ರಸ್ತೆ ಮೇಲೆ ಹರಿಯುತ್ತಿದೆ ನೀರು: ಜನ ಸಂಚಾರಕ್ಕೆ ತೊಡಕು


Team Udayavani, Jun 14, 2018, 12:41 PM IST

14-june-8.jpg

ಈಶ್ವರಮಂಗಲ : ಸಮರ್ಪಕ ಚರಂಡಿ ನಿರ್ಮಿಸದ ಹಿನ್ನೆಲೆಯಲ್ಲಿ ಈಶ್ವರಮಂಗಲ ಪೇಟೆ ಹಾಗೂ ಗೋಳಿತ್ತಡಿ ಬಸ್‌ ತಂಗುದಾಣದ ಬಳಿ ಮೋರಿ ಮತ್ತು ಚರಂಡಿ ಎರಡೂ ಬ್ಲಾಕ್‌ ಆಗಿ ಹರಿದು ಬಂದ ಮಳೆನೀರು ರಸ್ತೆ ಮೇಲೆ ಶೇಖರಣೆಗೊಂಡು ಕೃತಕ ನೆರೆ ನಿರ್ಮಾಣಗೊಳ್ಳುತ್ತಿದೆ. ನೆಟ್ಟಣಿಗೆ ಮುಟ್ನೂರು ಗ್ರಾ.ಪಂ. ವ್ಯಾಪ್ತಿಯ ಈಶ್ವರಮಂಗಲದ ವಿಜಯ ಬ್ಯಾಂಕ್‌ ಸಮೀಪದ ಚರಂಡಿಯಲ್ಲಿ ನೀರು ಹರಿಯದೆ ರಸ್ತೆಗೆ ಬರುತ್ತಿದೆ. ಇದರಿಂದ ವಿದ್ಯಾರ್ಥಿಗಳು, ವಾಹನ ಚಾಲಕರು ತೊಂದರೆ ಅನುಭವಿಸುತ್ತಿದ್ದಾರೆ. ಸುಳ್ಯಪದವು ಜಿ.ಪಂ. ರಸ್ತೆಯಲ್ಲಿ ಈಶ್ವರಮಂಗಲ ಪೇಟೆಯಿಂದ 700 ಮೀ. ದೂರದ ಗೋಳಿತ್ತಡಿ ಎಂಬಲ್ಲಿ ಈ ಅವ್ಯವಸ್ಥೆ ಉಂಟಾಗಿದೆ. ರಸ್ತೆಗೆ ಹಾಕಲಾಗಿರುವ ಮೋರಿ ಹಾಗೂ ಚರಂಡಿ ಕಸಕಡ್ಡಿ, ಮಣ್ಣಿನಿಂದ ತುಂಬಿದ್ದು, ಮಳೆ ನೀರು ಸರಾಗವಾಗಿ ಹರಿದು ಹೋಗದೆ ರಸ್ತೆ ಮೇಲೆಯೇ ಕೃತಕ ನೆರೆ ಸೃಷ್ಟಿಯಾಗುತ್ತಿದೆ. ಇಂಥ ಸಂದರ್ಭದಲ್ಲಿ ಈ ರಸ್ತೆಯಲ್ಲಿ ಸಾಗುವುದು ಅಪಾಯಕಾರಿ. ಅಧಿಕಾರಿಗಳು ಎಚ್ಚೆತ್ತು, ಸೂಕ್ತ ವ್ಯವಸ್ಥೆ ಕೈಗೊಳ್ಳಬೇಕೆಂದು ಸ್ಥಳೀಯರು ಆಗ್ರಹಿಸಿದ್ದಾರೆ.

ಶಾಲಾ ಮಕ್ಕಳಿಗೆ ಕಾದಿದೆ ಅಪಾಯ
ಜೋರು ಮಳೆ ಸುರಿಯುತ್ತಿದ್ದರೆ ಕೆಸರು ನೀರು ರಸ್ತೆ ಮೇಲೆ ತುಂಬಿಕೊಂಡಿರುತ್ತದೆ. ಯಾವುದು ರಸ್ತೆ, ಎಲ್ಲಿ ಗುಂಡಿ ಎಂಬುದೇ ತಿಳಿಯುತ್ತಿಲ್ಲ. ಇದೇ ದಾರಿಯಲ್ಲಿ ಪ್ರತಿನಿತ್ಯ ನೂರಾರು ವಿದ್ಯಾರ್ಥಿಗಳು, ನಾಗರಿಕರು ನಡೆದುಕೊಂಡು ಬರುತ್ತಾರೆ. ಸ್ವಲ್ಪ ಎಚ್ಚರ ತಪ್ಪಿದರೂ ಗುಂಡಿಗೆ ಬೀಳುವ ಅಪಾಯವಿದೆ. ಅದರಲ್ಲೂ ಚಿಕ್ಕ ಮಕ್ಕಳು ನೀರಿನಲ್ಲಿ ಆಟವಾಡಲು ಹೋಗಿ ಅಪಾಯ ತಂದುಕೊಳ್ಳಬಹುದು. ಇಲ್ಲಿ ರಸ್ತೆಯಲ್ಲಿ ನೀರು ತುಂಬಿಕೊಳ್ಳದಂತೆ ಮಾಡಬೇಕಿದೆ.

ತಾಲೂಕಿನ ಪ್ರತಿಯೊಂದು ರಸ್ತೆಯೂ ಮಳೆಗಾಲದಲ್ಲಿ ನಾದುರಸ್ತಿ ಕಾಣಲು ಸರಿಯಾದ ಚರಂಡಿ ವ್ಯವಸ್ಥೆ ಇಲ್ಲದಿರುವುದೇ ಕಾರಣವಾಗಿದೆ. ಹೆಚ್ಚಿನ ರಸ್ತೆಯ ಇಕ್ಕೆಲಗಳಲ್ಲಿ ಮಳೆ ನೀರು ಸರಾಗವಾಗಿ ಹರಿದು ಹೋಗಲು ಸರಿಯಾದ ಚರಂಡಿ ವ್ಯವಸ್ಥೆಯೇ ಇಲ್ಲ. ಹೀಗಿರುವಾಗ ಮಳೆ ನೀರು ರಸ್ತೆ ಮೇಲೆ ಹರಿಯಬೇಕಷ್ಟೆ. ಸರಿಯಾದ ಚರಂಡಿ ವ್ಯವಸ್ಥೆ ಮಾಡದಿರುವ ರಸ್ತೆಗೆ ಬಿಲ್‌ ಮಾಡದೆ ತಡೆ ಹಿಡಿಯಬೇಕಾಗಿದೆ.ಗೋಳಿತ್ತಡಿಯಲ್ಲಿ ರಸ್ತೆಗೆ ಆಳವಡಿಸಿದ ಮೋರಿಯಲ್ಲಿ ತ್ಯಾಜ್ಯಗಳು ತುಂಬಿರುವ ಪರಿಣಾಮ ಮಳೆಗಾಲದಲ್ಲಿ ರಸ್ತೆಯ ಮೇಲೆ ನೀರು ತೋಡಿನಂತೆ ಹರಿದುಹೋಗುತ್ತಿರುತ್ತದೆ. ಕೆಲವು ವರ್ಷಗಳ ಹಿಂದೆ ನಾಲ್ಕು ವರ್ಷದ ಬಾಲಕಿ ಈ ಸ್ಥಳದಲ್ಲಿ ನೀರಿನಲ್ಲಿ ಕೊಚ್ಚಿಕೊಂಡು ಹೋಗಿ ಮೃತಪಟ್ಟಿದ್ದಳು. ಇಂತಹ ಘಟನೆಗಳು ಕಣ್ಣ ಮುಂದೆ ಇರುವಾಗ ಮೋರಿಗಳ ದುರಸ್ತಿಗೆ ಗಮನ ಹರಿಸಬೇಕಿದೆ.

ಪ್ರಯತ್ನ ವಿಫ‌ಲ
ಕಳೆದ ತಿಂಗಳಲ್ಲಿ ಗೋಳಿತಡಿ-ಕುತ್ಯಾಳ ರಸ್ತೆ ಅಭಿವೃದ್ಧಿಗೊಂಡಿದ್ದು, ಡಾಮರು ಕಾಮಗಾರಿ ವೇಳೆ ಚರಂಡಿ ಸಮರ್ಪಕವಾಗಿ ಮಾಡದೆ ಕೃತಕ ನೆರೆಗೆ ಕಾರಣವಾಗಿದೆ. ಕಳೆದ ವರ್ಷವೂ ಕೃತಕ ನೆರೆ ಉಂಟಾಗಿತ್ತು. ಈ ವರ್ಷ ಸ್ವಲ್ಪ ಜಾಸ್ತಿಯೇ ಆಗಿದ್ದು, ಪಾದಚಾರಿಗಳಿಗೆ, ವಾಹನ ಸವಾರರಿಗೆ ಅಪಾಯ ತರುವಂತಿದೆ. ಗೋಳಿತ್ತಡಿಯಲ್ಲಿ ಬುಧವಾರ ಸಂಜೆ ಮೋರಿಯ ಒಳಗೆ ಇರುವ ಕಸ ಮತ್ತು ಮಣ್ಣು ತೆಗೆಯಲು ನಡೆಸಿದ ಪ್ರಯತ್ನ ವಿಫ‌ಲವಾಗಿದೆ.
-ದಿನೇಶ್‌ ರೈ ಕುತ್ಯಾಳ ಸ್ಥಳೀಯ ನಿವಾಸಿ

 ಮಾಧವ ನಾಯಕ್‌ ಕೆ.

ಟಾಪ್ ನ್ಯೂಸ್

Supreme Court upheld the validity of the UP Madarsa Act

Madarsa Act: ಯುಪಿ ಮದರಸಾ ಕಾಯ್ದೆ ಸಿಂಧುತ್ವ ಎತ್ತಿಹಿಡಿದ ಸುಪ್ರೀಂ

Come to Bangalore and debate with me: Kharge challenges PM Modi

Kharge: ಬೆಂಗಳೂರಿಗೆ ಬಂದು ನನ್ನ ಜತೆ ಚರ್ಚೆಗೆ ನಿಲ್ಲಿ: ಪ್ರಧಾನಿ ಮೋದಿಗೆ ಖರ್ಗೆ ಸವಾಲು

IPL Mega Auction: 24th and 25th IPL auction in Jeddah

IPL Mega Auction: ನ.24 ಮತ್ತು 25 ಜೆಡ್ಡಾದಲ್ಲಿ ಐಪಿಎಲ್‌ ಹರಾಜು

Did Adani try to meet Rahul during UPA?

Gautam Adani: ಯುಪಿಎ ಅವಧಿಯಲ್ಲಿ ರಾಹುಲ್‌ ಭೇಟಿಗೆ ಯತ್ನಿಸಿದ್ದರೇ ಅದಾನಿ?

NCP supremo Sharad hinted retirement from electoral politics

Sharad Pawar: ಚುನಾವಣಾ ರಾಜಕೀಯ ನಿವೃತ್ತಿ ಸುಳಿವು ನೀಡಿದ ಎನ್‌ಸಿಪಿ ವರಿಷ್ಠ ಶರದ್‌

Salman Khan’s ex Somy Ali spoke about Sushant Singh Rajput’s demise

Somy Ali: ಸುಶಾಂತ್‌ರದ್ದು ಕೊಲೆ, ಶವಪರೀಕ್ಷೆ ವರದಿ ಬದಲು: ನಟಿ ಸೋಮಿ!

Not supporting Raj Thackeray’s son Amit Thackeray: BJP U Turn!

Maha Polls; ರಾಜ್‌ ಠಾಕ್ರೆ ಪುತ್ರ ಅಮಿತ್‌ ಠಾಕ್ರೆಗೆ ಬೆಂಬಲ ನೀಡಲ್ಲ: ಬಿಜೆಪಿ ಯೂಟರ್ನ್!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಬೋಂಡಾ, ಬನ್ಸ್ ಮತ್ತು ಕೇಕ್‌

ಬೋಂಡಾ, ಬನ್ಸ್ ಮತ್ತು ಕೇಕ್‌

promegrnate

ಉಪಬೆಳೆಯಾಗಿ ದಾಳಿಂಬೆ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

go-green

ಮನೆಯಲ್ಲೇ ಹಸಿರು ಕ್ರಾಂತಿಯಾಗಲಿ…

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

MUST WATCH

udayavani youtube

ಗೋವಿನ ಪೂಜೆ ಯಾಕಾಗಿ ಮಾಡಬೇಕು?

udayavani youtube

ಮೇಲುಕೋಟೆಯಲ್ಲಿ ದೀಪಾವಳಿ ಆಚರಿಸುವುದಿಲ್ಲ ಎಂಬ ಮಾತು ನಿಜವೋ ಸುಳ್ಳೋ

udayavani youtube

ಗಣಪತಿ ಸಹಕಾರಿ ವ್ಯವಸಾಯಕ ಸಂಘ ‘ನಿ.’ ಕೆಮ್ಮಣ್ಣು ಶತಾಭಿವಂದನಂ ಸಮಾರೋಪ ಸಂಭ್ರಮ ಸಂಪನ್ನ

udayavani youtube

ಉದಯವಾಣಿ’ಚಿಣ್ಣರ ಬಣ್ಣ -2024

udayavani youtube

ಹಬ್ಬದ ಊಟವೇ ಈ ಹೋಟೆಲ್ ನ ಸ್ಪೆಷಾಲಿಟಿ

ಹೊಸ ಸೇರ್ಪಡೆ

Supreme Court upheld the validity of the UP Madarsa Act

Madarsa Act: ಯುಪಿ ಮದರಸಾ ಕಾಯ್ದೆ ಸಿಂಧುತ್ವ ಎತ್ತಿಹಿಡಿದ ಸುಪ್ರೀಂ

Come to Bangalore and debate with me: Kharge challenges PM Modi

Kharge: ಬೆಂಗಳೂರಿಗೆ ಬಂದು ನನ್ನ ಜತೆ ಚರ್ಚೆಗೆ ನಿಲ್ಲಿ: ಪ್ರಧಾನಿ ಮೋದಿಗೆ ಖರ್ಗೆ ಸವಾಲು

IPL Mega Auction: 24th and 25th IPL auction in Jeddah

IPL Mega Auction: ನ.24 ಮತ್ತು 25 ಜೆಡ್ಡಾದಲ್ಲಿ ಐಪಿಎಲ್‌ ಹರಾಜು

Did Adani try to meet Rahul during UPA?

Gautam Adani: ಯುಪಿಎ ಅವಧಿಯಲ್ಲಿ ರಾಹುಲ್‌ ಭೇಟಿಗೆ ಯತ್ನಿಸಿದ್ದರೇ ಅದಾನಿ?

NCP supremo Sharad hinted retirement from electoral politics

Sharad Pawar: ಚುನಾವಣಾ ರಾಜಕೀಯ ನಿವೃತ್ತಿ ಸುಳಿವು ನೀಡಿದ ಎನ್‌ಸಿಪಿ ವರಿಷ್ಠ ಶರದ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.