ಪುತ್ತೂರು ಪಶು ಸಂಗೋಪನ ಇಲಾಖೆ ಕಟ್ಟಡ 2 ತಿಂಗಳಲ್ಲಿ ಉದ್ಘಾಟನೆ

Team Udayavani, Jun 14, 2018, 12:30 PM IST

14-june-7.jpg

ಪುತ್ತೂರು : ಕಳೆದ ವರ್ಷ ಶಿಲಾನ್ಯಾಸಗೊಂಡ (2017ರ ಮೇ) ಪುತ್ತೂರು ಪಶು ಸಂಗೋಪನ ಇಲಾಖೆಯ ಕಟ್ಟಡದ ಕಾಮಗಾರಿ ಪೂರ್ಣಗೊಂಡಿದೆ. ಒಂದೆರಡು ತಿಂಗಳ ಒಳಗೆ ಕಟ್ಟಡಕ್ಕೆ ಉದ್ಘಾಟನ ಭಾಗ್ಯ ಸಿಗಲಿದೆ. ಪುತ್ತೂರು ಪಶುಸಂಗೋಪನ ಇಲಾಖೆಯ ಕಟ್ಟಡಕ್ಕೆ ಗ್ರಾಮೀಣ ಮೂಲ ಸೌಕರ್ಯ ಅಭಿವೃದ್ಧಿ ನಿಧಿಯಿಂದ 26.83 ಲಕ್ಷ ರೂ. ಮಂಜೂರಾಗಿತ್ತು. ಈ ನಿಧಿಯನ್ನು ಬಳಸಿಕೊಂಡು ಸುಸಜ್ಜಿತ ಆಸ್ಪತ್ರೆ ಕಟ್ಟಡ ನಿರ್ಮಾಣಗೊಂಡಿದೆ. ವೈರಿಂಗ್‌, ಸುಣ್ಣ-ಬಣ್ಣ, ಪ್ಲಂಬಿಂಗ್‌, ಬಾಗಿಲು ಆದರೆ ಕೆಲಸ ಪೂರ್ಣವಾದಂತೆ.

ಜಿಲ್ಲಾಧಿಕಾರಿ ಅಧ್ಯಕ್ಷರಾಗಿರುವ ನಿರ್ಮಿತಿ ಕೇಂದ್ರದ ಮೂಲಕ ಕಟ್ಟಡ ನಿರ್ಮಾಣ ನಡೆಯುತ್ತಿದೆ. ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ವ್ಯಸ್ತರಾದ ಕಾರಣ ಕಾಮಗಾರಿಗೆ ಮಂಜೂರಾದ ಅನುದಾನ ಬಿಡುಗಡೆಗೆ ವಿಳಂಬವಾಯಿತು. ವಿಧಾನಸಭೆ ಚುನಾವಣೆ ಬೆನ್ನಲ್ಲೇ ವಿಧಾನ ಪರಿಷತ್‌ ಚುನಾವಣೆಯೂ ನಡೆಯಿತು. ಇದೀಗ ಚುನಾವಣೆಗಳ ತರಾತುರಿ ಮುಗಿದಿದೆ. ಇನ್ನು ಮುಂದೆ ಉಳಿದ ಕಾಮಗಾರಿಗಳು ವೇಗ ಪಡೆಯುವ ಸಾಧ್ಯತೆ ಇದೆ.

ಸುಸಜ್ಜಿತ ಕಟ್ಟಡ ಬೇಕು
ಪುತ್ತೂರು ಪಶು ಸಂಗೋಪನ ಇಲಾಖೆ, ಪಶು ಆಸ್ಪತ್ರೆಯೂ ಹೌದು. ಇಲಾಖೆಯ ಮಾಹಿತಿ, ಸೌಲಭ್ಯ ಪಡೆಯಲಷ್ಟೇ ಜನರು ಇಲ್ಲಿಗೆ ಆಗಮಿಸುತ್ತಿಲ್ಲ. ದನ, ನಾಯಿ ಮೊದಲಾದ ಪ್ರಾಣಿಗಳ ಚಿಕಿತ್ಸೆಗೂ ಕರೆದು ಕೊಂಡು ಬರುವವರಿದ್ದಾರೆ. ಆದ್ದರಿಂದ ಸೌಲಭ್ಯ ದೃಷ್ಟಿಯಿಂದ ಸಾಕಷ್ಟು ಸುಸಜ್ಜಿತ ಕಟ್ಟಡ ಇಲ್ಲಿ ಆವಶ್ಯಕತೆ ಇದೆ. ಇದೀಗ ಬ್ರಿಟಿಷರ ಕಾಲದ ಕಟ್ಟಡದಲ್ಲಿ ಕಚೇರಿ ಕಾರ್ಯ ನಿರ್ವಹಿಸುತ್ತಿದೆ. 1932 ರಲ್ಲಿ ಈ ಕಟ್ಟಡ ನಿರ್ಮಿಸಲಾಗಿದೆ ಎಂಬ ಉಲ್ಲೇಖ ಇದೆ. ಪುತ್ತೂರು ಮೀನು ಮಾರುಕಟ್ಟೆಗೆ ಒತ್ತಿಕೊಂಡಂತೆ, ಮೊಳಹಳ್ಳಿ ಶಿವರಾಯ ಮೂರ್ತಿ ಪಕ್ಕದಲ್ಲೇ ಪಶು ಸಂಗೋಪನ ಇಲಾಖೆ ಕಟ್ಟಡವಿದ್ದು, ಇದೀಗ ಹೊಸ ಕಟ್ಟಡಕ್ಕೆ ಸ್ಥಳಾಂತರಗೊಳ್ಳಲು ಸಿದ್ಧವಾಗಿದೆ.

ತಾತ್ಕಾಲಿಕ ವ್ಯವಸ್ಥೆ
ಹೊಸ ಕಚೇರಿ ಕಟ್ಟಡ ನಿರ್ಮಾಣವಾದರೂ ಹಿಂದಿನ ಕಟ್ಟಡವನ್ನು ಆಸ್ಪತ್ರೆಗೆ ಬಳಸಿಕೊಳ್ಳುವ ಇರಾದೆ ಇಲಾಖೆ ಮುಖ್ಯಸ್ಥರದ್ದು. ಒಂದಷ್ಟು ಹೆಂಚು ರಿಪೇರಿ ಇದೆ. ಮಿಕ್ಕಂತೆ ಕಟ್ಟಡದ ಸ್ಥಿತಿಗತಿ ಉತ್ತಮವಾಗಿಯೇ ಇದೆ. ಹಂಚಿನ ಕಟ್ಟಡ ಆಗಿದ್ದ ಕಾರಣ, ಇಲಿಗಳ ಕಾಟ ಹೆಚ್ಚೇ ಇದೆ. ಇದಕ್ಕೆಲ್ಲ ವ್ಯವಸ್ಥೆ ಮಾಡಿಕೊಂಡರೆ, ಬ್ರಿಟಿಷರ ಕಾಲದ ಕಟ್ಟಡವನ್ನು ಇತರ ಕೆಲಸಗಳಿಗೆ ಬಳಸಿಕೊಳ್ಳಬಹುದು. ಕಟ್ಟಡದ ಹಿಂದಿರುವ ಇಕ್ಕಟ್ಟಾದ ಕೋಳಿ ಶೆಡ್‌ನ‌ಲ್ಲಿ ಪ್ರಾಣಿಗಳಿಗೆ ಚಿಕಿತ್ಸೆ ನೀಡಲಾಗುತ್ತಿತ್ತು. ಸೂಕ್ತ ವ್ಯವಸ್ಥೆಗಳಿಲ್ಲದೆ, ದಟ್ಟಣೆ ಹೆಚ್ಚು. ಇದೀಗ ಕಚೇರಿಗೆ ಸುಸಜ್ಜಿತ ಕಟ್ಟಡ ಸಿಗುತ್ತಿದೆ. ಬಳಿಕ ಪ್ರಾಣಿಗಳಿಗೂ ಯೋಗ್ಯ ರೀತಿಯಲ್ಲೇ ಚಿಕಿತ್ಸೆಗೆ ವ್ಯವಸ್ಥೆ ಆಗುತ್ತದೆ.

ಪಶು ಆಸ್ಪತ್ರೆ ವ್ಯಾಪ್ತಿ
ಪುತ್ತೂರು ಪಶು ಸಂಗೋಪನ ಇಲಾಖೆ ಅಡಿಯಲ್ಲಿ ಒಟ್ಟು 17 ಸಂಸ್ಥೆಗಳು ಕಾರ್ಯ ನಿರ್ವಹಿಸುತ್ತಿವೆ. ನಾಲ್ಕು ಪಶು ಆಸ್ಪತ್ರೆಗಳು- ಉಪ್ಪಿನಂಗಡಿ, ಪುತ್ತೂರು, ಪಾಣಾಜೆ, ಕಡಬ ಪಶು ಆಸ್ಪತ್ರೆ. 4 ಪಶು ಚಿಕಿತ್ಸಾಲಯಗಳೂ- ಕೊಳ್ತಿಗೆ, ನರಿಮೊಗರು, ಕೌಕ್ರಾಡಿ, ಕಲ್ಲುಗುಡ್ಡೆ. 9 ಪ್ರಾಥಮಿಕ ಪಶು ಚಿಕಿತ್ಸಾ ಕೇಂದ್ರಗಳು- ಈಶ್ವರಮಂಗಲ, ಕೌಡಿಚ್ಚಾರು, ಕೆದಂಬಾಡಿ, ಬೆಳಂದೂರು, ಬಲ್ನಾಡು, ಕೋಡಿಂಬಾಡಿ, ಶಿರಾಡಿ, ನೆಲ್ಯಾಡಿ, ಕುಂತೂರುಪದವು. ಇಷ್ಟು ದೊಡ್ಡ ವ್ಯಾಪ್ತಿ ಹೊಂದಿರುವ ಪುತ್ತೂರು ಪಶು ಆಸ್ಪತ್ರೆಗೆ ಸಾಕಷ್ಟು ಔಷಧಗಳು ಬರುತ್ತವೆ. ಇದನ್ನು ದಾಸ್ತಾನು ಇಡಲು ವ್ಯವಸ್ಥೆಯೂ ಬೇಕಿತ್ತು. ಅದು ಹೊಸ ಕಟ್ಟಡದಲ್ಲಿ ಇರಲಿದೆ.

ಸಿಬಂದಿ ಹೆಚ್ಚು ಬೇಕು
ಪುತ್ತೂರು ಪಶು ಆಸ್ಪತ್ರೆಯ ಇಷ್ಟೆಲ್ಲ ಸೌಕರ್ಯಗಳನ್ನು ನಿಭಾಯಿಸಲು ಒಟ್ಟು 12 ಮಂದಿ ಅಧಿಕಾರಿ, ಸಿಬಂದಿ ಬೇಕು. ಈಗ ಓರ್ವ ಸಹಾಯಕ ನಿರ್ದೇಶಕ, ಇಬ್ಬರು ಪಶು ವೈದ್ಯಾಧಿಕಾರಿ, ತಲಾ ಒಬ್ಬರಂತೆ ಜಾನುವಾರು ಅಧಿಕಾರಿ, ದ್ವಿತೀಯ ದರ್ಜೆ ಸಹಾಯಕ, ಪಶು ವೈದ್ಯ ಸಹಾಯಕರು ಇದ್ದಾರೆ. ಇಬ್ಬರು ಡಿ ದರ್ಜೆ ಸಹಾಯಕರು, ವಾಹನ ಚಾಲಕ, ಇಬ್ಬರು ಪಶು ವೈದ್ಯ ಸಹಾಯಕರ ಹುದ್ದೆ ಖಾಲಿ ಇದೆ. ಹೊಸ ಕಟ್ಟಡ ಉದ್ಘಾಟನೆ ಆದಾಗ, ಇಷ್ಟೆಲ್ಲ ಸಿಬಂದಿ ಆಗಮಿಸಿದರೆ, ಹಳೆ ಕಟ್ಟಡವನ್ನು ರಿಪೇರಿ ಮಾಡಿ ಬಳಸಿಕೊಳ್ಳಲಾಗುವುದು ಎನ್ನುತ್ತಾರೆ ಆಸ್ಪತ್ರೆಯ ಉಪನಿರ್ದೇಶಕ ಸುರೇಶ್‌ ಭಟ್‌.

ಕಟ್ಟಡದಲ್ಲಿ ಏನೇನಿದೆ?
ಉಪನಿರ್ದೇಶಕರ ಕಚೇರಿ, ವೈದ್ಯರ ಕೊಠಡಿ, ಸಭಾಂಗಣ, ಪ್ರಯೋಗಾಲಯ, ಔಷಧ ವಿತರಣೆ ಕೌಂಟರ್‌, ದಾಸ್ತಾನು ಕೊಠಡಿ ಹೊಸ ಪಶು ಆಸ್ಪತ್ರೆಯಲ್ಲಿ ಇರಲಿದೆ. ಇದುವರೆಗೆ ಸಣ್ಣ ಕಟ್ಟಡದಲ್ಲಿ ಈ ಎಲ್ಲ ಕೆಲಸಗಳನ್ನು ನಿರ್ವಹಿಸಬೇಕಿತ್ತು. ಇದುವರೆಗೆ ಪ್ರಯೋಗಾಲಯವೂ ಇರಲಿಲ್ಲ. ಇನ್ನು ಮುಂದೆ ಪಶು ಆಸ್ಪತ್ರೆಯಲ್ಲೇ ಪುಟ್ಟ ಪ್ರಯೋಗಾಲಯವೂ ಇರಲಿದ್ದು, ಪ್ರಾಣಿಗಳ ಚಿಕಿತ್ಸೆಗೆ ಸಹಕಾರಿ ಆಗಲಿದೆ. ಹೊರಮೈಯಲ್ಲಿ ಸಾರಣೆ ಬದಲು, ಗೋಡೆಗೆ ಪಾಲಿಶ್‌ ಮಾಡಲಾಗುವುದು.

ಶೀಘ್ರದಲ್ಲಿ ಲಭ್ಯ
ಚುನಾವಣೆ ಹಿನ್ನೆಲೆಯಲ್ಲಿ ಹೊಸ ಕಟ್ಟಡದ ಕೆಲಸ ಸ್ವಲ್ಪ ನಿಧಾನವಾಯಿತು. ಇದೀಗ ಚುನಾವಣೆ ಮುಗಿದಿದೆ. ಮುಂದಿನ ಒಂದೆರಡು ತಿಂಗಳಲ್ಲಿ ಪಶು ಆಸ್ಪತ್ರೆಗೆ ಹೊಸ ಕಟ್ಟಡ ಸಿಗಲಿದೆ. ಇದಕ್ಕೆ ತಕ್ಕಂತೆ ಸಿಬಂದಿಯೂ ಬಂದರೆ, ಆಸ್ಪತ್ರೆ ಸುಸಜ್ಜಿತವಾಗಿಯೇ ಕಾರ್ಯ ನಿರ್ವಹಿಸಲಿದೆ.
– ಡಾ| ಸುರೇಶ್‌ ಭಟ್‌,
ಇಲಾಖೆ, ಉಪನಿರ್ದೇಶಕ, ಪಶು ಸಂಗೋಪನ ಇಲಾಖೆ, ಪುತ್ತೂರು

ಗಣೇಶ್‌ ಎನ್‌. ಕಲ್ಲರ್ಪೆ 

ಟಾಪ್ ನ್ಯೂಸ್

Channaptna Result: ಕೊನೆ ಕ್ಷಣದಲ್ಲಿ ಪಕ್ಷ ಬದಲಿಸಿದರೂ ಗೆದ್ದ ಸೈನಿಕ: ನೆರವಾದ ಡಿಕೆ ತಂತ್ರ

Channaptna Result: ಕೊನೆ ಕ್ಷಣದಲ್ಲಿ ಪಕ್ಷ ಬದಲಿಸಿದರೂ ಗೆದ್ದ ಸೈನಿಕ: ನೆರವಾದ ಡಿಕೆ ತಂತ್ರ

11-kambala

Kambala ಋತುವಿನ ಪ್ರಥಮ ಕಂಬಳ; ಕೊಡಂಗೆ ವೀರ-ವಿಕ್ರಮ ಜೋಡುಕರೆ ಬಯಲು ಕಂಬಳಕ್ಕೆ ಚಾಲನೆ

Wayanad Results 2024:ವಯನಾಡ್‌ ನಲ್ಲಿ ಪ್ರಿಯಾಂಕಾಗೆ 3.68 ಲಕ್ಷಕ್ಕೂ ಅಧಿಕ ಮತಗಳ ಮುನ್ನಡೆ!

Wayanad Results 2024:ವಯನಾಡ್‌ ನಲ್ಲಿ ಪ್ರಿಯಾಂಕಾಗೆ 3.68 ಲಕ್ಷಕ್ಕೂ ಅಧಿಕ ಮತಗಳ ಮುನ್ನಡೆ!

Video: ವಿದ್ಯಾರ್ಥಿಯಿಂದ ಕಾಲು ಒತ್ತಲು ಹೇಳಿ ಶಾಲೆಯಲ್ಲೇ ವಿಶ್ರಾಂತಿಗೆ ಜಾರಿದ ಶಿಕ್ಷಕ

Video: ವಿದ್ಯಾರ್ಥಿಯಿಂದ ಕಾಲು ಒತ್ತಲು ಹೇಳಿ ಶಾಲೆಯಲ್ಲೇ ವಿಶ್ರಾಂತಿಗೆ ಜಾರಿದ ಶಿಕ್ಷಕ

Sandur Result: ಭದ್ರಕೋಟೆಯಲ್ಲಿ ಮತ್ತೆ ಗೆದ್ದ ಕಾಂಗ್ರೆಸ್:‌ ಇಲ್ಲಿದೆ ಮತಎಣಿಕೆಯ ಪೂರ್ಣವಿವರ

Sandur Result: ಭದ್ರಕೋಟೆಯಲ್ಲಿ ಮತ್ತೆ ಗೆದ್ದ ಕಾಂಗ್ರೆಸ್:‌ ಇಲ್ಲಿದೆ ಮತಎಣಿಕೆಯ ಪೂರ್ಣವಿವರ

Karnataka By Poll Results: ಜೆಡಿಎಸ್‌ ಅಂತಿಮ ದಿನ ಎಣಿಸತೊಡಗಿದೆ: ಸಿ.ಪಿ.ಯೋಗೇಶ್ವರ್‌

Karnataka By Poll Results: ಜೆಡಿಎಸ್‌ ಅಂತಿಮ ದಿನ ಎಣಿಸತೊಡಗಿದೆ: ಸಿ.ಪಿ.ಯೋಗೇಶ್ವರ್‌

By Poll: ಇಬ್ಬರು ಮಾಜಿ ಸಿಎಂಗಳ ಪುತ್ರರಿಗೂ ಸೋಲಿನ ರುಚಿ ತೋರಿಸಿದ ಮತದಾರ; ಎಡವಿದ್ದೆಲ್ಲಿ?

By Poll: ಇಬ್ಬರು ಮಾಜಿ ಸಿಎಂಗಳ ಪುತ್ರರಿಗೂ ಸೋಲಿನ ರುಚಿ ತೋರಿಸಿದ ಮತದಾರ; ಎಡವಿದ್ದೆಲ್ಲಿ?

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಬೋಂಡಾ, ಬನ್ಸ್ ಮತ್ತು ಕೇಕ್‌

ಬೋಂಡಾ, ಬನ್ಸ್ ಮತ್ತು ಕೇಕ್‌

promegrnate

ಉಪಬೆಳೆಯಾಗಿ ದಾಳಿಂಬೆ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

go-green

ಮನೆಯಲ್ಲೇ ಹಸಿರು ಕ್ರಾಂತಿಯಾಗಲಿ…

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

MUST WATCH

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

udayavani youtube

ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|

udayavani youtube

ಲಾಭದಾಯಕ ಗುಲಾಬಿ ಕೃಷಿ ಮಾಡುವ ವಿಧಾನ

ಹೊಸ ಸೇರ್ಪಡೆ

Channaptna Result: ಕೊನೆ ಕ್ಷಣದಲ್ಲಿ ಪಕ್ಷ ಬದಲಿಸಿದರೂ ಗೆದ್ದ ಸೈನಿಕ: ನೆರವಾದ ಡಿಕೆ ತಂತ್ರ

Channaptna Result: ಕೊನೆ ಕ್ಷಣದಲ್ಲಿ ಪಕ್ಷ ಬದಲಿಸಿದರೂ ಗೆದ್ದ ಸೈನಿಕ: ನೆರವಾದ ಡಿಕೆ ತಂತ್ರ

11-kambala

Kambala ಋತುವಿನ ಪ್ರಥಮ ಕಂಬಳ; ಕೊಡಂಗೆ ವೀರ-ವಿಕ್ರಮ ಜೋಡುಕರೆ ಬಯಲು ಕಂಬಳಕ್ಕೆ ಚಾಲನೆ

Wayanad Results 2024:ವಯನಾಡ್‌ ನಲ್ಲಿ ಪ್ರಿಯಾಂಕಾಗೆ 3.68 ಲಕ್ಷಕ್ಕೂ ಅಧಿಕ ಮತಗಳ ಮುನ್ನಡೆ!

Wayanad Results 2024:ವಯನಾಡ್‌ ನಲ್ಲಿ ಪ್ರಿಯಾಂಕಾಗೆ 3.68 ಲಕ್ಷಕ್ಕೂ ಅಧಿಕ ಮತಗಳ ಮುನ್ನಡೆ!

Video: ವಿದ್ಯಾರ್ಥಿಯಿಂದ ಕಾಲು ಒತ್ತಲು ಹೇಳಿ ಶಾಲೆಯಲ್ಲೇ ವಿಶ್ರಾಂತಿಗೆ ಜಾರಿದ ಶಿಕ್ಷಕ

Video: ವಿದ್ಯಾರ್ಥಿಯಿಂದ ಕಾಲು ಒತ್ತಲು ಹೇಳಿ ಶಾಲೆಯಲ್ಲೇ ವಿಶ್ರಾಂತಿಗೆ ಜಾರಿದ ಶಿಕ್ಷಕ

Sandur Result: ಭದ್ರಕೋಟೆಯಲ್ಲಿ ಮತ್ತೆ ಗೆದ್ದ ಕಾಂಗ್ರೆಸ್:‌ ಇಲ್ಲಿದೆ ಮತಎಣಿಕೆಯ ಪೂರ್ಣವಿವರ

Sandur Result: ಭದ್ರಕೋಟೆಯಲ್ಲಿ ಮತ್ತೆ ಗೆದ್ದ ಕಾಂಗ್ರೆಸ್:‌ ಇಲ್ಲಿದೆ ಮತಎಣಿಕೆಯ ಪೂರ್ಣವಿವರ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.