ಜಿಯೋಗ್ರಫಿಗೆ ಮುಜುಗರ
Team Udayavani, Jun 14, 2018, 6:00 AM IST
ನವ ದೆಹಲಿ: ಬೆಲ್ಲ ತಿನ್ನಬಾರದೆಂದು ಇತರರಿಗೆ ತಿಳಿ ಹೇಳ ಬಯಸುವವರು ಮೊದಲು ತಾವು ಬೆಲ್ಲ ತಿನ್ನುವುದನ್ನು ಬಿಡಬೇಕಲ್ಲವೇ? ಹಾಗೆ ಮಾಡದೇ ಸುಮ್ಮನೇ ಬುದ್ಧಿ ಹೇಳ ಹೊರಟರೆ ಏನಾದೀತು ಎಂಬುದಕ್ಕೆ ವಿಶ್ವವಿಖ್ಯಾತ “ನ್ಯಾಷನಲ್ ಜಿಯೋಗ್ರಫಿ’ ನಿಯತಕಾಲಿಕೆ ಮಾದರಿಯಾಗಿದೆ.
ಜಗತ್ತಿನಾದ್ಯಂತ ಪೆಡಂಭೂತವಾಗಿ ಬೆಳೆದಿರುವ ಪ್ಲಾಸ್ಟಿಕ್ ಮಾಲಿನ್ಯದ ದುಷ್ಪರಿಣಾಮಗಳು ಹಾಗೂ ಮಾಲಿನ್ಯ ನಿವಾರಣೆ ಬಗ್ಗೆ ಅರಿವನ್ನು ಮೂಡಿಸುವ ಸಲುವಾಗಿ ಹೊರ ತಂದ ಸಂಚಿಕೆಯೊಂದರ ಪ್ರತಿಗಳನ್ನು ಎರಡೆರಡು ಪ್ಲಾಸ್ಟಿಕ್ ಕವರ್ಗಳಲ್ಲಿ ಹಾಕಿ ಗ್ರಾಹಕರಿಗೆ ತಲುಪಿಸಿದ ಕಾರಣಕ್ಕಾಗಿ ಟ್ವಿಟ್ಟಿಗರಿಂದ ಹಿಗ್ಗಾಮುಗ್ಗಾ ಟೀಕೆಗೊಳಗಾಗಿದೆ. ಮೊದಲು ಲೂಯಿಸ್ ರೋಚಾ ಎಂಬ ಟ್ವಿಟರಿಗರೊಬ್ಬರು ಇದನ್ನು ಮೊದಲು ಟೀಕೆ ಮಾಡಿದರು. ಇದರ ಬೆನ್ನಲ್ಲೇ ನೂರಾರು ಟೀಕೆಗಳ ಪ್ರವಾಹ ಬಂದು, ಅಂತಾರಾಷ್ಟ್ರೀಯ ಮಟ್ಟದಲ್ಲಿ ನಿಯತಕಾಲಿಕೆಗೆ ಮುಜುಗರ ತಂದೊಡ್ಡಿದವು.
ಅಸಲಿಗೆ, ಒಂದೇ ಕವರ್ನಲ್ಲಿ ನ್ಯಾಷನಲ್ ಜಿಯೋಗ್ರಫಿ ನಿಯತಕಾಲಿಕೆ ಹಾಗೂ ಕಿಡ್ಸ್ ಜಿಯೋಗ್ರಫಿ ಎಂಬ ಎರಡು ನಿಯತಕಾಲಿಕೆಗಳನ್ನು ಒಟ್ಟಿಗೇ ಕಳುಹಿಸಲಾಗಿತ್ತು. ಕಿಡ್ಸ್ ನಿಯತಕಾಲಿಕೆಗೂ ಮತ್ತೂಂದು ಪ್ಲಾಸ್ಟಿಕ್ ಹೊದಿಕೆ ಹಾಕಿದ್ದನ್ನು ಹಲವಾರು ಮಂದಿ ಪ್ರತಿಭಟಿಸಿದರು. ಇದರ ಪರಿಣಾಮ, ತನ್ನ ತಪ್ಪಿನ ಅರಿವು ಮಾಡಿಕೊಂಡು, ಭಾರತ, ಅಮೆರಿಕ ಮತ್ತು ಇಂಗ್ಲೆಂಡ್ಗಳಿಗೆ ಕಳುಹಿಸಲಾದ ಸಂಚಿಕೆಗಳನ್ನು ಪೇಪರ್ ಕವರ್ನಲ್ಲಿ ಹಾಕಿ ರವಾನಿಸಲಾಗಿದೆ. ಉಳಿದೆಡೆಗೂ ಇದೇ ರೀತಿಯಲ್ಲಿ ಕಳುಹಿಸುತ್ತೇವೆ ಎಂದು ಟ್ವಿಟರ್ನಲ್ಲಿ ಹೇಳಿಕೊಂಡಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
JPC on Adani issue;ನಿಯಮ 267 ಅಡಿಯಲ್ಲಿ ಪ್ರಸ್ತಾಪಿಸಲು ಅವಕಾಶ ನೀಡದ್ದಕ್ಕೆ ಖರ್ಗೆ ಆಕ್ರೋಶ
Kuno National Park; ಮರಿಗಳಿಗೆ ಜನ್ಮ ನೀಡಿದ ಚೀತಾ ನೀರ್ವಾ: ಸಂಖ್ಯೆ ಹೆಚ್ಚಳ
Adani funding; 100 ಕೋಟಿ ನಿಧಿಯನ್ನು ಸ್ವೀಕರಿಸುವುದಿಲ್ಲ ಎಂದ ರೇವಂತ್ ರೆಡ್ಡಿ
Andaman: ಕೋಸ್ಟ್ ಗಾರ್ಡ್ ಕಾರ್ಯಾಚರಣೆ… ಮೀನುಗಾರಿಕಾ ದೋಣಿಯಲ್ಲಿದ್ದ 5ಟನ್ ಮಾದಕ ವಸ್ತು ವಶ
Maharashtra: ಕಾಂಗ್ರೆಸ್ ಗೆ ಕೇವಲ 16 ಸ್ಥಾನ; ಕೈ ಅಧ್ಯಕ್ಷ ಸ್ಥಾನಕ್ಕೆ ಪಟೋಲೆ ರಾಜೀನಾಮೆ
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.