ಹಿಮಾಲಯದಲ್ಲಿ ಮೈಸೂರಿನ ನಾರಿಶಕ್ತಿ!
Team Udayavani, Jun 16, 2018, 6:00 AM IST
ಮೈಸೂರು: ಒಂದೆಡೆ ದೇಶಾದ್ಯಂತ ಫಿಟ್ನೆಸ್ ಕುರಿತು ಭಾರೀ ಚರ್ಚೆ ನಡೆಯುತ್ತಿರುವ ಬೆನ್ನಲ್ಲೇ ನಡುವಯಸ್ಸಿನ ಮಹಿಳೆಯರ ತಂಡವೊಂದು ಮೈ ಕೊರೆಯುವ ಚಳಿಯನ್ನೂ ಲೆಕ್ಕಿಸದೆ ಹಿಮಾಲಯವನ್ನೇರಿ ತ್ರಿವರ್ಣಧ್ವಜ ಹಾರಿಸಿ ಸಂಭ್ರಮಿಸಿದೆ!
ರಾಜ್ಯದ ನಾನಾ ಭಾಗದ ಮಹಿಳೆಯರು ಎದುರಾದ ಎಲ್ಲಾ ಅಡೆತಡೆಗಳನ್ನು ಲೆಕ್ಕಿಸದೇ ಯಶಸ್ವಿ ಪರ್ವತಾ ರೋಹಣ ನಡೆಸಿ ಸಾಹಸ ಮೆರೆದಿದ್ದಾರೆ. 14,500 ಅಡಿಗಳಷ್ಟು ಎತ್ತರದ ಹಿಮಾಲಯದ “ಬರಾದಸರ್ ಪಾಸ್’ನ ನೆತ್ತಿಗೇರಿ ಬಂದಿದ್ದಾರೆ. ಮೈಸೂರು, ಕೊಡಗು, ಶಿವಮೊಗ್ಗ, ಬೆಂಗಳೂರು, ಚಿಕ್ಕಬಳ್ಳಾಪುರ ಮತ್ತಿತರ ಕಡೆಯ 13 ವರ್ಷದಿಂದ 65 ವರ್ಷದ 27 ಮಹಿಳೆಯರು 15 ದಿನದ ಚಾರಣದಲ್ಲಿ ಯಶಸ್ವಿಯಾಗಿ ಹಿಮಾಲಯವನ್ನೇರಿ “ನಾರಿ ಶಕ್ತಿ’ ಏನೆಂಬುದನ್ನು ತೋರಿಸಿಕೊಟ್ಟಿದ್ದಾರೆ. ಮೈಸೂರಿನ ಟೈಗರ್ ಅಡ್ವೆಂಚರ್ ಫೌಂಡೇಷನ್ ಹಾಗೂ ದ ಮೌಂಟೆನ್ ಗೋಟ್ ಈ ಪರ್ವತಾರೋಹಣ ಆಯೋಜಿಸಿತ್ತು.
ಸಹಕಾರಿಯಾದ ತರಬೇತಿ
ಹಿಮಾಲಯ ಪರ್ವತದ ಚಾರಣಕ್ಕೂ ಮುನ್ನ ದಿಲ್ಲಿಗೆ ಭೇಟಿ ನೀಡಿದ್ದ ಈ 27 ಮಹಿಳಾ ತಂಡ ಸಂಸತ್ ಭವನ, ರಾಷ್ಟ್ರಪತಿ ಭವನಕ್ಕೆ ಭೇಟಿ ನೀಡಿತ್ತು. ಅನಂತರ ಹೃಷಿಕೇಶದಲ್ಲಿ ಅಲಕನಂದಾ ನದಿಯಲ್ಲಿ ಅಲ್ಲಿನ ಹವೆಗೆ ಒಗ್ಗುವಂತೆ ತರಬೇತಿ ಪಡೆದು, ಬಳಿಕ ಡೆಹ್ರಾಡೂನ್ ತಲುಪಿದ ತಂಡ, ಅಲ್ಲಿಂದ ಸಂಕ್ರಿ ಬೇಸ್ ಕ್ಯಾಂಪ್‌ನಲ್ಲಿ ಚಳಿಗೆ ದೇಹ ಒಗ್ಗಿಸಿಕೊಳ್ಳಲು ತರಬೇತಿ ಪಡೆದುಕೊಂಡಿತು. ಪಿನ್-ಸುಪಿನ್ ಕಣಿವೆಗಳ ನಡುವಿನ ಬರಾದಸರ್ ಪಾಸ್ ಪರ್ವತ, ಉತ್ತರಾಖಂಡ್ ಮತ್ತು ಹಿಮಾಚಲದ ಗಡಿಯಲ್ಲಿರುವ ಹಿಮಾಚ್ಛಾದಿತ ಪರ್ವತ. ಮೈನಸ್ 5 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶದಲ್ಲಿ 9 ದಿನಗಳ ಕಾಲ ಪರ್ವತ ಏರಿಬಂದಿದ್ದು ವಿಶೇಷ.
ಪರ್ವತಾರೋಹಣ ಆರಂಭಕ್ಕೂ ಮುನ್ನ ಹಿಮಾಲಯ ಏರುವ ಬಗ್ಗೆ ಸಾಕಷ್ಟು ಅನುಮಾನವಿತ್ತು. ಚಾರಣದ ಸಂದರ್ಭದಲ್ಲಿ ಬೆನ್ನುನೋವು ಕಾಣಿಸಿಕೊಂಡಿತ್ತು. ಲೆಕ್ಕಿಸದೇ ಪರ್ವತಾರೋಹಣಕ್ಕೆ ಮನಸ್ಸು ಮಾಡಿದೆ. 15 ದಿನಗಳನ್ನು ನೆನೆದರೆ ಈಗಲೂ ಖುಷಿಯಾಗುತ್ತದೆ.
ಸುಮಾ ಮಹೇಶ್, ಇನ್ನರ್ ವೀಲ್ ಕ್ಲಬ್ ಮೈಸೂರು ಕೇಂದ್ರದ ಮಾಜಿ ಅಧ್ಯಕ್ಷೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Bidar: ಭಾರತದಿಂದಲೇ ವಕ್ಫ್ ತೊಲಗಿಸಬೇಕು: ಯತ್ನಾಳ್
ಮಕ್ಕಳನ್ನು ಶಾಲೆಗೆ ಸೇರಿಸೋದು ಮುಖ್ಯವಲ್ಲ, ನಿತ್ಯವೂ ಕಳುಹಿಸಿ… :ಸಚಿವ ಮಧು ಬಂಗಾರಪ್ಪ
Protest: ಡಿ.10 ರಂದು ಸುವರ್ಣಸೌಧಕ್ಕೆ 5 ಸಾವಿರ ಟ್ರ್ಯಾಕ್ಟರ್ ಮುತ್ತಿಗೆ; ಕೂಡಲಸಂಗಮ ಶ್ರೀ
Dandeli: ಬೇಡರ ಶಿರಗೂರಿನ ರೈತರ ಗದ್ದೆಗಳಲ್ಲಿ ಮತ್ತೆ ಕಾಣಿಕೊಂಡ ಕಾಡಾನೆಗಳು
Nalatawad: ವಿದ್ಯುತ್ ಶಾಕ್‌ನಿಂದ ಮೃತಪಟ್ಟ ಕೋತಿಗೆ ಸ್ಥಳೀಯ ನಿವಾಸಿಗಳಿಂದ ಅಂತ್ಯಸಂಸ್ಕಾರ
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Politics: ಫಡ್ನವೀಸ್ ಗೆ ಬೆಂಬಲ ನೀಡಿದ ಅಜಿತ್; ಮಹಾರಾಷ್ಟ್ರದಲ್ಲಿ ಮುಗಿಯದ ಸಿಎಂ ತಿಕ್ಕಾಟ
Video: ನೋಟಿನ ಮಾಲೆಯಲ್ಲಿ ನೋಟು ಎಗರಿಸಿ ಕಳ್ಳ… ಮದುವೆ ಬಿಟ್ಟು ಕಳ್ಳನ ಹಿಂದೆ ಓಡಿದ ವರ
Sudeep: ʼಮ್ಯಾಕ್ಸ್ʼ ರಿಲೀಸ್ ದಿನ ಫಿಕ್ಸ್: ಕಿಚ್ಚನ ಸಿಟ್ಟಿಗೆ ಎಚ್ಚೆತ್ತ ನಿರ್ಮಾಣ ಸಂಸ್ಥೆ
Bidar: ಭಾರತದಿಂದಲೇ ವಕ್ಫ್ ತೊಲಗಿಸಬೇಕು: ಯತ್ನಾಳ್
Veerendra Heggade: ಡಾ.ಡಿ.ವೀರೇಂದ್ರ ಹೆಗ್ಗಡೆಗೆ ಇಂಡಿಯಾ ಬುಕ್ ಆಫ್ ರೆಕಾರ್ಡ್ ಪ್ರಶಸ್ತಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.