ಆಸ್ಪತ್ರೆ ಅವ್ಯವಸ್ಥೆ ಕಂಡು ಹೌಹಾರಿದ ಜಿಪಂ ತಂಡ
Team Udayavani, Jun 16, 2018, 9:54 AM IST
ದಾವಣಗೆರೆ: ಸುಮಾರು 80 ವರ್ಷದ ಹಳೆಯ ಕಟ್ಟಡದ ಮೇಲೆ 9 ಕೋಟಿ ವೆಚ್ಚದಲ್ಲಿ ಹೊಸ ಕಟ್ಟಡ ಕಟ್ಟುತ್ತಿರುವುದನ್ನು
ಕಂಡು ಜಿಲ್ಲಾ ಪಂಚಾಯತಿ ಅಧ್ಯಕ್ಷರು, ಉಪಾಧ್ಯಕ್ಷರು, ಸ್ಥಾಯಿ ಸಮಿತಿ ಅಧ್ಯಕ್ಷರು ಕ್ಷಣ ಕಾಲ ಅವಕ್ಕಾದ ಘಟನೆ ಶುಕ್ರವಾರ ಚಾಮರಾಜಪೇಟೆಯಲ್ಲಿರುವ ಮಹಿಳಾ ಮತ್ತು ಮಕ್ಕಳ ಆಸ್ಪತ್ರೆಗೆ ದಿಢೀರ್ ಭೇಟಿ ಸಂದರ್ಭದಲ್ಲಿ ನಡೆಯಿತು.
ಜಿಪಂ ಅಧ್ಯಕ್ಷೆ ಮಂಜುಳಾ ಟಿ.ವಿ. ರಾಜು, ಉಪಾಧ್ಯಕ್ಷೆ ಗೀತಾ ಗಂಗಾನಾಯ್ಕ, ಸ್ಥಾಯಿ ಸಮಿತಿ ಅಧ್ಯಕ್ಷರಾದ ಶೈಲ ಬಸವರಾಜ್, ಬಿ.ಎಂ. ವಾಗೀಶಸ್ವಾಮಿ ಮಹಿಳಾ ಮತ್ತು ಮಕ್ಕಳ ಆಸ್ಪತ್ರೆಗೆ ದಿಢೀರ್ ಭೇಟಿ ನೀಡಿದ ಸಂದರ್ಭದಲ್ಲಿ 1932ರಲ್ಲಿ ನಿರ್ಮಾಣವಾಗಿರುವ ಆಸ್ಪತ್ರೆ ಕಟ್ಟಡದ ಮೇಲೆ ಮತ್ತೂಂದು ಕಟ್ಟಡ ಕಟ್ಟುತ್ತಿರುವುದನ್ನು ಕಂಡು ಬೆಚ್ಚಿ ಬಿದ್ದರು.
ಮಳೆಗಾಲದಲ್ಲಿ ಸೋರುವ ಹಳೆಯ ಕಟ್ಟಡದ ಮೇಲೆ ಇನ್ನೊಂದು ಕಟ್ಟಡ ಕಟ್ಟಲಿಕ್ಕೆ ಸಾಧ್ಯವೇ?. ಇದಕ್ಕೆ
ಪರವಾನಗಿ ಪಡೆಯಲಾಗಿದೆಯೇ ಎಂದು ಪ್ರಶ್ನಿಸಿದರು. ಸಂಬಂಧಿತ ಇಲಾಖೆಯಿಂದ ಎನ್‌ಒಸಿ (ನೋ ಅಬ್ಜೆಕ್ಷನ್ ಸರ್ಟಿ ಫಿಕೇಟ್) ಪಡೆದಿರುವುದಾಗಿ ಗುತ್ತಿಗೆದಾರ ತಿಳಿಸಿದರು.
ವಾರ್ಡ್‌ಗಳಲ್ಲೂ ಯಾವುದೇ ರೀತಿಯ ಸ್ವಚ್ಛ ಇಲ್ಲ. ದುರ್ವಾಸನೆ ಹರಡಿದೆ. ಹೊರ ಮತ್ತು ಒಳ ರೋಗಿಗಳಿಗೆ ಶುದ್ಧ ಕುಡಿಯುವ ನೀರು ಕೂಡ ಇಲ್ಲ. ಹಾಸಿಗೆ, ಹೊದಿಕೆಗಳು ಗಲೀಜಾಗಿರುವುದನ್ನು ನೋಡಿದರೆ ಆಸ್ಪತ್ರೆ ಎನ್ನುವಂತಿಲ್ಲ ಎಂದು ಭೇಟಿ ನೀಡಿದ ತಂಡ ವೈದ್ಯಾಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡಿತು.
ಜನರು ಗುಣಮುಖರಾಗಲು ಆಸ್ಪತ್ರೆಗೆ ಬರುತ್ತಾರೆ. ಅದರೆ, ಇಲ್ಲಿ ನೋಡಿದರೆ ರೋಗ ಇಲ್ಲದವರಿಗೂ ರೋಗ ಬರುವಂತಿದೆ. ಮೊದಲು ಸ್ವತ್ಛ, ಶುದ್ಧ ವಾತಾವರಣಕ್ಕೆ ಅಗತ್ಯ ಕ್ರಮ ತೆಗೆದುಕೊಳ್ಳಬೇಕು ಎಂದು ತಂಡ ಸೂಚಿಸಿತು.
ಸ್ನಾನಕ್ಕೆ ಬಿಸಿ ನೀರು, ಶುದ್ಧ ಕುಡಿಯುವ ನೀರು ಇಲ್ಲ, ರೋಗಿಗಳ ವಸ್ತು ಇಟ್ಟುಕೊಳ್ಳಲು ಯಾವುದೇ ಟೇಬಲ್ ಇಲ್ಲ ಎಂಬ ಆರೋಪಗಳು ರೋಗಿಗಳು, ಸಂಬಂಧಿಕರಿಂದ ಕೇಳಿ ಬಂದವು. ನೂತನವಾಗಿ ನಿರ್ಮಿಸಲಾಗುತ್ತಿರುವ ನೂರು ಹಾಸಿಗೆಯುಳ್ಳ ಕಟ್ಟಡಕ್ಕೆ ಭೇಟಿ ನೀಡಿ ಪರಿಶೀಲಿಸಿದ ತಂಡ, ಈ ಕಟ್ಟಡಕ್ಕೆ ಈಗಾಗಲೇ 50 ಹಾಸಿಗೆಗಳು ಮಂಜೂರಾಗಿವೆ. ಬೇಗೆನೆ ಪೂರ್ಣಗೊಳಿಸಬೇಕು ಎಂದು ಸೂಚಿಸಿತು.
ಅರವಳಿಕೆ ತಜ್ಞ ಡಾ| ಬಸವರಾಜ್ ಮಾತನಾಡಿ, ಆಸ್ಪತ್ರೆಯಲ್ಲಿನ ಸಣ್ಣಪುಟ್ಟ ಸಮಸ್ಯೆಗಳ ನಿವಾರಣೆಗೆ ಯಾವುದೇ ರೀತಿಯ ಅನುದಾನ ಇಲ್ಲದೆ ಸಮಸ್ಯೆ ಆಗುತ್ತಿದೆ. ರೋಗಿಗಳ ಸಂಖ್ಯೆಯೂ ಕಡಿಮೆಯಾಗುತ್ತಿದೆ. ಆಡಳಿತಾತ್ಮಕ
ಖರ್ಚಿಗಾಗಿ 2 ಲಕ್ಷ ನೀಡಲಾಗುತ್ತಿದೆ. ಸಣ್ಣಪುಟ್ಟ ಸಮಸ್ಯೆ ಬಗೆಹರಿಸಿಕೊಳ್ಳಲು, ನಿರ್ವಹಣೆಗಾಗಿ ಪ್ರತ್ಯೇಕ ಅನುದಾನದ ಅಗತ್ಯ ಇದೆ ಎಂದು ತಿಳಿಸಿದರು. ಪ್ರಭಾರ ಅಧೀಕ್ಷಕ ಡಾ| ನೀಲಕಂಠ ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Davanagere: ಯತ್ನಾಳ್ ಫೋರ್ತ್ ಗ್ರೇಡ್ ರಾಜಕಾರಣಿ..: ರೇಣುಕಾಚಾರ್ಯ ವಾಗ್ದಾಳಿ
Davanagere: ಮೊಟ್ಟೆ ವಿತರಣೆಯಲ್ಲಿ ಲೋಪ; ಮುಖ್ಯ ಶಿಕ್ಷಕಿ, ದೈಹಿಕ ಶಿಕ್ಷಣ ಶಿಕ್ಷಕ ಅಮಾನತು
Davanagere: ಮೊಟ್ಟೆ ವಿತರಣೆಯಲ್ಲಿ ಲೋಪ; ಮುಖ್ಯ ಶಿಕ್ಷಕಿ, ದೈಹಿಕ ಶಿಕ್ಷಣ ಶಿಕ್ಷಕ ಅಮಾನತು
BJP;ಯತ್ನಾಳ್ ರನ್ನು ತಡೆಯದಿದ್ದರೆ ನಾನೂ ಪ್ರತ್ಯೇಕ ಪಾದಯಾತ್ರೆ ಮಾಡುತ್ತೇನೆ:ರೇಣುಕಾಚಾರ್ಯ
Save Life: ಆಯತಪ್ಪಿ ಬಿದ್ದು ರೈಲಿನಡಿ ಸಿಲುಕುತ್ತಿದ್ದ ಪ್ರಯಾಣಿಕನ ಕಾಪಾಡಿದ ಹೋಂಗಾರ್ಡ್!
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.