ಅಯೋಗ್ಯನಿಗೆ ತೊಂದರೆ
Team Udayavani, Jun 14, 2018, 4:20 PM IST
ಸತೀಶ್ ನೀನಾಸಂ ಅಭಿನಯದ “ಅಯೋಗ್ಯ’ ಚಿತ್ರಕ್ಕೆ ಸಣ್ಣ ಸಮಸ್ಯೆ ಎದುರಾಗಿದೆ. “ಅಯೋಗ್ಯ’ ಹೆಸರಿನ ಕೆಳಗೆ “ಗ್ರಾಮಪಂಚಾಯ್ತಿ ಸದಸ್ಯ’ ಎಂಬ ಉಪಶೀರ್ಷಿಕೆ ಇರುವುದು ಗೊತ್ತೇ ಇದೆ. ಇದು ಗ್ರಾಮಪಂಚಾಯ್ತಿ ಸದಸ್ಯರಿಗೆ ಅವಮಾನ ಮಾಡಿದಂತೆ ಎಂದು ಮೈಸೂರಿನ ಕನ್ನಡ ಕ್ರಾಂತಿದಳದ ತೇಜಸ್ವಿನಿ ಕುಮಾರ್ ಎನ್ನುವವರು ತಕರಾರು ತೆಗೆದಿದ್ದಾರೆ. ಈ ಸಂಬಂಧ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಗೆ ಪತ್ರ ಬರೆಯುವುದರ ಜೊತೆಗೆ, ಚಿತ್ರತಂಡಕ್ಕೂ ಕರೆಮಾಡಿ, ಉಪಶೀರ್ಷಿಕೆಯನ್ನು ತೆಗೆದುಹಾಕುವಂತೆ ತಾಕೀತು ಮಾಡಿದ್ದಾರೆ. ಒಂದು ಪಕ್ಷ ಉಪಶೀರ್ಷಿಕೆ ತೆಗೆಯದ ಪಕ್ಷದಲ್ಲಿ, ಪ್ರತಿಭಟನೆ ಹಮ್ಮಿಕೊಳ್ಳುವುದಾಗಿ ಎಚ್ಚರಿಸಿದ್ದಾರೆ.
“ಅಯೋಗ್ಯ’ ಎಂಬ ಹೆಸರ ಕೆಳಗೆ “ಗ್ರಾಮಪಂಚಾಯ್ತಿ ಸದಸ್ಯ’ ಎಂಬ ಉಪಶೀರ್ಷಿಕೆ ಇಟ್ಟಿರುವುದರ ಕುರಿತು ಚಿತ್ರದ ಮುಹೂರ್ತದ ಸಂದರ್ಭದಲ್ಲೇ ಪ್ರಶ್ನಿಸಲಾಗಿತ್ತು. ಆದರೆ, ನಿರ್ದೇಶಕ ಮಹೇಶ್ ಕುಮಾರ್ ಅವರು ಚಿತ್ರಕ್ಕೆ ಅದರ ಅವಶ್ಯಕತೆ ಇದೆ ಮತ್ತು ಚಿತ್ರ ನೋಡಿದರೆ ಅರ್ಥವಾಗುತ್ತದೆ ಎಂದು ಸ್ಪಷ್ಟನೆ ಕೊಟ್ಟಿದ್ದರು. ಅದಾಗಿ ಆರು ತಿಂಗಳು ಕಳೆದ ಮೇಲೆ, ಈಗ ಕನ್ನಡ ಕ್ರಾಂತಿದಳ ಸಂಘಟನೆಯು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಗೆ ಪತ್ರ ಬರೆದು, ಆ ಉಪಶೀರ್ಷಿಕೆಯನ್ನು ರದ್ದು ಮಾಡುವಂತೆ ಕೋರಿದೆ. ಇದಕ್ಕೆ ಪ್ರತ್ಯುತ್ತರವಾಗಿ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಸಾ.ರಾ. ಗೋವಿಂದು ಅವರು ಪತ್ರ ಬರೆದಿದ್ದು, ವಾಣಿಜ್ಯ ಮಂಡಳಿಯಲ್ಲಿ “ಅಯೋಗ್ಯ’ ಎಂಬ ಶೀರ್ಷಿಕೆ ನೋಂದಣಿಯಾಗಿದೆಯೇ ಹೊರತು, “ಅಯೋಗ್ಯ – ಗ್ರಾಮ ಪಂಚಾಯ್ತಿ ಸದಸ್ಯ’ ಎಂದು ನೋಂದಾಯಿಸಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ. ಅಷ್ಟೇ ಅಲ್ಲ, ಉಪಶೀರ್ಷಿಕೆಗೂ ಮತ್ತು ವಾಣಿಜ್ಯ ಮಂಡಳಿಗೂ ಯಾವುದೇ ಸಂಬಂಧವಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಯಾವುದೇ ಕಾರಣಕ್ಕೆ ಬದಲಾಯಿಸುವುದಿಲ್ಲ: ಇನ್ನು ಈ ಶೀರ್ಷಿಕೆ ವಿವಾದದ ಕುರಿತು ಮಾತನಾಡುವ ನಿರ್ದೇಶಕ ಮಹೇಶ್, “ನಾವು ಗ್ರಾಮ ಪಂಚಾಯ್ತಿ ಸದಸ್ಯರನ್ನು ಅಗೌರವಯುತವಾಗಿ ತೋರಿಸಿಲ್ಲ. ಇಷ್ಟಕ್ಕೂ ನಮ್ಮ ಚಿತ್ರದಲ್ಲೇನಿದೆ ಎಂದು ಯಾರಿಗೂ ಗೊತ್ತಿಲ್ಲ. ಹಾಗಾಗಿ ಮೊದಲು ಚಿತ್ರ ನೋಡಿ, ಆ ನಂತರ ಮಾತನಾಡುವುದು ಸೂಕ್ತ.
ಈಗಾಗಲೇ ಚಿತ್ರೀಕರಣ ಮುಗಿದು, ಪೋಸ್ಟ್ ಪ್ರೊಡಕ್ಷನ್ ಕೆಲಸಗಳು ನಡೆಯುತ್ತಿವೆ. ಜುಲೈ 15ರೊಳಗೆ ಚಿತ್ರದ ಕೆಲಸಗಳು ಸಂಪೂರ್ನವಾಗಲಿದ್ದು, ಆ ನಂತರ ಬೇಕಾದರೆ 100 ಜನರಿಗೆ ತೋರಿಸುತ್ತೀನಿ. ಯಾರಾದರೂ ತಪ್ಪು ಎಂದರೆ, ಚಿತ್ರದಲ್ಲಿ ಗ್ರಾಮ ಪಂಚಾಯ್ತಿ ಸದಸ್ಯರಿಗೆ ಅಗೌರವಯುತವಾಗಿ ಏನಾದರೂ ಇದ್ದರೆ, ಕ್ಷಮೆ ಕೇಳುವುದಕ್ಕೆ ನಾನು ಸಿದ್ಧ. ಆ ಉಪಶೀರ್ಷಿಕೆಯನ್ನು ಸುಮ್ಮನೆ ಇಟ್ಟಿಲ್ಲ ನಾವು. ಕಥೆಗೆ ಸೂಕ್ತ ಎಂಬ ಕಾರಣಕ್ಕೆ ಇಟ್ಟಿದ್ದೇವೆ.
ಆದರೆ, ಸಂಘಟನೆಯವರು ಈಗಲೇ ತೆಗೆದುಹಾಕದಿದ್ದರೆ, ಸದ್ಯದಲ್ಲೇ ಪ್ರತಿಭಟನೆ ಹಮ್ಮಿಕೊಳ್ಳುವುದಾಗಿ ಹೇಳಿದ್ದಾರೆ. ಆದರೆ, ಉಪಶೀರ್ಷಿಕೆಯನ್ನು ತೆಗೆದುಹಾಕುವ ಪ್ರಶ್ನೆಯೇ ಇಲ್ಲ’ ಎಂದು ಹೇಳಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Darshan; ಶೂಟಿಂಗ್ ಗೆ ಡೆವಿಲ್ ರೆಡಿ; ಸತತ ಚಿತ್ರೀಕರಣಕ್ಕೆ ತಂಡ ನಿರ್ಧಾರ?
Gurunandan: ಡಿ.27ಕ್ಕೆ ತೆರೆಗೆ ಬರುತ್ತಿಲ್ಲ ʼರಾಜು ಜೇಮ್ಸ್ ಬಾಂಡ್’ ಚಿತ್ರ
Nodidavaru Enanthare Movie: ನವೀನ್ ಶಂಕರ್ ಚಿತ್ರದ ಟೀಸರ್ ಬಂತು
BBK11: ಸತತ ಮೂರನೇ ವಾರವೂ ಕಳಪೆ ಪಟ್ಟಿ: ಖುಷಿಯಿಂದಲೇ ಜೈಲು ಸೇರಿದ ಚೈತ್ರಾ
Dhruva-Prem: ಡಿ.24ಕ್ಕೆ ʼಕೆಡಿʼ ಶಿವ ಶಿವ ಹಾಡು ರಿಲೀಸ್
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Darshan; ಶೂಟಿಂಗ್ ಗೆ ಡೆವಿಲ್ ರೆಡಿ; ಸತತ ಚಿತ್ರೀಕರಣಕ್ಕೆ ತಂಡ ನಿರ್ಧಾರ?
Chhattisgarh: ವಿವಾಹಿತ ಮಹಿಳೆಯರ ಖಾತೆಗೆ ಹಣ-ಸನ್ನಿ ಲಿಯೋನ್ ಹೆಸರಲ್ಲಿ ವಂಚನೆ!
Hubli: ಅಯ್ಯಪ್ಪ ಶಿಬಿರದಲ್ಲಿ ಅಗ್ನಿ ಆಕಸ್ಮಿಕ: ಒಂಬತ್ತು ವೃತಧಾರಿಗಳಿಗೆ ಗಂಭೀರ ಗಾಯ
Punjab ಪೊಲೀಸರ ಮೇಲೆ ಗ್ರೆನೇಡ್ ದಾಳಿ ನಡೆಸಿದ್ದ ಮೂವರು ಖಲಿಸ್ತಾನಿ ಉ*ಗ್ರರ Encounter
Tollywood: ‘ಗೇಮ್ ಚೇಂಜರ್ʼಗೆ ರಾಮ್‌ಚರಣ್ ರಾಷ್ಟ್ರ ಪ್ರಶಸ್ತಿ ಪಡೆಯುತ್ತಾರೆ – ಸುಕುಮಾರ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.