ಬೆಳ್ಳಂದೂರು ಕೆರೆ ಭಾಗದಲ್ಲಿ ಪರಿಸರಾತ್ಮಕ ತುರ್ತು ಪರಿಸ್ಥಿತಿ


Team Udayavani, Jun 15, 2018, 11:47 AM IST

bellanduru-lake.jpg

ನವದೆಹಲಿ: ಬೆಂಗಳೂರಿನ ಬೆಳ್ಳಂದೂರು ಕೆರೆಯಲ್ಲಿ ಪರಿಸರಾತ್ಮಕ ತುರ್ತುಪರಿಸ್ಥಿತಿ ನಿರ್ಮಾಣವಾಗಿದೆ ಎಂದು ರಾಷ್ಟ್ರೀಯ ಹಸಿರು ನ್ಯಾಯಮಂಡಳಿ (ಎನ್‌ಜಿಟಿ) ರಚಿಸಿದ ಸಮಿತಿ ಹೇಳಿದೆ. ಜತೆಗೆ ಕೆರೆಯಲ್ಲಿ 1 ಮಿಲಿ ಲೀಟರ್‌ ಪ್ರಮಾಣದಷ್ಟು ಕೂಡ ಶುದ್ಧ ನೀರು ಸಿಗುವುದಿಲ್ಲ. ಸ್ಥಳೀಯ ಅಧಿಕಾರಿಗಳ ನಿರ್ಲಕ್ಷ್ಯದಿಂದಾಗಿ ಕೆರೆಗೆ ಅವ್ಯಾಹತವಾಗಿ ಶುದ್ಧಗೊಳ್ಳದ ಕೊಳಚೆ ನೀರು ಸೇರುತ್ತಿದೆ.

ಹೀಗಾಗಿ ಅದು ಉದ್ಯಾನ ನಗರಿಯ ಅತ್ಯಂತ ದೊಡ್ಡ ಕೊಳಚೆ ಟ್ಯಾಂಕ್‌ ಆಗಿ ಪರಿವರ್ತನೆಯಾಗುತ್ತಿದೆ ಎಂದು ಎನ್‌ಜಿಟಿಗೆ ಗುರುವಾರ ಸಲ್ಲಿಸಿರುವ ವರದಿಯಲ್ಲಿ ಪ್ರಬಲವಾಗಿ ಟೀಕಿಸಲಾಗಿದೆ. ಈ ಬಗ್ಗೆ ಕೂಡಲೇ ಗಮನ ಹರಿಸದೇ ಇದ್ದಲ್ಲಿ ಅದು ಜ್ವಲಂತ ಸಮಸ್ಯೆಯಾಗಿ ಪರಿಣಮಿಸಲಿದೆ ಎಂದು ವರದಿಯಲ್ಲಿ ಎಚ್ಚರಿಕೆ ನೀಡಲಾಗಿದೆ.

ಕಟ್ಟಡ ನಿರ್ಮಾಣ, ಬಳಕೆಗೆ ಯೋಗ್ಯವಲ್ಲದ ತ್ಯಾಜ್ಯಗಳನ್ನು ಕೆರೆಗೆ  ಹಾಕುತ್ತಿರುವ ಬಗ್ಗೆ ಸಂಗ್ರಹಿಸಲಾಗಿರುವ ನೀರಿನ ಮಾದರಿಯ ಅಧ್ಯಯನದಿಂದ ವ್ಯಕ್ತವಾಗಿದೆ. ಇದರಿಂದಾಗಿ ಕೆರೆಯ ಗಾತ್ರ ಕೂಡ ಕಿರಿದಾಗಿದ್ದು, ನೀರಿನ ಸಂಗ್ರಹಣೆಗೆ ಗಣನೀಯ ಪ್ರಮಾಣದಲ್ಲಿ ತೊಡಕಾಗಿದೆ. ಕೆರೆಯಲ್ಲಿ ಜಲಸಸ್ಯ ಮತ್ತು ಇತರ ಸೂಕ್ಷ್ಮ ಪ್ರಮಾಣದ ಸಸ್ಯಗಳು ಬೆಳೆದು ನಿಂತು ನೀರನ್ನು ಕಲುಷಿತಗೊಳಿಸುತ್ತಿವೆ. 

ಬೆಳ್ಳಂದೂರು ಕೆರೆಯನ್ನು ಪರಿಶೀಲಿಸಲು ತೆರಳಿದ್ದ ಸಂದರ್ಭದಲ್ಲಿ ಕೆರೆಗೆ ಯಾವುದೇ ರೀತಿಯಲ್ಲಿ ಶುದ್ಧಗೊಳಿಸದ ನೀರನ್ನು ಅವ್ಯಾಹತವಾಗಿ ಬಿಡಲಾಗುತ್ತಿದೆ. ಆಮೂಲಾಗ್ರವಾಗಿ ಪರಿಶೀಲನೆ ನಡೆಸಿದ ಬಳಿಕ ಕೆರೆಯಲ್ಲಿ ಒಂದೇ ಒಂದು ಬಿಂದಿಗೆ ನೀರು ಕೂಡ ಶುದ್ಧವಾಗಿಲ್ಲ ಎಂದು ಕಂಡುಕೊಳ್ಳಲಾಗಿದೆ. ಅಲ್ಲಿ ಘನತ್ಯಾಜ್ಯ, ಹೊಲಸು, ಕಳೆ ಸೇರಿದಂತೆ ಅನಪೇಕ್ಷಿತ ವಸ್ತುಗಳು ತುಂಬಿರುವುದು ಕಂಡು ಬಂದಿದೆ.

ಹೀಗಾಗಿ ಬೆಳ್ಳಂದೂರು ಕೆರೆಯಲ್ಲಿ ಪರಿಸರಾತ್ಮಕ ತುರ್ತುಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಎನ್‌ಜಿಟಿ 2016 ಆ.12ರಂದು ನ್ಯಾಯವಾದಿಗಳಾದ ರಾಜ್‌ ಪಂಜವಾನಿ, ಸುಮೀರ್‌ ಸೋಧಿ ಹಾಗೂ ರಾಹುಲ್‌ ಚೌಧರಿ ನೇತೃತ್ವದ ಸಮಿತಿ ಅಭಿಪ್ರಾಯಪಟ್ಟಿದೆ. 

12 ಬಾರಿ ಬೆಂಕಿ: 2016ರ ಆ.12ರಂದು ಮೊದಲ ಬಾರಿಗೆ ಕೆರೆಯಲ್ಲಿ ಬೆಂಕಿ ಕಾಣಿಸಿಕೊಂಡ ಬಳಿಕ ಇದು ವರೆಗೆ ಸುಮಾರು 12 ಬಾರಿ ಬೆಂಕಿ ಕಾಣಿಸಿಕೊಂಡಿದೆ ಎಂದು ಸಮಿತಿ ಹೇಳಿದೆ. 

ಹಲವು ಶಿಫಾರಸುಗಳು: ಕೆರೆ ದಂಡೆಯ ಸೂಕ್ತ ಪ್ರದೇಶದಲ್ಲಿ ಸಿಸಿಟಿವಿ ಅಳವಡಿಕೆ ಮಾಡಬೇಕೆಂದು ಸಮಿತಿ ಶಿಫಾರಸು ಮಾಡಿದೆ. ಈ ಮೂಲಕ ಕಟ್ಟಡ ನಿರ್ಮಾಣ ತ್ಯಾಜ್ಯ ಹಾಕದಂತೆ ತಡೆಯಲು ಕ್ರಮ ಕೈಗೊಳ್ಳಬಹುದು. ತ್ಯಾಜ್ಯಗಳನ್ನು ಹಾಕುವ ಮೂಲಕ ಕೆರೆ ಒತ್ತುವರಿ ತಡೆಯಲು ಭದ್ರತಾ ಸಿಬ್ಬಂದಿ ನೇಮಿಸಲೂ ಅದು ಸಲಹೆ ಮಾಡಿದೆ.

ಇದರ ಜತೆಗೆ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ), ಕರ್ನಾಟಕ ರಾಜ್ಯ ಪರಿಸರ ನಿಯಂತ್ರಣ ಮಂಡಳಿ (ಕೆಎಸ್‌ಪಿಸಿಬಿ),  ಕೇಂದ್ರೀಯ ಪರಿಸರ ನಿಯಂತ್ರಣ ಮಂಡಳಿ (ಸಿಪಿಸಿಬಿ) ಮತ್ತು ಇತರ ಸಂಸ್ಥೆಗಳಲ್ಲಿನ ಅನುಭವಿ ಹಿರಿಯ ಅಧಿಕಾರಿಗಳನ್ನೊಳಗೊಂಡ ಸಮಿತಿ ರಚಿಸಲೂ ಸಮಿತಿ ಶಿಫಾರಸು ಮಾಡಿದ್ದು, ಅದರ ಸಲಹೆಯನ್ನು ಕಡ್ಡಾಯವಾಗಿ ಜಾರಿ ಮಾಡಬೇಕೆಂದು ಸೂಚಿಸಿದೆ.

ವರ್ತೂರು ಕೆರೆ ಸ್ಥಿತಿ ಬದಲಿಲ್ಲ: ಎನ್‌ಜಿಟಿ ಸಮಿತಿ ವರ್ತೂರು ಕೆರೆಯ ಸ್ಥಿತಿಯ ಬಗ್ಗೆಯೂ ಆಘಾತ ವ್ಯಕ್ತಪಡಿಸಿದೆ. “ಬೆಳ್ಳಂದೂರು ಕೆರೆಯಂತೆ  ವರ್ತೂರು ಕೆರೆಯ ಸ್ಥಿತಿಯೂ ಹಾಗೇ ಆಗಿದೆ. ಕಟ್ಟಡ ನಿರ್ಮಾಣ ಮತ್ತು ಕಟ್ಟಡ ಕೆಡವಿದ ತ್ಯಾಜ್ಯಗಳನ್ನು ಸುರಿಯಲಾಗುತ್ತಿದೆ. ಪ್ರತಿ ದಿನ 480 ಮಿಲಿಯನ್‌ ಲೀಟರ್‌ ಕೊಳಚೆ ನೀರು ಬೆಳ್ಳಂದೂರು ಕೆರೆಯಿಂದ ವರ್ತೂರು ಕೆರೆಗೆ ಹರಿಯುತ್ತದೆ.

ಇದಲ್ಲದೆ  ಸ್ಥಳೀಯವಾಗಿ ಉಂಟಾಗುವ 60-70 ಮಿಲಿಯನ್‌ ಲೀಟರ್‌ ಕೊಳಚೆ ನೀರು ಕೆರೆಗೆ ಸೇರುತ್ತಿದೆ. ಅದರ ಸ್ಥಿತಿ ಬೆಳ್ಳಂದೂರಿಗಿಂತ ಕೆಟ್ಟದಾಗಿದೆ. ಪರಿಸರಕ್ಕೆ ಹಾನಿ ಉಂಟಾಗಲಿದೆ ಎಂಬ ವಿಚಾರವನ್ನೂ ಗಮನಿಸದೆ ತ್ಯಾಜ್ಯವನ್ನು ಅಲ್ಲಿಗೆ ಸುರಿಯಲಾಗುತ್ತದೆ’ ಎಂದು ಸಮಿತಿ ಅಭಿಪ್ರಾಯಪಟ್ಟಿದೆ. ಕಟ‚rಡ ತ್ಯಾಜ್ಯಗಳನ್ನು ಹಾಕಿಯೇ ಕೆರೆಯ ಮೂಲಕವೇ ರಸ್ತೆ ನಿರ್ಮಿಸಲಾಗಿದೆ.  ಇಷ್ಟು ಮಾತ್ರವಲ್ಲದೆ ಪೈಪ್‌ ಲೈನ್‌ ಹಾಕುವ ನೆಪದಲ್ಲಿಯೂ ಕಟ‚rಡ ನಿರ್ಮಾಣ ತ್ಯಾಜ್ಯಗಳನ್ನು ಹಾಕಲಾಗಿದೆ.

ಟಾಪ್ ನ್ಯೂಸ್

Himanth-Bisw

Rahul Gandhi ಗುರಿ ತಪ್ಪಿದ ಕ್ಷಿಪಣಿ, ಸೋನಿಯಾರಿಂದ ತರಬೇತಿ ಅಗತ್ಯ: ಹಿಮಾಂತ

jairam 2

Constitution ಅಳಿಸಲೆಂದೇ ಜಾತಿಗಣತಿಗೆ ಮೋದಿ ವಿರೋಧ: ಜೈರಾಮ್‌

1-kashmir

Kashmir; ನಿಲ್ಲದ ಸ್ಥಾನಮಾನ ಗದ್ದಲ: ಸದನದಲ್ಲಿ ಜಟಾಪಟಿ

DK-Shivakuamar

Congress: ಸಿದ್ದರಾಮಯ್ಯ ಮಾಸ್‌ ಲೀಡರ್‌, ಮುಗಿಸಲು ಬಿಜೆಪಿ ಯತ್ನ: ಡಿ.ಕೆ.ಶಿವಕುಮಾರ್‌

Udupi: ಗೀತಾರ್ಥ ಚಿಂತನೆ-88: ಸಮಸ್ಯೆಯ ಮೂಲ ಹುಡುಕುವ ರೀತಿ

Udupi: ಗೀತಾರ್ಥ ಚಿಂತನೆ-88: ಸಮಸ್ಯೆಯ ಮೂಲ ಹುಡುಕುವ ರೀತಿ

1-crick

T20; ಸ್ಯಾಮ್ಸನ್‌ ಸತತ 2ನೇ ಶತಕ:ದಕ್ಷಿಣ ಆಫ್ರಿಕಾ ಎದುರು ಭಾರತಕ್ಕೆ ಅಮೋಘ ಜಯ

Kaup: ಪಠ್ಯದ ಜತೆಗೆ ಶಿಕ್ಷಣಕ್ಕೆ ಆದ್ಯತೆ ಅತ್ಯಗತ್ಯ: ಡಾ| ಕೆ. ಪ್ರಕಾಶ್‌ ಶೆಟ್ಟಿ

Kaup: ಪಠ್ಯದ ಜತೆಗೆ ಶಿಕ್ಷಣಕ್ಕೆ ಆದ್ಯತೆ ಅತ್ಯಗತ್ಯ: ಡಾ| ಕೆ. ಪ್ರಕಾಶ್‌ ಶೆಟ್ಟಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Himanth-Bisw

Rahul Gandhi ಗುರಿ ತಪ್ಪಿದ ಕ್ಷಿಪಣಿ, ಸೋನಿಯಾರಿಂದ ತರಬೇತಿ ಅಗತ್ಯ: ಹಿಮಾಂತ

CBI

Delhi; ಕಾನೂನು ಅಧಿಕಾರಿ ನಿವಾಸದಲ್ಲಿ 3.79 ಕೋಟಿ ನಗದು ಸಿಬಿಐನಿಂದ ವಶಕ್ಕೆ

jairam 2

Constitution ಅಳಿಸಲೆಂದೇ ಜಾತಿಗಣತಿಗೆ ಮೋದಿ ವಿರೋಧ: ಜೈರಾಮ್‌

1-kashmir

Kashmir; ನಿಲ್ಲದ ಸ್ಥಾನಮಾನ ಗದ್ದಲ: ಸದನದಲ್ಲಿ ಜಟಾಪಟಿ

1-CJI-BG

Supreme Court; CJI ಡಿ.ವೈ.ಚಂದ್ರಚೂಡ್ ಅವರಿಗೆ ಭಾವನಾತ್ಮಕ ವಿದಾಯ

MUST WATCH

udayavani youtube

ಗೋವಿನ ಪೂಜೆ ಯಾಕಾಗಿ ಮಾಡಬೇಕು?

udayavani youtube

ಮೇಲುಕೋಟೆಯಲ್ಲಿ ದೀಪಾವಳಿ ಆಚರಿಸುವುದಿಲ್ಲ ಎಂಬ ಮಾತು ನಿಜವೋ ಸುಳ್ಳೋ

udayavani youtube

ಗಣಪತಿ ಸಹಕಾರಿ ವ್ಯವಸಾಯಕ ಸಂಘ ‘ನಿ.’ ಕೆಮ್ಮಣ್ಣು ಶತಾಭಿವಂದನಂ ಸಮಾರೋಪ ಸಂಭ್ರಮ ಸಂಪನ್ನ

udayavani youtube

ಉದಯವಾಣಿ’ಚಿಣ್ಣರ ಬಣ್ಣ -2024

udayavani youtube

ಹಬ್ಬದ ಊಟವೇ ಈ ಹೋಟೆಲ್ ನ ಸ್ಪೆಷಾಲಿಟಿ

ಹೊಸ ಸೇರ್ಪಡೆ

Himanth-Bisw

Rahul Gandhi ಗುರಿ ತಪ್ಪಿದ ಕ್ಷಿಪಣಿ, ಸೋನಿಯಾರಿಂದ ತರಬೇತಿ ಅಗತ್ಯ: ಹಿಮಾಂತ

CBI

Delhi; ಕಾನೂನು ಅಧಿಕಾರಿ ನಿವಾಸದಲ್ಲಿ 3.79 ಕೋಟಿ ನಗದು ಸಿಬಿಐನಿಂದ ವಶಕ್ಕೆ

jairam 2

Constitution ಅಳಿಸಲೆಂದೇ ಜಾತಿಗಣತಿಗೆ ಮೋದಿ ವಿರೋಧ: ಜೈರಾಮ್‌

1-kashmir

Kashmir; ನಿಲ್ಲದ ಸ್ಥಾನಮಾನ ಗದ್ದಲ: ಸದನದಲ್ಲಿ ಜಟಾಪಟಿ

1-rb

ATP Finals Doubles; ಬೋಪಣ್ಣ ಜೋಡಿಗೆ 6ನೇ ಶ್ರೇಯಾಂಕ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.