ನಿರಂತರ ಮಳೆ: ತುಂಬಿ ಹರಿದ ನದಿ-ಹೊಳೆ; ಮನೆ, ಕೃಷಿ ತೋಟಗಳಿಗೆ ಹಾನಿ
Team Udayavani, Jun 15, 2018, 2:05 AM IST
ರಸ್ತೆಗಳು ಸಂಪೂರ್ಣ ಕೆಸರುಮಯ
ಆಲಂಕಾರು: ಕೆಲವು ದಿನಗಳಿಂದ ಈ ಭಾಗದಲ್ಲಿ ಸುರಿಯುತ್ತಿರುವ ಧಾರಕಾರ ಮಳೆಗೆ ಕುಮಾರಧಾರ ನದಿ, ಗುಂಡ್ಯ ಹೊಳೆ, ಹಳ್ಳ, ತೋಡುಗಳು ತುಂಬಿ ಹರಿಯುತ್ತಿವೆ. ಗ್ರಾಮೀಣ ಮಣ್ಣಿನ ರಸ್ತೆಗಳು ತಮ್ಮ ಮೂಲ ಸ್ವರೂಪವನ್ನು ಕಳೆದುಕೊಂಡು ಕೆಸರಿನಿಂದ ಕೂಡಿ ಸಂಚಾರ ಅಯೋಗ್ಯವಾಗಿವೆ. ಕುಮಾರಧಾರಾ ನದಿ ತುಂಬಿ ಹರಿಯುತ್ತಿದ್ದು, ನದಿಯ ಇಕ್ಕೆಲಗಳಲ್ಲಿ ನೆರೆ ನೀರು ಪ್ರವೇಶವಾಗಿದೆ. ಕೊಯಿಲ ಗ್ರಾಮದ ಏಣಿತಡ್ಕ, ಕೊಲ್ಯ ಪರಂಗಾಜೆ, ಆಲಂಕಾರು ಗ್ರಾಮದ ಕೊಂಡಾಡಿ, ಪಜ್ಜಡ್ಕ, ಕಕ್ವೆ ಮುಂತಾದ ಕಡೆಗಳಲ್ಲಿ ನದಿ ತಟದಲ್ಲಿನ ರೈತರ ಕೃಷಿ ತೋಟಗಳಿಗೆ ನೀರು ನುಗ್ಗಿ ದಿನಗಳೇ ಕಳೆದರೂ ಇನ್ನೂ ಇಳಿಮುಖವಾಗಿಲ್ಲ. ಗ್ರಾಮಿಣ ರಸ್ತೆಗಳಿಗೆ ಸರಿಯಾದ ಚರಂಡಿ ವ್ಯವಸ್ಥೆ ಕಲ್ಪಿಸದ ಹಿನ್ನೆಲೆಯಲ್ಲಿ ರಸ್ತೆಯಲ್ಲಿ ನೀರು ಹರಿದಾಡಿ ಕೊಚ್ಚೆಯಂತಾಗಿದೆ. ಇದರಿಂದ ರಸ್ತೆ ಸಂಚಾರ ದುಸ್ತರವಾಗಿದೆ. ಗ್ರಾಮೀಣ ಭಾಗದಲ್ಲಿ ವಿದ್ಯುತ್ ಕಣ್ಣಾಮುಚ್ಚಾಲೆಯಿಂದ ಬಹುತೇಕ ಕತ್ತಲೆಯಲ್ಲೇ ಕಳೆಯಬೇಕಾಗಿದೆ. ಒಟ್ಟಿನಲ್ಲಿ ನಿರಂತರ ಮಳೆಯಿಂದ ಜನ ಜೀವನ ಅಸ್ಥವ್ಯಸ್ತಗೊಂಡಿದೆ.
ಪೆರಾಜೆ: ಬರೆ ಕುಸಿತ, ಸಂಚಾರ ಸ್ಥಗಿತ
ಅರಂತೋಡು: ಬುಧವಾರ ರಾತ್ರಿ ಸುರಿದ ಭಾರೀ ಮಳೆಗೆ ಅರಂತೋಡು ಸಮೀಪದ ಪೆರಾಜೆ ಗ್ರಾಮದಲ್ಲಿ ಬರೆ
ಜರಿದು ವಾಹನ ಸಂಚಾರ ಸ್ಥಗಿತಗೊಂಡಿದೆ. ಪೆರಾಜೆ ಗ್ರಾಮದ ಕೆಂಚನಮೂಲೆ ಎಂಬಲ್ಲಿ 100 ಮೀ. ವ್ಯಾಪ್ತಿಯಲ್ಲಿ ಸಂಪೂರ್ಣ ರಸ್ತೆಯ ಮೇಲೆ ಬರೆ ಕುಸಿದುದಲ್ಲದೆ, ಬೃಹದಾಕಾರದ ಮರವೊಂದು ರಸ್ತೆಯ ಮಧ್ಯೆ ಭಾಗಕ್ಕೆ ಬಿದ್ದು ನಿಡ್ಯಮಲೆ, ಪೆರುಮುಂಡ, ಪೆರಂಗಜೆ ಭಾಗದಿಂದ ಸುಳ್ಯ ಕಡೆಗೆ ಹೋಗುವ ವಾಹನ ಸಂಚಾರ ಸಂಪೂರ್ಣ ಸ್ಥಗಿತಗೊಂಡಿತು. ನಿಡ್ಯಮಲೆ, ಕರಂಟಡ್ಕ ಭಾಗದಲ್ಲಿ ರಸ್ತೆಗೆ ಬರೆ ಕುಸಿದು ವಾಹನ ಸಂಚಾರಕ್ಕೆ ಅಡ್ಡಿಯಾಯಿತು. ಈ ವೇಳೆ ವಿದ್ಯುತ್ ಕಂಬಗಳು ಮುರಿದುಬಿದ್ದಿವೆ. ಸ್ಥಳಕ್ಕೆ ಪೆರಾಜೆ ಗ್ರಾ.ಪಂ. ಉಪಾಧ್ಯಕ್ಷ ನಂಜಪ್ಪ ನಿಡ್ಯಮಲೆ, ಸದಸ್ಯ ಉದಯ ಕುಂಬಳಚೇರಿ, ಸ್ಥಳೀಯ ಮುಖಂಡರಾದ ಸುರೇಶ್ ಪೆರುಮುಂಡ, ವಿಜಯ ನಿಡ್ಯಮಲೆ ಹಾಗೂ ಊರವರು ಭೇಟಿ ನೀಡಿದರು. ಬಳಿಕ ಮರ ಮತ್ತು ಮಣ್ಣನ್ನು ತೆರವುಗೊಳಿಸಲಾಯಿತು. ಗುರುವಾರ ಮಧ್ಯಾಹ್ನದ ನಂತರ ವಾಹನ ಸಂಚಾರಕ್ಕೆ ಅನುವುಮಾಡಿಕೊಡಲಾತು.
ತೊಡಿಕಾನ: ಭಾರೀ ಮಳೆ, ಬರೆ ಕುಸಿತ
ತೊಡಿಕಾನ: ಬುಧವಾರ ರಾತ್ರಿಯಿಂದ ಗುರುವಾರ ಬೆಳಿಗ್ಗೆ ತನಕ ಸುರಿದ ಧಾರಾಕಾರ ಮಳೆಗೆ ಅರಂತೋಡು ಗಾಮ ಪಂಚಾಯತ್ ವ್ಯಾಪ್ತಿಗೆ ಸೇರಿದ ತೊಡಿಕಾನ ಗ್ರಾಮದ ಮಾವಿನಕಟ್ಟೆ ಎಂಬಲ್ಲಿ ಗುಡ್ಡ ಕುಸಿದು ಬಿದ್ದ ಪರಿಣಾಮ, ಮಾವಿನಕಟ್ಟೆ, ಬಿಳಿಯಾರು, ಬಾಳೆಕಜೆ ರಸ್ತೆ ಬಂದ್ ಆಗಿದೆ. ಮಾವಿನಕಟ್ಟೆ ಎಂಬಲ್ಲಿ ರಸ್ತೆ ಬದಿಯ ಮೇಲಿನ ಗುಡ್ಡ ನಾಲ್ಕೈದು ಕಡೆ ಕುಸಿದು ರಸ್ತೆಗೆ ಬಿದ್ದಿದೆ. ಪರಿಣಾಮವಾಗಿ ವಾಹನ ಸಂಚಾರಕ್ಕೆ ತೊಡಕಾಗಿ ಪರಿಣಮಿಸಿದೆ. ರಸ್ತೆಯ ಮೇಲಿನ ಭಾಗದಲ್ಲಿ ಎತ್ತರದ ಗುಡ್ಡವಿದ್ದು ವಿದ್ಯಾರ್ಥಿಗಳಿಗೆ ಸಾರ್ವಜನಿಕರಿಗೆ ರಸ್ತೆಯಲ್ಲಿ ನಡೆದುಕೊಂಡು ಹೋಗಲು ಈಗ ಭಯಪಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.
ಹರಿಹರ: ಮತ್ತೂಂದು ಬಂಡೆ ಉರುಳುವ ಭೀತಿಯಲ್ಲಿ!
ಸುಬ್ರಹ್ಮಣ್ಯ: ಸುಬ್ರಹ್ಮಣ್ಯ ಆಸುಪಾಸು ಸುರಿಯುತ್ತಿರುವ ಮಳೆಗೆ ಅಲ್ಲಲ್ಲಿ ಗುಡ್ಡ ಕುಸಿತ ಘಟನೆಗಳು ಸಂಭವಿಸುತ್ತಿವೆ. ಎರಡು ದಿನಗಳಿಂದ ಮಳೆಯ ಜತೆಗೆ ಗುಡುಗು ಸಿಡಿಲು ಮಿಂಚು ಸಹಿತ ಕಂಡು ಬಂದಿದೆ. ಹರಿಹರ ಪಳ್ಳತ್ತಡ್ಕ ಸರಕಾರಿ ಪದವಿಪೂರ್ವ ಕಾಲೇಜು ಹಿಂಬದಿಯ ಗುಡ್ಡ ಬುಧವಾರ ಕುಸಿದು ಬಿದ್ದಿತ್ತು. ಈ ವೇಳೆ ಮಣ್ಣು ಜತೆ ಬಂಡೆ ಕಲ್ಲು ಜರಿದು ಬಿದ್ದು ಕಾಲೇಜು ಕಟ್ಟಡದ ಗೋಡೆಗೆ ಹಾನಿಯಾಗಿತ್ತು. ಇದೇ ಜಾಗದಲ್ಲಿ ಮತ್ತೆ ಗುಡ್ಡ ಕುಸಿಯುವ ಸ್ಥಿತಿಯಲ್ಲಿದ್ದು, ಬೃಹತ್ ಗಾತ್ರದ ಬಂಡೆಕಲ್ಲು ಜರಿದು ಬೀಳುವ ಸ್ಥಿತಿಯಲ್ಲಿದೆ.
ಬುಧವಾರ ಕುಸಿದ ಗುಡ್ಡದ ಮಣ್ಣನ್ನು ಇನ್ನೂ ತೆರವುಗೊಳಿಸಿಲ್ಲ ಈ ಕುರಿತು ಕಾಲೇಜು ಪ್ರಾಂಶುಪಾಲ ಗೋಪಾಲಕೃಷ್ಣ ಅವರಲ್ಲಿ ವಿಚಾರಿಸಿದಾಗ, ಘಟನೆ ನಡೆದ ವೇಳೆ ನಾನು ಕಾಲೇಜಿನಲ್ಲಿ ಇರಲಿಲ್ಲ. ಗುಡ್ಡ ಕುಸಿತಕ್ಕೆ ಸಂಬಂಧಿಸಿ ಸ್ಥಳೀಯಾಡಳಿತಕ್ಕೆ ಈ ಕೂಡಲೇ ದೂರು ನೀಡುವುದಾಗಿ ತಿಳಿಸಿದ್ದಾರೆ. ಹಿಂದಿನ ದಿನ ಗುಡ್ಡ ಕುಸಿತ ಜಾಗದಲ್ಲಿ ಮತ್ತೂಂದು ಬಂಡೆಕಲ್ಲು ಅಪಾಯದ ಸ್ಥಿತಿಯಲ್ಲಿ ಇದೆ. ಈ ಭಾಗದಲ್ಲಿ ಗುರುವಾರ ಮಳೆ ಪ್ರಮಾಣ ಕಡಿಮೆ ಇತ್ತು. ಮತ್ತೆ ಮಳೆ ತನ್ನ ವೇಗ ಹೆಚ್ಚಿಸಿದರೆ ಮತ್ತೆ ಗುಡ್ಡ ಕುಸಿದು ಮತ್ತಷ್ಟು ಹಾನಿ ಸಂಭವಿಸುವ ಸಾಧ್ಯತೆ ಇದೆ.
ಮಂಗಳವಾರ ರಾತ್ರಿ ಮಳೆಗೆ ಮಡಪ್ಪಾಡಿಯ ಗೋಲ್ಪಾಡಿ ಸಮೀಪ ಬರೆ ಕುಸಿದು ಮಣ್ಣು ರಸ್ತೆಗೆ ಬಿದ್ದಿದೆ. ಸೇವಾಜೆ -ಮಡಪ್ಪಾಡಿ ರಸ್ತೆಯು ಅಭಿವೃದ್ಧಿಯಾಗುತ್ತಿದ್ದು, ಕಾಂಕ್ರಿಟ್ ಕಾಮಗಾರಿ ನಡೆಯುತ್ತಿದೆ. ಈ ನಡುವೆ ಅಭಿವೃದ್ಧಿಗಾಗಿ ರಸ್ತೆ ಸಂಚಾರ ಬಂದ್ ಮಾಡಲಾಗಿತ್ತು. ಕಾಂಕ್ರಿಟ್ ಆದ ರಸ್ತೆಯ ಮೇಲೆ ಬರೆ ಜರಿದು ಭಾರೀ ಪ್ರಮಾಣದ ಮಣ್ಣು ರಾಶಿ ಬಿದ್ದಿದೆ. ಅದರ ತೆರವು ಕಾರ್ಯ ನಡೆದಿದೆ. ನಾಲ್ಕೂರು ಗ್ರಾಮದ ಹಾಲೆಮಜಲು ಕೃಷಿಕ ಕುಳ್ಳಂಪಾಡಿ ಲೋಲಾಕ್ಷ ಗೌಡರ ತೋಟಕ್ಕೆ ಸಿಡಿಲು ಬಡಿದು 50ಕ್ಕೂ ಅಧಿಕ ಅಡಿಕೆ, ತೆಂಗು, ಕೊಕ್ಕೊ ಗಿಡಗಳಿಗೆ ಹಾನಿಯಾಗಿದೆ. ಗುರುವಾರ ಬೆಳಗ್ಗೆಯಿಂದ ಸಂಜೆಯ ತನಕ ಮಳೆ ಕಡಿಮೆಯಿತ್ತು. ಸಂಜೆ ವೇಳೆಗೆ ಕುಕ್ಕೆ ಪರಿಸರದಲ್ಲಿ ಮತ್ತೆ ಮಳೆ ಆರಂಭವಾಗಿದೆ.
ನಿಡ್ಪಳ್ಳಿ: ‘ಮುಳುಗು ಸೇತುವೆ’ ಎಂದೇ ಹೆಸರಾದ ಪುತ್ತೂರು – ಪರ್ಲಡ್ಕ – ಪಾಣಾಜೆ ರಸ್ತೆಯ ಚೆಲ್ಯಡ್ಕ ಸೇತುವೆ ಈ ಮಳೆಗಾಲದ ಸಮಯದಲ್ಲಿ ಮೊದಲ ಬಾರಿಗೆ ಮುಳುಗಡೆಯಾಗಿದೆ. ಜೂ. 13ರ ರಾತ್ರಿಯಿಂದ ಭಾರೀ ಮಳೆಯಾಗುತ್ತಿದ್ದು, ಗುರುವಾರ ಬೆಳಗ್ಗೆ ಸೇತುವೆ ಮುಳುಗಿ ಸಂಚಾರಕ್ಕೆ ಅಡಚಣೆಯಾಗಿದೆ. ಇದರಿಂದ ಗುಮ್ಮಟೆಗದ್ದೆ, ಅಜ್ಜಿಕಲ್ಲು, ದೇವಸ್ಯ ಭಾಗದ ಜನರು ಸಂಕಷ್ಟ ಪಡುವಂತಾಗಿದೆ.
ಸುಳ್ಯ: ಭಾಗಮಂಡಲದಲ್ಲಿ ಭಾರಿ ಮಳೆ ಸುರಿದ ಹಿನ್ನೆಲೆಯಲ್ಲಿ ನಗರ ಸನಿಹದಲ್ಲಿ ಹಾದು ಹೋಗಿರುವ ಪಯಸ್ವಿನಿ ಮೈದುಂಬಿ ಹರಿಯುತ್ತಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Belagavi: ಕಾಂಗ್ರೆಸ್ ಅಧಿವೇಶನ ಶತಮಾನೋತ್ಸವ ದೇಶದ ಇತಿಹಾಸ ಸಂಭ್ರಮಿಸುವ ಕಾರ್ಯಕ್ರಮ: ಡಿಕೆಶಿ
Bengaluru: ಅನುಮತಿ ಇಲ್ಲದೇ ಅಲೋಪತಿ ಚಿಕಿತ್ಸೆ; 3 ಕ್ಲಿನಿಕ್‌ಗಳ ವಿರುದ್ಧ ಕೇಸ್
ವಿಚಾರಣೆ ದಿನ ಗೈರಾದ ವಕೀಲ… ಸಿಟ್ಟಿಗೆದ್ದು ನ್ಯಾಯಾಧೀಶರ ಮೇಲೆ ಚಪ್ಪಲಿ ಎಸೆದ ಆರೋಪಿ
Bengaluru: ಮಹಿಳೆಯರಿಗೆ ನೌಕರಿ ಆಮಿಷ ತೋರಿಸಿ ವೇಶ್ಯಾವಾಟಿಕೆಗೆ ಬಳಕೆ
Driver: ಹೆಚ್ಚು ಪ್ರಯಾಣದ ದರ ನೀಡಲು ಒತ್ತಡ, ಹಲ್ಲೆಗೆ ಯತ್ನ: ಕ್ಯಾಬ್ ಚಾಲಕನ ವಿರುದ್ಧ ದೂರು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.