ಧಾರಾಕಾರ ಮಳೆ: ಸುಳ್ಯದ ಹಲವೆಡೆ ಹಾನಿ
Team Udayavani, Jun 15, 2018, 2:25 AM IST
ಸುಳ್ಯ: ತಾಲೂಕಿನ ನಾನಾ ಭಾಗದಲ್ಲಿ ಧಾರಕಾರ ಮಳೆಯಾಗಿದೆ. ಗುರುವಾರ ಬೆಳಗ್ಗಿನ ಅಂತ್ಯಕ್ಕೆ 184.5 ಮಿ.ಮೀ ಮಳೆ ದಾಖಲಾಗಿದೆ. ಗುರುವಾರ ದಿನವಿಡಿ ಮೋಡ, ಬಿಸಿಲು ಮಿಶ್ರಿತ ವಾತಾವರಣ ಇದ್ದು, ಮಳೆಯಾಗಿಲ್ಲ. ಗಾಳಿ ಮಳೆಯ ಆಲೆಟ್ಟಿ- ಕೋಲ್ಚಾರು- ಬಂದ್ಯಡ್ಕ ಅಂತರಾಜ್ಯ ಸಂಪರ್ಕ ರಸ್ತೆಯ ಆನೆಕಲ್ಲು ಬಳಿ ಪ್ರಯಾಣಿಕ ತಂಗುದಾಣ ಹಾಗೂ ರಸ್ತೆಗೆ ಅಡ್ಡಲಾಗಿ ಮರ ಬಿದ್ದು ಕೆಲ ಕಾಲ ಸಂಚಾರ ಸ್ಥಗಿತಗೊಂಡಿತ್ತು. ಕೆಲ ವಿದ್ಯುತ್ ಕಂಬಕ್ಕೂ ಹಾನಿ ಉಂಟಾಗಿದೆ. ನಾರ್ಕೋಡುವಿನ ಶಿವರಾಮ ಗೌಡ ಕುಡೆಕಲ್ಲು ಅವರ ಹಳೆ ಅಂಗಡಿ ಕಟ್ಟಡ ಸಂಪೂರ್ಣ ಧರೆಶಾಹಿಯಾಗಿ ಸಾವಿರಾರು ರೂ. ನಷ್ಟ ಸಂಭವಿಸಿದೆ. ಪೆರಾಜೆ ಗ್ರಾಮದ ನಿಡ್ಯಮಲೆ ಕೆಂಚನಮೂಲೆ ಚಡಾವು ಬಳಿ ಗುಡ್ಡವೊಂದು ಕುಸಿದು, ರಸ್ತೆ ಸಂಪರ್ಕ ಕಡಿತಗೊಂಡಿದೆ. ಸೋಣಂಗಿರಿ-ಜಾಳ್ಸೂರು ರಸ್ತೆಯ ಕುಕ್ಕಂದೂರು ಬಳಿ ಚಂದ್ರಶೇಖರ ನಡುಬೆಟ್ಟು ಅವರ ತೋಟದ ತಡೆಗೋಡೆ ಕುಸಿದು ನಷ್ಟ ಉಂಟಾಗಿದೆ. ಹಲವು ಅಡಿಕೆ ಮರಗಳು ಧರೆಗೆ ಉರುಳಿದೆ. ಅಡ್ತಲೆ ಗ್ರಾಮದ ಕಲ್ಲುಗುಡ್ಡೆ ಬಳಿ ವಿಮಲಾ ಕಲ್ಲಗದ್ದೆ ಅವರ ಮನೆ ಮೇಲೆ ಮರ ಬಿದ್ದು ಹಾನಿ ಉಂಟಾಗಿದೆ.
ಆಲೆಟ್ಟಿ ಗ್ರಾಮದ ಬಡ್ಡಡ್ಕ ಕಲ್ಲಪಳ್ಳಿ ಸುಧಾಕರ ಬಾಟೋಳಿ ಅವರ ಮನೆ ಹಿಂಬದಿ ಧರೆ ಕುಸಿದು ಹಾನಿ ಸಂಭವಿಸಿದೆ. ಬಡ್ಡಡ್ಕ ದೋಣಿಮೂಲೆಯಲ್ಲಿ ಸೀತಾರಾಮ ನಾಯಕ್ ಅವರ ಮನೆ ಹಿಂಬದಿ ಗುಡ್ಡ ಕುಸಿದು ಮನೆಗೆ ಅಲ್ಪ ಪ್ರಮಾಣದ ಹಾನಿ ಉಂಟಾಗಿದೆ. ಎರಡು ದಿನ ಅಬ್ಬರಿಸಿದ ಮಳೆ ಗುರುವಾರ ಶಾಂತವಾಗಿತ್ತು. ಬುಧವಾರ ರಾತ್ರಿ ಮಳೆಯಿಂದ ಗ್ರಾಮಾಂತರ ಪ್ರದೇಶದ ಹಲವೆಡೆ ಹಾನಿ ಉಂಟಾಗಿದೆ. ಪಯಸ್ವಿನಿ, ಕುಮಾರಧಾರಾ ನದಿ ನೀರಿನ ಹರಿವಿನ ಮಟ್ಟ ಏರಿಕೆ ಕಂಡಿತ್ತು. ತಾಲೂಕಿನಲ್ಲಿ ಗುರುವಾರ ಬೆಳಗ್ಗಿನ ಅಂತ್ಯಕ್ಕೆ 184.5 ಮಿ.ಮೀ. ಮಳೆ ದಾಖಲಾಗಿದೆ. ಬುಧವಾರ ರಾತ್ರಿಯಿಡಿ ಧಾರಕಾರ ಮಳೆಯಾಗಿತ್ತು. ಈ ಹಿನ್ನೆಲೆಯಲ್ಲಿ ಗುರುವಾರ ಶಾಲಾ ಕಾಲೇಜುಗಳಿಗೆ ರಜೆ ಘೋಷಿಸಲಾಗಿತ್ತು. ಮಂಡೆಕೋಲು ಶ್ರೀ ಮಹಾವಿಷ್ಣುಮೂರ್ತಿ ದೇವಸ್ಥಾನದ ಮುಂಭಾಗದ ಹೊಳೆಗೆ ಕಟ್ಟಿದ ತಡೆಗೋಡೆ ಕುಸಿದಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Cabinet ಸರ್ಜರಿ ಸದ್ಯ ಇಲ್ಲ:ಹೈಕಮಾಂಡ್ ಭೇಟಿ ಬಳಿಕ ಸಿಎಂ, ಡಿಸಿಎಂ ಸ್ಪಷ್ಟನೆ
Tamil Nadu;ಇಂದು ಅಪ್ಪಳಿಸಲಿದೆ ‘ಫೆಂಗಲ್’ ಚಂಡಮಾರುತ!: ಶ್ರೀಲಂಕಾದಲ್ಲಿ 12 ಸಾ*ವು
1.26 ಲಕ್ಷ ಅರ್ಹರಿಗೆ ವಾರದಲ್ಲಿ ಬಗರ್ ಹುಕುಂ ಚೀಟಿ
Maharashtra; ವಿಧಾನಸಭೆಗೆ 78 ಶಾಸಕರು ಮೊಟ್ಟ ಮೊದಲ ಬಾರಿಗೆ ಪ್ರವೇಶ
GDP; ದೇಶದ ಆರ್ಥಿಕಾಭಿವೃದ್ಧಿ 2 ವರ್ಷದಲ್ಲೇ ಕನಿಷ್ಠ: ಶೇ.5.4 ಜಿಡಿಪಿ ದಾಖಲು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.