ಸಮಾಜ ಪ್ರೇಮಿ, ಹಿರಿಯ ಕನ್ನಡಿಗ ಎಂ. ಡಿ. ಶೆಟ್ಟಿ ಅವರ 90ರ ಹೆಜ್ಜೆಗಳು


Team Udayavani, Jun 14, 2018, 5:02 PM IST

1306mum02mdshetty.jpg

ಕರ್ನಾಟಕದ  ಮೂಳೂರುನಿಂದ ಓರ್ವ ಬಾಲಕ ತನ್ನ ಜನ್ಮ ಭೂಮಿಯನ್ನು ತೊರೆದು “ಉದರನಿಮಿತ್ತಂ’ ಎಂಬಂತೆ ಮಹಾರಾಷ್ಟ್ರದ ಕರ್ಮಭೂಮಿ ಮುಂಬಯಿ ಮಹಾನಗರಿಗೆ ಕಾಲಿಡುತ್ತಾನೆ. ಎಳೆಯ ಪ್ರಾಯದ ಹಲವಾರು ಕನಸು ಆಕಾಂಕ್ಷೆಯೊಂದಿಗೆ ಮುಂಬಯಿಯಲ್ಲಿ ನೆಲೆಯೂರಿ ಅಲ್ಲಿ ರಾತ್ರಿ ಶಾಲೆಯಲ್ಲಿ ಹತ್ತನೇ ತರಗ ತಿಯವರೆಗೆ ತನ್ನ ವಿದ್ಯಾಭ್ಯಾಸ ಪೂರೈಸಿರುತ್ತಾನೆ. ಮರಾಠಿ ಭೂಮಿಯಲ್ಲಿ 15 ವರ್ಷದ ಓರ್ವ ನೀಲಿ ಕಣ್ಣಿನ ಹುಡುಗ, ಸಮಾಜಮುಖೀಯಾಗಿ ಆಕರ್ಷಣೆಗೊಂಡು ಬಂಟರ ಯುವಕ ಸಂಘದ ಸದಸ್ಯನಾಗಿ ಸೇರ್ಪಡೆಗೊಳ್ಳುತ್ತಾರೆ. ಸಮಾಜೋದ್ಧಾರಕ್ಕಾಗಿ ತನ್ನನ್ನು ತಾನು ತೊಡಗಿಸಿಕೊಂಡು ಹಂತ-ಹಂತವಾಗಿ ಬಂಟರ ಸಂಘವು ನಡೆಸುತ್ತಿರುವ ರಾತ್ರಿ ಶಾಲೆಗಳ ಉಸ್ತುವಾರಿ ಹೊಣೆ ಹೊತ್ತುಕೊಳ್ಳುತ್ತಾರೆ.

ತಾನೇನು ಪದವೀಧರನಾಗದಿದ್ದರೂ, ಸಮಾಜದ ಅಭಿವೃದ್ಧಿಗೆ ಶಿಕ್ಷಣವೇ ಮೂಲಮಂತ್ರ  ಎಂಬ ದೂರದೃಷ್ಟಿತ್ವ ವುಳ್ಳ  ಚಿಂತಕರಾದರು. ಇದಕ್ಕೆ ಪೂರಕವಾಗಿ ಸಂಘಟನಾ ಶಕ್ತಿಯಿಂದ ಮಾತ್ರ ಸಮಾಜ ಅಭಿವೃದ್ಧಿ ಹೊಂದಲು ಸಾಧ್ಯವೆಂಬ ಕಟುಸತ್ಯವನ್ನು ಅರಿತು, ಈ ಮೂಲಕ ಮಹಾನಗರದ ಸಮಾನ ಮನಸ್ಕ ಬಂಟರೊಡನೆ ಸಂಘಟಿತ ರಾಗಿ ಮುಂಬಯಿಯಲ್ಲಿ ಹಲವಾರು ವರ್ಷಗಳ ಕಾಲ ಹಗಲಿರುಳು ಒಗ್ಗೂಡಿ ಕನಸಿನ ಬಂಟರ ಭವನ ನಿರ್ಮಿಸಿದರು. ಈ ಸಾಂಘಿಕ ಮಹಾನ್‌ ಕಾರ್ಯದಲ್ಲಿ ಎಲೆಮರೆಯ ಕಾಯಿಯಂತೆ ತನ್ನನ್ನು ತಾನು ಸಮರ್ಪಿಸಿಕೊಂಡರು.

ಬಂಟರ ಸಂಘದ ಕಾರ್ಯಕಾರಿ ಸದಸ್ಯನಾಗಿ ಎರಡು ಬಾರಿ ಅಧ್ಯಕ್ಷನಾಗಿ ಬೆಳ್ಳಿಹಬ್ಬ ಮತ್ತು ಸುವರ್ಣ ಮಹೋತ್ಸವದ ಅಧ್ಯಕ್ಷರಾಗಿ, ಉನ್ನತ ಶಿಕ್ಷಣ ಸಮಿತಿಯ ಕಾರ್ಯಧ್ಯಕ್ಷರಾಗಿ ತಾನು ಹುಟ್ಟಿದ ಸಮಾಜಕ್ಕೆ ಮಾತ್ರವಲ್ಲದೆ, ಮುಂಬಯಿ ಮಹಾನಗರದಲ್ಲಿ ನೆಲೆಸಿರುವ ತುಳು ಕನ್ನಡಿಗರೂ ಇಂದಿಗೂ ಈ ಶಿಕ್ಷಣ ಸಂಸ್ಥೆಗಳ ಪ್ರಯೋಜನ ಪಡೆಯುತ್ತಿದ್ದಾರೆ ಎನ್ನುವುದು ಬಂಟ ಸಮಾಜಕ್ಕೆ ಸಂದ ಗೌರವ ಎಂದು ಪ್ರತಿ ಬಂಟರ ಅನಿಸಿಕೆ.
ಅಂದಿನ ಬಂಟರ ಸಂಘದ ಕಾರ್ಯಕಾರಿ ಸಮಿತಿಯು ವೈದ್ಯರು, ಎಂಜಿನಿಯರ್, ಕೈಗಾರಿಕೋದ್ಯಮಿಗಳು, ನ್ಯಾಯವಾದಿಗಳು, ಲೆಕ್ಕ ಪರಿಶೋಧಕರು, ಶಿಕ್ಷಣ ತಜ್ಞರು, ಹೊಟೇಲ್‌ ಉದ್ಯಮಿಗಳು,  ವಾಗ್ಮಿಗಳು, ಸಮಾಜ ಪ್ರೇಮಿಗಳು ಹಾಗೂ ಸಮಾಜ ಪರ ಚಿಂತಕರ ಒಂದು ಚಾವ ಡಿಯಾಗಿತ್ತು. ಬಂಟ ರ ಭವನವೇ ಒಂದು ಮಂದಿರವಾಗಿತ್ತು, ಎಂ. ಡಿ. ಶೆಟ್ಟಿ ಅಧ್ಯಕ್ಷತೆ ಅವ ಧಿಯಲ್ಲಿ 2 ಐತಿಹಾಸಿಕ ಪರಿವರ್ತನೆಗಳಾದವು. ಅಂದಿನ ದಿನಗಳಲ್ಲಿ ಬಂಟ ಸಮಾಜದ ಬಾಂಧ‌ವರನ್ನು ಸಂಪರ್ಕಿಸಲು ಬಲು ಕಷ್ಟಕ ರವಾಗುತ್ತಿತ್ತು, ದೂರವಾಣಿ ಸಂಪರ್ಕವಾಗಲೀ  ಖಾ ಸಗಿ ವಾಹನಗಳ ಅನು ಕೂಲತೆಗಳಾಗಲೀ ಬಹಳ ಕಡಿಮೆ ಜನರಲ್ಲಿತ್ತು. ಅಲ್ಲದೆ ಇಂದಿನ ದಿನದಲ್ಲಿರುವಂತೆ ಸುದ್ದಿ ಮಾಧ್ಯಮವಾಗ‌ಲೀ ಇಲ್ಲ ವೇ ಇಲ್ಲ. ಮಹಾ ನಗರದಲ್ಲಿ ಕನ್ನಡ ದಿನಪತ್ರಿಕೆಗಳು ಪ್ರಕಟ ವಾಗುತ್ತಿರಲಿಲ್ಲ. ಸಂಘ ಟನೆಗೆ ಪತ್ರಿಕೆ ಒಂದರ ಅಗತ್ಯವೆಂದು ಮನಗಂಡ ಬಂಟರ ಸಂಘವು “ಬಂಟರವಾಣಿ’ ಎಂಬ ಮುಖವಾಣಿ ಇರುವ ಪತ್ರಿಕೆ ಪ್ರಕಟಿಸಿತ್ತು. ಈ ಮೂಲಕ  ಜನಸಂವಹನಕ್ಕಾಗಿ ಪತ್ರಿಕಾರಂಗವನ್ನು ಪ್ರವೇಶಿಸಿರುವುದು ವಿಶೇಷತೆಯಾಗಿದೆ.

ಮಾತೃ ಪ್ರಧಾನ ಮೂಲ (ಅಳಿಯಕಟ್ಟು) ಬಂಟರದ್ದು ಆದರೂ ಅಂದು ಪುರುಷ ಪ್ರಧಾನ ಸಮಾಜವಾಗಿ ಕಾರ್ಯ ನಿರ್ವಹಿಸುತ್ತಿತ್ತು. ಸಮಾಜದ ಬೆಳವಣಿಗೆಯ ದೃಷ್ಟಿಯಿಂದ  ಮಹಿಳೆಯರಿಂದ ಮಹಿಳಾ ಸಂಘವನ್ನು  ಸ್ಥಾಪಿಸಿದರು. ಸಂಘವು ಡಾ| ಸುನೀತಾ ಎಂ. ಶೆಟ್ಟಿ ಮುಖಾಂತರ ಮಹಿಳೆಯರಿಂದಲೆ ಸಂಗ್ರಹಿಸಿದ ಹಣದಿಂದ ಆರ್ಥಿಕ ಬಡತನದಲ್ಲಿರುವ ವಿದ್ಯಾರ್ಥಿಗಳ ಶಾಲೆಗಳಿಗೆ ಭೇಟಿಕೊಟ್ಟು ಶಿಕ್ಷಣಕ್ಕಾಗಿ ಆರ್ಥಿಕ ರೂಪದಲ್ಲಿ ಪ್ರೋತ್ಸಾಹಿಸಿದರು. ಇಂದಿಗೂ ಮಹಿಳಾ ಸಂಘವು ಈ ಕಾರ್ಯಕ್ರಮ ಮುಂದುವರಿಸಿಕೊಂಡು ಬರುತ್ತಿರುವುದು ಅವಿಸ್ಮರಣೀಯ. ಒಟ್ಟಿನಲ್ಲಿ ಎಂ. ಡಿ. ಶೆಟ್ಟಿ ಅವರು ಸಂಸ್ಥೆಯಲ್ಲಿ ನಿರಂತರವಾಗಿ ಎಪ್ಪತ್ತಾರು ವರ್ಷಗಳ ಕಾಲ ತನ್ನನ್ನು ತಾನು ಸಮರ್ಪಿಸಿಕೊಂಡ ವ್ಯಕ್ತಿ ಬೇರೆ ಯಾರೂ ಇಲ್ಲವೆಂದರೆ ತಪ್ಪಾಗಲಾರದು.
ಬಂಟರ ಸಂಘ ಮುಂಬಯಿ ನಡೆಸಲ್ಪಡುತ್ತಿರುವ ವಿದ್ಯಾಸಂಸ್ಥೆಗಳಲ್ಲಿ ನೂರಾರು ಬಂಟ ಬಡ ವಿದ್ಯಾರ್ಥಿಗಳು ಉಚಿತ ಶಿಕ್ಷಣದ ಅವಕಾಶ ಪಡೆಯುತ್ತಿದ್ದಾರೆ. ಸಂಘವು ಶಿಕ್ಷಣ ಸಂಸ್ಥೆಗಳ ಮೂಲಕ ಕೋಟ್ಯಂತರ ರೂ. ಆದಾಯ ಗಳಿಸಿದರೂ ಬಂಟರ ಸಂಘವು ಸಾವಿರಾರು ವಿದ್ಯಾರ್ಥಿಗಳಿಗೆ ಶಿಕ್ಷಣಕ್ಕಾಗಿ ಆರ್ಥಿಕ ನೆರವು ಹಾಗೂ ಆರ್ಥಿಕ ಬಡತನದ ಜನರಿಗೆ ಆರೋಗ್ಯಕ್ಕಾಗಿ ಆರ್ಥಿಕ ನೆರವು ನೀಡುತ್ತಿದೆ. ಈ ಆರ್ಥಿಕ ಸಹಾಯ ದೊರೆಯಲು ಒಂದು ಭದ್ರಬುನಾದಿಯ ಯೋಜನೆ ಸ್ಥಾಪಿಸುವಲ್ಲಿ ಇವರು ಸಮಾಜದ ಹಲವಾರು ಜನರಲ್ಲಿ ಸದಾ ಮಂಚೂಣಿಯಲ್ಲಿರುವ ನಾಯಕ ಎಂ. ಡಿ. ಶೆಟ್ಟಿಯವರು.

ಬಂಟರ ಸಂಘದ ಮೂಲಕ ಸಮಾಜಕ್ಕೆ ಸಮರ್ಪಣಾ ಭಾವದಿಂದ ತೊಡಗಿಸಿದಲ್ಲದೆ ಬೇರೆ ಯಾವುದೇ ಆಮೀಷಕ್ಕೆ ಒಳಗಾಗದ ವ್ಯಕ್ತಿ ಇವರು. ಅವರ ಜೀವನದ ಕುರಿತು ಹೇಳುವುದಾದರೆ ಅವರೇನು ಆಗರ್ಭ ಶ್ರೀಮಂತರಾಗಿರಲಿಲ್ಲ. ಸಾಮಾನ್ಯ ಗೃಹಸ್ಥನಾಗಿ ಪತ್ನಿ ಮಗ ಸೊಸೆ ಮತ್ತು ಎರಡು  ಮುದ್ದು ಮೊಮ್ಮಕ್ಕಳೊಂದಿಗೆ ತುಂಬು ಸಂಸಾರದೊಂದಿರಲು, ವಿಧಿನಿಯಮವೋ ಇಲ್ಲವೋ ಅವರ ವೈಯಕ್ತಿಕ ಸೋಲೋ ಎಂಬಂತೆ ಮೊದಲು ಪತ್ನಿ ಮತ್ತು ಇದ್ದ ಓರ್ವ ಮಗನನ್ನು ಕಳಕೊಂಡರು. ಈ ಎರಡೂ  ಬರಸಿಡಿಲಿನ ಆಘಾತ ಅವರ ಜೀವನದಲ್ಲಿ ಬಿರುಗಾಳಿ ಎಬ್ಬಿಸಿತ್ತು. ಆದರೂ ಎದೆಗುಂದದೆ ಶೆಟ್ಟರು ತನ್ನ ಮೊಮ್ಮಕ್ಕಳಿಗೆ ಹಾಗೂ ಮಗಳಂತಿರುವ ಸೊಸೆಗೆ ಆಸರೆಯಾಗಿ ನಿಂತು ಜವಾಬ್ದಾರಿಯುತ ಗೃಹಸ್ಥನಂತೆ ಎದೆಯೊಡ್ಡಿದ ಆದರ್ಶ ಸೇನಾನಿ ಎಂದರೆ ತಪ್ಪಾಗಲಾರದು. ತನ್ನ ವೈಯಕ್ತಿಕ ಬದುಕಿನಲ್ಲಿ ಬಂದ ಕಂಟಕವನ್ನು ವಿಷಕಂಠನಾಗಿ ಎದುರಿಸಿದ ದಿಟ್ಟ ವ್ಯಕ್ತಿ.

ಮನುಷ್ಯ ತನ್ನ ಬದುಕಿಗೆ ಹೊಸ ಅರ್ಥವನ್ನು ಕೊಡುವ ನಿಟ್ಟಿನಲ್ಲಿ ಸಮಾಜ ಮುಖೀಯಾಗಿ ತಾನು ಬದುಕಬೇಕು. ಆ ಬದುಕು ಎನೂ ಫಲಾಪೇಕ್ಷೆಯಿಲ್ಲದೆ ನಿಸ್ವಾರ್ಥವಾಗಿರಬೇಕು ಎಂಬ ಮೌಲ್ಯಧರಿತವಾದ ಅವರ ಚಿಂತನೆಗಳು ಇಂದಿನ ಜನಾಂಗಕ್ಕೆ, ಸಂಘಗಳಿಗೆ ಮಾದರಿ ಇಲ್ಲವೇ ಪ್ರೇರಣೆಯೆಂದರೆ ಖಂಡಿತಾ ಅತಿಶಯೋಕ್ತಿಯ ಮಾತಾಗದು. ಅವರಂತಹ ವ್ಯಕ್ತಿಗೆ ದೇವರು ನೂರು ಕಾಲ ಬದುಕಲು ಆರೋಗ್ಯಪೂರ್ಣ ಜೀವನವನ್ನು ದಯಪಾಲಿಸಲಿ ಈ ಮೂಲಕ ವಯೋವೃದ್ಧ, ಜ್ಞಾನ ವೃದ್ಧ, ಬುದ್ಧಿಜೀವಿಯ ಬದುಕಿನ ಪ್ರಯೋಜನ ಸಮಸ್ತ ಸಮಾಜಕ್ಕೆ ದೊರೆಯಲಿ ಎಂಬುವುದು ನಮ್ಮ ಆಶಯ.  

ತನ್ನ ಸಮಾಜಮುಖೀ ನಡೆಯಲ್ಲಿ ಪಾರದರ್ಶಕತೆ, ಪ್ರಾಮಾಣಿಕತೆ, ಮೌಲ್ಯಧಾರಿತ ನಡೆಯಿಂದಾಗಿ ಹಲ ವಾರು ಅಡ್ಡಿ ಆತಂಕಗಳಿದ್ದರೂ ಅದನ್ನು ಅಷ್ಟೆ  ನಿಷ್ಠುರವಾಗಿ ಎದುರಿಸಿದ ವ್ಯಕ್ತಿ. ತರುಣರಲ್ಲಿ ತರುಣರಾಗಿ, ಗೃಹಸ್ಥರಲ್ಲಿ ಗೃಹ‌ಸ್ಥನಾಗಿ ರಾಜ್ಯ ಮತ್ತು ರಾಷ್ಟ್ರಮಟ್ಟದ ರಾಜಕಾರಣಿಗಳ ಉನ್ನತ ಮಟ್ಟದ ಅಧಿಕಾರಿಗಳು, ದೇಶದ ಸರ್ವೋಚ್ಚ ನ್ಯಾಯಾಲಯದ ನ್ಯಾಯಮೂರ್ತಿಗಳೊಡನೆ ಅತೀ ಮಧುರ ಒಡನಾಟ ಸಂಬಂಧವನ್ನು ಹೊಂದಿರುವ ವ್ಯಕ್ತಿ. ಒಂದು ಹಂತದಲ್ಲಿ ಬಂಟ ಸಮಾಜದಲ್ಲಿ ಬಂಟರ ಸಂಘ ವಿಭಜನೆಗೊಂಡು ವಿಘಟನೆಗೊಂಡರೂ ಅದನ್ನು ಅಷ್ಟೇ ಚಾಕಚಕ್ಯತೆಯಿಂದ ಒಂದುಗೂಡಿಸಿದ ಅಪರೂಪದ ವ್ಯಕ್ತಿ, ಬಂಟ ನ್ಯಾಯ ಮಂಡಳಿಯ ಸ್ಥಾಪನೆಯ ಮೂಲಕ ಮನ ಭೇದವಿಲ್ಲವೆಂದು ಸಮಾಜಕ್ಕೆ ತೋರಿಸಿಕೊಟ್ಟ  ಮುತ್ಸದ್ಧಿ. ಎಂ. ಡಿ. ಶೆಟ್ಟಿ. 

ಉದಯ ಶೆಟ್ಟಿ  ಶಿಮಂತೂರು

ಟಾಪ್ ನ್ಯೂಸ್

1-wqewq

UK; ಪ್ರಧಾನಿ ದೀಪಾವಳಿ ಪಾರ್ಟಿಯಲ್ಲಿ ಮದ್ಯ, ಮಾಂಸ: ಕೊನೆಗೂ ಕ್ಷಮೆ ಯಾಚನೆ

ಸಿಎಂ ಸಿದ್ದರಾಮಯ್ಯ ರಾಜೀನಾಮೆ ಕೊಡುವ ಸ್ಥಿತಿ ಬರಲಿದೆ: ಈರಣ್ಣ ಕಡಾಡಿ

Belagavi: ಸಿಎಂ ಸಿದ್ದರಾಮಯ್ಯ ರಾಜೀನಾಮೆ ಕೊಡುವ ಸ್ಥಿತಿ ಬರಲಿದೆ: ಈರಣ್ಣ ಕಡಾಡಿ

Congress is taking revenge by forming SIT: Araga Jnanendra

Shimoga: ಎಸ್ಐಟಿ ರಚನೆ ಮೂಲಕ ಕಾಂಗ್ರೆಸ್ ಹಗೆ ತೀರಿಸಿಕೊಳ್ಳುತ್ತಿದೆ: ಆರಗ ಜ್ಞಾನೇಂದ್ರ

Maharashtra Election: Election officials checked Amit Shah’s bag

Maharashtra Election: ಅಮಿತ್‌ ಶಾ ಅವರ ಬ್ಯಾಗ್‌ ಪರೀಕ್ಷಿಸಿದ ಚುನಾವಣಾ ಅಧಿಕಾರಿಗಳು

Anmol Buffalo: The price of this Buffalo weighing 1500 kg is Rs 23 crore!

Anmol Buffalo:1500 ಕೆಜಿ ತೂಗುವ ಈ ಕೋಣದ ಬೆಲೆ ಬರೋಬ್ಬರಿ 23 ಕೋಟಿ ರೂ!

13-BBK-11

BBK11: ಅಸಲಿ ಆಟ ಶುರು ಮಾಡಿದ ಧನರಾಜ್: ಮೋಕ್ಷಿತಾಳಿಗೆ ಅಹಂಕಾರ ಇದೆ ಎಂದ ಸೈಲೆಂಟ್ ಕಿಲಾಡಿ

Digital Arrest ಹೆಸರಿನಲ್ಲಿ ನಿವೃತ್ತ ಇಂಜಿನಿಯರ್‌ ಗೆ 10 ಕೋಟಿ ರೂಪಾಯಿ ಪಂಗನಾಮ!

Digital Arrest ಹೆಸರಿನಲ್ಲಿ ನಿವೃತ್ತ ಇಂಜಿನಿಯರ್‌ ಗೆ 10 ಕೋಟಿ ರೂಪಾಯಿ ಪಂಗನಾಮ!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

2-putthige-2

State Formation: ಶ್ರೀ ಕೃಷ್ಣ ಬೃಂದಾವನ ಹೂಸ್ಟನ್ ಶಾಖೆಯಲ್ಲಿ ಸಂಸ್ಥಾಪನಾ ದಿನಾಚರಣೆ

Desi Swara: ಇಟಲಿಯಲ್ಲಿ ದೀಪಾವಳಿ ಬೆಳಕು!

Desi Swara: ಇಟಲಿಯಲ್ಲಿ ದೀಪಾವಳಿ ಬೆಳಕು!

12-

Desiswara: ನ್ಯೂಯಾರ್ಕ್‌ ಸರಕಾರದಿಂದ ಭರ್ಜರಿ ದೀಪಾವಳಿ ಆಚರಣೆ

11-1

Desiswara: ಜಾಗತಿಕ ಬೆಳಕಿನ ಹಬ್ಬ ದೀಪಾವಳಿ – ಬೆಳಕೆಂದರೆ ಬರಿಯ ಬೆಳಕಲ್ಲ…

10-

Desiswara: ಕನ್ನಡ ಉಳಿವಿಗೆ ಜವಾಬ್ದಾರಿಯುತ ನಡೆ ನಮ್ಮದಾಗಲಿ

MUST WATCH

udayavani youtube

ಕಾರಿನ ಟಯರ್ ಒಳಗಿತ್ತು ಬರೋಬ್ಬರಿ 50 ಲಕ್ಷ

udayavani youtube

ಹೊಸ ತಂತ್ರಜ್ಞಾನಕ್ಕೆ ತೆರೆದುಕೊಂಡ ತುಳುನಾಡ ಕಂಬಳ

udayavani youtube

ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಕಾರ್ತಿಕ ಲಕ್ಷದೀಪೋತ್ಸವ

udayavani youtube

ಪುಂಗನೂರು ತಳಿಯ ಹಾಲು ಯಾವೆಲ್ಲ ಕಾಯಿಲೆಗಳನ್ನು ಗುಣಪಡಿಸುತ್ತದೆ ?

udayavani youtube

ಪುಸ್ತಕ ನೋಡುವುದಿಲ್ಲ, ಗುರುವಿಲ್ಲ ಆದರೂ ಕಲೆ ತಾನಾಗಿಯೇ ಒಲಿದು ಬಂತು

ಹೊಸ ಸೇರ್ಪಡೆ

1-wqewq

UK; ಪ್ರಧಾನಿ ದೀಪಾವಳಿ ಪಾರ್ಟಿಯಲ್ಲಿ ಮದ್ಯ, ಮಾಂಸ: ಕೊನೆಗೂ ಕ್ಷಮೆ ಯಾಚನೆ

10

Kollegala: ಎತ್ತಿನಗಾಡಿಗೆ ಸಾಮ್ರಾಟ್ ಟರ್ಬೇ ವಾಹನ ಡಿಕ್ಕಿ; ಎತ್ತು ಸಾವು

11(1)

Udupi: ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್; ಉಡುಪಿ ಮಹಿಳಾ ವಿಭಾಗ ಆರಂಭ

ಕನಕಗಿರಿ:ಮಂಗಳೂರು ಮೂಲದ ಕುಟುಂಬ-ಸೌಹಾರ್ದತೆಗೆ ಸಾಕ್ಷಿ 4 ದಶಕದ ಸಕ್ಕರೆ ಗೊಂಬೆ ತಯಾರಿಕೆ!

ಕನಕಗಿರಿ:ಮಂಗಳೂರು ಮೂಲದ ಕುಟುಂಬ-ಸೌಹಾರ್ದತೆಗೆ ಸಾಕ್ಷಿ 4 ದಶಕದ ಸಕ್ಕರೆ ಗೊಂಬೆ ತಯಾರಿಕೆ!

Receive Kantraj report and reveal: Anjaney’s appeal to CM

Davanagere: ಕಾಂತರಾಜ್‌ ವರದಿ ಸ್ವೀಕರಿಸಿ ಬಹಿರಂಗಪಡಿಸಿ: ಸಿಎಂಗೆ ಆಂಜನೇಯ ಮನವಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.