ಮಕ್ಕಳ ಭವಿಷ್ಯ:ಮೇ-ಅಗಸ್ಟ್
Team Udayavani, Jun 16, 2018, 12:34 PM IST
ರಾಶಿಯ ಆಧಾರದ ಮೇಲೆ, ಜನ್ಮದಿನಾಂಕದ ಲೆಕ್ಕಾಚಾರದ ಮೇಲೆ ಮಕ್ಕಳ ಭವಿಷ್ಯ ತಿಳಿಯುವ ಪದ್ಧತಿ ಹಳೆಯದಾಯಿತು. ಇಲ್ಲಿರೋದು ಯಾವ್ಯಾವ ತಿಂಗಳಲ್ಲಿ ಹುಟ್ಟಿದ ಮಗುವಿನ ವರ್ತನೆ ಹೇಗಿರುತ್ತೆ ಎಂಬ ವಿವರಣೆ. ನಿಮ್ಮ ಮಗು ಕೂಡ ಇಲ್ಲಿರುವ ವಿವರಣೆಯ ಗುಣ ಹೊಂದಿರಬಹುದು; ಗಮನಿಸಿ..
ಮೇ
ಕಾಲಿಗೆ ಚಕ್ರ ಕಟ್ಟಿಕೊಂಡ ಥರಾ ಮನೆಯೆಲ್ಲಾ ರೌಂಡ್ ಹೊಡೆಯೋದು ಮೇ ತಿಂಗಳಲ್ಲಿ ಹುಟ್ಟಿದ ಮಕ್ಕಳ ಸ್ಪೆಷಾಲಿಟಿ. ಅಷ್ಟೆಲ್ಲ ಸುತ್ತಿದ್ರೂ ಸುಸ್ತಾಯ್ತು ಅನ್ನಲ್ಲ. ಮನೇಲಿ ಇರೋದಕ್ಕಿಂತ ಹೊರಗೆ ಇರೋದನ್ನೇ ತುಂಬಾ ಇಷ್ಟ ಪಡುತ್ತವೆ. ಕಲಿಕೆಯಲ್ಲಿ ವಿಪರೀತ ಕುತೂಹಲ, ಆಸಕ್ತಿ. ಜತೆಗೆ ಸ್ವಲ್ಪ ಸೋಂಬೇರಿತನವೂ ಇರುತ್ತೆ. ಸ್ವಲ್ಪ ಪೊಸೆಸೀವ್ ನೆಸ್. ನಮ್ಮ ಅಪ್ಪ-ಅಮ್ಮನೇ ಗ್ರೇಟು. ಮುಂದೆ ನಾನು ಅಪ್ಪನ ಥರಾನೇ, ಇಲ್ಲಾ ಅಂದ್ರೆ ಅಮ್ಮನ ಥರಾನೇ ಆಗ್ತೀನೆ ಅಂತ ಹಟ ಹಿಡಿಯುತ್ತವೆ. ಅತಿ ಭಾವುಕತೆ ಈ ಮಕ್ಕಳ ನೆಗೆಟಿವ್ ಪಾಯಿಂಟ್. ತುಂಬ ಚಿಕ್ಕ ವಿಷಯಕ್ಕೂ ಅರ್ಧ ಗಂಟೆ, ಅತ್ತುಬಿಡ್ತವೆ. ಬೈಕ/ಕಾರ್ ನಲ್ಲಿ ಇಂಥವರು ಇಲ್ಲೇ ಕೂತ್ಕೊàಬೇಕು ಅಂತ ಕೂಡ ಹೇಳುವ ಗುಣ ಮೇ ತಿಂಗಳಲ್ಲಿ ಹುಟ್ಟಿದ ಮಕ್ಕಳದ್ದು
ಜೂನ್
ಈ ತಿಂಗಳಲ್ಲಿ ಹುಟ್ಟಿದ ಮಕ್ಕಳು ಎಂಥ ಸಂದರ್ಭದಲ್ಲೂ ಸಂಯಮ ಕಳೆದುಕೊಳ್ಳಲ್ಲ.
ಅರೆ, ಈ ಮಗೂಗೆ ಸಿಟ್ಟೇ ಬರಲ್ವ ಅನ್ಕೋಬೇಕು, ಹಾಗಿರ್ತವೆ. ಯಾವುದೇ ಕೆಲಸ ಆಗ್ಲಿ;
ಮನಸ್ಸು ಬಂದ್ರೆ ಮಾತ್ರ ಮಾಡ್ತವೆ. ಸ್ವಾರಸ್ಯ ಏನಪಾ ಅಂದ್ರೆ, ಏಕಕಾಲಕ್ಕೆ ಎರಡೂ¾ರು
ಕೆಲಸ ಮಾಡೋಕೆ ಹೋಗ್ತವೆ. ಅಂದ್ರೆ ಓದೋಕೆ ಕೂತಾಗ ಕೂಡ ಲೈಟ್ ಮ್ಯೂಸಿಕ್ ಇರಲಿ ಅನ್ನೋದು; ಟಿ.ವಿ. ನೋಡಿಕೊಂಡೇ ಹೋಂ ವರ್ಕ್ ಮುಗಿಸೋದು…ಹೀಗೆಲ್ಲಾ ಇರುತ್ತೆ ವರ್ತನೆ. ಜತೆಗೆ, ನಾನು ಅವರ ಥರಾ ಆಗಬೇಕು, ಇವರ ಥರಾ ಆಗಬೇಕು ಅಂತ ಕನಸು ಕಾಣೋದು; ಅದನ್ನೇ ಅಪ್ಪ-ಅಮ್ಮ, ಬಂಧುಗಳ ಜತೆ ಹೇಳಿಕೊಳ್ಳೋದು-ಜೂನ್ ತಿಂಗಳಲ್ಲಿ ಹುಟ್ಟಿದ ಮಕ್ಕಳ ಇನ್ನೊಂದು ಗುಣ.
ಜುಲೈ
ಹೊಡೆದ್ರೆ ಹೊಡೆಸ್ಕೊಳ್ತವೆ. ಬೈತೀರಾ? ಬೈಸ್ಕೋತವೆ. ಗೆಟ್ ಔಟ್ ಅಂದ್ರೆ-ಮನೆಯಿಂದ ಹೊರಗೆ ಹೋಗಿ ಸಪ್ಪೆ ಮೋರೆಯಲ್ಲಿ ನಿಂತುಬಿಡ್ತವೆ. ಯಾರೊಂದಿಗೆ ಬೇಕಾದ್ರೂ ಫ್ರೆಂಡಿÏಪ್ ಬೆಳೆಸಿಕೊಳ್ತವೆ. ತುಂಬಾ ಹಾರ್ಡ್ ವರ್ಕ್ ಮಾಡ್ತವೆ ನಿಜ. ಆದ್ರೆ ಉಡಾಫೆ ವರ್ತನೆಯಿಂದ ಬೈಸಿಕೊಳ್ತವೆ. ಸ್ಕೂಲಲ್ಲಿ, ಜತೆಗಿದ್ದವರು ಹೊಡೆದ್ರೆ ಹೊಡೆಸಿಕೊಂಡು ಬರ್ತವೇ ವಿನಃ ತಿರುಗಿ ಬಾರಿಸೋದಿಲ್ಲ. ಸೇಡು ತೀರಿಸ್ಕೋಬೇಕು ಅನ್ನೋ ಹಟ ಜುಲೈನಲ್ಲಿ ಹುಟ್ಟುವ ಮಕ್ಕಳಿಗೆ ಇರೋದಿಲ್ಲ. ಜತೆಗಿರುವ ಹಿರಿ, ಕಿರಿಯರ
ನಡವಳಿಕೆಯನ್ನು ಹುಶಾರಾಗಿ ಗಮನಿಸ್ತಾ ಇರ್ತವೆ. ಅಗತ್ಯ ಬಂದಾಗ- ನೀವು ಮಾಡ್ತಿರೋದು ಸರಿಯಲ್ಲ ಎಂದು ಜಡ್ಜ್ ಥರಾ ತೀರ್ಪು ಕೊಡ್ತವೆ!
ಹಳೆಯ ಫ್ರೆಂಡ್ಸ್,
ಯಾವತ್ತೋ ತಿಂದಿದ್ದ ರವೆ ಉಂಡೆ, ಅಜ್ಜಿ ಹೇಳಿದ್ದ ಕತೆ, ಚಿಕ್ಕಪ್ಪ ಕೊಟ್ಟ ಏಟು, ಹಳೆಯ ಮೊಬೈಲ್ನ ಕಲರ್, ನಾಯಿಮರಿ ಸತ್ತ ಸಂದರ್ಭ, ಒಂದನೇ ಕ್ಲಾಸಲ್ಲಿ ನೋಡಿದ್ದ ಸಿನಿಮಾ ಹೀಗೆ ಪ್ರತಿಯೊಂದನ್ನೂ ನೆನಪಿಟ್ಟಿರ್ತವೆ. ವಿಪರೀತ ಸೆಂಟಿಮೆಂಟ್. ಮನೆಗೆ ನೆಂಟರು ಬಂದ್ರೆ- ಅವರು ನನ್ನ ಜತೆಗೇ ಇರಲಿ ಅಂತ ಹಟ ಹಿಡೀತವೆ. ಮನೇಲಿ ಯಾರಿಗಾದ್ರೂ ಹುಶಾರಿಲ್ಲ ಅಂದ್ರೆ ವಿಪರೀತ ಕೇರ್ ತಗೊಳ್ಳೋದು; ಇನ್ನೊಬ್ಬರ ಸಂಕಟಕ್ಕೆ ಕರಗುವುದು – ಇದೆಲ್ಲಾ ಜುಲೈನಲ್ಲಿ ಹುಟ್ಟಿದ ಮಕ್ಕಳ ಹೆಚ್ಚುಗಾರಿಕೆ.
ಆಗಸ್ಟ್
ಈ ತಿಂಗಳಲ್ಲಿ ಹುಟ್ಟಿದ ಮಕ್ಕಳಿಗೆ ವಿಪರೀತ ಆತ್ಮವಿಶ್ವಾಸ, ಮುಳ್ಳನ್ನು
ಮುಳ್ಳಿಂದ್ಲೇ ತೆಗೀಬೇಕು ಅನ್ನೋದು ಇವರ ವಾದ. ಸೇಡಿನ ಮನೋಭಾವ ಜಾಸ್ತಿ. ಜತೆಗಿರುವ ಎಲ್ಲರನ್ನೂ ಗುಮಾನಿಯಿಂದ ನೋಡ್ತವೆ. ಯಾರ ಹಂಗಿಗೂ ಒಳಪಡದೆ ಸ್ವತಂತ್ರವಾಗಿರೋಕೆ ಇಷ್ಟಪಡ್ತವೆ. ಹಗಲು ಗನಸಿನಲ್ಲಿ ವಿಹರಿಸೋದು ಜಾಸ್ತಿ. ಸುಳ್ಳು ಹೇಳ್ಳೋರನ್ನು ಕಂಡರೆ ಮುಲಾಜಿಲ್ಲದೆ ಖಂಡಿಸುತ್ತವೆ. ಒಂದು ಚೌಕಟ್ಟಿಗೆ, ಶಿಸ್ತಿಗೆ ಕಟ್ಟುಪಾಡಿಗೆ ಸಿಕ್ಕಿಬೀಳೊಲ್ಲ. ಭವಿಷ್ಯದಲ್ಲಿ ಹೀಗಿರಬೇಕು, ಹಾಗಿರಬೇಕು ಎಂದೆಲ್ಲಾ ಅಂದಾಜು ಮಾಡ್ತಾ ಇರ್ತವೆ. ತಮ್ಮನ್ನು ತಾವೇ ಮಹಾನ್ ಸಾಹಸಿ ಎಂದು ಹೊಗಳಿಕೊಂಡು ಖುಷಿಪಡ್ತವೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Astrology 2024: 2024ರಲ್ಲಿ ಮಿಶ್ರ ಫಲಗಳೇ ಅಧಿಕ-ರಾಜ್ಯದಲ್ಲೇನಾಗುತ್ತದೆ?
ಜ್ಯೋತಿಷ್ಯದಲ್ಲಿ ನವಗ್ರಹಕ್ಕಿಂತಲೂ ನಕ್ಷತ್ರಗಳಿಗೆ ಹೆಚ್ಚು ಪ್ರಾಮುಖ್ಯತೆ ಯಾಕೆ ಕೊಡಲಾಗಿದೆ?
ಶುಭ ವಿಚಾರ ತಿಳಿಯುವ ಗೋಚಾರ ಫಲ ಎಂದರೇನು, ಗುರುಬಲ ಯಾವಾಗ ಆರಂಭವಾಗಲಿದೆ…
ಮಾರಕಾಧಿಪತಿ, ಭಾದಕಾಧಿಪತಿ: ಅಕಾಲಿಕ ಮರಣದ ಬಗ್ಗೆ “ಅಷ್ಠಮ ಸ್ಥಾನ” ಮುನ್ಸೂಚನೆ ಕೊಡುತ್ತದೆಯೇ?
ಗಜಕೇಸರಿ ಯೋಗ… ಈ ಯೋಗ ಹೇಗೆ ಉಂಟಾಗುತ್ತದೆ, ಇದರ ಮಹತ್ವವೇನು?
MUST WATCH
ಹೊಸ ಸೇರ್ಪಡೆ
Nayanthara: ʼರಕ್ಕಯಿʼ ಆಗಿ ದುಷ್ಟರ ಪಾಲಿಗೆ ದುಸ್ವಪ್ನವಾದ ಲೇಡಿ ಸೂಪರ್ ಸ್ಟಾರ್
BGT 2024-25: ಆಸೀಸ್ ನಲ್ಲಿ ಲಯಕ್ಕೆ ಮರಳಿದ ವಿರಾಟ್ ಕೊಹ್ಲಿ
Stock Market: ಷೇರುಪೇಟೆ ಸೂಚ್ಯಂಕ 500ಕ್ಕೂ ಅಧಿಕ ಅಂಕ ಕುಸಿತ; 23,400ಕ್ಕೆ ಇಳಿದ ನಿಫ್ಟಿ
Yadagiri: ಸ್ನಾನಕ್ಕೆಂದು ತೆರಳಿದ ಇಬ್ಬರು ಬಾಲಕರು ನೀರುಪಾಲು
Baaghi 4: ಟೈಗರ್ ಶ್ರಾಫ್ ʼಬಾಘಿ – 4ʼ ಗೆ ಕನ್ನಡದ ಎ.ಹರ್ಷ ಆ್ಯಕ್ಷನ್ ಕಟ್; ಪೋಸ್ಟರ್ ಔಟ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.