ನಿಪ ಅಲ್ಲ ಫಿಫಾ ಫ‌ುಟ್‌ಬಾಲ್‌ ಜ್ವರ!


Team Udayavani, Jun 16, 2018, 12:16 PM IST

1-bb.jpg

ವಿಶ್ವದೆಲ್ಲೆಡೆ ಈಗ ಫ‌ುಟ್‌ಬಾಲ್‌ ಜ್ವರ. ನೆಚ್ಚಿನ ತಂಡ,ಆಟಗಾರರ ಪರ ಅಭಿಮಾನಿಗಳ ಕೂಗು ಮುಗಿಲು ಮುಟ್ಟಿದೆ. ಗೆಲ್ಲುವುದು ಯಾವುದೇ ತಂಡವಾಗಿರಬಹುದು. ಆದರೆ ಪ್ರತಿ ತಂಡಗಳಿಗೂ ಅದರದ್ದೇ ಆದ ಅಭಿಮಾನಿ ಬಳಗವೊಂದಿದೆ. ಅವರೆಲ್ಲರು ವಿಶ್ವ ಫ‌ುಟ್‌ಬಾಲ್‌ ಹಬ್ಬವನ್ನು ಸಂಭ್ರಮದಿಂದ ಆಚರಿಸುತ್ತಿದ್ದಾರೆ. ಇದಕ್ಕೆ ಭಾರತ ಕೂಡ ಹೊರತಾಗಿಲ್ಲ. 

ಭಾರತ ವಿಶ್ವ ಕೂಟದಲ್ಲಿ ಪಾಲ್ಗೊಳ್ಳದೆ ಇರಬಹುದು. ಆದರೆ ಭಾರತೀಯರ ಹೃದಯ ಸಿಂಹಾಸನದಲ್ಲಿ ಫ‌ುಟ್‌ಬಾಲ್‌ ಮೇಲೆ ಅಪಾರ ಪ್ರೀತಿ ಕಾಣುತ್ತದೆ. ಅದರಲ್ಲೂ ಕೋಲ್ಕತಾ, ಕೇರಳ ಮತ್ತು ಗೋವಾದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಅಭಿಮಾನಿಗಳು ಫ‌ುಟ್‌ಬಾಲ್‌ ಆಸಕ್ತಿ ಹೊಂದಿದ್ದಾರೆ. ತಮ್ಮ ಮನೆ, ಅಂಗಡಿ, ರಸ್ತೆ, ನಿಂತ ಹಳೆ ಗಾಡಿಗಳು, ಗೋಡೆ ಇನ್ನಿತರ ವಸ್ತುಗಳ ಮೇಲೆ ನೆಚ್ಚಿನ ಆಟಗಾರ, ದೇಶದ ಬಣ್ಣದ ಹಚ್ಚಿ ತಮ್ಮ ಅಗಾದ ಪ್ರೀತಿಯನ್ನು ತೋರ್ಪಡಿಸಿದ್ದಾರೆ. 

ಫ‌ುಟ್‌ಬಾಲ್‌ನ ಮೆಕ್ಕಾ ಕೋಲ್ಕತಾ: ಕೋಲ್ಕತಾವನ್ನು ಫ‌ುಟ್‌ಬಾಲ್‌ನ ಮೆಕ್ಕಾ ಎಂದು ಕರೆಯುತ್ತಾರೆ. ದೇಶದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಫ‌ುಟ್‌ಬಾಲ್‌ ಅಭಿಮಾನಿಗಳ ಕ್ರೇಜ್‌ ಹೊಂದಿರುವ ಏಕೈಕ ಸ್ಥಳ. ಪ್ರಸ್ತುತ ಕೋಲ್ಕತಾದ ಬೀದಿಗಳಲ್ಲಿ ಅಭಿಮಾನಿಗಳು ತಮ್ಮ ನೆಚ್ಚಿನ ಆಟಗಾರರ ಚಿತ್ರವನ್ನು ಬಣ್ಣದಲ್ಲಿ ಚಿತ್ರಿಸಿದ್ದಾರೆ. ರಸ್ತೆ ಯುದ್ದಕ್ಕೂ ನೇಮಾರ್‌,  ಮೆಸ್ಸಿ, ರೊನಾಲ್ಡಿನೊ ರಂತಹ ದಿಗ್ಗಜ ಆಟಗಾರರ ಅಂದದ ಫೋಟೋಗಳು ರಾರಾಜಿಸುತ್ತಿದೆ. ಜತೆಗೆ ಗಾಳಿಪಟ ತಯಾರಿಸುವ ಕಲಾವಿದರು ಬ್ಯುಸಿ. ವಿವಿಧ ಬಣ್ಣಗಳ, ತಂಡಗಳ, ಆಟಗಾರರ ಹೆಸರಿನ ಗಾಳಿ ಪಟಗಳು ಮಾರುಕಟ್ಟೆಯಲ್ಲಿ ಲಭ್ಯವಾಗಲಿದೆ. 

ಶೃಂಗಾರಗೊಂಡಿದೆ ಗೋವಾ: ಗೋವಾದಲ್ಲೂ ಫ‌ುಟ್‌ಬಾಲ್‌ ಕ್ರೇಜ್‌ ಕಡಿಮೆಯೇನಿಲ್ಲ. ಪುಟ್ಟ ಮಕ್ಕಳಿಂದ ಹಿಡಿದು ದೊಡ್ಡವರ ತನಕ ಎಲ್ಲರು ಫ‌ುಟ್‌ಬಾಲ್‌ ಅನ್ನು ಅಪ್ಪಿಕೊಂಡಿದ್ದಾರೆ. ವಿಶ್ವ ಸಮರ ನೋಡಲು ಸಜ್ಜಾಗಿರುವ ಅವರು ಮಕ್ಕಳಲ್ಲಿ ಫ‌ುಟ್‌ಬಾಲ್‌ ಕುರಿತಂತೆ ವಿಶೇಷ ಕಾರ್ಯಗಾರ ನಡೆಸಿ ಜಾಗೃತಿ ನಡೆಸುವ ಕಾರ್ಯ ನಡೆಸುತ್ತಿದ್ದಾರೆ. 

ಕೇರಳದಲ್ಲಿ ಫಿಫಾ ಜ್ವರ: ಕೇರಳದಲ್ಲಿ ನಿಪ ಜ್ವರದ ಆತಂಕವನ್ನು ಕಿತ್ತು ಬಿಸಾಕಿರುವ ಅಲ್ಲಿನ ಫ‌ುಟ್‌ಬಾಲ್‌ ಅಭಿಮಾನಿಗಳು ರಸ್ತೆಯ ಉದ್ದಗಲ, ಹಲಸಿನ ಮರ, ಆಟೋ ರಿಕ್ಷಾ. ರಸ್ತೆಯ ಗೋಡೆಗಳಲ್ಲಿ ತಮ್ಮ ನೆಚ್ಚಿನ ಫ‌ುಟ್‌ಬಾಲ್‌ ಆಟಗಾರರ ಚಿತ್ರವನ್ನು ಬರೆದಿದ್ದಾರೆ. ಕಟೌಟ್‌ ಫ್ಲೆಕ್ಸ್‌ಗಳಲ್ಲಿ ತಮ್ಮ ನೆಚ್ಚಿನ ಆಟಗಾರರ ಫೋಟೋವನ್ನು ಹಾಕಿ ಅಭಿಮಾನಿಗಳು ಗೆದ್ದು ಬರಲಿ ಎಂದು ಶುಭ ಹಾರೈಸಿದ್ದಾರೆ. ದೇವರ ನಾಡಿನ ಹೆಚ್ಚಿನ ಅಭಿಮಾನಿಗಳು ಬ್ರೆಜಿಲ್‌, ಪೋರ್ಚುಗಲ್‌ ತಂಡಗಳನ್ನು ಬೆಂಬಲಿಸುವ ಫೋಟೊಗಳು ರಸ್ತೆಯಲ್ಲಿ ಕಾಣಬಹುದಾಗಿದೆ. 

ವಿಶ್ವದಾದ್ಯಂತ ಸಂಭ್ರಮ
ಬ್ರೆಜಿಲ್‌ನ ಪ್ರಮುಖ ನಗರದಲ್ಲಿ ಅಭಿಮಾನಿಗಳು ತಮ್ಮ ತಂಡವನ್ನು ಹುರಿದುಂಬಿಸುತ್ತಿದ್ದಾರೆ. ರಸ್ತೆಯಲ್ಲಿ ನೆಚ್ಚಿನ ಆಟಗಾರನ ಚಿತ್ರವನ್ನು ಕಾಣಬಹುದು. ಜತೆಗೆ ನೇಯ್ಮರ್‌ ಸೇರಿದಂತೆ ಪ್ರಮುಖ ಆಟಗಾರರ ಕಟೌಟ್‌ಗಳು ರಾರಾಜಿಸುತ್ತಿವೆ. ರಿಯೋ ಡಿ ಜನೈರೋವಂತೂ ಅಲಂಕಾರದಿಂದ ಜಾತ್ರೆಯಂತೆ ಕಾಣುತ್ತಿದೆ. 

ಜನಪ್ರಿಯ ಮೆಸ್ಸಿ ಕಟ್ಟಿಂಗ್‌

ಅರ್ಜೆಂಟೀನಾ ತಂಡದ ಲಯೋನೆಲ್‌ ಮೆಸ್ಸಿ ಹೇರ್‌ಕಟ್ಟಿಂಗ್‌ ಸರ್ಬಿಯಾದಲ್ಲಿ ಫೇಮಸ್‌ ಆಗಿದೆ. ಸರ್ಬಿಯಾದ ಬಾರ್ಬರ್‌ ಮರಿಯೋ ಹವಾಲಾ ತಮ್ಮ ಕೈಚಳಕವನ್ನು ಅಭಿಮಾನಿಗಳ ತಲೆ ಮೇಲೆ ಕೆತ್ತಿದ್ದಾರೆ. 

ಹೇಮಂತ್‌ ಸಂಪಾಜೆ 

ಟಾಪ್ ನ್ಯೂಸ್

Puttur ಸರ್ವೆ: ಮನೆಗೆ ನುಗ್ಗಿ ಲಕ್ಷಾಂತರ ರೂ. ಮೌಲ್ಯದ ಚಿನ್ನಾಭರಣ, ನಗದು ಕಳ್ಳತನ

Puttur ಸರ್ವೆ: ಮನೆಗೆ ನುಗ್ಗಿ ಲಕ್ಷಾಂತರ ರೂ. ಮೌಲ್ಯದ ಚಿನ್ನಾಭರಣ, ನಗದು ಕಳ್ಳತನ

Manipal: ಕಾರು ಅಪಘಾತ: ಪ್ರಯಾಣಿಕರು ಪಾರು

Manipal: ಕಾರು ಅಪಘಾತ: ಪ್ರಯಾಣಿಕರು ಪಾರು

Mangaluru: ಮಾದಕ ವಸ್ತು ಸೇವನೆ ಆರೋಪ; 5 ಮಂದಿ ಸೆರೆ

Mangaluru: ಮಾದಕ ವಸ್ತು ಸೇವನೆ ಆರೋಪ; 5 ಮಂದಿ ಸೆರೆ

ಮುಮ್ತಾಜ್‌ ಅಲಿ ಆತ್ಮಹ*ತ್ಯೆ ಪ್ರಕರಣ: ಆರೋಪಿಗಳನ್ನು ಪೊಲೀಸ್‌ ವಶಕ್ಕೆ ನೀಡಲ್ಲ

High Court: ಮುಮ್ತಾಜ್‌ ಅಲಿ ಆತ್ಮಹ*ತ್ಯೆ ಪ್ರಕರಣ: ಆರೋಪಿಗಳನ್ನು ಪೊಲೀಸ್‌ ವಶಕ್ಕೆ ನೀಡಲ್ಲ

Karnataka: ಲೋಕಾಯುಕ್ತ ದಾಳಿ; ಕಂತೆ ಕಂತೆ ಹಣ ವಶಕ್ಕೆ

Karnataka: ಲೋಕಾಯುಕ್ತ ದಾಳಿ; ಕಂತೆ ಕಂತೆ ಹಣ ವಶಕ್ಕೆ

24 ಕಂಬಳ ಕೂಟಕ್ಕೆ ತಲಾ 5 ಲಕ್ಷದಂತೆ ಅನುದಾನ: ಸಚಿವ ಎಚ್‌.ಕೆ. ಪಾಟೀಲ್‌

24 ಕಂಬಳ ಕೂಟಕ್ಕೆ ತಲಾ 5 ಲಕ್ಷದಂತೆ ಅನುದಾನ: ಸಚಿವ ಎಚ್‌.ಕೆ. ಪಾಟೀಲ್‌

Mandya; ಕನ್ನಡ ಸಾಹಿತ್ಯ ಸಮ್ಮೇಳನ: “ಉದಯವಾಣಿ’ ವಿಶೇಷ ಪುರವಣಿ ಬಿಡುಗಡೆ

Mandya; ಕನ್ನಡ ಸಾಹಿತ್ಯ ಸಮ್ಮೇಳನ: “ಉದಯವಾಣಿ’ ವಿಶೇಷ ಪುರವಣಿ ಬಿಡುಗಡೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

bahumuki

ಅರಮನೆಯಂಥ ಬಂಗಲೆ ಇದೆ, ಏನುಪಯೋಗ?

ಮೊದಲ ಗುರಿಯೇ ಕೊನೆಯದೂ ಆಗಿದೆ!

ಮೊದಲ ಗುರಿಯೇ ಕೊನೆಯದೂ ಆಗಿದೆ!

bahumuki

ಹುಡುಗಿಯ ಚುಂಬನ ಮತ್ತು ಆಗಸದ ತಾರೆ

ಟೊಮೇಟೊ ಹಣ್ಣಿನ ಗೊಜ್ಜು

ಟೊಮೇಟೊ ಹಣ್ಣಿನ ಗೊಜ್ಜು

ದೀಪವನ್ನೇ ಏಕೆ ಬಳಸಬೇಕು?

ದೀಪವನ್ನೇ ಏಕೆ ಬಳಸಬೇಕು?

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

ಕಾರ್ನಾಡಿನಲ್ಲಿ ನಡೆದ ಕೊ*ಲೆ ಪ್ರಕರಣ ಇಬ್ಬರಿಗೆ ಜೀವಾವಧಿ ಶಿಕ್ಷೆ

Mangaluru: ಕಾರ್ನಾಡಿನಲ್ಲಿ ನಡೆದ ಕೊ*ಲೆ ಪ್ರಕರಣ ಇಬ್ಬರಿಗೆ ಜೀವಾವಧಿ ಶಿಕ್ಷೆ

Puttur ಸರ್ವೆ: ಮನೆಗೆ ನುಗ್ಗಿ ಲಕ್ಷಾಂತರ ರೂ. ಮೌಲ್ಯದ ಚಿನ್ನಾಭರಣ, ನಗದು ಕಳ್ಳತನ

Puttur ಸರ್ವೆ: ಮನೆಗೆ ನುಗ್ಗಿ ಲಕ್ಷಾಂತರ ರೂ. ಮೌಲ್ಯದ ಚಿನ್ನಾಭರಣ, ನಗದು ಕಳ್ಳತನ

Manipal: ಕಾರು ಅಪಘಾತ: ಪ್ರಯಾಣಿಕರು ಪಾರು

Manipal: ಕಾರು ಅಪಘಾತ: ಪ್ರಯಾಣಿಕರು ಪಾರು

Mangaluru: ಮಾದಕ ವಸ್ತು ಸೇವನೆ ಆರೋಪ; 5 ಮಂದಿ ಸೆರೆ

Mangaluru: ಮಾದಕ ವಸ್ತು ಸೇವನೆ ಆರೋಪ; 5 ಮಂದಿ ಸೆರೆ

ಮುಮ್ತಾಜ್‌ ಅಲಿ ಆತ್ಮಹ*ತ್ಯೆ ಪ್ರಕರಣ: ಆರೋಪಿಗಳನ್ನು ಪೊಲೀಸ್‌ ವಶಕ್ಕೆ ನೀಡಲ್ಲ

High Court: ಮುಮ್ತಾಜ್‌ ಅಲಿ ಆತ್ಮಹ*ತ್ಯೆ ಪ್ರಕರಣ: ಆರೋಪಿಗಳನ್ನು ಪೊಲೀಸ್‌ ವಶಕ್ಕೆ ನೀಡಲ್ಲ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.