ಬಿಎಸ್ಸೆನ್ನೆಲ್ ಅಧಿಕಾರಿಗಳ ನಿರ್ಲಕ್ಷ್ಯ: ಗ್ರಾಹಕರಿಗೆ ಶಿಕ್ಷೆ
Team Udayavani, Jun 14, 2018, 4:59 PM IST
ವೇಣೂರು : ಒಂಡೆದೆ ಡಿಜಿಟಲ್ ಇಂಡಿಯಾ ಕಲ್ಪನೆ. ಮತ್ತೂಂದೆಡೆ ತಿಂಗಳೆರಡು ಕಳೆದರೂ ದುರಸ್ತಿಗೊಳ್ಳದ ಬಿಎಸ್‌ಎನ್‌ಎಲ್ ನೆಟ್‌ವರ್ಕ್. ಬೆಳ್ತಂಗಡಿ ತಾಲೂಕಿನ ಅಂಡಿಂಜೆ ವ್ಯಾಪ್ತಿಯ ಬಿಎಸ್‌ಎನ್‌ಎಲ್ ಟವರ್ ಕಳೆದೆರಡು ತಿಂಗಳಿನಿಂದ ಸರಿಯಾಗಿ ಕಾರ್ಯ ನಿರ್ವಹಿಸುತ್ತಿಲ್ಲ. ಇದರಿಂದ ಮೊಬೈಲ್ ಮಾತ್ರವಲ್ಲದೆ ಸ್ಥಿರ ದೂರವಾಣಿ ಕೂಡಾ ಸ್ತಬ್ಧಗೊಂಡಿದ್ದು, ಗ್ರಾಹಕರು ಪರದಾಡುವಂತಾಗಿದೆ.
ಜನರೇಟರ್‌ಗೆ ಸಿಡಿಲು
ಸುಮಾರು ಕಳೆದೆರಡು ತಿಂಗಳಿನ ಹಿಂದೆ ಅಂಡಿಂಜೆ ದೂರವಾಣಿ ವಿನಿಯಮ ಕೇಂದ್ರದ ಬಳಿಯಿರುವ ಬಿಎಸ್ ಎನ್‌ಎಲ್ ಟವರ್‌ನ ಜನರೇಟರ್‌ಗೆ ಸಿಡಿಲು ಬಡಿದು ಭಾಗಶಃ ಬೆಂಕಿಗಾಹುತಿಯಾಗಿದೆ. ಇದರಿಂದಾಗಿ ವಿದ್ಯುತ್ ಪ್ರಸರಣ ಇದ್ದಾಗ ಮಾತ್ರ ಟವರ್ ಕಾರ್ಯಾಚರಿಸುತ್ತಿದ್ದು, ಮೊಬೈಲ್‌ಗೆ ನೆಟ್‌ವರ್ಕ್ ಸಿಗುತ್ತದೆ. ವಿದ್ಯುತ್ ಸಂಪರ್ಕ ಕಡಿತಗೊಂಡಾಗ ಸ್ತಬ್ಧಗೊಳ್ಳುತ್ತದೆ. ಆದರೆ ಇನ್‌ವರ್ಟರ್ ಸಹಾಯದಿಂದ ಸ್ಥಿರ ದೂರವಾಣಿಗಳು ಕೆಲಹೊತ್ತು ಚಾಲನೆಯಲ್ಲಿದ್ದು, ಮತ್ತೆ ಸ್ತಬ್ಧಗೊಳ್ಳುತ್ತವೆ. ಕೆಲವೊಮ್ಮೆ ದಿನವಿಡೀ ವಿದ್ಯುತ್ ಸಂಪರ್ಕ ಇಲ್ಲದೇ ಇದ್ದಾಗ ಈ ಭಾಗದ ಜನರ ಪರಿಸ್ಥಿತಿ ದೇವರಿಗೆ ಪ್ರೀತಿ!
ಗ್ರಾಹಕರ ಪರದಾಟ
ಮೊಬೈಲ್, ಸ್ಥಿರ ದೂರವಾಣಿಳು ಸ್ತಬ್ಧಗೊಳ್ಳುತ್ತಿರುವುದರಿಂದ ಗ್ರಾಹಕರು ಮಾತ್ರವಲ್ಲದೆ ವ್ಯಾಪ್ತಿಯಲ್ಲಿರುವ ಪಂ., ಇತರ ಇಲಾಖೆಗಳಿಗೂ ಸಮಸ್ಯೆ ಉಂಟಾಗಿದೆ. ಖಾಸಗಿ ಕಂಪೆನಿಗಳು ತಮ್ಮ ಸೇವೆ ಯನ್ನು ನಿರಂತರವಾಗಿ ನೀಡುತ್ತಿರುವಾಗ ಸರಕಾರಿ ಸ್ವಾಮ್ಯದ ಬಿಎಸ್‌ಎನ್‌ಎಲ್‌ಗೆ ಇದು ಸಾಧ್ಯವಿಲ್ಲವೇ ಎಂಬುದು ಜನರ ಪ್ರಶ್ನೆ.
ಈ ಬಗ್ಗೆ ಅಂಡಿಂಜೆ ವಿನಿಯಮ ಕೇಂದ್ರದ ಸಿಬಂದಿಯನ್ನು ಕೇಳಿದರೆ, ಟವರ್‌ನ ಜನರೇಟರ್‌ನ ನಿರ್ವಹಣೆಯನ್ನು ಹೊರಗುತ್ತಿಗೆ ನೀಡಲಾಗುತ್ತದೆ. ಆ ಪ್ರಕ್ರಿಯೆ ಈಗ ನಡೆಯುತ್ತಿದ್ದುದರಿಂದ ಇಲ್ಲಿನ ಜನರೇಟರ್ ದುರಸ್ತಿಗೆ ವಿಳಂಬವಾಗಿದೆ. ಇನ್ನು ಕೆಳವೇ ದಿನಗಳಲ್ಲಿ ಜನರೇಟರ್‌ನ ದುರಸ್ತಿ ಅಥವಾ ಹೊಸ ಜನರೇಟರ್ ಅಳವಡಿಸಲು ಕ್ರಮ ಕೈಗೊಳ್ಳಲಾಗುತ್ತದೆ ಎಂದಿದ್ದಾರೆ.
ಶೀಘ್ರ ಕ್ರಮ
ಸಿಡಿಲಿನಿಂದ ಜನರೇಟರ್‌ಗೆ ಹಾನಿಯಾಗಿದ್ದು, ತ್ವರಿತವಾಗಿ ಕೊಟೇಶನನ್ನು ಮಂಗಳೂರು ಪ್ಲ್ರಾನಿಂಗ್ ಸೆಕ್ಷನ್‌ಗೆ ಕಳುಹಿಸಿಕೊಡಲಾಗಿದೆ. ಟೆಂಡರ್ ಪ್ರಕ್ರಿಯೆ ವ್ಯತ್ಯಯ ದಿಂದಾಗಿ ಜನರೇಟರ್ ದುರಸ್ತಿಗೆ ವಿಳಂಬವಾಗಿದೆ. ಸಮಸ್ಯೆ ಅರಿವಾಗಿದ್ದು, ತ್ವರಿತ ಅಳವಡಿಕೆಗೆ ಕ್ರಮ ಕೈಗೊಳ್ಳುತ್ತೇವೆ.
– ಸುಂದರ
ಬಿಎಸ್‌ಎನ್‌ಎಲ್ ಉಪ ವಿಭಾಗೀಯ
ಅಭಿಯಂತರು (ಸಮೂಹ), ಬೆಳ್ತಂಗಡಿ
ಸಮಸ್ಯೆ ಆಗಿದೆ
ಮೊದಲು ಮನೆಯೊಳಗೆ ಸಿಗುತ್ತಿದ್ದ ಬಿಎಸ್‌ಎನ್‌ಎಲ್ ನೆಟ್‌ವರ್ಕ್ ಈಗ ಮನೆಯ ಹೊರಗೆ ಬಂದರೂ ಸಿಗುತ್ತಿಲ್ಲ. ನಮಗೆ ಕರೆಯೇ ಕಷ್ಟ, ಅಂತರ್ಜಾಲ ಸೇವೆ ಮರೀಚಿಕೆ ಆಗಿದೆ. ಅಧಿ ಕಾರಿಗಳಿಗೆ ಈ ಬಗ್ಗೆ ದೂರು ನೀಡಿದರೂ ಪ್ರಯೋಜನ ಆಗಿಲ್ಲ. ನಾನೋರ್ವ ಶಿಕ್ಷಕನಾಗಿದ್ದು, ಇಂದಿನ ತಂತ್ರಜ್ಞಾನ ಆಧರಿತ ಪಾಠಗಳಿಗೆ ಪರಸ್ಪರ ಮಾಹಿತಿ ವಿನಿಯಮಕ್ಕೆ, ಹೊಸ ಚಿಂತನೆಗೆ, ಅಂತರ್ಜಾಲ ಆಧರಿತ ವ್ಯವಹಾರಗಳಿಗೆ ಇದನ್ನೇ ಅವಲಂಬಿಸಿದ್ದೇವೆ. ಆದರೆ ಕಳಪೆ ಸೇವೆಯಿಂದ ಸಮಸ್ಯೆ ಉಂಟಾಗಿದೆ.
-ಜಯರಾಮ ಮಯ್ಯ
ಕೊಕ್ರಾಡಿ, ಬಿಎಸ್‌ಎನ್‌ಎಲ್ ಗ್ರಾಹಕರು
ಪದ್ಮನಾಭ ವೇಣೂರು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Nara Ramamurthy: ಆಂಧ್ರ ಸಿಎಂ ಚಂದ್ರಬಾಬು ನಾಯ್ಡು ಸಹೋದರ ನಾರಾ ರಾಮಮೂರ್ತಿ ನಾಯ್ಡು ನಿಧನ
Actor Darshan ವಿರುದ್ದ ಸುಪ್ರೀಂನಲ್ಲಿ ಮೇಲ್ಮನವಿ: ಬೆಂಗ್ಳೂರು ಕಮೀಷನರ್
Mangaluru: ನೋಟು ಬ್ಯಾನ್‌ಗೆ 8 ವರ್ಷ: ಹುಂಡಿಗೆ ಹಾಕೋದು ನಿಂತಿಲ್ಲ!
Desi Swara@150:ವಿದೇಶ ನೆಲದಲ್ಲಿ ಕರ್ನಾಟಕದ ಖಾದ್ಯವನ್ನು ಉಣಬಡಿಸುತ್ತಿರುವ ದಂಪತಿ
Maharashtra Election: ಬೂತ್ ಗೆಲ್ಲುವತ್ತ ಗಮನ ಹರಿಸಿ: ಕಾರ್ಯಕರ್ತರಿಗೆ ಮೋದಿ ಕರೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.