ಸ್ಟನ್ನಿಂಗ್‌ ಸಾರಿ ಬ್ಲೌಸ್‌ ಡಿಸೈನ್ಸ್‌


Team Udayavani, Jun 15, 2018, 6:00 AM IST

bb-20.jpg

ಮಹಾರಾಣಿ ಬ್ಲೌಸ್‌( ಹೆವಿ ವರ್ಕ್‌ ಬ್ಯಾಕ್‌ ನೆಕ್‌): ಬ್ಯಾಕ್‌ ಸೈಡಿನಲ್ಲಿ ಪೂರ್ತಿಯಾಗಿ ಎಂಬ್ರಾಯಿಡರಿಯನ್ನು ಹೊಂದಿರುವ ಬಹಳ ಗ್ರ್ಯಾಂಡ್‌ ಎನಿಸುವ ಮಾದರಿಯ ಬ್ಲೌಸುಗಳಿದ್ದು ಹೆಸರಿಗೆ ತಕ್ಕಂತೆ ಮಹಾರಾಣಿ ಡಿಸೈನ್‌ ಎಂದು ಕರೆಯಿಸಿಕೊಳ್ಳುತ್ತವೆ. ಹೆವಿ ಸ್ಟೋನುಗಳಿಂದ, ಕುಂದನ್ನುಗಳಿಂದ, ಬೀಡುಗಳಿಂದ ಸುಂದರವಾಗಿ ಅಲಂಕೃತಗೊಂಡ ಬ್ಲೌಸುಗಳಿವು.  ಮದುವೆ ಮತ್ತಿತರ ಹತ್ತಿರದ ಸಮಾರಂಭಗಳಿಗೆ ಬಹಳ ಚೆನ್ನಾಗಿ ಒಪ್ಪುವಂತಹ ಬ್ಲೌಸುಗಳು ಇವಾಗಿವೆ. ಎಲ್ಲಾ ವಯೋಮಾನದವರೂ ಕೂಡ ಈ ಬಗೆಯ ಬ್ಲೌಸುಗಳನ್ನು ಬಳಸಬಹುದು. 

ಲೋಟಸ್‌ ಕಟೌಟ್ ಬ್ಯಾಕ್‌ನೆಕ್‌ ಬ್ಲೌಸ್‌
ಹೈನೆಕ್‌ ಬ್ಲೌಸುಗಳೇ ಆಗಿದ್ದರೂ ಹಿಂಭಾಗದಲ್ಲಿ ಕಮಲದ ಪಕಳೆಗಳಂತಹ ಆಕಾರದಲ್ಲಿ ಕಟೌಟನ್ನು ಮಾಡಲಾಗಿರುತ್ತದೆ. ಬಹಳ ಸುಂದರವಾದ ಮತ್ತು ಹೊಸ ಬಗೆಯ ಬ್ಯಾಕ್‌ ಡಿಸೈನುಗಳಿವಾಗಿವೆ. ಗ್ರ್ಯಾಂಡ್‌ ಇರುವ ಬ್ಲೌಸ್‌ ಪೀಸುಗಳಿಗೆ ಈ ಬಗೆಯ ಡಿಸೈನುಗಳು ಬಹಳ ಚೆನ್ನಾಗಿ ಕಾಣುತ್ತವೆ. 

ಡೈಮಂಡ್‌ ಕಟೌಟ್ ಬ್ಯಾಕ್‌ನೆಕ್‌ ಬ್ಲೌಸ್‌
ಹೈನೆಕ್ಡ್ ಬ್ಲೌಸುಗಳಿವಾಗಿದ್ದು ಹಿಂಭಾಗದಲ್ಲಿ ಡೈಮಂಡ್‌ ಕಟೌಟ್ ಇರುತ್ತದೆ. ಮೇಲ್ಭಾಗದಲ್ಲಿ ಮತ್ತು ಕೆಳಭಾಗದಲ್ಲಿ ಹುಕ್‌ ಎನ್‌ಕ್ಲೋಷರ್‌ ಇರುತ್ತವೆ. ಡೈಮಂಡಿನ ದಿನಗಳಲ್ಲಿ ಹೂಗಳ ಲೇಸುಗಳು ಬಂದರಂತೂ ಬ್ಲೌಸಿನ ಬ್ಯಾಕ್‌ ಡಿಸೈನಿನ ಮೆರುಗು ಇಮ್ಮಡಿಗೊಳ್ಳುತ್ತದೆ. ಇವುಗಳೊಂದಿಗೆ ಥ್ರಿ ಫೋರ್ತ್‌ ಸ್ಲಿವುಗಳು ಬಹಳ ಸುಂದರವಾಗಿ ಒಪ್ಪುತ್ತವೆ.  

ಮಟ್ಕಾ ಕಟ್ ಬ್ಲೌಸ್‌
ಗಡಿಗೆಯಂತಹ  ಆಕಾರವನ್ನು ಹೋಲುವ ಬ್ಯಾಕ್‌ ಡಿಸೈನುಗಳಿವಾಗಿದ್ದು ಮೇಲ್ಭಾಗದಲ್ಲಿ ಒಂದು ಪಟ್ಟಿ ಬಂದಿದ್ದು ಕೆಳಗೆ ಮಟ್ಕಾದ ಆಕಾರದ ಓಪನಿಂಗ್‌ ಇರುತ್ತವೆ. ಫ್ಯಾನ್ಸಿ ಸೀರೆಗಳೊಂದಿಗೆ ಈ ಬಗೆಯ ಬ್ಲೌಸುಗಳು ಬಹಳ ಚೆನ್ನಾಗಿ ಒಪ್ಪುತ್ತವೆ. ಎಂಬ್ರಾಯಿಡರಿ ಪಟ್ಟಿಗಳು ಬಂದಾಗ ಈ ಬಗೆಯ ಬ್ಯಾಕ್‌ ಡಿಸೈನಿನ ಸೌಂದರ್ಯ ಇನ್ನಷ್ಟು ಹೆಚ್ಚುತ್ತದೆ. 

ಮಿರರ್‌ ವರ್ಕ್‌ ಬ್ಯಾಕ್‌ನೆಕ್‌ ಬ್ಲೌಸ್‌
ಬ್ಲೌಸಿನ ಬ್ಯಾಕ್‌ ಪೂರ್ತಿಯಾಗಿ ಚಿಕ್ಕ ಚಿಕ್ಕ ಕನ್ನಡಿಗಳಿಂದ ಅಲಂಕೃತವಾಗಿರುತ್ತವೆ. ಇವುಗಳು ಪ್ಲೆ„ನ್‌ ಶಿಫಾನ್‌ ಸೀರೆಗಳೊಂದಿಗೆ ಬಹಳ ಚೆನ್ನಾಗಿ ಕಾಣುತ್ತವೆ. ಕೆಲವೊಮ್ಮೆ ಪ್ಲೆ„ನ್‌ ಸೀರೆಗಳೊಂದಿಗೆ ಕಾಂಟ್ರಾಸ್ಟ್ ಬಣ್ಣದ ಬ್ಲೌಸ್‌ ಪೀಸು ಬಂದಿದ್ದು ಮಿರರುಗಳನ್ನು ಬಳಸಿಕೊಂಡು ಬ್ಲೌಸಿನ ಅಂದವನ್ನು ಹೆಚ್ಚಿಸಿಕೊಳ್ಳಬಹುದು. ಕ್ಯಾಷುವಲ್ ಸಂದರ್ಭಗಳಲ್ಲಿ ಈ ಬಗೆಯ ಸೀರೆಗಳು ಮತ್ತು ಬ್ಲೌಸುಗಳು ಉತ್ತಮವಾದ ಆಯ್ಕೆಯಾಗಿದ್ದು ನಿಮ್ಮನ್ನು ಸ್ಟೈಲಿಶ್‌ ಆಗಿಯೂ ಮಾಡುತ್ತವೆ. 

ಕ್ಲೋಸ್ಡ್ ಬ್ಯಾಕ್‌ ಕಟ್ ವರ್ಕ್‌ ಬ್ಲೌಸ್‌
ಇವುಗಳು ಕ್ಲೋಸ್ಡ್ ಬ್ಯಾಕ್‌ ಡಿಸೈನಾಗಿದ್ದು ಕಟ… ವರ್ಕ್‌ ಬ್ಲೌಸ್‌ ಮಾದರಿಗಳಿವು. ಅನಿರ್ದಿಷ್ಟವಾದ ಆಕಾರವನ್ನು ಹೊಂದಿರುವ ಕಟೌಟ್ ಅನ್ನು ಹೊಂದಿರುವ ಇವುಗಳು ಸ್ಟೈಲಿಶ್‌ ಆಗಿಯೂ ಕಾಣುವಂತಹ ಬ್ಲೌಸುಗಳಿವಾಗಿವೆ. ಸಾಮಾನ್ಯವಾಗಿ ಹೈಬೋಟ… ನೆಕ್‌ ಅನ್ನು ಹೊಂದಿರುವ ಈ ಬಗೆಯ ಬ್ಲೌಸ್‌ ಡಿಸೈನುಗಳು ಟ್ರೆಂಡಿ ಮಾದರಿಯಾಗಿದೆ. 

ಶೀರ್‌ ಬ್ಯಾಕ್‌ ಕಟ್ ವರ್ಕ್‌ ಬ್ಲೌಸ್‌
ಇವುಗಳೂ ಮೇಲಿನ ಬಗೆಯಂತೆ ಕಟೌಟ್ ಬ್ಲೌಸಾಗಿದ್ದರೂ ಅರ್ಧ ಭಾಗ ನೆಟ್ ಬಟ್ಟೆಯಿಂದ ಮತ್ತು ಉಳಿದರ್ಧ ಕಟೌಟ್ ಮಾದರಿಯಿಂದ ತಯಾರಿಸಲಾಗಿರುತ್ತದೆ. ಇವುಗಳೂ ಕೂಡ ಬಹಳ ಟ್ರೆಂಡಿ ಬಗೆಯ ಬ್ಲೌಸುಗಳಾಗಿದ್ದು ಇವುಗಳನ್ನು ಧರಿಸಿದಾಗ ತುರುಬುಗಳನ್ನು ಹಾಕಿಕೊಳ್ಳುವುದರ ಮೂಲಕ ಬ್ಯಾಕ್‌ ಡಿಸೈನನ್ನು ಹೈಲೈಟ್ ಮಾಡಿಕೊಳ್ಳಬಹುದು. 

ಡಬಲ್ ಲೀಫ್ ಕಟೌಟ್‌ ಬ್ಯಾಕ್‌ನೆಕ್‌ ಬ್ಲೌಸ್‌
ಹೆಸರಿಗೆ ತಕ್ಕಂತೆ ಮಧ್ಯದಲ್ಲಿ ಪಟ್ಟಿ ಬಂದಿದ್ದು ಪಟ್ಟಿಯ ಇಕ್ಕೆಲಗಳಲ್ಲಿ ಎರಡು ಲೀಫ್ (ಎಲೆಗಳ) ಆಕೃತಿಯ ಕಟೌಟ್ ಇರುತ್ತವೆ. ಇವುಗಳೂ ಕೂಡ ಹೈನೆಕ್‌ ಬ್ಲೌಸುಗಳೇ ಆಗಿರುತ್ತವೆ. ಕಾಟನ್‌, ಫ್ಯಾನ್ಸಿ ಬಗೆಯ ಸೀರೆಗಳಿಗಳೊಂದಿಗೆ ಒಪ್ಪುವಂತಹ ಡಿಸೈನಿದಾಗಿದೆ.  

    ಹಾಫ್ ಶೋಲ್ಡರ್‌ (ಕಟೌಟ…) ಬ್ಯಾಕ್‌ನೆಕ್‌ ಬ್ಲೌಸ್‌
ಮುಂದೆ ಮತ್ತು ಹಿಂದೆಯೂ ಕೂಡ ಹಾಫ್ ಶೋಲ್ಡರ್‌ ಅನ್ನು ಹೊಂದಿರುವ ಮಾದರಿಯಾಗಿದೆ. ಮಾಡರ್ನ್ ಲುಕ್ಕನ್ನು ಕೊಡುವ ಇವುಗಳು ಬಹಳ ಸ್ಟೈಲಿಶ್‌ ಆಗಿರುವ ಬ್ಲೌಸ್‌ ಡಿಸೈನುಗಳಾಗಿವೆ. 

ಪ್ರಭಾ ಭಟ್‌

ಟಾಪ್ ನ್ಯೂಸ್

1-ewewew

Maharashtra; ವಿಧಾನಸಭೆಗೆ 78 ಶಾಸಕರು ಮೊಟ್ಟ ಮೊದಲ ಬಾರಿಗೆ ಪ್ರವೇಶ

GDP

GDP; ದೇಶದ ಆರ್ಥಿಕಾಭಿವೃದ್ಧಿ 2 ವರ್ಷದಲ್ಲೇ ಕನಿಷ್ಠ: ಶೇ.5.4 ಜಿಡಿಪಿ ದಾಖಲು

Modi Interview

Opposition ;ಜನರ ದಾರಿ ತಪ್ಪಿಸುತ್ತಿರುವ ವಿಪಕ್ಷಗಳು: ಪ್ರಧಾನಿ ಮೋದಿ

1-samsat

Adani, Manipur ಚರ್ಚೆಗೆ ಪಟ್ಟು: ವಾರ ಪೂರ ಸಂಸತ್‌ ಕಲಾಪ ವ್ಯರ್ಥ

1-trr

CAG Report; ಕೇಂದ್ರ ಸರಕಾರ‌ದ ವಿತ್ತೀಯ ಕೊರತೆ ಶೇ.45ಕ್ಕೆ ಏರಿಕೆ!

ದ.ಕ.ದ ವೈಭವಿ, ಉಡುಪಿಯ ಧೀರಜ್‌ ಐತಾಳ್‌ ; ಸಾಹಸ ಮೆರೆದ ಮಕ್ಕಳಿಗೆ ಶೌರ್ಯ ಪ್ರಶಸ್ತಿ

ದ.ಕ.ದ ವೈಭವಿ, ಉಡುಪಿಯ ಧೀರಜ್‌ ಐತಾಳ್‌ ; ಸಾಹಸ ಮೆರೆದ ಮಕ್ಕಳಿಗೆ ಶೌರ್ಯ ಪ್ರಶಸ್ತಿ

D.K. Shivakumar: ಬೆಳಗಾವಿ ಕಾಂಗ್ರೆಸ್‌ ಅಧಿವೇಶನ ಬಗ್ಗೆ ಚರ್ಚೆ

D.K. Shivakumar: ಬೆಳಗಾವಿ ಕಾಂಗ್ರೆಸ್‌ ಅಧಿವೇಶನ ಬಗ್ಗೆ ಚರ್ಚೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Malayalam Kannada Translated Story

ವಿಲ್ಲನ್ ‌ಗಳು ಮಾತನಾಡುವಾಗ ಏನನ್ನೂ ಬಚ್ಚಿಡುವುದಿಲ್ಲ

k-20

ಸೆರಗು-ಲೋಕದ ಬೆರಗು

ಕಡಿಮೆ ಮಾಡೋಣ ಪ್ಲಾಸ್ಟಿಕ್‌ ಸದ್ದು

ಕಡಿಮೆ ಮಾಡೋಣ ಪ್ಲಾಸ್ಟಿಕ್‌ ಸದ್ದು

ದಿರಿಸು-ಪುಸ್ತಕಗಳ ನಡುವೆ ಬದುಕು ನವಿಲುಗರಿ

ದಿರಿಸು-ಪುಸ್ತಕಗಳ ನಡುವೆ ಬದುಕು ನವಿಲುಗರಿ

ಎಲ್ಲ ದಿನಗಳೂ ಮಹಿಳಾ ದಿನಗಳೇ!

ಎಲ್ಲ ದಿನಗಳೂ ಮಹಿಳಾ ದಿನಗಳೇ!

MUST WATCH

udayavani youtube

ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ

udayavani youtube

ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

ಹೊಸ ಸೇರ್ಪಡೆ

1-ewewew

Maharashtra; ವಿಧಾನಸಭೆಗೆ 78 ಶಾಸಕರು ಮೊಟ್ಟ ಮೊದಲ ಬಾರಿಗೆ ಪ್ರವೇಶ

GDP

GDP; ದೇಶದ ಆರ್ಥಿಕಾಭಿವೃದ್ಧಿ 2 ವರ್ಷದಲ್ಲೇ ಕನಿಷ್ಠ: ಶೇ.5.4 ಜಿಡಿಪಿ ದಾಖಲು

supreem

ದೇವಾಲಯಗಳ ಪ್ರಸಾದ ಗುಣಮಟ್ಟ ಪರಿಶೀಲನೆ ಅರ್ಜಿಗೆ ಸುಪ್ರೀಂ ನಕಾರ

Modi Interview

Opposition ;ಜನರ ದಾರಿ ತಪ್ಪಿಸುತ್ತಿರುವ ವಿಪಕ್ಷಗಳು: ಪ್ರಧಾನಿ ಮೋದಿ

1-samsat

Adani, Manipur ಚರ್ಚೆಗೆ ಪಟ್ಟು: ವಾರ ಪೂರ ಸಂಸತ್‌ ಕಲಾಪ ವ್ಯರ್ಥ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.