ಮುಂಡ್ಕೂರು: ಸೋರುತಿಹುದು ಗ್ರಾಮ ಕರಣಿಕರ ಕಚೇರಿ
Team Udayavani, Jun 15, 2018, 6:45 AM IST
ಬೆಳ್ಮಣ್: ಮಳೆ ಹಾನಿ, ಬೆಳೆ ಹಾನಿ ಸಹಿತ ವಿವಿಧ ಪ್ರಕೃತಿ ವಿಕೋಪಗಳ ರಿಪೋರ್ಟ್ ನೀಡಬೇಕಾಗಿರುವ ಮುಂಡ್ಕೂರು ಗ್ರಾಮದ ಗ್ರಾಮಕರಣಿಕರ ಕಛೇರಿಯ ಮಾಡಿನ ಹಂಚು ಹಾರಿ ಹೋಗಿದ್ದು ಮಳೆ ನೀರಿನ ನಡುವೆಯೇ ಗ್ರಾಮ ಕರಣಿಕರು ಗ್ರಾಮಸ್ಥರ ಕಂದಾಯ ಸೇವೆ ನೀಡಬೇಕಾಗಿದೆ.
ಈ ಹಿಂದೆ ಗ್ರಾ.ಪಂ. ಕಚೇರಿಯಿದ್ದ ಹಳೇ ಕಟ್ಟಡದಲ್ಲಿ ಈ ಗ್ರಾಮ ಕರಣಿಕರ ಕಚೇರಿ ಇದ್ದು ಕಟ್ಟಡದ ಜತೆ ಹಂಚಿನ ಮಾಡು ಕೂಡಾ ಹಳೆಯದಾಗಿರುವ ಕಾರಣ ನಿರಂತರ ಮಳೆ ಹಾಗೂ ಗಾಳಿಗೆ ಹಂಚು ತೂತು ಬಿದ್ದು ಭಾರೀ ಮಳೆ ಗಾಳಿ ಬಂದಾಗ ನೀರು ಕಚೇರಿಯ ಒಳ ಹಾಗೂ ಹರ ವರಾಂಡದಲ್ಲಿ ಶೇಖರಣೆಯಾಗುತ್ತಿದೆ. ಅಧಿಕಾರಿಗಳ ಭೇಟಿಗೆ ಬರುವ ಗ್ರಾಮಸ್ಥರು ಕಚೇರಿಯ ವರಾಂಡದಲ್ಲಿ ಕೆಸರ ನೀರ ಮೇಲೆಯೇ ನಿಂತು ಕಾರ್ಯ ನಿರ್ವಹಿಸಬೇಕಾಗಿದೆ.
ಕಟ್ಟಡಕ್ಕೆ ತಾಗಿಯೇ ಬೃಹತ್ ಮರಗಳಿದ್ದು ಮರಗಳ ಕೊಂಬೆಗಳು ಮುರಿದು ಬೀಳುವ ಪರಿಣಾಮದಿಂದಲೂ ಮಾಡಿನ ಹಂಚುವಿಗೆ ಹಾನಿಯಾಗುತ್ತಿದೆ. ಕಂದಾಯ ಇಲಾಖೆಯ ಪ್ರಕ್ರಿಯೆಗಳು ಇತ್ತೀಚೆಗಿನ ದಿನದಲ್ಲಿ ಆವಶ್ಯವಾಗಿರುವುದರಿಂದ ಜನಸಾಮಾನ್ಯರು ಈ ಗ್ರಾಮಕರಣಿಕರ ಕಚೇರಿಯನ್ನು ಅವಲಂಬಿಸಿದ್ದು ಈ ಬಗ್ಗೆ ಮುಂಡ್ಕೂರು ಗ್ರಾಮ ಪಂಚಾಯತ್ ಆಡಳಿತ ಶೀಘ್ರ ಸ್ಪಂದಿಸಬೇಕಾಗಿದೆ ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.
ತೊಂದರೆ ಮಾಮೂಲಿ
ಕಚೇರಿ ಕಟ್ಟಡ ಹಳೆಯದಾಗಿದ್ದು ಈ ರೀತಿಯ ತೊಂದರೆ ಮಾಮೂಲಿ, ಈ ಹಿಂದೆ ಕಚೇರಿಯ ಕಟ್ಟಡವನ್ನು ಮುಂಡ್ಕೂರು ಪಂಚಾಯತ್ ಆಡಳಿತ ಸುಸೂತ್ರವಾಗಿ ನಿರ್ವಹಿಸಿದೆ. ಈಗಾಗಲೇ ಪಂಚಾಯತ್ ಅಧ್ಯಕ್ಷರು ಸ್ಪಂದಿಸುವುದಾಗಿ ತಿಳಿಸಿದ್ದಾರೆ
– ಸುಖೇಶ್,ಗ್ರಾಮಕರಣಿಕ
ಶೀಘ್ರ ಕ್ರಮ
ಗ್ರಾಮ ಕರಣಿಕರ ಸೇವೆ ಗ್ರಾಮಸ್ಥರಿಗೆ ಅವಶ್ಯವಾಗಿರುವ ಹಿನ್ನೆಲೆಯಲ್ಲಿ ಕಛೇರಿಗೆ ಬರುವ ಜನರಿಗೆ ತೊಂದರೆಯಾಗದಂತೆ ನೋಡುವುದು ಪಂಚಾಯತ್ನ ಕರ್ತವ್ಯ, ಈ ಬಗ್ಗೆ ಕೂಡಲೇ ಕ್ರಮ ಕೈಗೊಳ್ಳಲಾಗುವುದು.
– ಶುಭಾ.ಪಿ.ಶೆಟ್ಟಿ,
ಮುಂಡ್ಕೂರು ಗ್ರಾ.ಪಂ. ಆಧ್ಯಕ್ಷೆ
ಕೂಡಲೆ ಕ್ರಮ ಕೈಗೊಳ್ಳಿ
ಕಂದಾಯ ಇಲಾಖೆ ಜನಸಾಮಾನ್ಯರ ಅತ್ಯಂತ ಬೇಡಿಕೆಯ ಇಲಾಖೆಯಾಗಿದ್ದು ಇಲ್ಲಿ ಸಮಸ್ಯೆಯಾದರೆ ಸಾರ್ವಜನಿಕರ ಎಲ್ಲ ಕೆಲಸಗಳೀಗೆ ಬ್ರೇಕ್ ಬೀಳುತ್ತದೆ. ಈ ಬಗ್ಗೆ ಮುಂಡ್ಕೂರು ಪಂಚಾಯತ್ ಆಡಳಿತ ಕೂಡಲೇ ಸ್ಪಂದಿಸಬೇಕು
– ದಿನೇಶ್ , ಗ್ರಾಮಸ್ಥ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Manipal KMC Hospital: ಮಲ್ಪೆ ಬೀಚ್ನಲ್ಲಿ ಮಧುಮೇಹ ಜಾಗೃತಿ
Udupi: ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್; ಉಡುಪಿ ಮಹಿಳಾ ವಿಭಾಗ ಆರಂಭ
Manipal: ನಿತ್ಯ ಅಪಘಾತ ತಾಣವಾದ ಈಶ್ವರ ನಗರ-ಪರ್ಕಳ ರಸ್ತೆ
Karkala: ತಿಂಗಳ ಹಿಂದೆ ಮೃತಪಟ್ಟ ಪತಿ, ಮನನೊಂದು ಆತ್ಮಹತ್ಯೆಗೆ ಶರಣಾದ ಅಂಗನವಾಡಿ ಶಿಕ್ಷಕಿ
Karkala: ಅಣ್ಣನ ತಿಥಿಗೆ ಬಂದಿದ್ದ ತಂಗಿ ವಿದ್ಯುತ್ ಆಘಾತದಿಂದ ಮೃ*ತ್ಯು
MUST WATCH
ಹೊಸ ಸೇರ್ಪಡೆ
J-K: ಭೀಕರ ಅಪಘಾ*ತದಲ್ಲಿ SUV ಚಲಾಯಿಸುತ್ತಿದ್ದ 17 ರ ಹುಡುಗರಿಬ್ಬರು ಮೃ*ತ್ಯು
Save Life: ಆಯತಪ್ಪಿ ಬಿದ್ದು ರೈಲಿನಡಿ ಸಿಲುಕುತ್ತಿದ್ದ ಪ್ರಯಾಣಿಕನ ಕಾಪಾಡಿದ ಹೋಂಗಾರ್ಡ್!
Chikkaballapura: ನಮ್ಮನ್ನು ಖಳ ನಾಯಕರನ್ನಾಗಿ ಮಾಡಲು ಹೊರಟಿದ್ದಾರೆ: ಸಂಸದ ಡಾ.ಕೆ.ಸುಧಾಕರ್
Catacombs: ಇದು ಎಲುಬುಗಳೇ ತುಂಬಿಕೊಂಡ ಸುರಂಗ; ಸುಂದರ ದೇಶದ ಕರಾಳ ಇತಿಹಾಸ
Manipal KMC Hospital: ಮಲ್ಪೆ ಬೀಚ್ನಲ್ಲಿ ಮಧುಮೇಹ ಜಾಗೃತಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.