ಯೋಜನೆಗಳಿಗಾಗಿ ಕೇಂದ್ರ ಸರಕಾರದ ಪ್ರಧಾನಮಂತ್ರಿ ಜನ್ ವಿಕಾಸ್ ಕಾರ್ಯಕ್ರಮ (ಪಿಎಮ್‌ಜೆವಿಕೆ) ಯೋಜನೆಯಲ್ಲಿ ಕಾಸರಗೋಡು ಮತ್ತು ಕಾಂಞಂಗಾಡ್ ನಗರ ಮತ್ತು ಮಂಜೇಶ್ವರವನ್ನು ಆಯ್ಕೆ ಮಾಡಲಾಗಿದೆ.
ಕೇರಳದ 12 ಜಿಲ್ಲೆಗಳು ಈ ಯೋಜನೆ ಯಲ್ಲಿ ಆಯ್ಕೆಯಾಗಿದ್ದು, ಈ ಪೈಕಿ ಹೆಚ್ಚಿನ ಪ್ರದೇಶಗಳು ಮಲಬಾರು ಜಿಲ್ಲೆಯಿಂದ ಆಯ್ಕೆಯಾಗಿವೆ.
ಕೇರಳದ ವಿವಿಧ ಜಿಲ್ಲೆಗಳ 43 ನಗರ ಪ್ರದೇಶ, ಗ್ರಾಮಗಳೂ ಸೇರ್ಪಡೆಗೊಂಡಿವೆ. ಈ ಪೈಕಿ 25 ಪ್ರದೇಶಗಳು ಮಲಪ್ಪುರ ಜಿಲ್ಲೆಯಿಂದಲೇ ಸೇರ್ಪಡೆಗೊಂಡಿವೆೆ. ಒಟ್ಟು ಜನಸಂಖ್ಯೆಯ ಶೇ. 25ಕ್ಕಿಂತ ಹೆಚ್ಚು ಅಲ್ಪಸಂಖ್ಯಾಕ ಬಾಹುಳ್ಯವಿರುವ ಪ್ರದೇಶಗಳನ್ನು ಈ ಯೋಜನೆಯಲ್ಲಿ ಆಯ್ಕೆ ಮಾಡಲಾಗುತ್ತಿದೆ.
ಅಲ್ಪಸಂಖ್ಯಾಕರ ಬಾಹುಳ್ಯವಿರುವ ಜಿಲ್ಲಾ ಕೇಂದ್ರಗಳು, ಪಟ್ಟಣಗಳು, ಗ್ರಾಮಗಳು ಎಂಬಂತೆ ಮೂರು ವಿಭಾಗ ಮಾಡಲಾಗಿದೆ. ಆಯ್ಕೆಯಾದ ಪ್ರದೇಶಗಳಿಗೆ ಕೇಂದ್ರ ಸರಕಾರದಿಂದು ಅನುದಾನ ಲಭಿಸಲಿದೆ.
ಜಿಲ್ಲಾ ಕೇಂದ್ರ ಯಾದಿಯಲ್ಲಿ ಕಾಸರಗೋಡು, ಕಣ್ಣೂರು, ಕಲ್ಲಿಕೋಟೆ, ಮಲಪ್ಪುರಂ, ಪಾಲಾ^ಟ್, ಕೊಲ್ಲಂ ಮೊದಲಾದವು ಸೇರ್ಪಡೆಗೊಂಡಿವೆೆ. ಒಟ್ಟು 1,320 ಕೋಟಿ ರೂಪಾಯಿಯನ್ನು ಈ ಯೋಜನೆಯಲ್ಲಿ ವಿವಿಧ ರಾಜ್ಯಗಳಿಗೆ ಅನುದಾನವಾಗಿ ನೀಡಲಾಗುವುದು. ಮುಂದಿನ ವರ್ಷ ಈ ಮೊತ್ತ 1,452 ಕೋಟಿ ರೂಪಾಯಿ ಆಗಲಿದೆ. ಕೇಂದ್ರ, ರಾಜ್ಯ ಸರಕಾರದ ಅಂಗೀಕೃತ ಏಜೆನ್ಸಿಗಳಿಗೂ, ವಿವಿಧ ಸಂಘ ಸಂಸ್ಥೆಗಳಿಗೂ ಯೋಜನೆಯನ್ನು ಸಲ್ಲಿಸಬಹುದು. ಒಟ್ಟು ಮೊತ್ತದಲ್ಲಿ ಶೇ. 80ರಷ್ಟು ಶಿಕ್ಷಣ, ಆರೋಗ್ಯ ಕ್ಷೇತ್ರಕ್ಕೆ ಮಂಜೂರು ಮಾಡಲಾಗುವುದು.
ಇದರಿಂದ ಕೇಂದ್ರ ಸರಕಾರದ ಅನುದಾನ ಪಡೆದು ವಿವಿಧ ಅಭಿವೃದ್ಧಿ ಯೋಜನೆಗಳನ್ನು ಕಾರ್ಯಗತಗೊಳಿಸಲು ಸಾಧ್ಯವಾಗಲಿದೆ.
ಆಯ್ಕೆಯಾದ ಬ್ಲಾಕ್‌ಗಳು
ಮಾನಂತವಾಡಿ, ಕಲ್ಪಟ್ಟ, ಸುಲ್ತಾನ್ ಬತ್ತೇರಿ, ಮಂಜೇಶ್ವರ, ಕಾಸರಗೋಡು, ಕಾಂಞಂಗಾಡ್, ಅಡಿಮಲಿ, ಒಟ್ಟಪ್ಪಾಲಂ, ಮಣ್ಣಾರ್‌ಕಾಡ್, ನೆಡುಕುಂಡಂ, ಎಲಾಂದೇಶಂ, ಪತ್ತನಾಪುರಂ, ಅಂಜಲ್, ಚಡಯಮಂಗಲಂ, ವೆಟ್ಟಿಕಾವಲ್, ವಾಮನಪುರಂ, ವೆಳ್ಳನಾಡು, ನೆಡುಮಂಗಾಡ್, ಪೆರುಂಕಡವಿಳ, ಇರಿಕೂರು, ಇರಿಟ್ಟಿ, ಪೆರಾವೂರು, ನೀಲಂಬೂರು.
ನಗರ, ಗ್ರಾಮ ಪ್ರದೇಶಗಳು
ಕಾಸರಗೋಡು, ಕಾಂಞಂಗಾಡ್, ತೊಡುಪುಳ, ಕಣ್ಣೂರು, ತಳಿಪರಂಬ, ತಲಶೆÏàರಿ, ವಡಗರ, ಚೆರುವಣ್ಣೂರು, ಬೇಪೂರು, ಮಂಜೇರಿ, ಮಲಪ್ಪುರಂ, ನೀಲಂಬೂರು, ಪೆರಿಂದಲ್‌ವುಣ್¡, ಕುಟ್ಟಿಲಂಗಾಡ್, ಕೋಡರ್, ತಿರೂರು, ಕೋಟ್ಟಕಲ್, ತಾನಳೂರು, ಚೆರಿಯಮುಂಡಂ, ಕಾಟಿಪ್ಪರುತ್ತಿ, ತಲಕಾಡ್, ಮುನಿಯೂರು, ಪೆರು ವಳ್ಳೂರು, ಕಣ್ಣಮಂಗಲಂ, ಒತುಕುಂಗಲ್, ಪರಪ್ಪೂರ್, ವೆಂಗರ, ಎ.ಆರ್. ನಗರ್, ಪೂರ್ಣಿಕರ, ಕಳಮಶೆÏàರಿ, ಈರಾಟ್‌ಪೇಟ್, ಆಲಪ್ಪುಳ, ಕಾಯಂಕುಳಂ, ಕೊಲ್ಲಂ, ನೆಯ್ನಾಟಿಂಗರ.
ಯೋಜನೆಯಡಿ ಕೇಂದ್ರದ ಸಾಧನೆಗಳು
ಕಳೆದ ನಾಲ್ಕು ವರ್ಷಗಳಲ್ಲಿ ಪ್ರಧಾನ ಮಂತ್ರಿ ಜನ್‌ವಿಕಾಸ್ ಕಾರ್ಯಕ್ರಮದಲ್ಲಿ ಹಾಸ್ಟೆಲುಗಳು (ಮಹಿಳಾ ಹಾಸ್ಟೆಲುಗಳು ಒಳಗೊಂಡಂತೆ)-417, ಶಾಲಾ ಕಟ್ಟಡಗಳು-925, ಬೋರ್ಡಿಂಗ್ ಸ್ಕೂಲುಗಳು/ಡಿಗ್ರಿ ಕಾಲೇಜುಗಳು-78, ಕಾರ್ಮಿಕರಿಗೆ ಮತ್ತು ರೈತರಿಗೆ ಮಾರ್ಕೆಟ್ ಶೆಡ್ಡುಗಳು-436, ಸದ್ಭಾವ್ ಮಂಟಪಗಳು (ಬಹೂಪಯೋಗಿ ಸಮುದಾಯ ಕೇಂದ್ರ)-323, ತರಗತಿಗೆ ಬೇಕಾದ ಸಲಕರಣೆಗಳು (ಸ್ಮಾರ್ಟ್‌ಕ್ಲಾಸ್ ಗೆಜೆಟ್ಸ್)-1,008, ಐಟಿಐ/ಪಾಲಿಟೆಕ್ನಿಕ್‌ಗಳು-56, ಪ್ರಾಥಮಿಕ ಆರೋಗ್ಯ ಕೇಂದ್ರಗಳು/ಅಂಗನವಾಡಿ-4,968, ಕುಡಿಯುವ ನೀರಿನ ಸೌಲಭ್ಯಗಳು-13,383, ಶಾಲಾ ಕೊಠಡಿಗಳು-16,411, ಗ್ರಾಮೀಣ ಪ್ರದೇಶದಲ್ಲಿ ಡಿಜಿಟಲ್ ಸಾಕ್ಷರತೆ-3,71,657 ಸಾಧ್ಯವಾಗಿದೆ.
ಅನುದಾನ ಪಡೆದ ಕೇಂದ್ರಗಳು
ಶಾಲೆಗಳು/ಕಾಲೇಜುಗಳು, ಆರೋಗ್ಯ ಕೇಂದ್ರಗಳು, ಉಪಹಾರ ಗೃಹಗಳು, ಕುಡಿಯುವ ನೀರಿನ ವ್ಯವಸ್ಥೆ, ಪಾಲಿಟೆಕ್ನಿಕ್‌ಗಳು, ಕೈಗಾರಿಕಾ ತರಬೇತಿ ಕೇಂದ್ರಗಳು, ಕಾರ್ಮಿಕರಿಗೆ ಮತ್ತು ರೈತರಿಗೆ ಮಾರ್ಕೆಟ್ ಶೆಡ್ಡುಗಳು, ಸದ್ಭಾವ ಮಂಟಪಗಳು, ಔದ್ಯೋಗಿಕ ಕೌಶಲ್ಯ ಅಭಿವೃದ್ಧಿ ಕೇಂದ್ರಗಳು, ಸ್ವಯಂ ಉದ್ಯೋಗ ಕಲಿಕಾ ಕೇಂದ್ರಗಳಿಗೆ ಅನುದಾನ ಲಭಿಸಲಿದೆ.
ದೇಶದ 308 ಜಿಲ್ಲೆಗಳ ಅಲ್ಪಸಂಖ್ಯಾಕ ಬಾಹುಳ್ಯವಿರುವ ಪ್ರದೇಶಗಳಲ್ಲಿ ಮೂಲ ಸೌಕರ್ಯಗಳ ನಿರ್ಮಾಣ(109 ಜಿಲ್ಲಾ ಕೇಂದ್ರಗಳು, 870 ಬ್ಲಾಕ್‌ಗಳು, 321 ಪಟ್ಟಣಗಳು ಮತ್ತು ಹಳ್ಳಿಗಳು) ನಡೆಯಲಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Bengaluru: 19 ಕಡೆ ಫ್ಲಿಪ್ ಕಾರ್ಟ್, ಅಮೆಜಾನ್ ವ್ಯಾಪಾರಸ್ಥರಿಗೆ ಇ.ಡಿ. ದಾಳಿ ಬಿಸಿ
Waqf issue: ಉಪಚುನಾವಣೆಯಲ್ಲಿ ನಾಟಕ ಮಾಡಲು ಜೆಪಿಸಿ ದುರ್ಬಳಕೆ: ಎಚ್.ಕೆ.ಪಾಟೀಲ್
Bengaluru: ಪೀಣ್ಯದಲ್ಲಿ 12 ಕೋಟಿ ರೂ. ಮೌಲ್ಯದ ಆಸ್ತಿ ವಶಕ್ಕೆ ಪಡೆದ ಅಭಿವೃದ್ಧಿ ಪ್ರಾಧಿಕಾರ
Siddapura: ಅದೃಷ್ಟ ತಂದ ಲಾರಿ ಧರ್ಮಸ್ಥಳ ಕ್ಷೇತ್ರಕ್ಕೆ ಸಮರ್ಪಣೆ
Bengaluru: ಮಾದಾವರ ವಿಸ್ತರಿತ ಮೆಟ್ರೊದಲ್ಲಿ ಮೊದಲ ದಿನ 16000 ಜನ ಪ್ರಯಾಣ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.