ಅಮೆರಿಕ ಕಾರ್ಯಾಚರಣೆ: ಪಾಕ್ ತಾಲಿಬಾನ್ ಉಗ್ರನ ಹತ್ಯೆ
Team Udayavani, Jun 16, 2018, 8:10 AM IST
ವಾಷಿಂಗ್ಟನ್/ಇಸ್ಲಾಮಾಬಾದ್: ನೊಬೆಲ್ ಶಾಂತಿ ಪ್ರಶಸ್ತಿ ಪುರಸ್ಕೃತ ಮಲಾಲಾ ಯೂಸುಫಜಾಯ್ ಹತ್ಯೆ ಯತ್ನದ ರೂವಾರಿ, ಪಾಕಿಸ್ಥಾನದ ತಾಲಿಬಾನ್ ನಾಯಕ ಮೌಲಾನಾ ಫಜ್ಲುಲ್ಲಾ ಅಮೆರಿಕದ ಡ್ರೋಣ್ ಕಾರ್ಯಾಚರಣೆಯಲ್ಲಿ ಹತನಾಗಿದ್ದಾನೆ. 2014ರಲ್ಲಿ ಪೇಶಾವರದ ಶಾಲೆಯ ಮೇಲೆ ನಡೆದ ಉಗ್ರ ದಾಳಿ ನಡೆಸಿ 130 ಮಕ್ಕಳ ಸಾವಿನ ಪ್ರಕರಣದಲ್ಲಿಯೂ ಈತ ಪ್ರಮುಖ ಪಾತ್ರ ವಹಿಸಿದ್ದ. ಗುರುವಾರ ರಾತ್ರಿ ಅಫ್ಘಾನಿಸ್ತಾನದ ಈಶಾನ್ಯ ಭಾಗದ ಕುನಾರ್ ನಲ್ಲಿ ಈ ಕಾರ್ಯಾಚರಣೆ ನಡೆದಿದೆ. ಅಮೆರಿಕ ಸರಕಾರದಿಂದ ಜಾಗತಿಕ ಭಯೋತ್ಪಾದಕ ಎಂಬ ಹಣೆಪಟ್ಟಿ ಹೊತ್ತಿದ್ದ ಈತನ ಸುಳಿವು ನೀಡಿದವರಿಗೆ 34 ಕೋಟಿ ರೂ. ಬಹುಮಾನ ನೀಡುವ ಘೋಷಣೆಯನ್ನೂ ಮಾಡಲಾಗಿತ್ತು.
ಜೂ.13ರಂದು ಸೇನಾ ಕಾರ್ಯಾಚರಣೆ ನಡೆಸಿ ಭಯೋತ್ಪಾದಕನನ್ನು ಕೊಲ್ಲಲಾಗಿತ್ತು. ಆದರೆ ಅಸುನೀಗಿದಾತ ಫಜ್ಲುಲ್ಲಾ ಎಂದು ಗುರುತು ಪತ್ತೆ ಹಚ್ಚಲಾಗಿರಲಿಲ್ಲ. ಬಳಿಕ ನಡೆದ ಶೋಧ ಕಾರ್ಯಾಚರಣೆಯಲ್ಲಿ ಈ ಮಾಹಿತಿ ಖಚಿತಪಡಿಸಲಾಗಿದೆ ಎಂದು ಅಫ್ಘಾನಿಸ್ತಾನದ ರಕ್ಷಣಾ ಖಾತೆ ಖಚಿತಪಡಿಸಿದೆ. ಈತನ ಜತೆಗೆ ನಾಲ್ವರು ಸಹಚರರೂ ಸಾವಿಗೀಡಾಗಿದ್ದಾರೆ. ಆದರೆ ಪಾಕಿಸ್ತಾನದ ತಾಲಿಬಾನ್ ಈ ಅಂಶವನ್ನು ದೃಢಪಡಿಸಿಲ್ಲ. ಈ ಬೆಳವಣಿಗೆ ಪಾಕಿಸ್ಥಾನ, ಅಮೆರಿಕ ಬಾಂಧವ್ಯ ಹದಗೆಡಿಸುವ ಸಾಧ್ಯತೆ ಇದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Social Media: ಈ ದೇಶದಲ್ಲಿ 16 ವರ್ಷದೊಳಗಿನವರು ಇನ್ಸ್ಟಾಗ್ರಾಮ್, ಫೇಸ್‌ಬುಕ್ ಬಳಸುವಂತಿಲ್ಲ!
Sydney; ಮಿಲಿಸೆಕೆಂಡಲ್ಲೇ ವಾಸನೆ ಪತ್ತೆ ಹಚ್ಚುವ ರೋಬೋಟ್ ಸೃಷ್ಟಿ!
Canada-India: ಕಾನ್ಸುಲರ್ ಕ್ಯಾಂಪ್ ರದ್ದು; ಕೆನಡಾಗೆ ಭಾರತ ತಿರುಗೇಟು
Australia: ಜಾಲತಾಣ ಬಳಕೆಗೆ ಕನಿಷ್ಠ 16 ವರ್ಷ ಮಿತಿ ನಿಗದಿ?
US: ಮೊದಲ ದಿನವೇ ಜಗತ್ತಿಗೆ ಟ್ರಂಪ್ “ಎನರ್ಜಿ’ ಶಾಕ್!
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.